ಭಾನುವಾರ, ಜನವರಿ 01, 2017

ಕೊಡೆ ಮಹಿಳೆ (Umbrell Girl of Wish You Happy New Year)

        ಪಾಚಾತ್ಯರ ಹೊಸ ವರ್ಷದ ಆಚರಣೆಯಲ್ಲಿ ನಮ್ಮ ಕನ್ನಡಿಗರ ಕಡೆಯಿಂದ ಈ ಕಿರು ಕೊಡೆ ಮಹಿಳೆ.
ಸುತ್ತಿದರೂ ನೂರು ದೇಶ ಹಾಕಿದರೂ ಹಲವು ವೇಷ ಮರೆಯದಿರು ನೀ ಸಂಸ್ಕೃತಿ
ಅಜ್ಞಾನದ ಸುಳಿಗೆ ಸಿಲುಕದಿರು ಸುಜ್ಞಾನದ ಮಡಿಕೆ ಒಡೆಯದಿರು ಒಳ್ಳೆ ಸಂಸ್ಕೃತಿ
ಹಿರಿಯರಿಗೆ ತಲೆಬಾಗಿ ನಮಿಸು ಕಿರಿಯರನು ಆದರದಿ ಪ್ರೀತಿಸು ನಮ್ಮ ಸಂಸ್ಕೃತಿ
ಕಿವಿಗಳು ಎರಡೂ ತೆರೆದಿರಲಿ ನಾವಾಡುವ ನುಡಿಯಲಿ ಮಿತಿಯಿರಲಿ ಸಂಸ್ಕೃತಿ
ಭೇದ - ಬಾವ ತೋರದ ಭಾವ್ಯಕ್ಯತೆ ನಮ್ಮದು ಸಹಿಷ್ಣುತೆ ಭಾರತೀಯ ಸಂಸ್ಕೃತಿ
ಎಲ್ಲಾ ಜಾತಿ ಭೀತಿ ಇಲ್ಲದೆ ಬಾಳುತಿರುವ ಜನರ ನೋಡಿ ಅದೇ ನಮ್ಮ ಸಂಸ್ಕೃತಿ

ಪ್ರತಿ ವರ್ಷ ಬರುವುದು ಹೊಸ ವರುಷ ನಿನ್ನ ಮನದಲ್ಲಿ ತುಂಬಲಿ ಹರುಷ ಪ್ರತಿ ನಿಮಿಷ. ಸಾಲಿನ ಕೃಪೆ : ಸಂತೋಷ್ ಚಂದ್ರಶೇಖರ್

ಕಾಮೆಂಟ್‌ಗಳಿಲ್ಲ: