ಸೋಮವಾರ, ಡಿಸೆಂಬರ್ 26, 2016

ಉರಿಲಿಂಗಪೆದ್ದಿ

ಅಂಕಿತ ನಾಮಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ 
ಕಾಲ1160 
ದೊರಕಿರುವ ವಚನಗಳು366 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿ
ಹುಟ್ಟಿದ ಸ್ಥಳ
ಪರಿಚಯಕಾಲ ಸು. 1160. 

ಕಳ್ಳತನ ಮಾಡುತಿದ್ದ ಪೆದ್ದಿ ಉರಿಲಿಂಗದೇವನ ಶಿಷ್ಯನಾಗಿ ಅವನ ನಂತರ ಅದೇ ಪೀಠದ ಮುಖ್ಯಸ್ಥನಾದಅಸ್ಪೃಶ್ಯ ಜನಾಂಗದ ಪೆದ್ದಿ ವಿದ್ವಾಂಸನಾಗಿಅನುಭಾವಿಯಾಗಿಮಠದ ಮುಖ್ಯಸ್ಥನೂ ಆದದ್ದು  ಕಾಲದ ಮಹತ್ವದ ಸಂಗತಿಈತನ 366 ವಚನಗಳು ದೊರೆತಿವೆಕರ್ನಾಟಕದಲ್ಲಿರುವ ಅಸ್ಪೃಶ್ಯ ಜನಾಂಗಗಳಿಗೆ ಸೇರಿದ ಮಠಗಳನ್ನು ಉರಿಲಿಂಗಪೆದ್ದಿಗಳ ಮಠವೆಂದೇ ಕರೆಯುವ ರೂಢಿ ಇದೆ.


ಅಯ್ಯಾನಿಮ್ಮ ಶರಣರ ಚರಣದ ಭಕ್ತಿಯೇ
ಎನಗೆ ಸಾಲೋಕ್ಯಪದವಯ್ಯಾ.
ನಿಮ್ಮ ಶರಣರ ಅರ್ಚನೆ ಪೂಜೆಯೇ
ಎನಗೆ ಸಾಮೀಪ್ಯಪದವಯ್ಯಾ.
ಅಯ್ಯಾನಿಮ್ಮ ಗಣಂಗಳ ಧ್ಯಾನವೇ
ಎನಗೆ ಸಾರೂಪ್ಯಪದವಯ್ಯಾ.
ಅಯ್ಯಾನಿಮ್ಮ ಪುರಾತನರ ಜ್ಞಾನಾನುಭಾವ ಸಮರಸಾನಂದವೇ
ಎನಗೆ ಸಾಯುಜ್ಯಪದವಯ್ಯಾ.
ಇಂತೀ ಚತುರ್ವಿಧಪದಂಗಳನಲ್ಲದೆ ಅನ್ಯವ ನಾನರಿಯೆನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ಕಾಮೆಂಟ್‌ಗಳಿಲ್ಲ: