ದೂಧಗಂಗಾ ನದಿ ಕೃಷ್ಣಾ ನದಿಯ ಉಪನದಿಗಳಲ್ಲಿ ಒಂದು.ಇದು ಪಶ್ಚಿಮ ಘಟ್ಟದ ಸಿಂಧುದುರ್ಗ ಎಂಬಲ್ಲಿ ಹುಟ್ಟುತ್ತದೆ.ಅಲ್ಲಿಂದ ಪೂರ್ವಾಭಿಮುಖವಾಗಿ ಹರಿದು ಮಹಾರಾಷ್ಟ್ರದ ಕೊಲ್ಲಾಪುರಜಿಲ್ಲೆ ಮತ್ತು ಕರ್ನಾಟಕದ ಬೆಳಗಾಂ ಜಿಲ್ಲೆಗಳಲ್ಲಿ ಹರಿದು ಕೃಷ್ಣಾ ನದಿಯನ್ನು ಸೇರುತ್ತದೆ.ಈ ನದಿಗೆ ಕೊಲ್ಲಾಪುರ ಜಿಲ್ಲೆಯಲ್ಲಿ ಆಣೆಕಟ್ಟು ಕಟ್ಟಿ ಕಾಳಮ್ಮವಾಡಿ ಜಲಾಶಯವನ್ನು ನಿರ್ಮಿಸಲಾಗಿದೆ.
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ನದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶುಕ್ರವಾರ, ಡಿಸೆಂಬರ್ 01, 2017
ಬುಧವಾರ, ನವೆಂಬರ್ 01, 2017
ದಕ್ಷಿಣ ಭಾರತದ ನದಿಗಳು
- ಮಹಾ ನದಿ
ಉಗಮ:ಚತ್ತೀಸಗಢ್ ರಾಜ್ಯದ ಜಗದಲ್ಪುರ ಜಿಲ್ಲೆಯ ಸಿವಾಹ. ಉಪನದಿಗಳು: ಟೆಲ್,ಹಾಸ್ಪೊ,ಶಿಯೋನಾಥ್. ಮಹಾನದಿಯನ್ನು ಒರಿಸ್ಸಾದ ಕಣ್ಣೀರು ಎಂದು ಕರೆಯುವರು. ಒರಿಸ್ಸಾದ ಸಾಂಬಲಾಪುರದ ಬಳಿ ಮಹಾನದಿಗೆ ಅಣೆಕಟ್ಟು ಕಟ್ಟಲಾಗಿದೆ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
- ಕಾವೇರಿ ನದಿ
ಉಗಮ: ಕೊಡಗು ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ಬೆಟ್ಟಗಳ ತಲಕಾವೇರಿ. ಉಪನದಿಗಳು: ಹೇಮಾವತಿ,ಅಕಾ೯ವತಿ, ಕಬಿನಿ,ಸುವಣಾ೯ವತಿ,ಶಿಂಷಾ. ಜಲಪಾತಗಳು: ಶಿವನ ಸಮುದ್ರ, ಹೊಗೇನಕಲ್ ಜಲಪಾತ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
- ಕೃಷ್ಣಾ ನದಿ
ಉಗಮ: ಮಹಾರಾಷ್ಟ್ರದ ಮಹಾಬಲೇಶ್ವರ ಉಪನದಿಗಳು: ಮಲಪ್ರಭಾ, ಘಟಪ್ರಭಾ, ಭೀಮಾ, ತುಂಗಭದ್ರಾ, ಮುಸಿ,ಕೊಯ್ನಾ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
- ನಮ೯ದಾ ನದಿ
ಉಗಮ: ಚತ್ತೀಸಗಢದ ಅಮರಕಂಟಕ. ಉಪ ನದಿಗಳು: ಬರ್ನರ್, ಶಕ್ಕರ್, ಹಿರಾನ್, ತಾವಾ. ಜಲಪಾತಗಳು: ದಧಿ೯, ದುವಂಧರ್, ಕಪಿಲಧಾರಾ ಇದು ಅರಬ್ಬೀ ಸಮುದ್ರವನ್ನು ಸೇರುತ್ತದೆ.
ಭಾನುವಾರ, ಅಕ್ಟೋಬರ್ 01, 2017
ಪಿನಾಕಿನಿ ನದಿ
ದಕ್ಷಿಣ ಪಿನಾಕಿನಿ ನದಿಯು ಕರ್ನಾಟಕ ರಾಜ್ಯದ ನದಿಗಳಲ್ಲೊಂದು. ದಕ್ಷಿಣ ಪೆನ್ನಾರ್, ಪೊನ್ನೈಯಾರ್ ಹಾಗೂ ತಮಿಳಿನಲ್ಲಿ ತೆನ್ ಪೆನ್ನೈ ಎಂದೂ ಕರೆಯಲ್ಪಡುವ ಈ ನದಿಯು ಚಿಕ್ಕಬಳ್ಳಾಪುರದ ನಂದಿಬೆಟ್ಟಗಳಲ್ಲಿ ಹುಟ್ಟುತ್ತದೆ. ಕರ್ನಾಟಕ ಹಾಗೂತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಶುಕ್ರವಾರ, ಸೆಪ್ಟೆಂಬರ್ 01, 2017
ಮಂಗಳವಾರ, ಆಗಸ್ಟ್ 01, 2017
ತುಂಗಾ ನದಿ
ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿಮೀ ದೂರದವರೆದೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ ತುಂಗಭದ್ರಾ ಎಂಬ ಹೆಸರು ಪಡೆದು ಮುಂದೆ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.
ತುಂಗಾ ನದಿ ಸಿಹಿನೀರಿಗೆ ಪ್ರಸಿದ್ಧ. "ತುಂಗಾ ಪಾನಂ ಗಂಗಾ ಸ್ನಾನಂ" ಎಂಬ ಗಾದೆಯೇ ಇದೆ!
ತುಂಗಾ ನದಿಗೆ ಗಾಜನೂರಿನಲ್ಲಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಭದ್ರಾ ನದಿಯೊಂದಿಗೆ ಸೇರಿದ ಮೇಲೆ ತುಂಗಭದ್ರಾ ನದಿಗೆ ಹೊಸಪೇಟೆಯಲ್ಲಿ ಇನ್ನೊಂದು ಅಣೆಕಟ್ಟನ್ನು ಕಟ್ಟಲಾಗಿದೆ. ತುಂಗಾ ನದಿಯ ದಡದ ಮೇಲಿರುವ ಒಂದು ಪ್ರಸಿದ್ಧ ಸ್ಥಳವೆಂದರೆ ಶೃಂಗೇರಿ.ತೀರ್ಥಹಳ್ಳಿ ಮತ್ತು ಶಿವಮೊಗ್ಗ ತುಂಗಾ ನದಿಯ ತೀರದಲ್ಲಿರುವ ಇತರ ಪ್ರಮುಖ ಪಟ್ಟಣಗಳು.
ತು೦ಗಾ ನದಿಗೆ ಗಾಜನೂರಿನಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ.
ಶನಿವಾರ, ಜುಲೈ 01, 2017
ತಪತಿ ನದಿ
ತಾಪ್ತಿ ನದಿ ಮಧ್ಯ ಭಾರತದ ಒಂದು ನದಿ. ಇದರ ಮೂಲ ಹೆಸರು ತಾಪಿ ನದಿ ಎಂದು. ಭಾರತ ಜಂಬೂದ್ವೀಪದ ಮುಖ್ಯ ನದಿಗಳಲ್ಲಿ ಒಂದಾದ ತಾಪ್ತಿ ನದಿಯ ಉದ್ದ ಸುಮಾರು ೭೨೪ ಕಿ.ಮೀ.ಗಳು. ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಮೂರು ದೊಡ್ಡ ನದಿಗಳಲ್ಲಿ ತಾಪ್ತಿ ಒಂದು. ನರ್ಮದಾ ನದಿ ಮತ್ತು ಮಾಹಿ ನದಿಗಳು ಉಳಿದೆರಡು. ತಾಪ್ತಿ ನದಿಯು ಮಧ್ಯ ಪ್ರದೇಶ ರಾಜ್ಯದ ದಕ್ಷಿಣ ಭಾಗದಲ್ಲಿ ಸಾತ್ಪುರ ಪರ್ವತಗಳಲ್ಲಿ ಉಗಮಿಸುವುದು. ತಾಪ್ತಿ ನದಿಯ ಜಲಾನಯನ ಪ್ರದೇಶಗಳು ಮಧ್ಯ ಪ್ರದೇಶದ ನಿಮಾರ್ ಪ್ರದೇಶ, ಮಹಾರಾಷ್ಟ್ರದ ವಿದರ್ಭ ಮತ್ತು ಕಾಂದೇಶ್ ಹಾಗೂ ದಕ್ಷಿಣ ಗುಜರಾತ್. ತಾಪ್ತಿ ನದಿಯು ಸೂರತ್ ಬಳಿ ಖಂಭಾಟ್ ಕೊಲ್ಲಿಯನ್ನು ಸೇರುತ್ತದೆ. ಪೂರ್ಣಾ, ಗಿರ್ನಾ ಮತ್ತು ಪನ್ಜಾರಾ ನದಿಗಳು ತಾಪ್ತಿ ನದಿಯ ಮುಖ್ಯ ಉಪನದಿಗಳು. ತಾಪ್ತಿ ನದಿಗೆ ಅಡ್ಡಲಾಗಿ ಮಹಾರಾಷ್ಟ್ರದ ಜಳಗಾಂವ್ ಬಳಿ ಹಾತ್ನೂರ್ ಆಣೆ ಮತ್ತು ಗುಜರಾತ್‌ನ ಸೋನ್‌ಗಢದ ಬಳಿ ಉಕಾಯ್ ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ.
ಗುರುವಾರ, ಜೂನ್ 01, 2017
ಸೋಮವಾರ, ಮೇ 01, 2017
ಚಕ್ರ ನದಿ
ಕರ್ನಾಟಕದ ಕುಂದಾಪುರ ಮತ್ತು ಗಂಗುಲ್ಲಿ ಪ್ರದೇಶಗಳ ಮೂಲಕ ಹರಿದ ಹೋಗುವ ಚಕ್ರ ನದಿಯು ಭಾರತದ ನದಿಗಳಲ್ಲೊಂದು. ಪಶ್ಚಿಮಾಭಿಮುಖವಾಗಿ ಹರಿಯುವ ಇದು ಮೊದಲು ಸೌಪರ್ಣಿಕ, ವರಾಹಿ ಮತ್ತು ಕುಬ್ಜ ನದಿಗಳನ್ನು ಕೂಡಿ ಅಂತಿಮವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಶನಿವಾರ, ಏಪ್ರಿಲ್ 01, 2017
ಘಟಪ್ರಭಾ ನದಿ
ಘಟಪ್ರಭಾ ಕೃಷ್ಣಾ ನದಿಯ ಉಪನದಿ.
ಉಗಮ
ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು ೮೮೨೯ ಚದುರು ಕಿಮೀ ವಿಸ್ತಾರವಾಗಿದೆ.
ಉಪನದಿಗಳು
ಹಿರಣ್ಯಕೇಶಿ ಹಾಗು ತಾಮ್ರಪಣಱ ಮಾರ್ಕಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ.
ಆಣೆಕಟ್ಟುಗಳು
ಘಟಪ್ರಭಾ ನದಿಗೆ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ ೧೮೯೭ ನೆಯ ಇಸವಿಯಲ್ಲಿ ಒಂದು ತಡೆಗೋಡೆಯನ್ನು (wier) ನಿರ್ಮಿಸಲಾಗಿದೆ. ಈ ತಡೆಗೋಡೆಯಿಂದ ೭೧ ಕಿಮೀ ಉದ್ದದ ಕಾಲುವೆ ಮಾಡಲಾಗಿದ್ದು, ಇದರಿಂದ ೪೨,೫೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ಕರ್ನಾಟಕ ಸರಕಾರವು ಈ ಕಾಲುವೆಯನ್ನು ೧೦೯ ಕಿಮೀವರೆಗೆ ನಿರ್ಮಾಣ ಮಾಡಿದೆ. ಹಾಗು ಹಿಡಕಲ್ ಗ್ರಾಮದ ಹತ್ತಿರ ಕಟ್ಟಲಾದ ಜಲಾಶಯದಿಂದ ೬೫೯ ದಶಲಕ್ಷ ಘನಮೀಟರುಗಳಷ್ಟು ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ನೀರಾವರಿ ಪ್ರದೇಶದ ಒಟ್ಟು ವಿಸ್ತೀರ್ಣವು ೧,೩೯,೬೧೪ ಹೆಕ್ಟೇರ್‍ನಷ್ಟು ವಿಸ್ತಾರವಾಗಿದೆ.
ಮುಂದಿನ ಯೋಜನೆ
ಹಿಡಕಲ್ ಜಲಾಶಯದ ಎತ್ತರವನ್ನು ಹೆಚ್ಚಿಸುವ ಯೋಜನೆಯನ್ನು ಎತ್ತಿಕೊಳ್ಳಲಾಗಿದೆ. ಇದರಿಂದ ೧೪೪೮ ದಶಲಕ್ಷ ಘನ ಮೀಟರುಗಳಷ್ಟು ಸಂಗ್ರಹವನ್ನು ಮಾಡುವ ಯೋಜನೆಯಿದ್ದು ೨೦೨ ಕಿಮೀ ಉದ್ದದ ಬಲದಂಡೆ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ.
ಇವೆಲ್ಲ ಕಾರ್ಯಕ್ರಮಗಳ ಮೂಲಕ ಘಟಪ್ರಭಾ ನದಿಯಿಂದ ಒಟ್ಟು ೩,೩೧,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುವದು.
ಜಲಪಾತ
ಗೋಕಾಕ ಪಟ್ಟಣದಿಂದ ೧೦ ಕಿಮೀ ದೂರದಲ್ಲಿ ಘಟಪ್ರಭಾ ನದಿಯು ೫೩ ಮೀಟರು ಆಳಕ್ಕೆ ಧುಮುಕುತ್ತ ಸುಂದರ ಜಲಪಾತವನ್ನು ನಿರ್ಮಿಸಿದೆ. ಜಲಪಾತದ ಮೇಲ್ಗಡೆ ಒಂದು ಹಳೆಯ ತೂಗುಸೇತುವೆ ಇದ್ದು ಪ್ರವಾಸಿಗರಿಗೆ ಆಕರ್ಷಕವಾಗಿದೆ. ಈ ಜಲಪಾತದ ಸಹಾಯದಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯನ್ನು ಸಹ ಉತ್ಪಾದಿಸಲಾಗುತ್ತಿದೆ. ಪಕ್ಕದಲ್ಲಿಯೆ ಒಂದು ಅತ್ಯಂತ ಹಳೆಯ ಅರಳೆ ಗಿರಣಿ ಇದೆ.
ಬುಧವಾರ, ಮಾರ್ಚ್ 01, 2017
ಗೋಮತೀ ನದಿ
ಗೋಮತೀ ನದಿ ಭಾರತದ ಉತ್ತರಪ್ರದೇಶ ರಾಜ್ಯದಲ್ಲಿ ಹರಿಯುವ ಒಂದು ನದಿ, ಗಂಗಾನದಿಯ ಉಪನದಿಗಳಲ್ಲೊಂದು. ಪಿಲಿಬಿತ್‍ನಿಂದ ಪೂರ್ವಕ್ಕೆ 32 ಕಿಮೀ ದೂರದಲ್ಲಿರುವ ಗೋಮತ್ ತಾಲ್‍ನಲ್ಲಿ (ಉ.ಅ.28° 35ದಿ ; ಪು.ರೇ.80° 75ದಿ) ಹುಟ್ಟಿ 19 ಕಿಮೀ ವರೆಗೆ ಝರಿಯಂತೆ ಹರಿಯುತ್ತದೆ. 56 ಕಿಮೀ ಹರಿದ ಅನಂತರ ಜೊಮ್ಕೈ ನದಿ ಇದನ್ನು ಸಂಗಮಿಸುತ್ತದೆ. ಅಲ್ಲಿಂದ ಮುಂದೆ ಶಾಶ್ವತವಾದ ಪ್ರವಾಹ ರೂಪದಲ್ಲಿ ಇದು ಹರಿಯತೊಡಗುತ್ತದೆ. ಸ್ವಲ್ಪ ದೂರದಲ್ಲಿ ಶಹಜಹಾನ್ಪುರ ದಿಂದ ಖೇರೀಗೆ ಹೋಗುವ ಮಾರ್ಗದಲ್ಲಿ ಗೋಮತಿಗೆ 63 ಮೀ ಉದ್ದದ ಸೇತುವೆ ನಿರ್ಮಾಣವಾಗಿದೆ. ಸೇತುವೆಯನ್ನು ದಾಟಿದ ಮೇಲೆ ಮಂದಗತಿಯಿಂದ ಹರಿಯುವ ಈ ನದಿಗೆ ಅನೇಕ ಉಪನದಿಗಳೂ ನಾಲೆಗಳೂ ಬಂದು ಸೇರುತ್ತವೆ. ಮುಹಮ್ಮದೀಯಿಂದ ಲಖನೌ ವರೆಗೆ ನದಿಯ ಪಾತ್ರದ ಅಗಲ 30-36 ಮೀ. ಇಲ್ಲಿ ನದಿಯ ದಡಗಳು ತಕ್ಕಮಟ್ಟಿಗೆ ಎತ್ತರವಾಗಿವೆ. ಸೀತಾಪುರ ಜಿಲ್ಲೆಯಲ್ಲಿ ಗೋಮತಿಯನ್ನು ಬಂದು ಸೇರುವ ನದಿಗಳು ಕಥ್ನಾ ಮತ್ತು ಸರಾಯಾನ. ಲಖನೌ ನಗರದಲ್ಲಿ ಇದಕ್ಕೆ ಅನೇಕ ಸೇತುವೆಗಳಿವೆ. ಲಖನೌದಿಂದ ಮುಂದೆ ಈ ನದಿ ಬಾರಾಬಂಕಿ, ಸುಲ್ತಾನ್ಪುರ ಮತ್ತು ಜೌನ್ಪುರ ಜಿಲ್ಲೆಗಳನ್ನು ದಾಟಿ ಮುಂದುವರೆಯುತ್ತದೆ. ಅಲ್ಲಿ ನದಿಯ ಮಾರ್ಗ ಅಂಕುಡೊಂಕು; ಪಾತ್ರದ ಅಗಲ 60-180 ಮೀ. ಜೌನ್ಪುರದಲ್ಲಿ 16ನೆಯ ಶತಮಾನದಲ್ಲಿ ಕಟ್ಟಿದ 196 ಮೀ ಉದ್ದದ ಶಾಹೀ ಎಂಬ ಕಲ್ಲುಸೇತುವೆ ತುಂಬ ಪ್ರಸಿದ್ಧವಾದುದು. ಮುಂದೆ ಗೋಮತಿಯನ್ನು ಸೇರುವ ನದಿ ಸಯೀ. ವಾರಾಣಸಿಯಿಂದ ಉತ್ತರಕ್ಕೆ 32 ಕಿಮೀ ದೂರದಲ್ಲಿ ಗೋಮತೀ ನದಿ ಘಾಜಿಪುರ ಜಿಲ್ಲೆಯ ಸೈದ್ಪುರ ಎಂಬ ಊರಿನ ಹತ್ತಿರ ಗಂಗಾನದಿಯನ್ನು ಸಂಗಮಿಸುತ್ತದೆ. ನದಿಯ ಒಟ್ಟು ಉದ್ದ ಸು. 940 ಕಿಮೀ.
ಗೋಮತೀ ನದಿ ಮತ್ತು ಅದರ ಉಪನದಿಗಳಿಂದ 30,437 ಚ.ಕಿಮೀ ಪ್ರದೇಶ ಫಲವತ್ತಾಗಿದೆ. ಅತಿವೃಷ್ಟಿಯಿಂದ ಆಗಾಗ್ಗೆ ನದಿಯಲ್ಲಿ ಅತಿಯಾದ ನೆರೆ ಬರುವುದುಂಟು. ಗೋಮತೀ ನದಿಯಲ್ಲಿ ಮುಹಮ್ಮದೀವರೆಗೆ ದೋಣಿ ಸಂಚಾರ ಸಾಧ್ಯ. ಲಖನೌ, ಸೀತಾಪುರ, ಬಾರಾಬಂಕಿ, ರಾಯ್ಬರೇಲಿ, ಸುಲ್ತಾನ್ಪುರ, ಜೌನ್ಪುರ ನಗರಗಳು ಗೋಮತೀ ನದಿಯ ದಂಡೆಯ ಮೇಲಿವೆ.
| ಗೋಮತೀ ನದಿ | |
| गोमती Gumti Gomati | |
| River | |
|
Gomti River at Lucknow
| |
| ದೇಶ | |
|---|---|
| ಮೂಲ | ಗೋಮತಿ ತಾಲ್ |
| ಉದ್ದ | ೯೦೦ km (೫೫೯ mi) approx. |
| ನೀರಿನ ಬಿಡುಗಡೆ | for ಸೈದಾಪುರ |
| - ಸರಾಸರಿ | ೨೩೪ m³/s (೮,೨೬೪ cu ft/s) [೧] |
ಬುಧವಾರ, ಫೆಬ್ರವರಿ 01, 2017
ಗೋದಾವರಿ ನದಿ
ಗೋದಾವರಿನದಿ (ತೆಲುಗು: గోదావరి) (ಮರಾಠಿ: गोदावरी) ದಕ್ಷಿಣ ಮಧ್ಯ ಭಾರತದ ಒಂದು ನದಿ. ಇದು ಮಹಾರಾಷ್ಟ್ರದ ಪಶ್ಚಿಮ ರಾಜ್ಯದಲ್ಲಿ ಆರಂಭವಾಗಿ ಆಂಧ್ರ ಪ್ರದೇಶ ರಾಜ್ಯದ ಮೂಲಕ ಹರಿದು ಬಂಗಾಳ ತಲುಪುತ್ತದೆ. 1465 ಕಿಮೀ ಉದ್ದದ , ಇದು ಗಂಗಾನದಿಯ ನಂತರದ ಅತೀದೊಡ್ಡ ನದಿಯಾಗಿದ್ದು ಭಾರತದ ಎರಡನೇ ದೊಡ್ದನದಿಯೂ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯೂ ಆಗಿದೆ. ಇದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟುತ್ತದೆ ಮತ್ತು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ಮತ್ತು ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಇದು ಡೆಕ್ಕನ್ ಪ್ರಸ್ಥಭೂಮಿ ಅಡ್ಡಲಾಗಿ ಪೂರ್ವಕ್ಕೆ ಹರಿಯುತ್ತದೆ.
ಇದನ್ನು ದಕ್ಷಿಣದ ಗಂಗೆ (ದಕ್ಷಿಣಗಂಗಾ) ಎಂದು ಕರೆಯುತ್ತಾರೆ. ಇದು ಆದಿಲಾಬಾದ್ ಜಿಲ್ಲೆಯ ಬಸರಾದಲ್ಲಿ ಆಂಧ್ರ ಪ್ರದೇಶವನ್ನು ಪ್ರವೇಶಿಸುತ್ತದೆ. ಆಂಧ್ರ ಪ್ರದೇಶದ ತೆಲಂಗಾಣ ಪ್ರದೇಶದ ಮೂಲಕ ಹಾದುಹೋಗುವಾಗ ಧರ್ಮಪುರಿಯ ಹತ್ತಿರ ಹಾದುಹೋಗುತ್ತದೆ. ಈ ಧರ್ಮಪುರಿಯು ಒಂದು ಯಾತ್ರಾಸ್ಥಳವಾಗಿದ್ದು ಇಲ್ಲಿ ಅನೇಕ ಪುರಾತನ ದೇವಸ್ಥಾನಗಳಿದ್ದು ಇಲ್ಲಿ ಗೋದಾವರಿ ನದಿಯ ಸ್ನಾನವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ನಂತರ ಡೆಕ್ಕನ್ ಪ್ರಸ್ಥಭೂಮಿ ದಾಟುವ ಮತ್ತು ಹಾಗೆಯೇ ಎರಡು ಕವಲಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಬಸರಾ ಕ್ಷೇತ್ರವು, ಆದಿಲಾಬಾದ್ ಜಿಲ್ಲೆಯಲ್ಲಿ ಗೋದಾವರಿ ತೀರದಲ್ಲಿರುವ , ಸರಸ್ವತಿಯ ಪ್ರಸಿದ್ಧ ದೇವಸ್ಥಾನವನ್ನು ಹೊಂದಿದೆ. ಇದು ಭಾರತದಲ್ಲಿ ಸರಸ್ವತಿಯ ಎರಡನೇ ದೇವಾಲಯವಾಗಿದೆ.( ಮೊದಲನೆಯದು ಪಾಕ್ ಆಕ್ರಮಿತ ಕಾಶ್ಮೀರದ ಕಿಷನ್ ಗಂಗಾ ಕಣಿವೆಯಲ್ಲಿನ ಶಾರದಿ ಎಂಬ ಹಳ್ಳಿಯಲ್ಲಿದೆ.)
ರಾಜಮುಂಡ್ರಿ ಅಥವಾ ರಾಜಮಹೇಂದ್ರಿ , ಗೋದಾವರಿ ತೀರದಲ್ಲಿರುವ ಎರಡನೇ ದೊಡ್ಡ ನಗರ (ನಾಸಿಕ್ ಮೊದಲನೇ ದೊಡ್ಡ ನಗರ) ಆಗಿದೆ. ರಾಜಮುಂಡ್ರಿ ನಲ್ಲಿ, ಗೋದಾವರಿ ನದಿಯು ರಾಜಮುಂಡ್ರಿ ಯಿಂದ ಇನ್ನೊಂದು ದಂಡೆಯಾದ ಕೋವೂರ್ ವರೆಗೆ ಸುಮಾರು 5 ಕಿಮೀ ಅಗಲವನ್ನು ಹೊಂದಿದೆ.
ಒಂಬತ್ತನೇ ಶತಮಾನದ ಕವಿರಾಜಮಾರ್ಗ ಕೃತಿಯಲ್ಲಿ "ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್" ಎಂದು ಆ ಕಾಲದಲ್ಲಿ ಕನ್ನಡ ನಾಡಿನ ಹರಹು ಕಾವೇರಿಯಿಂದ ಗೋದಾವರಿವರೆಗೆ ಇತ್ತು ಎಂದು ಹೇಳಲಾಗಿದೆ
| Godavari (Dakshin Ganga) | |
| River | |
|
The Mouth of the Godavari river (East) emptying into the Bay of Bengal.
| |
| ದೇಶ | India |
|---|---|
| ರಾಜ್ಯಗಳು | Maharashtra, Telangana,Chhattisgarh, Andhra Pradesh,Pondicherry (Yanam) |
| Region | Southern India, Western India |
| ಉಪನದಿಗಳು | |
| - ಎಡಬದಿಯಲ್ಲಿ | Purna, Pranahita, Indravati,Sabari, Taliperu, Wainganga,Penganga, Wardha, Dudhana |
| - ಬಲಬದಿಯಲ್ಲಿ | Pravara, Manjira, Pedda Vagu,Manair, Kinnerasani |
| ನಗರಗಳು | Nashik, Nanded, Nizamabad,Rajamundry |
| ಮೂಲ | |
| - ಸ್ಥಳ | Brahmagiri Mountain,Tryambakeshwar, Nashik,Maharashtra, India |
| - ಸಮುದ್ರ ಮಟ್ಟದಿಂದ ಎತ್ತರ | ೯೨೦ m (೩,೦೧೮ ft) |
| - ಅಕ್ಷಾಂಶ-ರೇಖಾಂಶ | 19°55′48″N 73°31′39″E |
| ಸಾಗರಮುಖ | |
| - ಸ್ಥಳ | Antarvedi into Bay of Bengal,East Godavari, Andhra Pradesh,India |
| - ಸಮುದ್ರ ಮಟ್ಟದಿಂದ ಎತ್ತರ | ೦ m (೦ ft) |
| - ಅಕ್ಷಾಂಶ-ರೇಖಾಂಶ | 17°0′N 81°48′E [೧] |
| ಉದ್ದ | ೧,೪೬೫ km (೯೧೦ mi) |
| ಜಲಾನಯನ | ೩,೧೨,೮೧೨ km² (೧,೨೦,೭೭೭ sq mi) |
| ನೀರಿನ ಬಿಡುಗಡೆ | |
| - ಸರಾಸರಿ | ೩,೫೦೫ m³/s (೧,೨೩,೭೭೮ cu ft/s) [೨] |
| Discharge elsewhere (average) | |
| - Polavaram (1901-1979) | ೩,೦೬೧.೧೮ m³/s(೧,೦೮,೧೦೫ cu ft/s) [೩] |
ಭಾನುವಾರ, ಜನವರಿ 01, 2017
ಗುರುಪುರ ನದಿ
ಫಾಲ್ಗುಣಿ ನದಿ ಎಂದೂ ಕರೆಯಲ್ಪಡುವ ಗುರುಪುರ ನದಿಯು ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲೊಂದು. ಈದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಗುರುವಾರ, ಡಿಸೆಂಬರ್ 01, 2016
ಗಂಗೋತ್ರಿ ಹಿಮನದಿ
ಗಂಗೋತ್ರಿ ಹಿಮನದಿ ಭಾರತದ ಉತ್ತರಾಖಂಡ ರಾಜ್ಯದ ಉನ್ನತ ಹಿಮಾಲಯ ಪ್ರಾಂತ್ಯದಲ್ಲಿರುವ ಒಂದು ಹಿಮನದಿ. ಗಂಗಾ ನದಿಯ ಮೂಲವಾದ ಗಂಗೋತ್ರಿ ಹಿಮನದಿಯು ಹಿಮಾಲಯದ ಅತಿ ದೊಡ್ಡ ಹಿಮನದಿಗಳಲ್ಲಿ ಒಂದು. ಇದರಲ್ಲಿರುವ ಹಿಮ ೨೭ ಘನ ಕಿಲೋಮೀಟರ್‌ಗಳಷ್ಟೆಂದು ಅಂದಾಜು ಮಾಡಲಾಗಿದೆ.
ಗಂಗೋತ್ರಿ ಹಿಮನದಿಯು ಸುಮಾರು ೩೦ ಕಿ.ಮೀ. ಉದ್ದವಾಗಿದ್ದು ೨ ರಿಂದ ೪ ಕಿ.ಮೀ.ಗಳಷ್ಟು ಅಗಲವಾಗಿದೆ. ಈ ಹಿಮನದಿಯ ಸುತ್ತಲೂ ಗಂಗೋತ್ರಿ ಶ್ರೇಣಿಯ ಹಿಮಾಲಯ ಶಿಖರಗಳಿವೆ. ಇವುಗಳಲ್ಲಿ ಶಿವಲಿಂಗ, ಥಲಯ್ ಸಾಗರ್, ಮೇರು ಮತ್ತು ಭಾಗೀರಥಿ-೩ ಶಿಖರಗಳು ಮುಖ್ಯವಾದವು. ಈ ಸರಣಿಯ ಅತಿ ಎತ್ತರದ ಶಿಖರವಾದ ಚೌಖಂಬಾದ ತಳದಲ್ಲಿ ಉಗಮಿಸುವ ಈ ಹಿಮನದಿಯು ವಾಯವ್ಯ ದಿಕ್ಕಿನಲ್ಲಿ ಸರಿಯುತ್ತದೆ (ಹರಿಯುತ್ತದೆ). ಗಂಗೋತ್ರಿ ಹಿಮನದಿಯ ಕೊನೆಯು ಹಸುವಿನ ಮುಖದ ಆಕಾರದಲ್ಲಿದ್ದು ಅದನ್ನು ಗೋಮುಖ ಎಂದು ಕರೆಯಲಾಗುತ್ತದೆ. ಗೋಮುಖದಲ್ಲಿ ಹಿಮನದಿಯು ನೀರಾಗಿ ಹರಿಯಲಾರಂಭಿಸುವುದರಿಂದ ಈ ಸ್ಥಾನವನ್ನು ಗಂಗಾ ಮೂಲವೆಂದು ತಿಳಿಯಲಾಗುತ್ತದೆ. ಗೋಮುಖ ಹಿಂದೂ ಶ್ರದ್ಧಾಳುಗಳಿಗೆ ಒಂದು ಅತಿ ಪಾವನ ಕ್ಷೇತ್ರವಾಗಿದೆ. ಗೋಮುಖವು ಶಿವಲಿಂಗ ಪರ್ವತದ ಬುಡದಲ್ಲಿದೆ. ಗಂಗೋತ್ರಿಯಿಂದ ೧೮ ಕಿ.ಮೀ. ದೂರದಲ್ಲಿರುವ ಗೋಮುಖವನ್ನು ಕಾಲ್ನಡಿಗೆಯಲ್ಲಿ ಕಠಿಣಹಾದಿಯನ್ನು ಕ್ರಮಿಸಿ ತಲುಪಬಹುದಾಗಿದೆ.ಇಲ್ಲಿಂದ ಮುಂದೆ ಮತ್ತಷ್ಟು ದುರ್ಗಮ ಹಾದಿಯನ್ನು ಕ್ರಮಿಸಿದಲ್ಲಿ ಶಿವಲಿಂಗ ಪರ್ವತದ ತಪ್ಪಲಾದ ಹಾಗೂ ಧಾರ್ಮಿಕವಾಗಿ ಪವಿತ್ರ ಸ್ಥಳವಾದ ತಪೋವನವನ್ನು ತಲುಪಬಹುದು. ಶಿವಲಿಂಗ ಪರ್ವತವು ಗಂಗಾಮಾತೆಯ ನಿಜಮೂಲವಾಗಿದೆ.
ಗಂಗೋತ್ರಿಯಿಂದ ತಪೋವನಕ್ಕೆ ಒಟ್ಟು ೨೨ ಕಿ.ಮಿ.ಗಳಷ್ಟಾಗುತ್ತದೆ. ಸರಿಯಾದ ಮಾರ್ಗದರ್ಶಕರಿಲ್ಲದೆ ಸಾಗುವುದು ಅಪಾಯಕಾರಿ. ಗಂಗೋತ್ರಿ>ಚಿರಬಾಸ>ಭೊಜವಾಸ>ಗೋಮುಖ>ತಪೋವನ.
ಗಂಗೋತ್ರಿ ಹಿಮನದಿಯ ಪರಿಸರದಲ್ಲಿ ಮಾನವ ಚಟುವಟಿಕೆಗಳು ಹೆಚ್ಚುತ್ತಿದ್ದು ಈ ಕಾರಣದಿಂದಾಗಿ ಮತ್ತು ಒಟ್ಟಾರೆ ಪರಿಸರ ಹಾನಿಯಿಂದಾಗಿ ಗಂಗೋತ್ರಿ ಹಿಮನದಿಯು ತೀವ್ರ ಗತಿಯಲ್ಲಿ ಕುಗ್ಗುತ್ತಿದೆ. ಇದು ಹೀಗೇ ಮುಂದುವರಿದಲ್ಲಿ ಇನ್ನು ಕೆಲ ದಶಕಗಳಲ್ಲಿ ಗಂಗೋತ್ರಿ ಹಿಮನದಿಯು ಸಂಪೂರ್ಣವಾಗಿ ಮಾಯವಾಗುವ ಭೀತಿ ವ್ಯಕ್ತಪಡಿಸಲಾಗಿದೆ.
