* ಮನುಷ್ಯನು ಕಲಿಯಲು ಬಯಸುವುದಾದರೆ ಅವನ ಪ್ರತಿಯೊಂದು ತಪ್ಪು ಅವನಿಗೆ ಶಿಕ್ಷಣ ಕೊಡುತ್ತದೆ -ಚಾರ್ಲ್ಸ್ ಡೆಕ್ಕನ್.
* ಅಭಿರುಚಿಯನ್ನು ಹುಟ್ಟಿಸುವುದು ಶಿಕ್ಷಣದ ಉದ್ದೇಶವೇ ಹೊರತು, ಒಬ್ಬರು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳುವುದಲ್ಲ - ಗಯಟೆ.
* ಶಾಲಾ-ಕಾಲೇಜುಗಳಲ್ಲಿ ಕಲಿತದ್ದು ನಿಜವಾದ ಶಿಕ್ಷಣವಲ್ಲ. ಅದು ಶಿಕ್ಷಣಕ್ಕೆ ಸಾಧನವಷ್ಟೆ - ಎಮರ್ಸನ್.
* ಮನುಷ್ಯರಲ್ಲಿ ಪ್ರೇಮವನ್ನು ಮೂಡಿಸುವ ಸರಳ ಜೀವನನ್ನು ಕಲಿಸುವ ವಿದ್ಯೆಯೇ ಶ್ರೇಷ್ಠವಾದದ್ದು -ಟಾಲ್ಸ್ಟಾಯ್.
* ಮನುಷ್ಯನಿಗೆ ಯಾವುದು ಗೊತ್ತಿಲ್ಲವೋ ಅದನ್ನು ತಿಳಿಸುವುದು ವಿದ್ಯಾಭ್ಯಾಸದ ಗುರಿಯಲ್ಲ. ಹೇಗೆ ವರ್ತಿಸಬೇಕೆಂದು ತಿಳಿಸುವುದೇ ವಿದ್ಯಾಭ್ಯಾಸದ ಗುರಿ - ಜಾನ್ ರಸ್ಕಿನ್.
* ಪ್ರತಿಯೊಬ್ಬ ವ್ಯಕ್ತಿಯು ಎರಡು ರೀತಿಯ ಶಿಕ್ಷಣ ಹೊಂದುತ್ತಾನೆ. ಒಂದು ಇತರರು ಅವನಿಗೆ ನೀಡುವುದು. ಇನ್ನೊಂದು ಸ್ವಂತ ಅವನು ಕಲಿಯುವುದು - ನುಡಿಮುತ್ತು.
* ವಿದ್ಯೆಯೊಂದಿಗೆ ಆದರ್ಶ ಗುಣಗಳು ನಿನ್ನಲ್ಲಿ ಬರದಿದರೆ ನೀನು ಓದಿದ್ದು ವ್ಯರ್ಥ - ಪ್ರೇಮಚಂದ.
* ಮನೆಯೇ ಮೊದಲ ಪಾಠಶಾಲೆ - ಗಾದೆ.
* ವಿದ್ಯಾಭ್ಯಾಸ ಯಾವ ದಿಕ್ಕಿನಲ್ಲಿ ಮನುಷ್ಯನನ್ನು ನಡೆಸುವುದೋ ಅದೇ ಅವನ ಭವಿಷ್ಯವನ್ನು ನಿರ್ಧರಿಸುವುದು - ಪ್ಲೇಟೋ.
* ಶಿಕ್ಷಣವು ಅನುಭವಗಳ ಪೂರ್ವ ವ್ಯವಸ್ಥೆ ವಿಧಾನ - ಜಾನ್ ಡ್ಯೂಯಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.