ಅಂಕಿತ ನಾಮ: ಉರಿಲಿಂಗಪೆದ್ದಿಗಳರಸ
ಕಾಲ: 1160
ದೊರಕಿರುವ ವಚನಗಳು: 12 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ ಸು. 1160. ಈಕೆ ಉರಿಲಿಂಗಪೆದ್ದಿಯ ಪತ್ನಿ ಎಂಬುದನ್ನು ಬಿಟ್ಟರೆ ಉಳಿದ ವಿವರ ತಿಳಿದಿಲ್ಲ. ಈಕೆಯ 12 ವಚನಗಳು ದೊರೆತಿವೆ. ಕುಲ-ಜಾತಿಗಳ ವಿಡಂಬನೆ, ವ್ರತದ ಮಹತ್ವ ಮೊದಲಾದ ಸಂಗತಿಗಳ ಬಗ್ಗೆ ಹೇಳಿದ್ದಾಳೆ.
ಅಯ್ಯಾ, ಸೂಳೆಗೆ ಹುಟ್ಟಿದ ಮಕ್ಕಳಿಗೆ,
ಕೊಟ್ಟವರೊಳು ಸಮ್ಮೇಳ, ಕೊಡದವರೊಳು ಕ್ರೋಧ.
ವ್ರತಹೀನರೊಳು ಮೇಳ, ವ್ರತನಾಯಕರೊಳು ಅಮೇಳ.
ಸುಡು ಸುಡು ! ಅವರ ಕೂಡಿದಡೆ ಉರಿಲಿಂಗಪೆದ್ದಿಗಳರಸನೊಲ್ಲನವ್ವಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.