ತಾಪ್ತಿ ನದಿ ಮಧ್ಯ ಭಾರತದ ಒಂದು ನದಿ. ಇದರ ಮೂಲ ಹೆಸರು ತಾಪಿ ನದಿ ಎಂದು. ಭಾರತ ಜಂಬೂದ್ವೀಪದ ಮುಖ್ಯ ನದಿಗಳಲ್ಲಿ ಒಂದಾದ ತಾಪ್ತಿ ನದಿಯ ಉದ್ದ ಸುಮಾರು ೭೨೪ ಕಿ.ಮೀ.ಗಳು. ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಮೂರು ದೊಡ್ಡ ನದಿಗಳಲ್ಲಿ ತಾಪ್ತಿ ಒಂದು. ನರ್ಮದಾ ನದಿ ಮತ್ತು ಮಾಹಿ ನದಿಗಳು ಉಳಿದೆರಡು. ತಾಪ್ತಿ ನದಿಯು ಮಧ್ಯ ಪ್ರದೇಶ ರಾಜ್ಯದ ದಕ್ಷಿಣ ಭಾಗದಲ್ಲಿ ಸಾತ್ಪುರ ಪರ್ವತಗಳಲ್ಲಿ ಉಗಮಿಸುವುದು. ತಾಪ್ತಿ ನದಿಯ ಜಲಾನಯನ ಪ್ರದೇಶಗಳು ಮಧ್ಯ ಪ್ರದೇಶದ ನಿಮಾರ್ ಪ್ರದೇಶ, ಮಹಾರಾಷ್ಟ್ರದ ವಿದರ್ಭ ಮತ್ತು ಕಾಂದೇಶ್ ಹಾಗೂ ದಕ್ಷಿಣ ಗುಜರಾತ್. ತಾಪ್ತಿ ನದಿಯು ಸೂರತ್ ಬಳಿ ಖಂಭಾಟ್ ಕೊಲ್ಲಿಯನ್ನು ಸೇರುತ್ತದೆ. ಪೂರ್ಣಾ, ಗಿರ್ನಾ ಮತ್ತು ಪನ್ಜಾರಾ ನದಿಗಳು ತಾಪ್ತಿ ನದಿಯ ಮುಖ್ಯ ಉಪನದಿಗಳು. ತಾಪ್ತಿ ನದಿಗೆ ಅಡ್ಡಲಾಗಿ ಮಹಾರಾಷ್ಟ್ರದ ಜಳಗಾಂವ್ ಬಳಿ ಹಾತ್ನೂರ್ ಆಣೆ ಮತ್ತು ಗುಜರಾತ್‌ನ ಸೋನ್‌ಗಢದ ಬಳಿ ಉಕಾಯ್ ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ.
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ
ಶನಿವಾರ, ಜುಲೈ 01, 2017
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.