ಯಾಕೋ
ಅಮ್ಮ ನಿನ್ನ ತೊಡೆಯ ಮೇಲೆ,
ತಲೆಯಿಟ್ಟು ಪುಟ್ಟ ಮಗುವಂತೆ ಮಲಗಲಾ..
ನೀ ಹಚ್ಚಿಟ್ಟ ಬಾಳ ದಾರಿಯ ದೀಪದ ಬೆಳಕು ದುಡಿವ ಬೆಳಕ ದಿನಾಲು ಬೆಳಗುತಿರುವೆ
ತಲೆಯಿಟ್ಟು ಪುಟ್ಟ ಮಗುವಂತೆ ಮಲಗಲಾ..
ನೀ ಹಚ್ಚಿಟ್ಟ ಬಾಳ ದಾರಿಯ ದೀಪದ ಬೆಳಕು ದುಡಿವ ಬೆಳಕ ದಿನಾಲು ಬೆಳಗುತಿರುವೆ
ಹೆಜ್ಜೆ
ಹೆಜ್ಜೆಗೂ ನೋವು-ನಲಿವು
ಮುಳ್ಳುಗಳು ಚುಚ್ಚುತ್ತಿವೆ ಬಾಳ ಪಯಣದಲ್ಲಿ
ಕಣ್ಣಿಗೆ ಕಾಣದ ಮನಸ್ಸಿಗೆ;
ನಾ ನೋವು ಹೇಗೆ ಸಹಿಸಲಿ?
ನಾ ನೋವು ಹೇಗೆ ಸಹಿಸಲಿ?
ಬದುಕಿನ
ಮೆಟ್ಟಿಲು ಏರಿ
ಬಲು ದೊರ ಬಂದಿರುವೆ
ತುದಿಯಲ್ಲಿ ನಿಂತು ನೋಡುತ್ತಿರುವೆ
ಏಳು-ಬೀಳುಗಳ ಉಡಿ ತುಂಬಿಕೊಂಡು
ಏಳು-ಬೀಳುಗಳ ಉಡಿ ತುಂಬಿಕೊಂಡು
ಅಮ್ಮನಿಟ್ಟ
ಪ್ರೀತಿ, ನೀ ಕಲಿಸಿದ ಪ್ರೇಮ,
ಸಹಬಾಳ್ವೆ ನಾ ಅಮ್ಮನಾದಾಗ ಥೇಟ್ ನಿನ್ನಂತೆ ಬಿರಿದು ಹೋಗುವ ಹೃದಯದಲಿ
ನಿನ್ನ ಪ್ರೀತಿಯ ಗುಟುಕು ನನ್ನ ಮಕ್ಕಳಿಗೆ ನಾನಿಟ್ಟೆ.
ಸಹಬಾಳ್ವೆ ನಾ ಅಮ್ಮನಾದಾಗ ಥೇಟ್ ನಿನ್ನಂತೆ ಬಿರಿದು ಹೋಗುವ ಹೃದಯದಲಿ
ನಿನ್ನ ಪ್ರೀತಿಯ ಗುಟುಕು ನನ್ನ ಮಕ್ಕಳಿಗೆ ನಾನಿಟ್ಟೆ.
ಅಮ್ಮ
ನನ್ನ ಮುರಿದ ಜೋಪಡಿಯ ಮನದೊಳಗೆ
ನಿನ್ನ ಜೊತೆ ಕಳೆದ ಏಕಾಂತದ ಕನಸುಗಳಿವೆ ನಿನ್ನ ಹೆಜ್ಜೆ ನಾದದ ತರಂಗಗಳ ಕೇಳಲು ಹಾತೊರೆಯುತ್ತಿವೆ ನನ್ನ ಕಿವಿಗಳು
ನಿನ್ನ ಜೊತೆ ಕಳೆದ ಏಕಾಂತದ ಕನಸುಗಳಿವೆ ನಿನ್ನ ಹೆಜ್ಜೆ ನಾದದ ತರಂಗಗಳ ಕೇಳಲು ಹಾತೊರೆಯುತ್ತಿವೆ ನನ್ನ ಕಿವಿಗಳು
ದುಡಿದು
ದಣಿದು ಬಂದವನ ಮಡಿಲಲ್ಲಿ
ಪುಟ್ಟ ಮಗುವಂತೆ
ನಾ ನನ್ನ ನೋಡಿ ಅವ ನಕ್ಕ ಆಕಾಶದಿಂದ ಹೂಮಳೆ ಸುರಿದಂತೆ
ಜೇನಿನಂತೆ ಇವನ ಉಡುಗೊರೆಯಾಗಿ ನೀ ಕೊಟ್ಟೆಯಮ್ಮ
………ಎನ್. ಸುಜಾತ………
ನಾ ನನ್ನ ನೋಡಿ ಅವ ನಕ್ಕ ಆಕಾಶದಿಂದ ಹೂಮಳೆ ಸುರಿದಂತೆ
ಜೇನಿನಂತೆ ಇವನ ಉಡುಗೊರೆಯಾಗಿ ನೀ ಕೊಟ್ಟೆಯಮ್ಮ
………ಎನ್. ಸುಜಾತ………
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.