ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ
ಕರುನಾಡ ನಾಡನುಡಿ,
ಕನ್ನಡಿಗರಿಗದು ಕನ್ನಡಿ.
ಮಾತನಾಡಿದರದು ಮುತ್ತಿನಂಗಡಿ,
ಅದುವೇ ನಮ್ಮ “ಕನ್ನಡ” ನುಡಿ.
ಮಾಣಿಕ್ಯವೀಣೆ ಪಿಡಿದಿಹಳು ಕೈಯಲಿ,
ಮಂದಹಾಸದ ನಗುವಿಹುದು ಮುಖದಲಿ,
ಕರೆದು ಕೊಡುತಿಹಳು ಅಭಯಹಸ್ತವನಿಲ್ಲಿ,
ಅವಳೇ ನಮ್ಮ “ಕನ್ನಡಾಂಬೆ”.
ನೆಲಸಿಹರು ಕನ್ನಡನಾಡಿನಲಿ,
ನಡೆದಾಡುವರು ದೇಶದೆಲ್ಲೆಡೆಯಲಿ,
ನಕ್ಕುನಲಿದಾಡುತಿಹರು ಆ ಹೊರನಾಡುಗಳಲಿ,
ಕನ್ನಡದ ಕಂಪನು ಕೋರೈಸುತಲಿ.
ಅವರೇ ನಮ್ಮ “ಕನ್ನಡಿಗರು”.
ಹಚ್ಚಿಸಿದರು ಕನ್ನಡದ ಹಣತೆಯನು,
ಬೆಳಗಿಸಿದರು ಕನ್ನಡದ ಬೆಳಕನು,
ಕೊಂಡಾಡಿದರು ಕನ್ನಡದ ಕವಿಗಳನು,
ಅರ್ಪಿಸಿದರು ಎಲ್ಲಡೆಯಲ್ಲೂ “ಔದಾರ್ಯವನು”.
ಅವರೇ ನಮ್ಮ “ಕನ್ನಡಿಗರು”.
=> 29/09/2009
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.