ಗುರುವಾರ, ಜುಲೈ 30, 2015

"ಎಪಿಜೆ ಅಬ್ದುಲ್ ಕಲಾಂ" ನಿಮಗೊಂದು ನನ್ನ ಸಲಾಂ

ಗಗನಕ್ಕೇರಿತು ಭಾರತದ  ವರ್ಚಸ್ಸು
ಇದಕ್ಕೆ  ಕಾರಣ ನಿಮ್ಮಲಿದ್ದ  ತೇಜಸ್ಸು

ಭಾರತ  ರತ್ನ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ಜ್ಞಾನದ  ಬೋಧನೆಯಲಿ  ನಿಮ್ಮಲಿ  ಕಂಡೆ  ಶ್ರದ್ದೆ
ನಿಮ್ಮ  ಪ್ರಶಂಸೆಗಳನ್ನೂ  ಕೇಳಿ  ನಾ  ಜಾರಿ  ಬಿದ್ದೆ

ಶಿಕ್ಷಕ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ವಿಜ್ಞಾನ  ಕ್ಷೇತ್ರದಲ್ಲಿ  ನೀವು  ಮಹಾಓಜ
ನಿಮ್ಮನು  ಯುವಜನತೆ  ಅನುಸರಿಸುವುದು  ಸಹಜ

ವೈದ್ಯ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ಆಯಿತು  ನಿಮ್ಮ  ಸಹಾಯದಿಂದ  ಉಪಗ್ರಹಗಳ  ಉಡಾವಣೆ
ಅಂತರಿಕ್ಷದಲ್ಲಿ  ಈಗಿದೆ ನಮ್ಮ ಉಪಗ್ರಹಗಳ  ಒಂದು ದೊಡ್ಡ  ಬಡಾವಣೆ

ಕ್ಷಿಪಣಿ  ಮನುಷ್ಯ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ಕಲ್ಪವೃಕ್ಷ  ದಂತೆ ನಿಮ್ಮ  ಮನ
ಅಕ್ಟೋಬರ್  ೧೫  ವಿಶ್ವ  ವಿದ್ಯಾರ್ಥಿ  ದಿನ

ಸಾಮಾನ್ಯ ಮನುಷ್ಯ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ಅನುಮಾನವಿಲ್ಲದೆ  ಎಲ್ಲರು  ಸೂಚಿಸಿದರು ಸಮ್ಮತಿ
ಏಕೆಂದರೆ  ನೀವು  ಭಾರತ  ಕಂಡ  ವಿಶಿಷ್ಟವಾದ ರಾಷ್ಟ್ರಪತಿ

ಜನರ  ರಾಷ್ಟ್ರಾಧ್ಯಕ್ಷ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ

ನಿಮ್ಮಂತವರು  ಜನಿಸುವುದೇ  ಒಮ್ಮೊಮ್ಮೆ
ಹಾಗಾಗಿ ಮರಳಿ ಬನ್ನಿ ಮತ್ತೊಮ್ಮೆ 

ದೇವತಾ  ಮನುಷ್ಯ  ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು  ನನ್ನ  ಸಲಾಂ 

ಕಾಮೆಂಟ್‌ಗಳಿಲ್ಲ: