ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಕನ್ನಡ ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ನವೆಂಬರ್ 01, 2023

ವಂದೇ ಮಾತರಂ ಪೂರ್ಣ ಸಾಹಿತ್ಯ :

ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ ||

ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ || ವಂದೇ ಮಾತರಂ ||

ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ಧೃತ ಖರಕರವಾಲೇ
ಅಬಲಾ ಕೆನೋ ಮಾ ಎತೋ ಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುದಲ ವಾರಿಣೀಂ ಮಾತರಂ || ವಂದೇ ಮಾತರಂ ||

ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ ತೋಮಾರ ಈ
ಪ್ರತಿಮಾ ಗಡೀ ಮಂದಿರೇ ಮಂದಿರೇ || ವಂದೇ ಮಾತರಂ ||

ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀಂ
ಕಮಲಾ ಕಮಲದಲ ವಿಹಾರಿಣೀಂ
ವಾಣೀಂ ವಿದ್ಯಾದಾಯಿನೀ
ನಮಾಮಿ ತ್ವಾಂ ನಮಾಮಿ ಕಮಲಾಂ
ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ || ವಂದೇ ಮಾತರಂ ||

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ || ವಂದೇ ಮಾತರಂ ||

ಅರ್ಥ :
ತಾಯೇ ವಂದಿಸುವೆ.
ತಾಯಿ ಭಾರತಿ ಪವಿತ್ರವಾದ, ಶೀತಲವಾದ ಝರಿ - ತೊರೆಗಳಿಂದ ಒಳ್ಳೆಯ ಮಾಗಿದ ಫಲಗಳಿಂದ, ಗುಡ್ಡ - ಪರ್ವತಗಳಿಂದ, ಸಸ್ಯ - ಗಿಡ - ಮರಗಳಿಂದ ಶ್ಯಾಮಲೆಯಾಗಿ ಕಂಗೊಳಿಸುತ್ತಿದ್ದಾಳೆ.

ಶ್ವೇತ ವಸ್ತ್ರಧಾರಿಯಾಗಿ, ಸುವಾಸನಾಭರಿತ ಹೂಗಳಿಂದ ಅಲಂಕೃತಳಾದ ನೀನು ಮಧುರವಾದ ಮಾತುಗಳನ್ನಾಡುವ ವಾಗ್ದೇವಿಯೂ ಹೌದು, ಯಾವಾಗಲೂ ನಗು-ನಗುತ್ತಿರುವ ಜಗದಾಂಬೆಯು ಹೌದು, ನನಗೆ ಸುಖವನ್ನೂ ವರವನ್ನು ಈಯುವ ತಾಯಿಯೂ ನೀನೇ.

ತಾಯಿ! ಸಿಂಹ ಸಧೃಡವಾಗಿ ಘರ್ಜಿಸುವ ಕೋಟಿ - ಕೋಟಿ ಕಂಠಗಳು ನಿನ್ನೊಡಲಿನಲ್ಲಿವೆ, ತಮ್ಮ ಒರೆಯಿಂದ ಕತ್ತಿಯನ್ನು ಝಳಿಪಿಸಬಲ್ಲ, ಕೋಟಿ ವೀರ ಹಸ್ತಗಳು ನಿನ್ನ ಬಳಿಯಿದೆ. ಶತ್ರುಮರ್ದನಗೈವ ತಾಕತ್ತುಳ್ಳ ತಾಯೇ! ನಿನ್ನನ್ನು ಈ ಜನ ಅಬಲೆ ಎನ್ನುತ್ತಾರೆ...!?

ನನ್ನ ಪಾಲಿಗೆ ಜ್ಞಾನವೂ ನೀನೇ, ಧರ್ಮವೂ ನೀನೇ, ನನ್ನ ಭಾವನೆ ಚಿಂತನೆಗಳೆಲ್ಲವೂ ನೀನೇ, ನನ್ನ ಶರೀರದಲ್ಲಿನ ಪ್ರಾಣ ಮತ್ತು ನನ್ನ ತೋಳಿನ ಶಕ್ತಿ ನೀನು, ನನ್ನ ಹೃದಯದ ಭಕ್ತಿ ನೀನು, ಮಂದಿರದ ಪ್ರತಿಮೆ ನೀನು, ಆದರೆ ನಿನಗೆ ಅದೇ ಎಲ್ಲೆಯಲ್ಲ, ನೀನು ಎಲ್ಲೆಲ್ಲೂ ಇರುವೆ.

ತಾಯೇ ನೀನು ದುರ್ಗೆಯಂತೆ ದಶಾಸ್ತ್ರವುಳ್ಳವಳು, ನೀನೇ ಕಮಲೆ, ನೀನೇ ನನ್ನ ವಾಕ್ ಶಕ್ತಿ, ನೀನೇ ಸಂಸ್ಕೃತಿ - ನನಗೆ ವಿದ್ಯೆ ನೀಡಿದ ದೇವತೆ, ನಿನಗೆ ಸಮನಾದವರಾರೂ ಇಲ್ಲ. ನಗೆಯನ್ನೆ ಮೊಗದ ತುಂಬಾ ಸಿಂಗರಿಸಿಕೊಂಡ ತಾಯೇ ನಿನಗೆ ವಂದಿಸುವೆ.
ಕವಿ : ಬಂಕಿಮಚಂದ್ರ ಚಟರ್ಜಿ

ಮಂಗಳವಾರ, ಜನವರಿ 31, 2023

ಈ ನಮ್ಮ ಕನ್ನಡ ಕವನ

ಕನ್ನಡ
ಜನರಲ್ಲಿ ಉಸಿರಾಗಿ,
ನೆಲದಲ್ಲಿ ಹಸುರಾಗಿ,
ಬದುಕಲ್ಲಿ ಹಸನಾಗಿ,
ಬೆಳೆದು ಬಾಳಲಿ ಕನ್ನಡ.
 
ಶ್ರೀಗಂಧದ ಕಂಪಿನಂತೆ
ಕಾವೇರಿಯ ನೀರಿನಂತೆ
ಎಲ್ಲಡೆ ಹರಿದು ಪಸರಿಸಲಿ
 
=>ಮಂಜು ಹಿಚ್ಕಡ್

ಶನಿವಾರ, ಡಿಸೆಂಬರ್ 31, 2022

══> ನಮ್ಮ ಕನ್ನಡ <══

🙂🚥═𝕤𝕡𝕟𝟛𝟙𝟠𝟟═🚥🙂

ಹೇಳಿ ಹೇಳಿ ಕನ್ನಡ
ಹಾಡಿ ಹಾಡಿ ಕನ್ನಡ
ಬಲು ಸರಳ ಕನ್ನಡ
ಕಲಿಯಬೇಕು ನೀ ಕನ್ನಡ

ನಮ್ಮ ನಾಡು ಕನ್ನಡ
ನಮ್ಮ ಭಾಷೆ ಕನ್ನಡ
ನಮ್ಮ ಉಸಿರು ಕನ್ನಡ
ನಮ್ಮ ಹೆಸರೂ ಕನ್ನಡ

ಹಾಲು ಜೇನು ಕನ್ನಡ
ಒಳ್ಳೆ ರುಚಿ ಕನ್ನಡ
ಬಲು ಸರಳ ಕನ್ನಡ
ಕಲಿಯಬೇಕು ನೀ ಕನ್ನಡ

ಗಂಧದ ಗುಡಿ ಕನ್ನಡ
ಅಂದದ ಬೀಡು ಕನ್ನಡ
ಚೆಲುವ ನಾಡು ಕನ್ನಡ
ಸಮೃದ್ಧಿ ನಾಡು ಕನ್ನಡ

ನನ್ನಲಿ ಕನ್ನಡ
ನಿನ್ನಲ್ಲಿ ಕನ್ನಡ
ಅವರಲ್ಲಿ ಕನ್ನಡ
ಇವರಲ್ಲಿ ಕನ್ನಡ

ಕೋಗಿಲೆ ಧ್ವನಿ ಕನ್ನಡ
ಸಾಹಿತ್ಯ ಊರು ಕನ್ನಡ
ಕವಿ ಪುಂಗವ ಕನ್ನಡ
ಕಾವ್ಯ ಕುಸುಮ ಕನ್ನಡ

ಕೃಪೆ: ಎಚ್.ವ್ಹಿ.ಈಟಿ (ಶಿಕ್ಷಕರು), 
ಸಾ.ನರೇಗಲ್ಲ

ಸೋಮವಾರ, ಅಕ್ಟೋಬರ್ 31, 2022

ಕನ್ನಡವೆಂದರೆ ಉಸಿರು

ಮಾತು ಆರಂಭಿಸಿದ ಮೊದಲಿನಿಂದ
ಮಾತು ನಿಲ್ಲಿಸುವ ಕೊನೆವರೆಗೂ
ಕನ್ನಡವೆಂದರೆ ಉಸಿರು.

ರಕ್ತದೊಂದಿಗೆ ಬೆರೆತುಹೋದ
ಹೃದಯದೊಂದಿಗೆ ಮಿಳಿತವಾದ
ಕನ್ನಡವೆಂದರೆ ಉಸಿರು

ಸಾವಿರಾರು ಭಾಷೆ ಜಗದಲ್ಲಿದ್ದರೂ
ತಾಯಿ ಭಾಷೆ ತವರು ಭಾಷೆ
ಕನ್ನಡವೆಂದರೆ ಉಸಿರು

ದೇಶ ವೇಷ ಭಾಷೆ ಬದಲಿಸಿದರೇನು?
ಹೃದಯಭಾಷೆ ಮರೆಯಾಗುವುದೇನು?
ಕನ್ನಡವೆಂದರೆ ಉಸಿರು

ಹೆತ್ತ ತಾಯಿ ಹೊತ್ತ ಭೂಮಿ
ಸ್ವರ್ಗಕ್ಕಿಂತ ಮಿಗಿಲಲ್ಲವೇನು?
ಕನ್ನಡವೆಂದರೆ ಉಸಿರು.

ಶುಕ್ರವಾರ, ಡಿಸೆಂಬರ್ 31, 2021

ಅಪೂರ್ವ ಶಕ್ತಿ

ಮನೆ ಮನಗಳ ಕದ ತಟ್ಟಿ ಕಿವಿ ಇಂಪಾಗಿ ತಂಪೆನಿಸುವುದೆ ಅದೊಂದು/

ತನ್ನೆಡೆಗೆ ಆಕರ್ಷಿಸಿ ಹಿಡಿದಿಡುವ ಅಪೂರ್ವ ಶಕ್ತಿ ಇದೆ ಕನ್ನಡಕ್ಕೊಂದು//

ಸಾವಿರಾರು ವರ್ಷಗಳ ಇತಿಹಾಸ ಇರುವ ಸೊಬಗಿದು ಅರಿತಿರುವೆ ಆಸ್ವಾದಿಸಿ/
ಪೋಷಿಸಿ ನೀರೆರೆವ ಹೃದಯ ಬಿತ್ತನೆ ಎದೆಯಲ್ಲಿ ಅಚ್ಚಾಗಬೇಕಿದೆ ಇದೊಂದು//

ಜಗದ ಭಾಷೆಗಳೆಲ್ಲಾ ಅಡಗಿಸಿಕೊಳ್ಳುವ ಶಕ್ತಿಯ ಭವ್ಯ ಪರಂಪರೆಯ ನುಡಿ/
ಹಳೆ ನಡು ಹೊಸಗನ್ನಡ ಅಂದಿನಿಂದ ನಿರಂತರ ಪುಟಿದೇಳುತ್ತಲಿದೆ ಎಂದೆಂದು//

ತಂದು ಹಾಕಿದರೂ ನುಸುಳಿ ಬಂದರೂ ಕೊಬ್ಬಿ ಮೆರೆದರೂ ಅಜರಾಮರ ಕನ್ನಡ/
ಮಾತಾಡುವ ಹೆಮ್ಮೆ ಮಾಡಿರುವೆ ಪುಣ್ಯ ಕೇಳಿಕೊಂಡು ಬರಬೇಕಿದೆ ಇದಕ್ಕೆಂದು//

ವಿವಿಧ ರೂಪ ವಿಶಿಷ್ಟ ಸಂಸ್ಕೃತಿ ವಿಭಿನ್ನ ಪ್ರದೇಶಗಳ ಮುಕುಟಮಣಿ ನಾಡಿದು/
ಕಲಿತು ಕಲಿಸುವ ಅಭಿಮಾನ ಪಸರಿಸಿದರೆ ಸ್ವಾಭಿಮಾನ ನಿಜವಾಗಲಿದೆ ಎಂದೆಂದೂ//

-ಬಸವರಾಜ ಕಾಸೆ

ಭಾನುವಾರ, ಅಕ್ಟೋಬರ್ 31, 2021

ನಮ್ಮ ಕನ್ನಡ ನಾಡು

ಕನ್ನಡ ನಾಡಿನ ಅಂದವ ನೋಡ
ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ
ಮನ ತಣಿಸುವ ಹಚ್ಚ ಹಸಿರು
ಮಲೆನಾಡಿನ ಸೌಂದರ್ಯದುಸಿರು

ಜೋಗಿನ ಜಲಪಾತದ ಸೊಬಗಿನ ಇಂಪು
ಪಂಚ ಕೋಟಿ ಜನರಾಡುವ ಕನ್ನಡದ ಕಂಪು
ಬೇಲೂರು ಹಳೇಬೀಡು ಮೈಸೂರು
ಸದಾ ಆಕರ್ಷಿಸಿಸುವ ತವರೂರು

ಸುಂದರ ಇತಿಹಾಸ ಸೃಷ್ಟಿಸಿದ ನಾಡು
ಕಲೆ ವಾಸ್ತುಶಿಲ್ಪ ಸಾಹಿತ್ಯದ ಬೀಡು
ವಿದೇಶಿಯರು ಹೊಗಳುವ ಮೈಸೂರು ದಸರ
ನಾಡಿನ ಜನತೆಯ ಸಂತಸದ ಸಡಗರ

ನಾಡನ್ನು ಕಟ್ಟಿದ ರಾಜರ ವೈಭವ
ಕವಿಗಳು ರಚಿಸಿದ ಸಾಹಿತ್ಯ ಭಂಡಾರ
ಪ್ರವಾಸಿಗರ ಕೈ ಬೀಸಿ ಕರೆಯುವ ತಾಣ
ನೆಲೆಯೂರಲು ಯೋಗ್ಯವಾದ ವಾಸಸ್ಥಾನ

ನೀ ಒಮ್ಮೆ ಬಂದು ನೋಡು ಬಾರ
ಕನ್ನಡನಾಡಿನ ಅಂದವ ಸವಿಯಬಾರ
-ಮಾಕೃಮ

ಭಾನುವಾರ, ಜನವರಿ 31, 2021

ಹೊರನಾಡ ಕನ್ನಡಿಗ (ಕನ್ನಡ ರಾಜ್ಯೋತ್ಸವದ ಸಲುವಾಗಿ ಒಂದು ಕವನ)


ಪವಿತ್ರ ಆ ಕನ್ನಡ ನೆಲದಲ್ಲಿ ಹುಟ್ಟಿ
ಜೀವನದ ಹುಟ್ಟು ಹಾಕಿದೆ ಇಲ್ಲಿ
ಕಂದಾ! ಕನ್ನಡದ ಕನ್ನಡಿಯಾಗಿ
ನಿಂತೆ ನೀ ಕನ್ನಡದ ಸೇವೆಗಾಗಿ


ಅಲ್ಲಿ ಕನ್ನಡ ಜಲದಲ್ಲೇ ಬೆಳೆದೆ
ಇಲ್ಲಿ ಕನ್ನಡ ಸ್ತುತಿಯಲೇ ಕಳೆದೆ
ಅಲ್ಲಿದ್ದರೂ ಮಾಡುವೆ ಅದುವೇ
ಇಲ್ಲಿದ್ದರೂ, ಎಲ್ಲೆಲ್ಲೂ ಇದ್ದರೂ


ಕನ್ನಡ ಗಾಳಿಯೇ ನಿನ್ನ ಜೀವದುಸಿರು
ಕನ್ನಡ ಸುಗಂಧದಲ್ಲಿ ಸದಾ ವಿಹರಿಸಿ
ಶ್ರೀಗಂಧ ಕನ್ನಡ ಕಸ್ತೂರಿಯ ಪಸರಿಸಿ
ಕನ್ನಡ ಕಂಪಿನಲಿ ಸೊಂಪಾಗಿ ಬೆಳೆವೆ


ಕನ್ನಡ ಕವಿ ಕಾವ್ಯ ಸಿಹಿ ಸಾಹಿತ್ಯವನ್ನುಂಡು
ಕನ್ನಡವೇ ಸತ್ಯವೆಂದು ಮನ ಮನಗಂಡು
ವಿಶ್ವ ಮಾನವನಾಗಿ ನೀ ಸತ್ಪಾತ್ರನಾಗುವೆ
ಕನ್ನಡಾಂಬೆಯ ಶ್ರೀವರಪುತ್ರ ನೀನೆನಿಸುವೆ


(ಕೃಪೆ : ಡಾ. ನಾಗಭೂಷಣ ಮೂಲ್ಕಿ, ಚಿಕಾಗೋ, ಅಮೇರಿಕ ವರದಿಗಾರರು : ಸೀತಾ ಎ ಉಡುಪಿ

ಪ್ರಕಟಿಸಿದ ದಿನಾಂಕ : 2010-11-01)

ಗುರುವಾರ, ಡಿಸೆಂಬರ್ 31, 2020

ನಗಿಸಿದ್ದು ಕನ್ನಡ

ನಾನು ನಕ್ಕಾಗ ನಗಿಸಿದ್ದು ಕನ್ನಡ,
ನಾನು ಅತ್ತಾಗ ಅಳಿಸಿದ್ದು ಕನ್ನಡ,
ನಾನು ಪ್ರೀತಿಸಿದಾಗ ಮೂಡಿದ್ದು ಕನ್ನಡ,
ನಾನು ಪ್ರೇಮಿಸಿದಾಗ ಅರಳಿದ್ದು ಕನ್ನಡ,
ನಾನು ಕಾಮಿಸಿದಾಗ ಕನಲಿದ್ದು ಕನ್ನಡ,

ನನ್ನ ಖುಷಿಗೆ ಜೊತೆಯಾಗಿದ್ದು ಕನ್ನಡ,
ನನ್ನ ಕೋಪಕ್ಕೆ ಸೇರಿಕೊಂಡಿದ್ದು ಕನ್ನಡ,
ನನ್ನ ಖಿನ್ನತೆ ವ್ಯಕ್ತಪಡಿಸಿದ್ದು ಕನ್ನಡ,
ನನ್ನ ಭಕ್ತಿಯೂ ಕನ್ನಡ,
ನನ್ನ ಶಕ್ತಿಯೂ ಕನ್ನಡ
ನನ್ನ ಮುಕ್ತಿಯೂ ಕನ್ನಡ,

ನನ್ನಲ್ಲಿ ಅರಿವು ಮೂಡಿಸಿದ್ದು ಕನ್ನಡ,
ನನ್ನಲ್ಲಿ ಅಹಂಕಾರ ಬೆಳೆಸಿದ್ದೂ ಕನ್ನಡ,
ನನ್ನಲ್ಲಿ ಹೆಮ್ಮೆ ಬೆಳಗಿಸಿದ್ದೂ ಕನ್ನಡ,
ನನ್ನಲ್ಲಿ ಕೀಳರಿಮೆ ತಂದದ್ದೂ ಕನ್ನಡ,
ನನ್ನಲ್ಲಿ ಅಭಿಮಾನ ಸೇರಿಸಿದ್ದು ಕನ್ನಡ,

ನನಗೆ ದೃಷ್ಟಿಯಾಗಿ ಕಂಡದ್ದು ಕನ್ನಡ,
ನನಗೆ ಧ್ವನಿಯಾಗಿ ಕೇಳಿದ್ದು ಕನ್ನಡ,
ನನಗೆ ವಾಸನೆಯಾಗಿ ಗ್ರಹಿಸಿದ್ದು ಕನ್ನಡ,
ನನಗೆ ರುಚಿಯಾಗಿ ಸವಿದದ್ದು ಕನ್ನಡ,
ನನಗೆ ಸ್ಪರ್ಶವಾಗಿ ಮುಟ್ಟಿದ್ದು ಕನ್ನಡ,

ಮಾತು ಕಲಿಸಿದ್ದು ಕನ್ನಡ,
ವಿದ್ಯೆ ನೀಡಿದ್ದು ಕನ್ನಡ ,
ಉದ್ಯೋಗ ದೊರಕಿಸಿದ್ದು ಕನ್ನಡ,
ಬದುಕು ದಯಪಾಲಿಸಿದ್ದು ಕನ್ನಡ,
ನಮ್ಮ ನಿಮ್ಮ ಗೆಳೆತನಕ್ಕೆ ಸಾಕ್ಷಿಯಾದದ್ದು ಕನ್ನಡ,

ನಾನು ಕನ್ನಡ - ನೀವೂ ಕನ್ನಡ,
ಅವನೂ ಕನ್ನಡ - ಅವಳೂ ಕನ್ನಡ,
ಎಲ್ಲವೂ ಕನ್ನಡ - ಎಲ್ಲರೂ ಕನ್ನಡ,
ಎಲ್ಲೆಲ್ಲೂ ಕನ್ನಡ - ಎಂದೆಂದೂ ಕನ್ನಡ,
ನಮ್ಮೆಲ್ಲರ ಜೀವನವೇ ,
ಕನ್ನಡ ಕನ್ನಡ ಕನ್ನಡ........
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು

ಶನಿವಾರ, ಅಕ್ಟೋಬರ್ 31, 2020

ನಾಡಹಬ್ಬ


ಮನದೊಳಗೂ ಕನ್ನಡ,

ಮನಸ್ಸೊಳಗೂ ಕನ್ನಡ,
ಕನ್ನಡವೇ ಎಲ್ಲಾ,
ಕನ್ನಡವಿಲ್ಲದೇ ಬೇರೇನೂ ಇಲ್ಲ,
ನಮ್ಮ ನಾಡಿನ ಸಮಸ್ತ ನಾಡಿನ ಜನತೆಗೆ
ನಾಡಹಬ್ಬದ ಶುಭಾಶಯಗಳು

ಸೋಮವಾರ, ಆಗಸ್ಟ್ 31, 2020

ನಾ ಆಡುವ ನುಡಿಯು ಕನ್ನಡ

ಕನ್ನಡ ಕನ್ನಡ ಕನ್ನಡ
ನಮ್ಮಯ ಭಾಷೆಯು ಕನ್ನಡ|
ಎಕ್ಕಡ ಎನ್ನಡ ಏತಕೆ 
ಆಡಲು ಸಾಲದೇ ಕನ್ನಡ ||ಪಲ್ಲವಿ||

ನಾ ಆಡುವ ನುಡಿಯು ಕನ್ನಡ
ನಾ ಹಾಡುವ ಹಾಡು ಕನ್ನಡ|
ನಾ ಬಾಳುವ ನಾಡು ಕನ್ನಡ
ನಾ ಉಸಿರಾಡುವ ಗಾಳಿಯು ಕನ್ನಡ||೧||

ಕನ್ನಡವೆನೆ ಕುಣಿದಾಡುವೆನು
ಕನ್ನಡವೆನೆ ಕೂಗಾಡುವೆನು|
ಕನ್ನಡ ನಾಡಲ್ಲೆ ಮೆರೆಯುವೆನು
ಕನ್ನಡ ಮಣ್ಣಲ್ಲೆ ಮಡಿಯುವೆನು||೨||

ನಮ್ಮಯ ತಾಯಿಯು ಕನ್ನಡ
ನಮ್ಮಯ ನುಡಿಯು ಕನ್ನಡ|
ನಮ್ಮಯ ನಾಡೇ ಕನ್ನಡ
ನಮ್ಮಯ ನೆಲೆಯೆ ಕನ್ನಡ||೩||

ಕುವೆಂಪು ಬರೆದ ಕನ್ನಡ
ರಾಜಣ್ಣ ಹಾಡಿದ ಕನ್ನಡ|
ಕರುನಾಡಿನ ಜನ ನುಡಿದ ಕನ್ನಡ
ನಮ್ಮಯ ಬದುಕೆ ಕನ್ನಡ||೪||

ಜನಮನ ತಣಿಸಿದ ಕನ್ನಡ
ತನುಮನ ಬಣ್ಣಿಸಿದ ಕನ್ನಡ|
ಶಾಸ್ತ್ರೀಯಪಟ್ಟ ಧರಿಸಿದ ಕನ್ನಡ
ಧರೆ ಏರಿದ ಭಾಷೆಯು ಕನ್ನಡ||೫||

ದೊರೆಗಳು ಆಳಿದ ಕನ್ನಡ
ಕವಿಗಳು ಹೊಗಳಿದ ಕನ್ನಡ|
ರವಿ ಸೂಸಿದ ಕಿರಣವೆ ಕನ್ನಡ
ಕನ್ನಡ ಕಸ್ತೂರಿ ಕನ್ನಡ||೬||

ಬೆಳದಿಂಗಳು ಉಣಿಸಿದ ಕನ್ನಡ
ಕಾವೇರಿ ತಣಿಸಿದ ಕನ್ನಡ|
ಶ್ರೀಗಂಧ ಸುಗಂಧ ಕನ್ನಡ
ಕರುನಾಡೇ ಕೂಗಿದ ಕನ್ನಡ||೭||

ವಿಜಯನಗರ ಐಸಿರಿಯ ಕನ್ನಡ
ಹಚ್ಚ ಹಸಿರಿನ ಕನ್ನಡ|
ಶಿಲ್ಪಕಲೆಗಳ ಕನ್ನಡ
ನಮ್ಮಯ ಹೆಮ್ಮೆಯ ಕನ್ನಡ||೮||

ಕೋಗಿಲೆ ಹಾಡಿದ ಹಾಡು ಕನ್ನಡ
ನವಿಲು ಮಾಡಿದ ನರ್ತನೆ ಕನ್ನಡ|
ನಾ ಮೆಟ್ಟುವ ನೆಲವೇ ಕನ್ನಡ
ನಾ ಹುಟ್ಟುವ ಮಡಿಲೇ ಕನ್ನಡ||೯||
ಕೃಪೆ : ==> ಪ್ರಸನ್ನK

ಶುಕ್ರವಾರ, ಜುಲೈ 31, 2020

ಆಂಗ್ಲ ಪದದಲ್ಲಿ KANNADA ಅಂದರೆ

ಕನ್ನಡ ಎಂಬುದಕ್ಕೆ
ಆಂಗ್ಲ ಪದದಲ್ಲಿ  KANNADA ಅಂದರೆ :-

K: ಕಲಿತವರಿಗಾಗಿ..
A: ಅಮೃತ............
N: ನೆನೆದವರಿಗಾಗಿ..
N: ನೆರಳು...............
A: ಅನ್ಯರಿಗೆ.............
D: ದಾರಿದೀಪ..........
A: ಅಪ್ಪಿಕೋ............
ನೀನು ಕನ್ನಡವನ್ನು,
ಎಲ್ಲ ಕನ್ನಡದವರಿಗೇ ತಿಳಿಸು,
ಎಲ್ಲರೂ ಕನ್ನಡ ಉಳಿಸಿ, ಬೆಳಸಿ,
ಎಲ್ಲಾ ಕನ್ನಡದ  ಅಭಿಮಾನಿಗಳೇ ನಿಮಗೆ 

ಕನ್ನಡ ರಾಜೋತ್ಸವದ ಹಾರ್ಧಿಕ ಶುಭಾಶಯಗಳು.

ಮಂಗಳವಾರ, ಮಾರ್ಚ್ 31, 2020

ತುಳಸಿ ಹಾಗೂ ಕನ್ನಡತಿ

ತುಳಸಿಯೂ ಮಾತೆ,
ಕನ್ನಡತಿಯೂ ಮಾತೆ,

ಇವಳು ಕೃಷ್ಣನ ಅರಸಿ,
ಇವಳು ರಾಜ್ಯದ ಅರಸಿ,

ಇವಳು ಆರೋಗ್ಯವರ್ಧಕ,
ಇವಳು ಬುದ್ದಿವರ್ಧಕ,

ಇವಳಿಗೆ ಸಂಧ್ಯಾಕಾಲದಿ ಪೂಜೋತ್ಸವ,
ಇವಳಿಗೆ ಸದಾಕಾಲವು ನಿತ್ಯೋತ್ಸವ

ಇವರೀರ್ವರಿಗೂ ಇಂದು ನಡೆಯಲಿದೆ
ಸಂಭ್ರಮದ ದೀಪೋತ್ಸವ.

 ಕನ್ನಡ ರಾಜ್ಯೋತ್ಸವದ ಮತ್ತು ತುಳಸಿ ಹಬ್ಬದ ಶುಭಾಷಯಗಳು

ಶುಕ್ರವಾರ, ಜನವರಿ 31, 2020

ಕನ್ನಡ

ಜನರಲ್ಲಿ ಉಸಿರಾಗಿ,

ನೆಲದಲ್ಲಿ ಹಸುರಾಗಿ,
ಬದುಕಲ್ಲಿ ಹಸನಾಗಿ,
ಬೆಳೆದು ಬಾಳಲಿ ಕನ್ನಡ.

ಶ್ರೀಗಂಧದ ಕಂಪಿನಂತೆ
ಕಾವೇರಿಯ ನೀರಿನಂತೆ
ಎಲ್ಲಡೆ ಹರಿದು ಪಸರಿಸಲಿ
ಈ ನಮ್ಮ ಕನ್ನಡ. 
-->> ಮಂಜು ಹಿಚ್ಕಡ್

ಗುರುವಾರ, ಅಕ್ಟೋಬರ್ 31, 2019

ಕನ್ನಡ ಸಾಹಿತ್ಯ ಸಮ್ಮೇಳನಗಳು (1915-2015)

