fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

"ಎಪಿಜೆ ಅಬ್ದುಲ್ ಕಲಾಂ" ನಿಮಗೊಂದು ನನ್ನ ಸಲಾಂ

ಗಗನಕ್ಕೇರಿತು ಭಾರತದ  ವರ್ಚಸ್ಸು
ಇದಕ್ಕೆ  ಕಾರಣ ನಿಮ್ಮಲಿದ್ದ  ತೇಜಸ್ಸು

ಭಾರತ  ರತ್ನ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ಜ್ಞಾನದ  ಬೋಧನೆಯಲಿ  ನಿಮ್ಮಲಿ  ಕಂಡೆ  ಶ್ರದ್ದೆ
ನಿಮ್ಮ  ಪ್ರಶಂಸೆಗಳನ್ನೂ  ಕೇಳಿ  ನಾ  ಜಾರಿ  ಬಿದ್ದೆ

ಶಿಕ್ಷಕ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ವಿಜ್ಞಾನ  ಕ್ಷೇತ್ರದಲ್ಲಿ  ನೀವು  ಮಹಾಓಜ
ನಿಮ್ಮನು  ಯುವಜನತೆ  ಅನುಸರಿಸುವುದು  ಸಹಜ

ವೈದ್ಯ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ಆಯಿತು  ನಿಮ್ಮ  ಸಹಾಯದಿಂದ  ಉಪಗ್ರಹಗಳ  ಉಡಾವಣೆ
ಅಂತರಿಕ್ಷದಲ್ಲಿ  ಈಗಿದೆ ನಮ್ಮ ಉಪಗ್ರಹಗಳ  ಒಂದು ದೊಡ್ಡ  ಬಡಾವಣೆ

ಕ್ಷಿಪಣಿ  ಮನುಷ್ಯ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ಕಲ್ಪವೃಕ್ಷ  ದಂತೆ ನಿಮ್ಮ  ಮನ
ಅಕ್ಟೋಬರ್  ೧೫  ವಿಶ್ವ  ವಿದ್ಯಾರ್ಥಿ  ದಿನ

ಸಾಮಾನ್ಯ ಮನುಷ್ಯ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ಅನುಮಾನವಿಲ್ಲದೆ  ಎಲ್ಲರು  ಸೂಚಿಸಿದರು ಸಮ್ಮತಿ
ಏಕೆಂದರೆ  ನೀವು  ಭಾರತ  ಕಂಡ  ವಿಶಿಷ್ಟವಾದ ರಾಷ್ಟ್ರಪತಿ

ಜನರ  ರಾಷ್ಟ್ರಾಧ್ಯಕ್ಷ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ನಿಮ್ಮಂತವರು  ಜನಿಸುವುದೇ  ಒಮ್ಮೊಮ್ಮೆ
ಹಾಗಾಗಿ ಮರಳಿ ಬನ್ನಿ ಮತ್ತೊಮ್ಮೆ 

ದೇವತಾ  ಮನುಷ್ಯ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ 

ಕೋಗಿಲೆಯ ಧ್ವನಿಪ್ರೀತಿಸುವುದು ಕರ್ತವ್ಯ
ಪ್ರೀತಿಸಲ್ಪಡುವುದು ವಿಜಯ
ನೀವು ಪ್ರೀತಿಸುವವರ ಜೊತೆಗಿರುವುದು ಸಾಧನೆ
ನಿಮ್ಮನ್ನು ಪ್ರೀತಿಸುವವರ ಜೊತೆಗಿರುವುದು ಜೀವನ 
ಅನಾಮಿಕ ಸಾವಿರ ಕಾಗೆಗಳು ಕೂಗಾಡಿದರೇನು 
 ಒಂದು ಕೋಗಿಲೆಯ ಧ್ವನಿಯನ್ನು ಸರಿದೂಗಿಸಲಾಗದು.

ಅಮರಗುಂಡದ ಮಲ್ಲಿಕಾರ್ಜುನ ತಂದೆ

ರತ್ನಕಂಬಳಿಹುಳ

 

ಗ್ರೇಟರ್ ಹನಿಗೈಡ್ ಪಕ್ಷಿ + ಅಂಜೂರ ಕೊಣಜಿಗಬ್ರಹ್ಮ

  • ಬೇರೆಯವರ ಹಣೆಬರಹವನ್ನು ಬರೆಯೋದೇ ಇವನ ಹಣೆಬರಹ
  • ಇವನಿಂದ ನಿದ್ರಾವಸ್ಥೆಯಲ್ಲಿ ಹಣೆಬರಹ ಬರೆಸಿಕೊಂಡವರೆಲ್ಲ ಇಂದು ನೈಟ್ ಡ್ಯೂಟಿಯಲ್ಲಿದ್ದಾರೆ
  • ಇವನೊಂಥರ ಡಾಕ್ಟರ್ ಇದ್ದಹಾಗೆ. ಇವನು ಬರೆದದ್ದನ್ನು ಯಾರಿಂದಲೂ ಓದಲು ಸಾಧ್ಯವಿಲ್ಲ
  • ಇವನ ಕೈ ಬರಹವೆಲ್ಲ ಬ್ರಹ್ಮಲಿಪಿಯೇ
  • ಹುಟ್ಟು ಸಾವುಗಳಿಗೆಲ್ಲ ಮುಹೂರ್ತ ಫಿಕ್ಸ್ ಮಾಡುವಾತ
  • ನಮ್ಮ ನಾಲ್ಕು ಮುಖದ ರಾಷ್ಟ್ರ ಲಾಂಛನಕ್ಕೆ ನಾಲ್ಕು ಮುಖದ ಬ್ರಹ್ಮನೇ ಸ್ಫೂರ್ತಿ
  • ಜನಸಂಖ್ಯಾ ಸ್ಫೋಟಕ್ಕೆ ಮುಖ್ಯ ಕಾರಣನೀತ
  • ಪುಲ್ಲಿಂಗವಾದರೆ ಸಗುಣ. ನಪುಂಸಕ ಬ್ರಹ್ಮನಾದರೆ ನಿರ್ಗುಣ
  • ಹಮ್ಮು ತೊರೆದವಗೆ ಬೊಮ್ಮನೊಲಿವನು
  • ಇವನು ದೇವರು, ಆದರೂ ಪೂಜೆ ಮಾಡುವವರಿಲ್ಲ
-ವಿಶ್ವನಾಥ ಸುಂಕಸಾಳ

ಅಮ್ಮ ಎಂದರೆ ಮೈಮನವೆಲ್ಲಾಚಿತ್ರ               : ತಾಯಿಗಿಂತ ದೇವರಿಲ್ಲ (1977) 
ಹಾಡು            :  ಅಮ್ಮ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ
ಸಾಹಿತ್ಯ         :   ಚಿ.ಉದಯಶಂಕರ್
ಸಂಗೀತ         : ರಾಜನ್ - ನಾಗೇಂದ್ರ
ಹಾಡಿದವರು    : ಎಸ್.ಜಾನಕಿ


ಈ ಹಾಡನ್ನ ಇಲ್ಲಿ ಕೇಳಿ: 
 https://www.youtube.com/watch?v=CoP9sWt-xKg

ಅಮ್ಮ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ....ಅ...ಅ...
ಎರಡಕ್ಷರದಲಿ ಏನಿದೆ ಶಕ್ತಿ... ಹೇಳುವರಾರಮ್ಮಾ..ಅ..ಹೇಳುವರಾರಮ್ಮಾ...
ಅಮ್ಮ...ಅಮ್ಮಾ ....

ತಾಯಿಗೆ ಮಿಂಚಿದ ದೇವರೇ ಇಲ್ಲಾ..... ಆ....ಆ....ಆ
ಆ....ಆ....ಆ....
ತಾಯಿಗೆ ಮಿಂಚಿದ ದೇವರೇ ಇಲ್ಲ, ಎನ್ನುವರು ಎಲ್ಲಾ....ಆ..ಅ...
ತಾಯಿಯ ಹಾಲಿನ ಅಮೃತವನ್ನು..ಸವಿದವರೇ ಎಲ್ಲಾ...ಅ...ಅ...
ಹೊನ್ನಿನ ಬೆಲೆಯ ಬಡವರಿಗಿಂತ ಬಲ್ಲವರು ಇಲ್ಲಾ..ಅ...ಅ...
ತಾಯಿಯ ಆಸರೆ ತಬ್ಬಲಿಗಿಂತ ಬಯಸುವರಾರಿಲ್ಲಾ..ಅ...ಅ..ಬಯಸುವರಾರಿಲ್ಲಾ...


ಕoದನು ನುಡಿವ ಮೊದಲನೇ ಮಾತೇ ಅಮ್ಮಾ...ಅಮ್ಮ.....ಅ...ಅ..
ನೋವೋ...ನಲಿವೋ...ಹೊರಡುವ ದನಿಯೇ ಅಮ್ಮಾ...ಅಮ್ಮ.....ಅ...ಅ..
ಅಮ್ಮ..ಅಮ್ಮಾ...

ಎಂದೋ ಒಮ್ಮೆ ಕನಸಲಿ ಬಂದು..
ಕಂದಾ ಎನ್ನುವಳು...ಊ...ಉ...
ಕಣ್ಣಲಿ ಕಣ್ಣನು ಬೆರೆಸುವ ಮೊದಲೇ..
ಕರಗೇ ಹೋಗುವಳು...ಊ..ಉ..
ಹoಬಲಿಸಿದರೂ ಬಾರಳು ಅವಳು...
ಬಯಕೆಯ ಸಲ್ಲಿಸಲು...ಊ..ಉ..
ಕಂಬನಿ ಮಿಡಿದರೂ ಅಮ್ಮನ ಕಾಣೆನು..
ಎಂದೂ ಸನಿಹದೊಳು...ಊ..ಎಂದೂ ಸನಿಹದೊಳು...

ಅಮ್ಮಾ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ....ಆ...ಅ...
ಎರಡಕ್ಷರದಲಿ ಏನಿದೆ ಶಕ್ತಿ... ಹೇಳುವರಾರಮ್ಮಾ..ಆ...ಹೇಳುವರಾರಮ್ಮಾ...
ಅಮ್ಮ... ಅಮ್ಮಾ...ಆ...

ಸಿಂಹ ವಾಹಿನಿ ನೆಲೆಸಿಹ ಬನಶಂಕರಿ

ಬಾಗಲಕೋಟೆ ಜಿಲ್ಲೆಯ ಸುಂದರ ತಾಣ
ಟಿ.ಎಂ. ಸತೀಶ್
Banashankari Godess, ಬನಶಂಕರಿ ದೇವಾಲಯ ಕನ್ನಡರತ್ನ.ಕಾಂ, kannadaratna.com, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರ ಬನಶಂಕರಿ. ಸಿಂಹ ವಾಹಿನಿಯಾದ ಪಾರ್ವತಿ ಬನಶಂಕರಿಯಾಗಿ ನೆಲೆಸಿಹ ಈ ಊರಿಗೆ ಬನಶಂಕರಿ ಎಂದೇ ಹೆಸರು ಬಂದಿದೆ.
ಈ ಪ್ರದೇಶ ಸಂಪೂರ್ಣ ಬನಗಳಿಂದ ಕೂಡಿರುವ ಕಾರಣ ಇಲ್ಲಿ ನೆಲೆಸಿಹ ತಾಯಿಗೂ ಬನಶಂಕರಿ ಎನ್ನುತ್ತಾರೆ. ಈ ತಾಯಿಗೆ ಸ್ಥಳೀಯರು ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಎಂತಲೂ ಕರೆಯುತ್ತಾರೆ. ಬನಶಂಕರಿ ನವದುರ್ಗೆಯರದಲ್ಲಿ 6ನೇ ಅವತಾರವೆಂದೂ ಹೇಳಲಾಗುತ್ತದೆ. ಈ ಪ್ರದೇಶದಲ್ಲಿ ಭೀಕರ ಕ್ಷಾಮ ತಲೆದೋರಿದಾಗ ತಾಯಿ ತನ್ನ ತನುವಿನಿಂದ ಕಾಯಿಪಲ್ಲೆ ಸೃಷ್ಟಿಸಿ ಜನರ ಸಂಕಷ್ಟ ನೀಗಿಸಿದಳಂತೆ ಹೀಗಾಗೇ ಶಾಕಾಂಬರಿ ಎನ್ನುವ ಹೆಸರು ತಾಯಿಗೆ ಬಂತೆಂದೂ ಅರ್ಚಕರು ಹೇಳುತ್ತಾರೆ. ಈ ಪ್ರದೇಶದ ಜನರು ಪ್ರತಿವರ್ಷ ಮಾಗಿ ಕಾಲದಲ್ಲಿ ನಡೆಯುವ ರಥೋತ್ಸವದ ಮುನ್ನಾ ದಿನ ತಾಯಿಗೆ 108 ತರಕಾರಿಗಳಿಂದ ಖಾದ್ಯ ತಯಾರಿಸಿ ಸಮರ್ಪಿಸುವ ಮೂಲಕ ಕೃತಜ್ಞತೆ ಅರ್ಪಿಸುತ್ತಾರೆ. ಈ Banashankari Temple, ಬನಶಂಕರಿ ದೇವಾಲಯ ಕನ್ನಡರತ್ನ.ಕಾಂ, kannadaratna.com, ಋಣ ಸಂದಾಯ ಪಲ್ಲೇದ ಹಬ್ಬ ಎಂದೇ ಖ್ಯಾತವಾಗಿದೆ. ದೇವಿ ಶಾಂಕಾಂಬರಿ ಆದ ಬಗ್ಗೆ ಸ್ಕಂದ ಪುರಾಣ, ಪದ್ಮಪುರಾಣಗಳಲ್ಲಿ ಉಲ್ಲಖವಿದೆಯೆಂತಲೂ ಹಿರೀಕರು ಹೇಳುತ್ತಾರೆ. ಈ ಊರಿನ ಸುತ್ತ ಅರಣ್ಯವಿದೆ, ತೆಂಗು, ಬಾಳೆ, ವೀಳೆಯದೆಲೆಯ ಬನಗಳಿವೆ. ಸನಿಹದಲ್ಲೇ ಸರಸ್ವತಿ ಹೊಳೆಯೂ ಹರಿಯುತ್ತದೆ.
ಸುಂದರ ಕೋಟೆಯಂತೆ ಭಾಸವಾಗುವ ಪ್ರವೇಶ ದ್ವಾರ ದಾಟಿ ಒಳಹೊಕ್ಕರೆ ದೇವಾಲಯ ಕಾಣಸಿಗುತ್ತದೆ. ದೇವಾಲಯದ ಎದುರು ಸುಂದರವಾದ ಕೊಳವಿದೆ. 360 ಅಡಿಗಳ ಚಚ್ಚೌಕಾಕಾರದ ಈ ಕಲ್ಯಾಣಿಯ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಈ ಕೊಳ ಬನಶಂಕರಿಯಲ್ಲಿ ನೋಡಲೇ ಬೇಕಾದ ರಮಣೀಯ ತಾಣ.
Banashankari, ಬನಶಂಕರಿ ದೇವಾಲಯ ಗೋಪುರ, ಕಲ್ಯಾಣಿ ಕನ್ನಡರತ್ನ.ಕಾಂ, kannadaratna.com, ಕಲ್ಯಾಣಿಯ ಸೊಬಗನ್ನು ಕಣ್ತುಂಬಿಕೊಂಡು ದೇವಾಲಯ ಪ್ರವೇಶಿಸಿದರೆ ದ್ರಾವಿಡ ಶೈಲಿಯಲ್ಲಿರುವ ಮನೋಹರವಾದ ದೇವಾಲಯದ ಸೌಂದರ್ಯ ಕಣ್ಮನ ಸೆಳೆಯುತ್ತದೆ. ಕಲ್ಯಾಣ ಚಾಲುಕ್ಯರ ದೊರೆ 1ನೇ ಜಗದೇಕಮಲ್ಲನ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ, ಕ್ರಿ.ಶ.603ರಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಲಾಗಿದೆ ಎಂಬುದನ್ನು ಇಲ್ಲಿರುವ ಶಾಸನಗಳು ಸಾರುತ್ತವೆ.
ದೇವಾಲಯದ ಆವರಣದಲ್ಲಿರುವ ಸ್ತಂಭಗಳು ನಯನ ಮನೋಹರವಾಗಿವೆ. ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾದ ಪಾರ್ವತಿಯ ಸುಂದರ ಮೂರ್ತಿಯಿದೆ. ದೇವಿಗೆ ಶರಣು ಹೋದರೆ ಸಕಲ ಅಭಿಷ್ಟಗಳೂ ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ.  ವರ್ಷಕ್ಕೊಮ್ಮೆ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದೆ. ಅಂದು ಊರಿಗೆ ಊರೇ ತಳಿರು ತೋರಣಗಳಿಂದ ಅಲಂಕೃತವಾಗುತ್ತದೆ. ದೂರದೂರುಗಳಿಂದ ಆಗಮಿಸುವ ಭಕ್ತರು ಇಲ್ಲಿ ಬಂದು ಬಿಡಾರ ಹೂಡಿ ದೇವಿಯನ್ನು ಪೂಜಿಸುತ್ತಾರೆ. ಬನಶಂಕರಿ ನವದುರ್ಗೆಯರ 6ನೇ ಅವತಾರವಾಗಿದೆ.
ಬನಶಂಕರಿ ಬೆಂಗಳೂರಿನಿಂದ 425 ಕಿಲೋ ಮೀಟರ್ ದೂರದಲ್ಲಿದೆ. 
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.

