ಶನಿವಾರ, ಡಿಸೆಂಬರ್ 24, 2016

ರಜೆವಿಷಯದಲ್ಲಿ ಮಾತ್ರ ಎಲ್ಲರ ಮಿತವ್ಯಯ ಬುದ್ಧಿ ಜಾಗೃತವಾಗುತ್ತದೆ
ಸರ್ಕಾರೀ ಉದ್ಯೋಗಿಗಳು ಸದಾಕಾಲ ಲೆಕ್ಕ ಹಾಕುವುದು ಇದನ್ನೇ
ನಗರ ಹೋಗು ಎನ್ನುತ್ತದೆ, ಊರು ಬಾ ಎನ್ನುತ್ತದೆ
ಕೆಲಸದ ದಿನಗಳಲ್ಲಿ ಇದರದ್ದೇ ಯೋಜನೆ, ನಂತರ ಮುಗಿದೇ ಹೋಯಿತಲ್ಲಾ ಎಂಬ ಯೋಚನೆ
ರೈತನಿಗಿಲ್ಲದ ಸುಖವಿದು
ಖಾಸಗೀ ಡಾಕ್ಟರ್ಗಳಿಗೆ ರಜದಲ್ಲೂ ಸಜವೇ
ರಾಜಾರೋಷವಾಗಿ ಕಳೆಯಬಹುದಾದ್ದು
ಶಾಪಿಂಗ್ ಹೋಗಲೆಂದೇ ಕೊಡಮಾಡುವ ಅವಕಾಶ
ಕೆಲಸ ಮಾಡದೇ ಆರಾಮ ಇರುವವರಿಗೂ ಸಿಗುವ ವಿರಾಮ
ವಿಷಯದಲ್ಲಿ ಯಾರಿಗೂ ವಿರಕ್ತಿ ಹುಟ್ಟಲಾರದು
ಎಷ್ಟಿದ್ದರೂ ಬೇಕು ಎನ್ನುವ ಪಟ್ಟಿಯಲ್ಲಿ ಇದಕ್ಕೆ ಮೊದಲ ಸ್ಥಾನ
ಭಾರತೀಯರು ವಾರವಿಡೀ ಕೆಲಸ ಮಾಡುವುದೇ ಇದಕ್ಕಾಗಿ
ಮಹಾತ್ಮರು ಸಾವಿನಲ್ಲೂ ಬೇರೆಯವರನ್ನು ಖುಷಿಗೊಳಿಸುತ್ತಾರೆ, ಕಾರಣ ಅವರ ಸಾವಿಗೆ ರಜೆ ಕೊಡಲಾಗುತ್ತದೆ
ವಾರಕ್ಕೊಮ್ಮೆ ಕೆಲಸಗಾರರಿಗೆ ರಜೆ ನೀಡುವುದು ಬಾಸ್ ಗೇ ಒಳ್ಳೆಯದು, ವಾರಕ್ಕೊಮ್ಮೆಯಾದರೂ ಕೆಲವರು ಸ್ನಾನ ಮಾಡಬೇಕಲ್ಲ...
-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ: