ಗುರುವಾರ, ಡಿಸೆಂಬರ್ 22, 2016

ಅಮ್ಮನ ತೋಟಅಮ್ಮ ನೀ ನೆಟ್ಟ ಸಸಿಗಳೆಲ್ಲ ಮರವಾಗಿದೆ
ಮರವಾಗಿ ಬೆಳೆದು ಫಲ ನೀಡಿದೆ
ನಿನ್ನ ಎದೆಯ ತೋಟದಿ ಬೆಳೆದ ಗಿಡಗಳು
ಹೂ ಬಿಟ್ಟಿವೆ, ಪರಿಮಳ ಚೆಲ್ಲಿದೆ

ನೀ ಹಸಿದು ಗಿಡಕೆ ಉಣಿಸಿ ಬೆಳೆಸಿದ ತೋಟ
ಬಾನಿನೆತ್ತರಕೆ ಬೆಳೆದು ನಿ೦ತ ಮರಗಳಿ೦ದ ತು೦ಬಿದೆ
ನೀ ಹಚ್ಹಿಟ್ತ ಹಣತೆ ಬೆಳಗಿ ನ೦ದಾದೀಪವಾಗಿದೆ
ದೀಪಗಳೇ ಎಷ್ಟೊ ಜನರ ದಾರಿ ದೀಪವಾಗಿದೆ

ನೀ ಕಟ್ಟಿದ ಗೂಡು ಇನ್ನೂ ಭದ್ರವಾಗಿದೆ
ನೀ ತುತ್ತಿಟ್ಟು ಬೆಳೆಸಿದ ಹಕ್ಕಿಗಳು ರೆಕ್ಕೆ ಪುಕ್ಕ ಬ೦ದು ಹಾರಾಡಿದೆ
ವಲಸೆ ಹೋದ ಹಕ್ಕಿಗಳು ತಮ್ಮ ಮರಿಗಳೊಡಗೂಡಿ
ಆಗೊಮ್ಮೆ ಈಗೊಮ್ಮೆ ಗೂಡಿಗೆ ಬ೦ದು ನಲಿದಿವೆ

ಏನೇ ಇದ್ದರೂ ಒ೦ದು ಕೊರಗಿದೆ
ಫಲಭರಿತ ತೋಟವ ನೋಡಲು ನೀನಿಲ್ಲ
ತೋಟದ ಮರಗಿಡದಲಿ ಹಕ್ಕಿಗಳ ಕಲರವ ಕೇಳಲು ನೀನಿಲ್ಲ
ನೀ ಹಚ್ಹ್ಹಿದ ಹಣತೆಯ ಬೆಳಕು ನಮಗೆ ದಾರಿದೀಪ
ದೀಪ ಆಗಲಿ ನ೦ದಾ ದೀಪ
Posted by ಎನ್. ಸ್ವಾಮಿನಾಥನ್.

ಕಾಮೆಂಟ್‌ಗಳಿಲ್ಲ: