ಶುಕ್ರವಾರ, ಜುಲೈ 24, 2015

ಬ್ರಹ್ಮ

  • ಬೇರೆಯವರ ಹಣೆಬರಹವನ್ನು ಬರೆಯೋದೇ ಇವನ ಹಣೆಬರಹ
  • ಇವನಿಂದ ನಿದ್ರಾವಸ್ಥೆಯಲ್ಲಿ ಹಣೆಬರಹ ಬರೆಸಿಕೊಂಡವರೆಲ್ಲ ಇಂದು ನೈಟ್ ಡ್ಯೂಟಿಯಲ್ಲಿದ್ದಾರೆ
  • ಇವನೊಂಥರ ಡಾಕ್ಟರ್ ಇದ್ದಹಾಗೆ. ಇವನು ಬರೆದದ್ದನ್ನು ಯಾರಿಂದಲೂ ಓದಲು ಸಾಧ್ಯವಿಲ್ಲ
  • ಇವನ ಕೈ ಬರಹವೆಲ್ಲ ಬ್ರಹ್ಮಲಿಪಿಯೇ
  • ಹುಟ್ಟು ಸಾವುಗಳಿಗೆಲ್ಲ ಮುಹೂರ್ತ ಫಿಕ್ಸ್ ಮಾಡುವಾತ
  • ನಮ್ಮ ನಾಲ್ಕು ಮುಖದ ರಾಷ್ಟ್ರ ಲಾಂಛನಕ್ಕೆ ನಾಲ್ಕು ಮುಖದ ಬ್ರಹ್ಮನೇ ಸ್ಫೂರ್ತಿ
  • ಜನಸಂಖ್ಯಾ ಸ್ಫೋಟಕ್ಕೆ ಮುಖ್ಯ ಕಾರಣನೀತ
  • ಪುಲ್ಲಿಂಗವಾದರೆ ಸಗುಣ. ನಪುಂಸಕ ಬ್ರಹ್ಮನಾದರೆ ನಿರ್ಗುಣ
  • ಹಮ್ಮು ತೊರೆದವಗೆ ಬೊಮ್ಮನೊಲಿವನು
  • ಇವನು ದೇವರು, ಆದರೂ ಪೂಜೆ ಮಾಡುವವರಿಲ್ಲ
-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ: