ಮಾತು ಆರಂಭಿಸಿದ ಮೊದಲಿನಿಂದ
ಮಾತು ನಿಲ್ಲಿಸುವ ಕೊನೆವರೆಗೂ
ಕನ್ನಡವೆಂದರೆ ಉಸಿರು.
ರಕ್ತದೊಂದಿಗೆ ಬೆರೆತುಹೋದ
ಹೃದಯದೊಂದಿಗೆ ಮಿಳಿತವಾದ
ಕನ್ನಡವೆಂದರೆ ಉಸಿರು
ಸಾವಿರಾರು ಭಾಷೆ ಜಗದಲ್ಲಿದ್ದರೂ
ತಾಯಿ ಭಾಷೆ ತವರು ಭಾಷೆ
ಕನ್ನಡವೆಂದರೆ ಉಸಿರು
ದೇಶ ವೇಷ ಭಾಷೆ ಬದಲಿಸಿದರೇನು?
ಹೃದಯಭಾಷೆ ಮರೆಯಾಗುವುದೇನು?
ಕನ್ನಡವೆಂದರೆ ಉಸಿರು
ಹೆತ್ತ ತಾಯಿ ಹೊತ್ತ ಭೂಮಿ
ಸ್ವರ್ಗಕ್ಕಿಂತ ಮಿಗಿಲಲ್ಲವೇನು?
ಕನ್ನಡವೆಂದರೆ ಉಸಿರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.