TET 2015 (ಟಿ.ಇ.ಟಿ ಪರೀಕ್ಷೆ 2015 )

2015 - ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ

KARTET 2015 ದಿನಾಂಕ 13/07/2015

 
ದಿನಾಂಕಸುದ್ದಿ & ಕ್ರಿಯೆಗಳು
13/ ಜುಲೈ / 2015ಕೆಎಆರ್ TET ಅನ್ವಯ ಬಿಡುಗಡೆ - 2015
10/ ಆಗಸ್ಟ್ / 2015 ಒಪ್ಪಿಸಿ ಅನ್ವಯಕ್ಕೆ ಕೊನೆಯ ದಿನಾಂಕ
12/ ಆಗಸ್ಟ್ / 2015 ಶುಲ್ಕವನ್ನು ಕೊನೆಯ ದಿನಾಂಕ
27/ ಸೆಪ್ಟೆಂಬರ್ / 2015 ಪರೀಕ್ಷೆ ದಿನಾಂಕ


ಅಭ್ಯರ್ಥಿಗಳಿಗೆ ಅಧಿಸೂಚನೆ


  ಪ್ರವೇಶ ಟಿಕೆಟ್ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ
ಪ್ರವೇಶ ಟಿಕೆಟ್ / ಅಪ್ಲಿಕೇಶನ್ ಪಿಡಿಎಫ್ ರಚಿಸಿ

Karnataka Teachers Eligibility Test - 2015
DATE
NEWS & EVENTS
13 / Jul / 2015RELEASED THE APPLICATION OF KAR TET – 2015
10 / Aug / 2015LAST DATE FOR APPLICATION SUBMIT
12 / Aug / 2015LAST DATE FOR PAYMENT OF FEE
27 / Sep / 2015EXAMINATION DATE Click Here To Admission Ticket PDF
Generate Admission Ticket / Application PDF10 ಯೋಗಾಸನ

1ಎ.ವಿರಾಸನ 
1ಬಿ.ವಿರಾಸದಲ್ಲಿ ಪರ್ವತಾಸನ 
2.ಗೋಮುಕಾಸನ 
3.ಅದು ಮುಖ ಶ್ವಾಸಾಸನ 
4.ತಡಾಸನ 
5.ವಕ್ರಾಸನ 
6.ಉತ್ಕಟಾಸನ 
7.ಉತ್ತಿಟಾ ತ್ರಿಕೋನಾಸನ 
8.ಉತ್ತಿಟಾ ಪರ್ವಾಕಾಸನ 
9.ವೀರಭದ್ರಾಸನ 2 
10.ಪರಿಗಾಸನ

ನುಡಿಮುತ್ತು 24

ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.
— ಮಹಾತ್ಮ ಗಾಂಧಿ

ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.
— ಉಪನಿಷತ್ತುಗಳು

ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ
ಟಿ.ಪಿ.ಕೈಲಾಸಂ

ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.
ಸಮರ್ಥ ರಾಮದಾಸ

ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.
ಮನುಸ್ಮೃತಿ

ಬೇರೆಯವರಿಗೆ ಕೆಡುಕನ್ನು ಬಯಸದಿರುವುದೇ ನ್ಯಾಯ.
ಮನು

ಕಹಿ ನೆನಪು ಹಾಗೂ ನೋವುಗಳು ಮಾಯವಾಗದೇ ನಮ್ಮನ್ನು ಸದಾ ಕಾಡುತ್ತಿರುತ್ತವೆ
— ಮಾಕೃಮ

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.
ಮಹಾತ್ಮ ಗಾಂಧಿ

ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.
ವಿನೋಬಾ ಭಾವೆ


                                                                    ಕೃಪೆ : ಮಾ.ಕೃ.ಮಂಜು