ಶನಿವಾರ, ಡಿಸೆಂಬರ್ 31, 2016

ಅಂತಿಮ ನಮನ (Last Se-lute)

ಸಾವಿರದ ಸರದಾರ
ನಾನೆಂದು ಮೆರೆಯುತ್ತ
ಕೈ ಹಿಡಿದ ನೇತಾರರ
ಗೊಂಬೆಯಂತೆ ಆಡಿಸುತ್ತ
ಕೈಗೆಟುಕದವರನ್ನು
ನಿರ್ದಯದಿ ಕಾಡುತ್ತ
ಬೆನ್ನು ಹತ್ತಿದವರನೆಲ್ಲ
ಅಡ್ಡ ದಾರಿ ಹಿಡಿಸುತ್ತ
ಕಾಳಧನಿಕರ ಮನೆಯಲಿ
ಕಸದಂತೆ ಕೊಳೆಯುತ್ತ
ದಂಧೆಕೋರರ ಜೊತೆಗೆ
ತಕಥೈ ಎಂದು ಕುಣಿಯುತ್ತ
ಬಡವರ ಬಳಿ ಬರಲು
ಹಿಂದೇಟು ಹಾಕುತ್ತ
ಹಮ್ಮು ಬಿಮ್ಮಿನಲಿ
ರಾರಾಜಿಸುತ್ತಿದ್ದ
ಹಳೆಯ ನೋಟಿಗೆ
(ಅ)ಭಾವಪೂರ್ಣ ಶ್ರದ್ಧಾಂಜಲಿ

ಕೃಪೆ -ಹೊ.ರಾ.ಪ
ರುದ್ರಪಟ್ಟಣ,ಅರಕಲಗೂಡು ತಾಲ್ಲೂಕು (ಪ್ರಜಾವಾಣಿ)

ಕಾಮೆಂಟ್‌ಗಳಿಲ್ಲ: