fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಅಕ್ಷರಮಾಲೆಯ 'ಅ'ಕಾರದ ವರ್ಣನೆಯೇ 'ಅಕ್ಷರ' (Kannada Aplabetic Lesson)

"" "" ಅಕ್ಷರ.
       ಅಮ್ಮ, ಅಪ್ಪ, ಅಣ್ಣ, ಅಕ್ಕ, ಅಜ್ಜ, ಅಜ್ಜಿ, ಅಬ್ಬಾ, ಅಯ್ಯೋ, ಆಹಾ ಅನ್ನುತ್ತ ಅಲಂಕರಿಸಿದೆಂದು ಅರಕಲಗೂಡಿನ ಅನಂತರಾಮಯ್ಯ ಅಖಿಲಾಂಡಮ್ಮನವರಿಗೆ ಆಗಾಗ್ಗೆ ಆದೇಶಿಸುತ್ತಿದ್ದರು. ಅತ್ತೆ ಅನಸೂಯಮ್ಮ ಆಧುನಿಕ ಆಭರಣದಲ್ಲಿ ಅವರ ಆತ್ಮೀಯರಾದ ಅಲಮೇಲು ಅಯ್ಯಂಗಾರ್, ಅರುಂಧತಿ, ಅಭಿರಾಮಿ, ಆನಂದಮ್ಮ, ಆಂಡಾಳಮ್ಮರೊಡನೆ, ಅಪಸ್ವರದಲ್ಲಿದ್ದ ಅಯಿಗಿರಿನಂದಿನಿ, ಆದಿತ್ಯಹೃದಯ, ಅನ್ನಪೂರ್ಣಾಷ್ಟಕ, ಅಮರಕೋಶವನ್ನು, ಅರಳೀಕಟ್ಟೇಯಲ್ಲಿದ್ದು ಆಲಿಸುತ್ತಿದ್ದರು.
        ಅದಾದನಂತರ ಆಗಸ್ಟ್, ಅಕ್ಟೋಬರ್ ನಲ್ಲಿ ಅಮಾವಾಸ್ಯೆ, ಆಷಾಡ, ಆಷ್ವಯುಜವೆಂದು ಅನಂತಮೂರ್ತಿಯವರು ಅನಾಥಾಶ್ರಮದ ಆಮಂತ್ರಣವನ್ನು ಅಮೋದಿಸಿದರು.  
         ಅಖಿಲನ ಅಣ್ಣ ಆದಿತ್ಯ ಆಂಬೊಡೆ, ಅವಲಕ್ಕಿ ಅಗಿಯುತ್ತಾ ಆಗಮಿಸಿ ಅಮೇರಿಕಾ, ಆಸ್ಟ್ರೇಲಿಯಾ, ಅಡಿಲೇಡ್, ಅಟ್ಲಾಂಟಾ, ಅರ್ಜೆಂಟೇನಿಯಾ, ಅಬೂಧಾಬಿ ಅಲೆದಾಡುತ್ತಿದ್ದಾಗ ಅಗ್ರಗಾಮಿಗಳು ಅಲ್ಲಿಯ ಆಕೃತಿ, ಅಪರಂಜಿ ಅಪಹರಿಸಿದ್ದು ಅಪರೂಪವಾಗಿತ್ತೆಂದ.  
        ಅಮೂಲ್ ಅಮೃತದಂತಹ ಅನೀಶ ಅಂಬೆಗಾಲಿಡುವುದನ್ನ, ಅವಿನಾಶ್, ಅಶ್ವಿನ್, ಅಶ್ವತ್ಥ, ಅಖಿಲೇಶ್, ಅನೂಪ್, ಅಪೇಕ್ಷ, ಅಚಲ ಆನಂದಿಸಿ ಅವರವರ ಅಮ್ಮನೊಡನೆ ಅಕ್ಷರಾಭ್ಯಾಸಕ್ಕೆ ಆಗಮಿಸಿದರು.  
       ಅಬಲಾಶ್ರಮದಲ್ಲಿ ಆಮಂತ್ರಿಸಿದ ಅಲತ್ತೂರ್, ಅರಿಯಾಕುಡಿ, ಅರುಣ, ಆರಭಿ, ಅಠಾಣ, ಅಮೃತವರ್ಶಿನಿಯ ಆರೋಹಣ, ಅವರೋಹಣ ಆರಂಭಿಸಿ, ಅನ್ನಪೂರ್ಣೆ, ಅಖಿಲಾಂಡೇಶ್ವರಿ, ಅನುಪಮಗುಣಾಂಬುದಿ, ಅಲಕಲಲ್ಲ, ಅನ್ನಮಾಚಾರ್ಯರ ಆದಿವೋ ಅಲ್ಲದಿವೋ, ಅರುಣಾಚಲದ ಆಲಾಪನೆಯನ್ನು ಅತಿಥಿ ಅಭ್ಯಾಗತರುಗೆಲ್ಲ ಆನಂದವುಂಟುಮಾಡಿದರು.  
      ಅರಮನೆಯ ಅಂಬಾರಿ ಆನೆ ಅಬ್ಬರಿಸುತ್ತಾ, ಆಕಳಿಸುತ್ತಾ, ಅಲ್ಲಿಂದಿಲ್ಲಿಗೆ ಅಲೆಯುತ್ತಿದ್ದನ್ನ ಆಂಜನಪ್ಪನವರು ಆಕ್ಷೇಪಿಸಿದರು. ಅರಣ್ಯದಲ್ಲಿ ಆಡು, ಆಮೆ, ಅಳಿಲು, ಆಳದ ಅಡಿಯಲ್ಲಿ ಅಡವಿಕೊಂಡವು. ಅಜಾಲಿಯ, ಆರ್ಕಿಡ್, ಅಮೃತಬಳ್ಳಿ ಅಂಗಡಿಯಲ್ಲಿಟ್ಟಿದ್ದನ್ನು ಅಂಗವಿಕಲರು ಅತ್ಯುತ್ತಮವೆಂದರು
       ಆಶ್ರಮದ ಆಲದಮರ, ಅಶ್ವತ್ಥಕಟ್ಟೆ ಆವರಣದಲ್ಲಿ ಅದ್ವೈತ, ಅಹಿಂಸಾ, ಅಧರ್ಮ, ಅಲ್ಲಮಪ್ರಭು, ಅಶ್ವತ್ಥಾಮ, ಅಂಗೀರಸ, ಆರ್ಕಿಮಿಡೀಸ್, ಆಟಂಬಾಂಬ್, ಆಯುಧಗಳು, ಅಂಡಮಾನ್, ಆದಿನಿವಾಸಿಗಳು ಅಪರಿಚಿತರೆಂದು ಅನಂತರ ಅಯೋಧ್ಯೆಯ ಅರಚುತನ ಅಕ್ಷ್ಯಮ್ಯ ಅಪರಾಧವೆಂದು ಅಲೆಕ್ಸಾಂಡರ್, ಅಕ್ಬರ್, ಅಬ್ದುಲ್, ಅಬ್ರಹಾಮ್ ಆಡಿದರು.  
     ಅಂಬೇಡ್ಕರ್, ಅಣ್ಣಾಮಲೈನಲ್ಲಿ ಅಲೋಪತಿ, ಆರ್ಕಿಟೆಕ್ಚರ್, ಆಟೋಮೊಬೈಲ್, ಅಗ್ರಿಕಲ್ಚರ್ ಅಳವಡಿಸಿಕೊಳ್ಳಲು ಆಂಥೋನಿ, ಆದಿವೇಲು, ಅಭಿಮನ್ಯು, ಅಭಿಲಾಶ್, ಆರ್ಮುಗಂ, ಆಂಜನೇಯುಲು ಅರ್ಜಿಹಾಕಿದರು. ಆಸ್ಪತ್ರೆಯಲ್ಲಿ ಆರೋಗ್ಯ, ಅನಾರೋಗ್ಯ, ಅಲರ್ಜಿ, ಆಪರೇಶನ್, ಅನಸ್ಥೀಸಿಯ, ಆಮ್ಲಜನಕ, ಅನಾಸಿನ್, ಆಸ್ಪ್ರೊ, ಆತಂಕವನ್ನು ಅಮರನಾಥರು ಅಚ್ಚುಕಟ್ಟಾಗಿ ಅಳವಡಿಸಿದರು.
        ಆಯುರ್ಧಾಮದಲ್ಲಿ ಆಯುರ್ವೇದದ ಅನೇಕ ಅಮೂಲ್ಯವಾದ, ಅರಳೆಲೆ, ಅಮೃತಬಳ್ಳಿ, ಅಡಿಕೆ, ಅಳಲೇಕಾಯಿ, ಅರಿಶಿಣ, ಆಲೂಗೆಡ್ಡೆ, ಅನಾನಸ್, ಆಪಲ್, ಅಂಜೂರ ಅಜೀರ್ಣಕ್ಕೆ ಅನುಕೂಲವೆಂದು ಆಚಾರ್ಯ ಅಚಲೇಂದ್ರ ಅಧ್ಯಯನಕ್ಕೆ ಅನುಕರಿಸಿದರು.  
          ಅನಿಲ್, ಅಗರ್ಕರ್, ಆಂಡ್ರೆ ಅಗಸಿ, ಆನ್ಡ್ರು, ಆಡಂ, ಅಮರನಾಥ್ ಅಜೇಯರೆಂದು ಅಂಪೈರ್ ಅಭಿನಂದಿಸಿದರು.  
ಅಮರಶಿಲ್ಪಿ, ಅಮ್ಮ, ಆಪ್ತರಕ್ಷಕ, ಆಪ್ತಮಿತ್ರ, ಅರುಣೋದಯ, ಅನುರಾಗ, ಅಮರ್, ಅಕ್ಭರ್, ಆಂಥೋನಿಯನ್ನು ಅರಸೀಕೆರೆ, ಆಗುಂಬೆ, ಆನೆಕಲ್ಲು, ಅಜ್ಜಂಪುರ, ಅಲಹಾಬಾದ್, ಅಹಮದಾಬಾದ್ನವರು ಅನಿರೀಕ್ಷಿತವಾಗಿ ಆರೋಪಿಸಿದರು.  
ಅಲಕಾನಂದ, ಅಮರಾವತಿ, ಅರ್ಕಾವತಿ ಅಣೆಕಟ್ಟೆಯಲ್ಲಿ ಅತಿಯಾಗಿ ಆಗುತ್ತಿದ್ದ ಅಡಚಣೆಯನ್ನು ಅನಂತಯ್ಯನವರು ಅಲ್ಲಗೆಳೆದರು
        ಅಭಯ್ ಆಟೋನಲ್ಲಿ ಅಲೆದೆಲೆದು, ಅಲೆದಾಡಿಕೊಂಡು ಆಫೀಸಿಗೆ ಅಡ್ಡಾಡುತ್ತಾ, ಅಂಜುತ್ತಾ, ಅಳುಕುತ್ತಾ ಆಂಬುಲೆನ್ಸನಲ್ಲಿ ಆಗಮಿಸಿದ. ಅಡ್ಡದಾರಿಯಲ್ಲಿ ಅಪೂರ್ವ ಅಂಜುಬುರುಕನಂತೆ ಅವಿತುಕೊಂಡಿದ್ದನ್ನ ಅಮ್ಮಯ್ಯ ಅನುಮಾನಿಸಿ ಆರ್ಭಟಿಸಿಬಿಟ್ಟರು. ಅಂಬುಜಮ್ಮ ಅಚ್ಚುಮೆಚ್ಚಿನ ಅಂಜಲಿ, ಅಂಕಿತ, ಅನನ್ಯ, ಅಕ್ಷಂತ್, ಅಮೂದ್, ಆರಿದ್ರ, ಅನಿತರನ್ನ ಅಪ್ಪಿ, ಆಲಂಗಿಸಿ ಅಂಕಿ, ಅಂಕಗಣಿತ, ಆಲ್ಜೀಬ್ರ ಅದ್ಭುತವಾಗಿ ಅವಲೋಕಿಸಿದರು.  
       ಆಂಧ್ರದಲ್ಲಿ ಅಪರಾಹ್ನ ಆಯೋಗ, ಆಸ್ಥಿವಂತರು, ಅನಾವಶ್ಯಕವಾಗಿ ಆಂಧೋಲನಕ್ಕೆ ಅಡಿಯಿಟ್ಟರು. ಅಕ್ಷಯಧಾಮಕ್ಕೂ ಅಜ್ಜ, ಅಜ್ಜಿ ಆಗಮಿಸಿ ಅಕ್ಷಯಪಾತ್ರಕ್ಕೂ ಅನ್ನದಾನದ ಅನುಕೂಲಕ್ಕೂ ಅನುವಾಗಿ ಆಯುಷ್ಮಂತರಾಗಿರೆಂದು ಆಶೀರ್ವದಿಸಿದರು. "ಆಪತ್ಕಾಲಕ್ಕೆ ಆಗುವವನೇ ಅಗ್ರಗಣ್ಯ".

ಇಮ್ಮಡಿ ಮುರಿಘಾ ಗುರುಸಿದ್ಧ + ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ

ಇಮ್ಮಡಿ ಮುರಿಘಾ ಗುರುಸಿದ್ಧ
 
ಅಂಕಿತ ನಾಮ: ಪರಶಿವಲಿಂಗಯ್ಯ
ಕಾಲ:
ದೊರಕಿರುವ ವಚನಗಳು: 209 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ:


ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ

ಅಂಕಿತ ನಾಮ: ಮಹಾಗುರುಶಿವಲಿಂಗೇಶ್ವರ

ಕಾಲ:

ದೊರಕಿರುವ ವಚನಗಳು: 209 (ಆಧಾರ: ಸಮಗ್ರ ವಚನ ಸಂಪುಟ)

ತಂದೆ/ತಾಯಿ:

ಹುಟ್ಟಿದ ಸ್ಥಳ:

ಪರಿಚಯ: 


ಅಮರ್ದುಗೈಯನನವಗ್ರಹಿಸಿದ ಸೂರ್ಯನಗ್ನಿಯಲ್ಲಿಯಡಗಲಾ
ಯಗಿನಿಯ ಕಟ್ಟಿರುಹೆ ನುಂಗಿ
ಮಹೇಂದ್ರನ ವಾಹನವಾದುದನೇನೆಂದುಸಿರ್ವೆನಯ್ಯಾ,
ಪರಮ ಶಿವಲಿಂಗಫಲಿತ ದಿವ್ಯಪ್ರಸಂಗಾ.


ಅಂಗಾತ್ಮ ಪ್ರಾಣೇಂದ್ರಿಯ ವಿಷಯ ತೃಪ್ತಿಗಳು
ಲಿಂಗಾತ್ಮಕವೆಂದು ನಿರೂಪಿಸಿದೆಯಯ್ಯಾ.
ನೀನವಿರಳ ಪಂರಜ್ಯೋತಿ ಸ್ವರೂಪನಾದುದರಿಂ
ನಿರುಪಾಧಿಕ ನಿರಾವರಣ ನಿರಂಜನನೆನಿಸಿರ್ಪೆಯಯ್ಯಾ,
ಪರಮ ಶಿವಲಿಂಗ ಪರಾಪರ ವೈಭವೋತ್ತುಂಗ. 
 

ಪ್ರೀತಿ-ಪ್ರೇಮ (Love)

 • ಹೃದಯ ಬೇನೆಯ ಮತ್ತೊಂದು ಹೆಸರು
 • ಪ್ರಣಯಕ್ಕೆ ಮೊದಲ ಹೆಜ್ಜೆ
 • ಚಿಗುರುವ ಮೀಸೆಯ ವಯಸ್ಸಿನಲ್ಲಿ ಚಿಗುರುವ ಭಾವ
 • ಇದು ತುರಿಕೆ ಇದ್ದಂತೆ. ತುರಿಸಿಕೊಳ್ಳುವಾಗ ಸುಖವೋ ಸುಖ, ಆಮೇಲೆ ಉರಿ ಉರಿ
 • ಹೃದಯದಿಂದ ಆರಂಭವಾಗಿ ಮೆದುಳನ್ನೇ ಖಾಲಿ ಮಾಡುವ ಬೇನೆ
 • ಮೊಬೈಲ್ ಕಂಪೆನಿಗಳ ಲಾಭಮೂಲ
 • ಇದು ವೇದಾಂತಿಗಳ ಬ್ರಹ್ಮ ಇದ್ದಂತೆ ಅನಿರ್ವಚನೀಯ ಮತ್ತು ಅನುಭವ ಮಾತ್ರ ವೇದ್ಯ
 • ಪ್ರೇಮಿ ಜಗತ್ತಿಗೆ ಹೆದರಲಾರ, ಅವನ ಗತ್ತು ಮತ್ತು ಜಗತ್ತು ಎರಡೂ ಬೇರೆ
 • ಕಣ್ಣಿಂದ ಆರಂಭವಾಗುವ ಸೋಂಕು, ಅವನ ರೋಗವಿದು. 'ಮದ್ರಾಸ್ ' ಇದ್ದಂತೆ
 • ಪ್ರೇಮಿಗಳನ್ನು ದ್ವೇಷಿಸುವವರೆಲ್ಲ ಆರೇಂಜ್ಡ್ ಮ್ಯಾರೇಜ್ ಆದವರು
 • ಪ್ರೇಮಕ್ಕೆ ಜಿಂದಾಬಾದ್ ಎನ್ನುವವರು ಬದುಕು ಬರ್ಬಾದ್ ಆಗದಂತೆಯೂ ಎಚ್ಚರವಹಿಸಬೇಕಾಗುತ್ತೆ
 • ಪ್ರೀತಿಗೆ ಕಣ್ಣಿಲ್ಲ. ಹಾಗಾಗೇ ಪ್ರೀತಿಸಿದವರಿಗೆ ಬೇರೇನೂ ಕಾಣಿಸುವುದಿಲ್ಲ
 • ಪ್ರೇಮಿಗಳಿಗೆ ಸಮಾಜ ಕೊಡುವ ಶಿಕ್ಷೆಗೆ 'ಗಲ್ಲು ಶಿಕ್ಷೆ' ಎನ್ನುಬಹುದು
 • ಒಬ್ಬರಿಗೊಬ್ಬರು ಪರಸ್ಪರ ಕೋಳ ತೊಡಿಸಿಕೊಳ್ಳುವ ಪ್ರಕ್ರಿಯೆ
 • ನೋಡಿ ತಿಳಿ, ಮಾಡಿ ಕಲಿ ಎಂಬ ನಿಯಮ ಇದಕ್ಕೆ ಅನ್ವಯಿಸದು. ನೋಡಿ ತಿಳಿದವ ಮಾಡಲು ಹೋಗುವುದಿಲ್ಲ
 • ಇದನ್ನು ಗೆಲ್ಲುವುದೆಂದರೆ ಅದಕ್ಕೆ ಸೋಲುವುದೇ
-ವಿಶ್ವನಾಥ ಸುಂಕಸಾಳ