      ಈವರೆಗೆ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳು,ನಡೆದ ಸ್ಥಳ,ವರ್ಷ ಹಾಗೂ ಸಮ್ಮೇಳನಾಧ್ಯಕ್ಷರ ವಿವರ ಇಲ್ಲಿದೆ.
ಕ್ರ.ಸಂ.ಸಮ್ಮೇಳನದ ಸ್ಥಳನಡೆದ ವರ್ಷಸಮ್ಮೇಳನಾಧ್ಯಕ್ಷರು
1ಬೆಂಗಳೂರು1915ಎಚ್.ವಿ.ನಂಜುಂಡಯ್ಯ
2ಬೆಂಗಳೂರು1916ಎಚ್.ವಿ.ನಂಜುಂಡಯ್ಯ
3ಮೈಸೂರು1917ಎಚ್.ವಿ.ನಂಜುಂಡಯ್ಯ
4ಧಾರವಾಡ1918ಆರ್. ನರಸಿಂಹಾಚಾರ್
5ಹಾಸನ1919ಕರ್ಪೂರ ಶ್ರೀನಿವಾಸರಾವ್
6ಹೊಸಪೇಟೆ1920ರೊದ್ದ ಶ್ರೀನಿವಾಸರಾವ್
7ಚಿಕ್ಕಮಗಳೂರು1921ಕೆ.ಪಿ.ಪಟ್ಟಣಶೆಟ್ಟಿ
8ದಾವಣಗೆರೆ1922ಎಂ.ವೆಂಕಟಕೃಷ್ಣಯ್ಯ
9ಬಿಜಾಪುರ1923ಸಿದ್ದಾಂತಿ ಶಿವಶಂಕರಶಾಸ್ತ್ರಿ
10ಕೋಲಾರ1924ಹೊಸಕೋಟೆ ಕೃಷ್ಣಶಾಸ್ತ್ರೀ
11ಬೆಳಗಾವಿ1925ಬೆನಗಲ್ ರಾಮರಾವ್
12ಬಳ್ಳಾರಿ1926ಫ.ಗು.ಹಳಿಕಟ್ಟಿ
13ಮಂಗಳೂರು1927ಆರ್. ತಾತಾ
14ಗುಲ್ಬರ್ಗಾ1928ಬಿ.ಎಂ.ಶ್ರೀಕಂಠಯ್ಯ
15ಬೆಳಗಾವಿ1929ಮಾಸ್ತಿ ವೆಂಕಟೇಶ ಅಯ್ಯಂಗಾರ್
16ಮೈಸೂರು1930ಆಲೂರು ವೆಂಕಟರಾವ್
17ಕಾರವಾರ1931ಮಳಲಿ ತಿಮ್ಮಪ್ಪಯ್ಯ
18ಮಡಿಕೇರಿ1932ಡಿ.ವಿ.ಗುಂಡಪ್ಪ
19ಹುಬ್ಬಳ್ಳಿ1933ವೈ.ನಾಗೇಶಶಾಸ್ತ್ರೀ
20ರಾಯಚೂರು1934ಪಂಜೆ ಮಂಗೇಶರಾಯ
21ಮುಂಬಯಿ1935ಎನ್.ಎಸ್.ಸುಬ್ಬರಾವ್
22ಜಮಖಂಡಿ1937ಬೆಳ್ಳಾವೆ ವೆಂಕಟನಾರಣಪ್ಪ
23ಬಳ್ಳಾರಿ1938ರಂ.ರಾ.ದಿವಾಕರ್
24ಬೆಳಗಾವಿ1939ಮುದವೀಡು ಕೃಷ್ಣರಾವ್
25ಧಾರವಾಡ1940ವೈ.ಚಂದ್ರಶೇಖರ ಶಾಸ್ತ್ರೀ
26ಹೈದ್ರಾಬಾದ್1941ಎ.ಆರ್. ಕೃಷ್ಣಶಾಸ್ತ್ರೀ
27ಶಿವಮೊಗ್ಗ1943ದ.ರಾ.ಬೇಂದ್ರೆ
28ರಬಕವಿ1944ಎಸ್.ಎಸ್. ಬಸವನಾಳ
29ಮದರಾಸು1945ಟಿ.ಪಿ.ಕೈಲಾಸಂ
30ಹರಪನಹಳ್ಳಿ1947ಸಿ.ಕೆ. ವೆಂಕಟರಾಮಯ್ಯ
31ಕಾಸರಗೋಡು1948ತಿರುಮಲೆ ತಾತಾಚಾರ್ಯ ಶರ್ಮಾ
32ಗುಲ್ಬರ್ಗಾ1949ಉತ್ತಂಗಿ ಚೆನ್ನಪ್ಪ
33ಸೊಲ್ಲಾಪುರ1950ಎಂ.ಆರ್.ಶ್ರೀನಿವಾಸಮೂರ್ತಿ
34ಮುಂಬಯಿ1951ಎಂ.ಗೋವಿಂದಪೈ
35ಬೇಲೂರು1952ಎಸ್.ಸಿ.ನಂದಿಮಠ
36ಕುಮಟ1954ವಿ.ಸೀತಾರಾಮಯ್ಯ
37ಮೈಸೂರು1955ಶಿವರಾಮಕಾರಂತ್
38ಬೆಂಗಳೂರು1955*ರಾಯಚೂರು