ಮಂಗಳವಾರ, ನವೆಂಬರ್ 01, 2016
ಗಂಗಾ ನದಿ
| ಗಂಗಾ ನದಿ | |
| ನದಿ | |
|
ವಾರಾಣಸಿಯಲ್ಲಿ ಗಂಗೆ
| |
| ದೇಶಗಳು | ಭಾರತ, ನೇಪಾಳ, ಬಾಂಗ್ಲಾದೇಶ |
|---|---|
| ಉಪನದಿಗಳು | |
| - ಎಡಬದಿಯಲ್ಲಿ | ಮಹಾಕಾಳಿ, ಕರ್ನಾಲಿ, ಕೋಸಿ, ಗಂಡಕಿ,ಘಾಘ್ರಾ |
| - ಬಲಬದಿಯಲ್ಲಿ | ಯಮುನಾ, ಸೋನ್, ಮಹಾನಂದಾ |
| ನಗರಗಳು | ಹರಿದ್ವಾರ, ಸೊರೊನ್, ಕನ್ನೋಜ್, ಕಾನ್ಪುರ,ಅಲಹಾಬಾದ್, ವಾರಾಣಸಿ, ಪಾಟ್ನಾ,ರಾಜ್‌ಶಾಹಿ |
| ಮೂಲ | ಗಂಗೋತ್ರಿ ಹಿಮನದಿ |
| - ಸ್ಥಳ | ಉತ್ತರಾಖಂಡ, ಭಾರತ |
| - ಸಮುದ್ರ ಮಟ್ಟದಿಂದ ಎತ್ತರ | ೭,೭೫೬ m (೨೫,೪೪೬ ft) |
| - ಅಕ್ಷಾಂಶ-ರೇಖಾಂಶ | 30°59′N 78°55′E |
| ಸಾಗರಮುಖ | ಗಂಗಾ ಮುಖಜಭೂಮಿ |
| - ಸ್ಥಳ | ಬಂಗಾಳ ಕೊಲ್ಲಿ, ಬಾಂಗ್ಲಾದೇಶ |
| - ಸಮುದ್ರ ಮಟ್ಟದಿಂದ ಎತ್ತರ | ೦ m (೦ ft) |
| - ಅಕ್ಷಾಂಶ-ರೇಖಾಂಶ | 22°05′N 90°50′E |
| ಉದ್ದ | ೨,೫೧೦ km (೧,೫೬೦ mi) |
| ಜಲಾನಯನ | ೯,೦೭,೦೦೦ km² (೩,೫೦,೧೯೫ sq mi) |
| ನೀರಿನ ಬಿಡುಗಡೆ | for ಸಾಗರಕ್ಕೆ |
| - ಸರಾಸರಿ | ೧೨,೦೧೫ m³/s (೪,೨೪,೩೦೬ cu ft/s) |
ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾ ನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಗಂಗಾನದಿಯುಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಪರಿವಿಡಿ
ಗಂಗಾ ನದಿಯ ವೈಶಿಷ್ಟ್ಯ
ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ಗಂಗೋತ್ರಿ. ಹಿಮಾಲಯ ಕೇವಲ ಹಿಮಶಿಖರಗಳ ಆಲಯವಲ್ಲ. ಋಷಿ ಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಹನಿಗಳ ಉಪಯೋಗದಿಂದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿದೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ ಜಿಜ್ಞಾಸೆಗಳು, ಸಾಧಕರು, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳನ್ನು, ಅನಾನುಕೂಲಗಳನ್ನು ಪರಿಗಣಿ ಸದೇ ಅತೀ ಕಠಿಣ ರಸ್ತೆ ಕ್ರಮಿಸಿ ಬರುತ್ತಾರೆ. ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸಿದ್ಧವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ.
ಗಂಗೆಯ ಇತಿವೃತ್ತ
- ಉತ್ತರ ಭಾರತದಲ್ಲಿ 'ದೇವಭೂಮಿ' ಎಂದೇ ಪ್ರಸಿದ್ಧವಾದ ಹಿಮಾಲಯದ ನಾಲ್ಕು ಧಾಮಗಳಲ್ಲಿ ಒಂದು ಪಾವನ ಜಲವೆಂದು ಪೂಜಿಸುವ ಗಂಗೆಯ ಉಗಮ ಸ್ಥಳ ಗಂಗೋತ್ರಿ. ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದಿಂದ ಹೊರಡಬೇಕಾಗುತ್ತದೆ. ಹರಿದ್ವಾರ ಅಂದರೆ ಬದರಿನಾರಾಯಣ(ಹರಿ)ಕ್ಕೆ ಇಲ್ಲಿಂದ ಯಾತ್ರೆ ಆರಂಭಿಸು ವುದರಿಂದ ಇದಕ್ಕೆ 'ಹರಿದ್ವಾರ'ವೆಂತಲೂ ಕರೆಯುತ್ತಾರೆ, ಇಲ್ಲಿ ಗಂಗೆ ಎಲ್ಲಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ.
- ಹರಿದ್ವಾರದಿಂದ ೨೩ ಕಿ.ಮೀ. ದೂರದಲ್ಲಿ ಋಷಿಕೇಶ ಮಹಾ ಉತ್ತಮ ತೀರ್ಥ ಮತ್ತು ತಪೋಭೂಮಿಯಿದೆ. ಉತ್ತುಂಗ ಪರ್ವತಗಳ ಶಿಖರಗಳ ನಡುವೆ ಹರಿವ ಗಂಗೆಯ ಝಳು ಝಳು ನಿನಾದವೊಂದಿಗೆ ಜಲಧಾರೆ ಹರಿವು, ತಪ್ಪಲ ಪ್ರದೇಶಗಳನ್ನು ಸೇರುತ್ತದೆ.
- ಹರಿದ್ವಾರದಿಂದ ಗಂಗೋತ್ರಿಗೆ ೨೨೮.ಕಿ.ಮೀ. ಋಷಿಕೇಶ ದಾಟಿ ಚಂಬಾ ಪಟ್ಟಣದ ತನಕ (೨೯೦ ಅಡ್ಡಿ ಎತ್ತರ) ಉತ್ತಮವಾದ ಅತೀ ಕಡಿದಾದ, ಸಣ್ಣ, ತೀವ್ರ ತಿರುವುಗಳಿಂದ ಕೂಡಿದ ರಸ್ತೆ ಅಲ್ಲಿಂದ (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ) ಉತ್ತರ ಕಾಶಿಯ ಕಡೆಗೆ ಹೊರಡಬೇಕು. ಉತ್ತರಕಾಶಿ ಒಂದು ಅಧುನಿಕ ಬಗೆಯಿಂದ ರಚಿತ ಸುಮಾರು ೫೦೦೦೦ ಜನಸಂಖ್ಯೆಯುಳ್ಳ ನಗರ. ಇಲ್ಲಿ ಈ ಜಿಲ್ಲೆಯ ಪ್ರಮುಖ ಕಾರ್ಯಾಲಯಗಳಿವೆ.
ಉತ್ತರ ಕಾಶಿ
- ಉತ್ತರ ಕಾಶಿಯು ನೈಸರ್ಗಿಕ ಸೌಂದರ್ಯ, ಧಾರ್ಮಿಕ ಆಸ್ತಿಕತೆಯ ಅಪೂರ್ವ ಸಂಗಮ ಪ್ರದೇಶ. ಮನುಷ್ಯನ ಮನಸ್ಸಿಗೆ ರೋಮಾಂಚನ ತರುವ ಸ್ಥಳ ಮನಮೋಹಕ ದೃಶ್ಯ. ಭಕ್ತ ರ ಪಾಲಿಗೆ ಕಲ್ಯಾಣಕಾರಿ. ಪ್ರಕೃತಿಯ ಅನುಪಮ ನೋಟ ತಲೆ ಎತ್ತಿದರೆ ಗಗನಚುಂಬಿ ಬೆಟ್ಟಗಳು, ತಲೆ ತಗ್ಗಿಸಿದರೆ ನೀಳವಾಗಿ ಹರಿಯುವ ಗಂಗೆ, ಇದನ್ನೇಲ್ಲ ಹೋಗಿಯೆ ಅನುಭವಿ ಸಬೇಕು, ಆಸ್ವಾದಿಸಬೇಕು.
- ಉತ್ತರಕಾಶಿಯಲ್ಲಿ ಉಳಿದು ವಿಶ್ರಾಂತಿ ಪಡೆದು ಮುಂದೆ ಹೊರಡಬಹುದು. ಇಲ್ಲಿ ತಂಗಲು ಅನೇಕ ಧರ್ಮಶಾಲೆಗಳು, ವಸತಿಗಳು ಇವೆ. ನೂರು ವರುಷದಷ್ಟು ಹಳೆಯದಾದ ಕೈಲಾಸ ಆಶ್ರಮವೂ ಇದೆ. ಇಲ್ಲಿ ರಾತ್ರಿ ಎಂಟರವರಗೆ ಬೆಳಕು ಇರುತ್ತದೆ. ಸೂರ್ಯಾಸ್ತಮ ತಡವಾಗಿ ಆಗುತ್ತದೆ ಇದೇ ಇಲ್ಲಿನ ವೈಶಿಷ್ಟ್ಯ.
- ಹಾಗೆ ಬೆಳಿಗ್ಗೆ ೪-೩೦ ಕ್ಕೆಲ್ಲಾ ಇಲ್ಲಿ ಬೆಳಕಾಗುತ್ತದೆ (ಸೂರ್ಯೋದಯವೂ ಬೇಗ). ಇದಕ್ಕೆ ಉತ್ತರ ಕಾಶಿಯೆಂದು ಹೆಸರು ಬಂದಿದ್ದು, ಇಲ್ಲೆ ನೆಲೆಸಿರುವ ಶಿವನಿಂದಾಗಿ. ಉತ್ತರದ ಕಡೆ ಮುಖ ಮಾಡಿರುವ ಶಿವನ ದೇವಾಲಯ ಇಲ್ಲಿದೆ. ಅದಕ್ಕೆ ಎದುರಾಗಿ ಆದಿಶಕ್ತಿಯ ದೇವಸ್ಥಾನವಿದೆ.
- ಅಲ್ಲಿನ ವಿಶೇಷ ಸುಮಾರು ೧೦೦ ಅಡಿ ಎತ್ತರದ ಹಿತ್ತಾಳೆಯ ತರ ಇರುವ ಲೋಹದ ತ್ರಿಶೂಲವಿದೆ. ಅದನ್ನು ಅದಿಶಕ್ತಿಯೇ ರಕ್ಕಸರ ಸಂಹಾರದ ನಂತರ ಅಲ್ಲಿ ನೆಟ್ಟಿರುವುದು ಪಾತಾಳಕ್ಕೆ ಹೋಗಿದೆ ಎಂಬುದು ಅಲ್ಲಿನವರ ಹೇಳಿಕೆ. ಅದನ್ನು ತಿಳಿಯಲು ಅನೇಕ ವೈಜ್ಞಾನಿಕ ಪ್ರಯೋಗಗಳಾದರೂ ಸತ್ಯವನ್ನು ತಿಳಿಯಲು ಇನ್ನು ಸಾದ್ಯವಾಗಿಲ್ಲ. ಉತ್ತರ ಕಾಶಿಯಿಂದ ಬೆಳಿಗ್ಗೆ ಬೇಗ ೫ ಗಂಟೆಗೆ ಹೊರಟರೆ ಸಂಜೆಗೆ ವಾಪಾಸ್ಸು ಉತ್ತರ ಕಾಶಿಗೆ ಬಂದು ಸೇರಬಹುದು.
- ಉತ್ತರ ಕಾಶಿಯಿಂದ ಗಂಗೋತ್ರಿಗೆ ಹೊರಟಾಗ ದಾರಿಯಲ್ಲಿ ಸಿಗುವ ಸುಂದರ ತಾಣ 'ಹಸ್ಲಿಲ'. ಈ ಪ್ರದೇಶವು 'ಸೇಬು ಮರ'ಗಳಿಂದ ತುಂಬಿ ತುಳುಕುತ್ತದೆ. ಉತ್ತರ ಕಾಶಿ ಯಿಂದ ೧೫.ಕಿ.ಮೀ. ದೂರದಲ್ಲಿ ಮನೇರಿ ಡ್ಯಾಂ ಇದೆ. ಇಲ್ಲಿಯ ನಂತರ ಗಂಗೆ ತನ್ನ ಗಾತ್ರವನ್ನು ಕುಗ್ಗಿಸುತ್ತಾಳೆ. ಬೆಟ್ಟದ ಅಡಿಯಿಂದ ಉತ್ತರಕಾಶಿ ತನಕ ಹೋಗುತ್ತಾಳೆ. ಇಲ್ಲಿಂದ ಮುಂದೆ ಭೂ ಕುಸಿತಗಳ ಪ್ರಕರಣಗಳು ಹೆಚ್ಚು, ಹಾಗೇನಾದರು ಆದರೆ ಗಂಟೆಗಟ್ಟಲೆ-ದಿನಗಟ್ಟಲೆ ಸಾಲುಸಾಲಾಗಿ ವಾನಹಗಳು ನಿಲ್ಲುತ್ತವೆ.
- ಮಿಲ್ಟ್ರಿರಿಯವರು ಬಂದು ತೆರವು ಮಾಡಿದ ಮೇಲೆ ಹೊರಡಬೇಕಾಗುತ್ತದೆ. ಹಸ್ಲಿಲದಲ್ಲಿ ಮಿಲ್ಟ್ರಿ ಕ್ಯಾಂಪ್ ಇದೆ, ಆ ಸ್ಥಳದ ಸುತ್ತ ಮುತ್ತಲೇ 'ರಾಮತೇರಿ ಗಂಗಾಮೈಲಿ' ಹಿಂದಿ ಸಿನಿಮಾ ತೆಗೆದದ್ದನ್ನು ಅಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ನಂತರ ಸಿಗುವುದೇ ಭೈರವ ಘಾಟಿ. ಇಲ್ಲಿ ಭೈರವನ ದೇವಸ್ಥಾನವಿದೆ. ಊಟ-ತಿಂಡಿ ಚಾಯ್ ಹೋಟಲು ಗಳಿವೆ. ಯಾತ್ರಿಕರು ವಿಶ್ರಾಂತಿ ಪಡೆದು ಮುಂದೆ ಹೊರಡ್ತಾರೆ.
- ಭೈರವ ಘಾಟಿಯ ನಂತರ ಗಂಧಕ ಪರ್ವತಗಳ ತಾಣವಿದೆ. ಇಲ್ಲಿ ಬಿಸಿನೀರಿನ ಬುಗ್ಗೆಗಳನ್ನು ನೋಡಬಹುದು. ಯಾತ್ರಿಕರು ಅಲ್ಲಿ ಸ್ನಾನ ಮಾಡಿ ಮುಂದಕ್ಕೆ ಹೊರಡುತ್ತಾರೆ. ಅಲ್ಲಿ ದಾರಿಯುದ್ದಕ್ಕೂ ಪಾದಯಾತ್ರಿಕರನ್ನು ನೋಡುತ್ತೇವೆ (ಸನ್ಯಾಸಿಗಳು-ಸಿಖ್ಖ್‌ರು ಹೆಚ್ಚು) ಸಿಖ್ಖ್‌ರು ಡೋಲಿಯ ತರದಲ್ಲಿ ಇರುವ ಗಾಡಿಯಲ್ಲಿ ಗಂಗಾ ಜಲವನ್ನು ಇಟ್ಟು ಭಜನೆ ಮಾಡುತ್ತಾ ಹೋಗುವುದನ್ನು ಕಾಣಬಹುದು.
- ಥಂಡಿ ಹವಾ-ತುಂತುರು ಮಳೆ (ಜುಲೈ ತಿಂಗಳು) ಎರಡು ಕಡೆ ಕಡಿದಾದ ಎತ್ತರ ಬೆಟ್ಟಗಳು ಮೇಲಿನಿಂದ ಸಣ್ಣದಾಗಿ ಬೀಳುವ ನೀರಿನಿಂದ ಝರಿಗಳು, ಮೋಡಗಳು, ಪಾತಾಳ ದಲ್ಲಿ ಭೋರ್ಗರೆದು ಹರಿಯುವ ಗಂಗೆ. ಬ್ರಹ್ಮ ಸೃಷ್ಠಿಯನ್ನೇ ಕಡೆದು ಅಲ್ಲಿ ಇಟ್ಟಿದ್ದಾನೆನ್ನುವಂತಿದೆ. ಗಂಗೋತ್ರಿ ಸಮುದ್ರ ಮಟ್ಟದಿಂದ ೩೧೦೦ ಮೀಟರ್(೧೦,೩೫೫ ಅಡಿ) ಎತ್ತರದಲ್ಲಿದೆ. ಗಂಗೋತ್ರಿ ತಲುಪುವ ವೇಳೆಗೆ ಎಲ್ಲ ಆಯಾಸಗಳನ್ನು ಮರೆತುಬಿಡುತ್ತೇವೆ.
- ಗಂಗೆಯ ದಡದಲ್ಲಿ ಕೂತರೆ, ಆಕೆ ಹಿಮಾಲಯದಿಂದ ವೋ ಎಂದು ಸದ್ದು ಮಾಡುತ್ತಾ ಭೋರ್ಗರೆದು ಹರಿದು ಬರುವ ದಾರಿ(ಹರಿದ್ವಾರದಲ್ಲಿ ಶಾಂತವಾಗಿ ಹರಿಯುತಾಳೆ) ದೃಶ್ಯ ನಮ್ಮನ್ನು ತಲ್ಲೀನವಾಗಿಸುತ್ತದೆ. ಆಕೆಯನ್ನು ಸ್ಪರ್ಶಿಸಿದರೆ ತಣ್ಣಗೆ ಕೊರೆಯುತ್ತಾಳೆ. ಇಲ್ಲಿ ಗಂಗಾಮಾತೆಯ ವಿಶಾಲ ದೇವಾಲಯವಿದೆ. ಇದರಲ್ಲಿ ಗಂಗಾ, ಜಮುನಾ, ಸರಸ್ವತಿ, ಲಕ್ಷ್ಮೀ ಪಾರ್ವತಿ ಮತ್ತು ಸರಸ್ವತಿ ದೇವತೆಗಳ ಪ್ರಾಚೀನ ಪ್ರತಿಮೆಗಳಿವೆ.
- ಭಗೀರಥ ಮಹಾರಾಜ ಎದುರಿಗೆ ಕೈ ಜೋಡಿಸಿ ನಿಂತಿರುವ ಪ್ರತಿಮೆಯಿದೆ. ಇಲ್ಲಿ ಪೂಜಿಸುವ ವಸ್ತುಗಳೆಲ್ಲ ಚಿನ್ನದವು. ಇಲ್ಲಿ ಒಂದು ಸ್ಥಳದಲ್ಲಿ ಗಂಗೆ ಶಿವಲಿಂಗದ ಮೇಲೆಯೇ ಬೀಳು ತ್ತಾಳೆ. ಇಲ್ಲಿ ಶೀತಗಾಳಿ ಹೆಚ್ಚು. ನಾವು ಗಂಗೆಯಲ್ಲಿ ಇಳಿದು ಸ್ನಾನ ಮಾಡುವುದು ಅತ್ಯಂತ ಕಷ್ಟಕರ. ತಲೆ ಮೇಲೆ ಪ್ರೋಕ್ಷಣೆ ಮಾಡುವಷ್ಟರಲ್ಲಿಯೇ ಕೈ ಶೀತದಿಂದ ಮರಗಟ್ಟಿರು ತ್ತದೆ. ದುರ್ಗಮ ಘಟ್ಟಗಳ ಮಧ್ಯೆ ಪಾಪ ಕಳೆಯುವ ಪತೀತ ಪಾವನೆ ಈ ಗಂಗಾ ಮಾತೆಯ ಮುಂದಿರುವ ಸ್ಥಳ ಸಗರರಾಜ ಭಗೀರಥ ಕುಳಿತು ತಪಸ್ಸು ಮಾಡಿದ ಸ್ಥಳ ಎಂದು ಹೇಳುವ ದೊಡ್ಡ ಕಲ್ಲು ಹಾಸಿಗೆ ಇದೆ.
- ಈ ಸ್ಥಳದಲ್ಲಿ ಮಾಡುವಂತಹ ಪೂಜೆ ಮಂಗಳಕಾರಿ ಇಲ್ಲಿ ವರ್ಷದ ೬ ತಿಂಗಳು ಮಾತ್ರ ಪೂಜೆ ನಡೆಯುತ್ತದೆ. ಇನ್ನು ೬ ತಿಂಗಳು ಹಿಮದಿಂದ ತುಂಬಿ ಹೋಗಿರುತ್ತದೆ. ಆಗ ಬೆಟ್ಟದ ಕೆಳಗಿರುವ ಮುಖೀಮಠದಲ್ಲಿ ಪೂಜೆ ನಡೆಯುತ್ತದೆ. ಅಲ್ಲಿ ಯಾರೂ ಇರಲು ಸಾಧ್ಯವಿಲ್ಲ. ಉನ್ನತ ಪರ್ವತಗಳ ನಡುವೆ ಕಿಲಕಿಲ ನಗುತ್ತಾ ತಂಪಾಗಿ ಕೊರೆಯುತ್ತಾ ಹರಿಯುವ ಗಂಗಾಜಲ ಧಾರೆಯು ದೃಶ್ಯ ನಮಗೊಂದು ಅಲೌಕಿಕ ಆನಂದ ಕೊಡುತ್ತದೆ (ಇಲ್ಲಿ ಯಾತ್ರೆಗೆ ಮೇ-ಸೆಫ್ಟೆಂಬರ್).
- ಇಲ್ಲಿ ಗಂಗೆಯ ಪೂಜೆ ಮಾಡಿಸಲು ಪೂಜಾರಿಗಳು ಅನೇಕರು ಹಿಂದೆ ಹಿಂದೆ ಬರುತ್ತಾರೆ. ಪೂಜೆ ಮಾಡಿಸಿದರೆ ಮನೆತನದ ಹಿರಿಯರಿಗೆ ಮುಕ್ತಿ ಸಿಗುತ್ತದೆ ಎನ್ನುವ ಪ್ರತೀತಿ. ಇಲ್ಲಿ ಅನೇಕ ಕ್ಷೇತ್ರಗಳು ಮತ್ತು ಧರ್ಮಶಾಲೆಗಳು, ಸಣ್ಣ ಪೇಟೆಯು ಇದೆ.
ಗಂಗೋತ್ರಿಯ ಬಗ್ಗೆ
- ಹರಿದ್ವಾರದಿಂದ ಗಂಗೋತ್ರಿಗೆ ೨೯೭.ಕಿ.ಮೀ. ಋಷಿಕೇಶ ದಾಟಿ ಚಂಬಾ ಪಟ್ಟಣದ ತನಕ (೨೯೦೦ ಅಡ್ಡಿ ಎತ್ತರ) ಉತ್ತಮವಾದ ಕಡಿದಾದ, ಸಣ್ಣ, ತೀವ್ರ ತಿರುವುಗಳಿಂದ ಕೂಡಿದ ರಸ್ತೆಯ ಮುಖಾಂತರ ಹೋಗಬೇಕು. (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ ) ಇಲ್ಲಿಂದ ಉತ್ತರ ಕಾಶಿಯ ಕಡೆಗೆ ಹೊರಡಬೇಕು. ಗಂಗೋತ್ರಿಯು ಗಂಗೆಯ ಉಗಮ ಸ್ಥಳವಲ್ಲ. ಅಲ್ಲಿಂದ ೧೮ ಕಿ.ಮಿ ಮುಂದಿರುವ 'ಗೋಮುಖ' ಗಂಗೆಯ ಉಗಮವೆನ್ನುತ್ತಾರೆ.
- ೩೬೫ ದಿನಗಳು ಹಿಮ ಬೀಳುವ ಪ್ರದೇಶ, ಅತೀ ಕಡಿದಾದ ಸ್ಥಳ ಗೋಮುಖ. ಗೋಮುಖ ಸಮುದ್ರ ಮಟ್ಟದಿಂದ ೧೨,೭೭೦ ಅಡಿ ಎತ್ತರ. ಅಲ್ಲಿಂದ ನೀಳವಾಗಿ ಹೊರಟ ಗಂಗೆ ಗಂಗೋತ್ರಿಗೆ ಬರುವಷ್ಟರಲ್ಲಿಯೇ ಭೋರ್ಗರೆಯ ತೊಡಗುತ್ತಾಳೆ. (ಮಿಲಿಟರಿ ಪರವಾನಿಗೆ ಪಡೆದೇ ಗೋಮುಖಕ್ಕೆ ಹೋಗಬೇಕು. ಅತೀ ಸಾಹಸದ ಚಾರಣದ ಸ್ಥಳವಿದು. ಅಲ್ಲಿನ ಗೈಡ್ ಜೊತೆಗಿದ್ದರೆ ಇಡೀ ಒಂದು ದಿನ ಬೇಕು.
- ಗೋಮುಖಕ್ಕೆ ಹೋಗುವವರು ಪೂರ್ಣ ಸ್ವಸ್ಥ ಹಾಗೂ ಸಾಹಸಿಗಳಾಗಿರಬೇಕು. ಯೋಗ್ಯ ಸಾಧನಗಳನ್ನು ತೆಗೆದುಕೊಂಡೇ ಹೋಗಬೇಕು. ಇದು ಅತ್ಯಂತ ಕಠಿಣ ದಾರಿ, ಗೈಡ್ ಇಲ್ಲದೇ ಹೋಗುವುದು ಕಷ್ಟವಾಗುತ್ತದೆ. ಇಲ್ಲಿ ದೊಡ್ಡ ದೊಡ್ಡ ಹಿಮ ಶಿಲಾಖಂಡಗಳು ಕಾಣಸಿಗುತ್ತವೆ. ಯಾತ್ರಿಕರ ನಕ್ಷೆ, ಉಣ್ಣೆಯ ಬಟ್ಟೆಗಳು, ಅಗತ್ಯ ಔಷಧಗಳು, ಧರ್ಮಶಾಲೆ ಯ ವಿವರಗಳು, ಈ ಅಂಶಗಳು ಯಾತ್ರಿಕರು ಗಮನದಲ್ಲಿಟ್ಟುಕೊಳ್ಳುವ ಅಂಶಗಳು.
ಹಿಮಾಲಯದ ನಾಲ್ಕು ಧಾಮಗಳು
- ೧. ಕೇದಾರನಾಥ,
- ೨. ಬದರಿನಾಥ,
- ೩. ಗಂಗೋತ್ರಿ ಮತ್ತು
- ೪. ಯಮುನೋತ್ರಿ.
- ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ನಾಲ್ಕು ಧಾಮಗಳು ಹಿಮಾಲಯ ಕೇವಲ ಹಿಮ ಶಿಖರಗಳಲ್ಲ. ಋಷಿಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಅಗ್ನಿಗಳ ಉಪಯೋಗದಿದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿವೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ, ಜಿಜ್ಞಾಸಿಗಳು, ಸಾಧಕರು, ಅತೀ ಕಠಿಣ ರಸ್ತೆ ಕ್ರಮಿಸುವಾಗ, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳ ನ್ನು, ಅನಾನುಕೂಲಗಳನ್ನು ಪರಿಗಣಿಸದೇ ಬರುತ್ತಾರೆ.
- ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸ್ಧಿವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶ ಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೂಡುಗೆಯಾಗಿ ಕೊಟ್ಟಿದ್ದಾರೆ. ಋಷಿಕೇಶದಿಂದ ಮೂರು ರಸ್ತೆಗಳು ಇವೆ. ಒಂದು ಗಂಗೋತ್ರಿ, ಇನ್ನೊಂದು ರಸ್ತೆ ಯಮುನೋತ್ರಿ, ಮತ್ತೊಂದು ಬದರಿನಾಥಕ್ಕೆ ಹಾಗೂ ಕೇದಾರನಾಥಕ್ಕೆ.
- ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದ ಮೂಲಕವೇ ಹೊರಡಬೇಕಾಗುತ್ತದೆ. ಹರಿದ್ವಾರಕ್ಕೆ ದೆಹಲಿಯಿಂದ ೬ ಗಂಟೆ ಪ್ರವಾಸ ಮಾಡಬೇಕು. ಹರಿ ಅಂದರೆ ಬದರಿನಾರಾಯಣ ಹಿಮಾಲಯದ ನಾಲ್ಕು ಧಾಮಗಳಿಗೆ ಇಲ್ಲಿಂದ ಯಾತ್ರೆ ಆರಂಭಿಸುವುದರಿಂದ ಇದಕ್ಕೆ ಹರಿದ್ವಾರವೆಂತಲೂ ಕರೆಯುತ್ತಾರೆ. ಇಲ್ಲಿ ಗಂಗೆ ಎಲ್ಲೆಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ.
ಋಷಿಕೇಶದಿಂದ ಬದರೀನಾಥದವರೆಗೆ
ಕೇದಾರನಾಥ ೩೨೦ಕಿ ಮೀ, ದೂರ ಇದೆ. ಯಮುನೋತ್ರಿ, ಗಂಗೋತ್ರಿ ೨೨೨ ಕಿ,ಮೀ, ಋಷಿಕೇಶದಿಂದ ಹೊರಡುವ ಮೂರು ರಸ್ತೆಗಳಲ್ಲಿ ಒಂದು ಗಂಗೋತ್ರಿ , ಯಮುನೋ ತ್ರಿ, ಬದರೀನಾಥಕ್ಕೆ ಹೊರಡುತ್ತವೆ.
ಹರಿದ್ವಾರ
- ಹರಿದ್ವಾರಕ್ಕೆ ಹಿಂದೆ 'ಮಾಯಾಪುರಿ' ಎಂಬ ಹೆಸರಿತ್ತ್ತು. ಇಲ್ಲಿ ಹರ ಕಿ ಪೌಡಿ ಮುಖ್ಯ ಸ್ಥಳ. ಪ್ರತಿನಿತ್ಯ ಸಂಜೆ ಗಂಗಾಮಾತೆಗೆ ಆರತಿ ನೋಡುವುದಕ್ಕೆ, ಎರಡು ಕಣ್ಣು ಸಾಲದು. ಹರ ಕಿ ಪೌಡಿಯ ಎರಡು ಕಡೆ ಪರ್ವತಗಳ ಶಿಖರಗಳಲ್ಲಿ ದೇವಿಯರಿದ್ದಾರೆ. ಒಂದು ಕಡೆ ಮಾನಸದೇವಿ ಪರ್ವತ, ಇನ್ನೊಂದು ಕಡೆ ಚಂಡಿದೇವಿ ಪರ್ವತ.
- ಇಲ್ಲಿ ಮಂದಿರಗಳಿಗೆ ಹೋಗಲು ಟ್ರಾಲಿಯ ಸೌಲಭ್ಯವಿದೆ. ಶುಂಭ-ನಿಶುಂಭ ರಂತಹ ಅಸುರರಿಗೆ ಮುಕ್ತಿ ನೀಡಲು ದೇವಿಯರು ಇಲ್ಲಿ ಅವತಾರವೆತ್ತಿದರು. ದಾರಿಯಲ್ಲಿ ಮಾತೆ ಕಾಳಿ ದೇವಿಯ ಪ್ರಾಚೀನ ಮಂದಿರ- ಇಲ್ಲಿ ತಂತ್ರಸಾಧನೆಗಾಗಿ ಹುಲಿಯ ಬುರುಡೆ ಈಗಲೂ ಇದೆ.
ಸ್ಕಂಧ ಪುರಾಣದ ಹಿನ್ನೆಲೆಯಲ್ಲಿ ಗಂಗೆ
ಗಂಗಾಮಾತೆ ಶಿವನ ಪತ್ನಿ. ತನ್ನ ಜಟೆಯಲ್ಲಿ ಶಿವ ಆಕೆಗೆ ಸ್ಥಾನ ನೀಡಿದ್ದಾನೆ. ಆಕೆಯನ್ನು ಭೂಮಿಗೆ ತರಲು ದೇವತೆಗಳು ಉಪಾಯ ಹೂಡಿದರು ಎನ್ನುತ್ತಾರೆ ಸ್ಥಳೀಯರು. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ- ಗಂಗೆಯನ್ನು ಭೂಮಿಗೆ ತಂದ ಶ್ರೇಯಸ್ಸು ಭಗೀರಥ ರಾಜನಿಗೆ ಸಲ್ಲುತ್ತದೆ. ಇಕ್ವಾಕು ವಂಶದ ಸಗರರಾಜನೆಂಬ ಚಕ್ರವರ್ತಿ ಅಶ್ವಮೇಧವೆಂಬ ಯಜ್ಙ ಕ್ಕಾಗಿ ಕುದುರೆಯನ್ನು ಬಿಟ್ಟಿದ್ದ. ಅಶ್ವಮೇಧ ಯಜ್ಞ ಮುಗಿದರೆ, ಇಂದ್ರ ತನ್ನ ಪದವಿ ಹೋಗುವ ಭಯದಿಂದ ಅದನ್ನು ಕದ್ದು ಕಪಿಲ ಮುನಿ ಆಶ್ರಮದಲ್ಲಿ ಕಟ್ಟಿದ್ದ. (ಪಶ್ಚಿಮ ಬಂಗಾಳ ದಲ್ಲಿನ -ಸಮುದ್ರ ತೀರ) ಕುದುರೆಗಾಗಿ ಅಲ್ಲಿಗೆ ಬಂದ ಸಗರರಾಜ ೬೦೦೦೦ ಪುತ್ರರು, ಧ್ಯಾನಸ್ಥರಾಗಿದ್ದ ಕಪಿಲ ಮಹರ್ಷಿಗಳನ್ನು ಅವಹೇಳನ ಮಾಡತೊಡಗಿದರು. ಅದರಿಂದ ಕುಪಿತರಾದ ಮುನಿಗಳು ಅವರನ್ನು ಭಸ್ಮಗೊಳಿಸಿದರು. ಅವರಿಗೆ ಮುಕ್ತಿ ಸಿಗದೆ ಮೃತ್ಯುಲೋಕದಲ್ಲಿಯೇ ಅಲೆಯತೊಡಗಿದರು. ಈ ಸಂಧರ್ಭದಲ್ಲಿ ಭಗೀರಥ ಗಂಗೆಯನ್ನು ಭೂಮಿಗೆ ತಂದು ಸಗರರಾಜನ ೬೦೦೦೦ ಪುತ್ರರಿಗೆ ಶಾಪ ವಿಮೋಚನೆ ಮಾಡಿದನೆಂದು ಹೇಳಲಾಗಿದೆ..
ಕೇದಾರನಾಥ
- ಹಿಮಾಲಯದ ಕೇದಾರನಾಥವು ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ. ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ. ಚರಿತ್ರೆಯ ಪ್ರಕಾರ ೮ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ. ಕೇದಾರನಾಥ ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು ೮ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು.
- ಚತುರ್ಧಾಮ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರು, ಶ್ರೀಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಇಲ್ಲಿನ ಕೇದಾರನಾಥ ಲಿಂಗವು ೮ ಅಡಿ ಎತ್ತರ, ೫ ಅಡಿ ಸುತ್ತಳತೆಯನ್ನು ಹೊಂದಿದೆ. ಇಲ್ಲಿ ಬೆಳಿಗ್ಗೆ ನಿರ್ವಾಣ ಪೂಜೆ ಮತ್ತು ರಾತ್ರಿ ಶೃಂಗಾರ ಪೂಜೆ ನಡೆಯುವುದೊಂದು ವಿಶೇಷ.
- ಇದರ ಒಂದು ಭಾಗಕ್ಕೆ ಜಲ ಪುಷ್ಪಾದಿಗಳ ಅರ್ಚನೆಯಾದರೆ, ಇನ್ನೊಂದು ಭಾಗಕ್ಕೆ ಘೃತ ಲೇಪನವಾಗುತ್ತದೆ. ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ಈ ದೇವಸ್ಥಾನ ದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳ್ಲಲೊಂದಾದ ಕೇದಾರರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ. ಕೇದಾರನಾಥ ಗರ್ಭಗುಡಿಯ ತೆಗೆಯುವುದು ಶಿವರಾತ್ರಿಯಂದು ನಿರ್ಧಾರವಾಗುತ್ತದೆ.
ಬದರಿನಾಥ ಕ್ಷೇತ್ರ
- ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರವೇ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಸಾಮಾನ್ಯವಾಗಿ ಜೂನ್ ನಿಂದ - ಸೆಪ್ಟೆಂಬರ್ ವರೆಗೆ ಬದರಿನಾಥ ಕ್ಷೇತ್ರವನ್ನು ದರ್ಶಿಸಲು ಉತ್ತಮ ಕಾಲ.
- ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆಗಳನ್ನು ಸಲ್ಲಿಸುವನೆಂದು ಒಂದು ನಂಬಿಕೆ.
ಇಲ್ಲಿನ ಐದು ವೈಶಿಷ್ಟ್ಯಗಳೆಂದರೆ-
- ವಿಶಾಲ ಬದರಿ : ಬದರಿನಾಥ ಕ್ಷೇತ್ರ
- ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿ ದರ್ಶನವೀಯುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು.
- ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು. ಆದ್ದರಿಂದಲೇ ಇದು ಭವಿಷ್ಯ ಬದರಿ.
- ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು.
- ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.
ಆಕರ ಗ್ರಂಥ
- ಪುರಾಣನಾಮ ಚೂಡಾಮಣಿ -ಬೆನಗಲ್ ರಾಮರಾವ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...