fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಜೂನ್ 24, 2018

ವಿಲಕ್ಷಣ

ವಿಚಿತ್ರ, ವಿಶಿಷ್ಟ, ವಿಸ್ಮಯ, ವಿಕಾರ, ವಿಶೇಷ ಇವೆಲ್ಲವನ್ನು ಒಳಗೊಂಡಿದ್ದು
ಲಕ್ಷಣವೇ ಇಲ್ಲದ್ದು... ಅಥವಾ ವಿಶೇಷ ಲಕ್ಷಣ ಉಳ್ಳದ್ದು
ಸಾಮಾನ್ಯ ನಿಯಮಗಳನ್ನು ಮೀರಿದಾಗ ಹೀಗೆನ್ನುತ್ತಾರೆ
ರಾಜಕಾರಣಿಗಳಲ್ಲಿ ಮನಮೋಹನ್ಸಿಂಗ್, ನಟರಲ್ಲಿ ರಜನಿಕಾಂತ್, ಸಾಮಾನ್ಯರಲ್ಲಿ ಸರ್ದಾರ್ಜಿ
ಬೇಗ ಪ್ರಸಿದ್ಧಿಗೆ ಬರಲು ಹೀಗೆ ಇದ್ದರೆ ಸಾಕು
ಬೇರೆ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದ ರಸ್ತೆಗಳು...
ಪಕ್ಕದ ಮನೆಯವರು ನಮಗನಿಸುವುದು ಹೀಗೆಯೇ
ಈಗಿನ ಕಾಲದವರ ಹುಡುಗಿಯರ ವೇಷ... (ಹಿರಿಯರ ಅಭಿಪ್ರಾಯದಲ್ಲಿ)
ಹಿಂದಿನ ಕಾಲದವರ ಜನಜೀವನ... (ಇಂದಿನವರ ಅಭಿಪ್ರಾಯದಂತೆ)
ರಾಜಕಾರಣಿಗಳ ಬುದ್ಧಿ
ಕ್ಷಣ ಕ್ಷಣಕ್ಕೂ ಬದಲಾಗುವ ಸ್ವಭಾವ
ವಿಲ ವಿಲ ಕ್ಷಣ
ಉಳಿದಿದ್ದಕ್ಕಿಂತ ಭಿನ್ನ.. ಎಲ್ಲಕ್ಕಿಂತ ವಿಭಿನ್ನ...

-ವಿಶ್ವನಾಥ ಸುಂಕಸಾಳ

ಶುಕ್ರವಾರ, ಜೂನ್ 22, 2018

ಅಮ್ಮ - (ನಿನ್ನ ತೋಳಿನಲ್ಲಿ ಕಂದ ನಾನು) (Mother - I am child in your hand)

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು
ಓಹೋ...ಓಹೋ...........

ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...
ನೀನು ಇತ್ತ ಹಣ್ಣುಗಳೆ ಅನ್ನ ನನಗೆ
ನಿನ್ನ ಮಡಿಲಿನಲೇ ನನ್ನ ಹಾಸಿಗೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಹರಿಯುವ ನದಿಯಲೂ ನಿನ್ನ ಛಾಯೆ

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...
ಊರುಬೇಡ ಕೇರಿಬೇಡ ಯಾರೂ ಬೇಡಾ
ಅಮ್ಮ ಒಮ್ಮೆ ಕಣ್ಣ ಬಿಟ್ಟು ನನ್ನ ನೋಡಾ
ತಾಯಿತಂದೆ ಬಂಧುಬಳಗ ನೀನೇ ಎಲ್ಲಾ
ನಿನಗಿಂತ ಬೇರೆ ದೇವರಿಲ್ಲಾ

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...

ಬುಧವಾರ, ಜೂನ್ 20, 2018

ಮಿನುಗು ಮಿನುಗು ಸಣ್ಣ ತಾರೆ

ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ
ಮೇಲೆ ಮೇಲು ಪ್ರಪಂಚ ತುಂಬಾ ಎತ್ತರದಲಿ
ವಜ್ರದ ಹೊಳಪು ಕಾಣುತಿದೆ ಆಕಾಶದಲಿ
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಸೂರ್ಯ ಹೋದ ನಂತರ ಬೆಳಗುವನು
ಅಲ್ಲಿ ಏನೂ ಇಲ್ಲದಾಗ ಅವನು ಹೊಳೆಯುವನು
ಅದರ ನಂತರ ತೋರಿಸುವೆ ನಿನ್ನ ಸಣ್ಣ ಬೆಳಕು ನೀನು
ಮಿನುಗು ಮಿನುಗು ಎಲ್ಲ ರಾತ್ರಿ ನೀನು
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ತುಂಬಾ ಆಳವಾದ ದಟ್ಟ ನೀಲಿ ಆಕಾಶದಲಿ
ನನ್ನ ಪರದೆ ಮೂಲಕ ಆಗಾಗ್ಗೆ ಇಣುಕಿ ನೋಡುವೆ
ನೀನು ಕಣ್ಣು ಮುಚ್ಚುವುದಿಲ್ಲ ಎಂದಿಗೂ
ಬೆಳಗ್ಗೆ ಸೂರ್ಯ ಹುಟ್ಟುವವರೆಗೂ
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಅನುವಾದ : by ಹರೀಶ್ ಶೆಟ್ಟಿ, ಶಿರ್ವ (Twinkle, twinkle)

ಶನಿವಾರ, ಜೂನ್ 09, 2018

ರಾಮಯಾಣದ ಸ್ವಾರಸ್ಯ ಸಂಗತಿಗಳು 8

ಶಿವ ರಾವಣನಿಗೆ ವರ ಕೊಟ್ಟ, ಶಿವನ ಶಿಷ್ಯ ಶಾಪ ಕೊಟ್ಟ


     ವಾಸ್ತವವಾಗಿ ಶಿವನಿಗೂ ರಾವಣನನ್ನು ಕಂಡರಾಗುತ್ತಿರಲಿಲ್ಲ. ಆದರೆ ತಪಸ್ಸು ಮಾಡಿ ತಮ್ಮನ್ನು ಮೆಚ್ಚಿಸುವವರನ್ನು ಕಡೆಗಣಿಸುವ ಶಕ್ತಿ ದೇವರಿಗೂ ಇರಲಿಲ್ಲ. ಹಾಗಾಗಿ ರಾವಣನಿಗೆ ಅನಿವಾರ್ಯವಾಗಿ ವರ ಕೊಟ್ಟ. ಆದರೆ ಶಿವನ ಹೆಂಡತಿ ಪಾರ್ವತಿ ಮತ್ತು ಶಿವನ ವಾಹನ ನಂದಿ ಮಾತ್ರ ರಾವಣನಿಗೆ ಶಾಪ ಕೊಟ್ಟಿದ್ದರು. ಒಮ್ಮೆ ಶಿವನನ್ನು ನೋಡಲು ರಾವಣ ಕೈಲಾಸ ಪರ್ವತಕ್ಕೆ ಹೋಗಿದ್ದ. ಆಗ ಅಲ್ಲಿದ್ದ ನಂದಿಯನ್ನು ನೋಡಿ ಆಡಿಕೊಂಡು ನಕ್ಕನಂತೆ. ಅದರಿಂದ ಸಿಟ್ಟುಗೊಂಡ ನಂದಿ, ಒಂದು ಕೋತಿಯಿಂದ ನಿನ್ನ ಅವಸಾನವಾಗಲಿ ಎಂದು ಶಾಪ ಕೊಟ್ಟನಂತೆ. ನಂತರ ಹನುಮಂತನಿಂದಲೇ ರಾವಣನ ಅವಸಾನ ಆರಂಭವಾಯಿತು.             ಕೃಪೆ : ಕೆ.ಟಿ.ಆರ್

ಭಾನುವಾರ, ಜೂನ್ 03, 2018

ನಮ್ಮೂರು - ನಮ್ಮೋರು

ಎಲ್ಲಿ ಜೀವನ ನಡೆಯುವುದೋ
ಅದೇ ನಮ್ಮೂರು...

.. ..

ಯಾರು ಸ್ನೇಹದಿ ಬರುವರೋ
ಅವರೆ ನಮ್ಮೋರು...
                                            ==> ಶಂಕರನಾಗ್

ಕಲೆ / ಕೊಲೆ

ಶಿಲ್ಪಿ ಕಲ್ಲನ್ನು ಕೆತ್ತಿದರೆ ಕಲೆ ||ವಾ..ವಾ..||
ಶಿಲ್ಪಿ ಕಲ್ಲನ್ನು ಕೆತ್ತಿದರೆ ಕಲೆ ||ವಾ..ವಾ..||
..
ಅದೇ ಕಲ್ಲಿನಿಂದ ಶಿಲ್ಪಿಯನ್ನು ಕೆತ್ತಿದರೆ, ಅದು ಕೊಲೆ