39ಧಾರವಾಡ1957ಕೆ.ವಿ.ಪುಟ್ಟಪ್ಪ
40ಬಳ್ಳಾರಿ1958ವಿ.ಕೃ.ಗೋಕಾಕ್
41ಬೀದರ್1960ಡಿ.ಎಲ್.ನರಸಿಂಹಾಚಾರ್
42ಮಣಿಪಾಲ1960ಅ.ನ.ಕೃಷ್ಣರಾವ್
43ಗದಗ1961ಕೆ.ಜಿ.ಕುಂದಣಗಾರ
44ಸಿದ್ಧಗಂಗಾ1963ರಂ.ಶ್ರೀ.ಮುಗಳಿ
45ಕಾರವಾರ1923ಕಡೆಂಗೋಡ್ಲು ಶಂಕರಭಟ್ಟ
46ಕಡೆಂಗೋಡ್ಲು ಶಂಕರಭಟ್ಟ1967ಅ.ನೇ.ಉಪಾಧ್ಯೆ
47ಬೆಂಗಳೂರು1970ದೇ.ಜವರೇಗೌಡ
48ಮಂಡ್ಯ1974ಜಯದೇವಿ ತಾಯಿ ಲಿಗಾಡೆ
49ಶಿವಮೊಗ್ಗ1976ಎಸ್.ವಿ.ರಂಗಣ್ಣ
50ನವದೆಹಲಿ1978ಜಿ.ಪಿ.ರಾಜರತ್ನಂ
51ಧರ್ಮಸ್ಥಳ1979ಎಂ.ಗೋಪಾಲಕೃಷ್ಣ ಅಡಿಗ
52ಬೆಳಗಾವಿ1980ಬಸವರಾಜ ಕಟ್ಟಿಮನೀ
53ಚಿಕ್ಕಮಗಳೂರು1981ಪು.ತಿ.ನರಸಿಂಹಾಚಾರ್
54ಮಡಿಕೇರಿ1981ಶಂಬಾ ಜೋಶಿ
55ಶಿರಸಿ1982ಗೊರೂರು ರಾಮಸ್ವಾಮಿ ಅಯ್ಯಂಗಾರ್
56ಕೈವಾರ1984ಎ.ಎನ್. ಮೂರ್ತಿರಾವ್
57ಬೀದರ್1835ಹಾ.ಮಾ.ನಾಯಕ್
58ಕಲಬುರ್ಗಿ1987ಸಿದ್ದಯ್ಯ ಪುರಾಣಿಕ್
59ಹುಬ್ಬಳ್ಳಿ1990ಆರ್.ಸಿ. ಹಿರೇಮಠ್
60ಮೈಸೂರು1990ಕೆ.ಎಸ್. ನರಸಿಂಹಸ್ವಾಮಿ
61ದಾವಣಗೆರೆ1992ಜಿ.ಎಸ್. ಶಿವರುದ್ರಪ್ಪ
62ಕೊಪ್ಪಳ1992ಸಿಂಪಿ ಲಿಂಗಣ್ಣ
63ಮಂಡ್ಯ1994ಚದುರಂಗ
64ಮುಧೋಳ1995ಎಚ್.ಎಲ್. ನಾಗೇಗೌಡ
65ಹಾಸನ1996ಚನ್ನವೀರಕಣವಿ
66ಮಂಗಳೂರು1997ಕಯ್ಯಾರ ಕಿಞಣ್ಣ ರೈ
67ಕನಕಪುರ1999ಡಾ.ಎಸ್.ಎಲ್. ಬೈರಪ್ಪ
68ಬಾಗಲಕೋಟೆ2000ಶಾಂತಾದೇವಿ ಮಾಳವಾಡ
69ತುಮಕೂರು2002ಯು.ಆರ್. ಅನಂತಮೂರ್ತಿ
70ಬೆಳಗಾವಿ2003ಡಾ.ಪಾಟೀಲ ಪುಟ್ಟಪ್ಪ
71ಮೂಡಬಿದಿರೆ2004ಡಾ.ಕಮಲಾ ಹಂಪನಾ
72ಬೀದರ್2006ಶಾಂತರಸ ಹೆಂಬೇರಾಳು
73ಶಿವಮೊಗ್ಗ2006ಪ್ರೊ.ಕೆ.ಎಸ್.ನಿಸಾರ್ ಅಹ್ಮದ್
74ಉಡುಪಿ2007ಎಲ್.ಎಸ್.ಶೇಷಗಿರಿರಾವ್
75ಚಿತ್ರದುರ್ಗ2009ಡಾ.ಎಲ್.ಬಸವರಾಜು
76ಗದಗ2010ಡಾ.ಗೀತಾ ನಾಗಭೂಷಣ
77ಬೆಂಗಳೂರು2011ಪ್ರೊ.ಜಿ.ವೆಂಕಟಸುಬ್ಬಯ್ಯ
78ಗಂಗಾವತಿ2011ಡಾ. ಸಿ.ಪಿ. ಕೃಷ್ಣಕುಮಾರ್
79ಬಿಜಾಪುರ 2013ಕೋ. ಚೆನ್ನಬಸಪ್ಪ
80ಕೊಡಗು2014ನಾ ಡಿಸೋಜ
81ಶ್ರವಣಬೆಳಗೊಳ2015ಡಾ. ಸಿದ್ಧಲಿಂಗಯ್ಯ

1.. ಜಾಹೀರಾತು

2.ಜಾಹೀರಾತು