fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಇದೇ ನಾಡು ಇದೇ ಭಾಷೆ...

ಕೃಪೆ - ಚಿ. ಉದಯಶಂಕರ್ 
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ ||ಪ||

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿ ವಾಣಿಯ ನಾಡು

ಚಾಮುಂಡಿ ರಕ್ಷೆಯು ನಮಗೆ ಗೊಮಟೇಶ ಕಾವಲು ಇಲ್ಲಿ
ಶ್ರಿಂಗೇರಿ ಶಾರದೆ ವೀಣೆ ರಸ ತುಂಗೆ ಆಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು

ಏಳೇಳು ಜನ್ಮವೆ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೆ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ


ಕಾವಿ

ಮನದ ಕಾವು ಆರಿದ ಮೇಲೆ ತೊಡುವ ಬಟ್ಟೆ
ಕಾಷಾಯ ವೇಷ
ಕೋವಿ ಯುದ್ಧಕ್ಕೆ; ಕಾವಿ ಶಾಂತಿಗೆ
ತ್ಯಾಗದ ಪ್ರತೀಕವಿದು
ಯಾವ ಕಾವಿಯೊಳಗೆ ಯಾವ ಹಾವಿದೆಯೊ ಬಲ್ಲವರಾರು?
ಕಾವಿ ತೊಟ್ಟವರೆಲ್ಲ ತ್ಯಾಗಿಗಳಲ್ಲ, ನಿತ್ಯಾನಂದ ಸ್ವಾಮಿಯೂ ಆಗಿರಬಹುದು
ಕಾವಿ ತೊಟ್ಟರೇನು ಬಂತು, ಮನದ ಕಾವು ತ್ಯಜಿಸದಿದ್ದರೆ?
ಭಾರತದಲ್ಲಿ ಇದಕ್ಕೆ ಒಳ್ಳೆ ಮಾರ್ಕೆಟ್ ಇದೆ
ಸರ್ವವನ್ನೂ ತ್ಯಜಿಸಿದವನು ಧರಿಸುವಂಥದ್ದು. ಆದರೆ ಇದನ್ನು ತೊಟ್ಟ ಮೇಲೆ ಎಲ್ಲವೂ ಅಂಟಿಕೊಳ್ಳುತ್ತದೆ
ವೋಟ್ ಬ್ಯಾಂಕ್ ಶೇಖರಣಾ ಮಾಧ್ಯಮ
ಕಾವಿ ಕಂಡಲ್ಲಿ ಅಡ್ಡಬೀಳುವುದರಿಂದ ರಾಜಕಾರಣಿಗಂತೂ ಲಾಭವಿದೆ
ಉದರ ನಿಮಿತ್ತ ಕಾವಿ ತೊಟ್ಟವರು ಬೇರೆಯವರನ್ನು ಬಾವಿಗೆ ಬೀಳಿಸುತ್ತಾರೆ
ಅಧ್ಯಾತ್ಮದತ್ತ ಹೊರಳಿದವರ ಗಣವೇಷ
ಇದು ತುಂಬ ಸೋವಿ
ಕಾಮಿಗಳು ಅವಿತುಕೊಳ್ಳುವ ಸುರಕ್ಷಿತ ಅಡಗು ತಾಣ

-ವಿಶ್ವನಾಥ ಸುಂಕಸಾಳ

ವರುಷದ ಕಂದಮ್ಮ

ಮನೆಯ ಬೆಳಗಿದ ದೀಪಕೆ

ಮನವ ತಣಿಸುವ ಮೂರ್ತಿಗೆ
ನಮ್ಮ ಮನೆಯ ಪುಟ್ಟ ರತಿಗೆ
ವರುಷವಾಯಿತು ಇಂದಿಗೆ

ತನುವ ಕುಣಿಸಿ ಅತ್ತು ಕಾಡಿಸಿ
ನಮ್ಮ ಮಣಿಸಿ ಮುತ್ತು ಪೋಣಿಸಿ
ಸರವ ಧರಿಸಿದ ಮುಗುಧೆಗೆ
ವರುಷವಾಯಿತು ಇಂದಿಗೆ

ಮಿಂಚಿನಂತೆ ಹೊಳೆಯುತಿರುವ
ಸಂಚಿನಲ್ಲೇ ನಮ್ಮ ಸೆಳೆವ
ನಮ್ಮ ಮನೆಯ ಮಿಂಚುಳ್ಳಿಗೆ
ವರುಷವಾಯಿತು ಇಂದಿಗೆ

ಹರುಷ ಸುರಿಸುವ ಕಂದಗೆ
ಹೊಣೆಯ ಕಲಿಸಿದ ಬಾಲೆಗೆ
ನಮ್ಮ ಮನೆಯ ಚಾರುಲತೆಗೆ
ವರುಷವಾಯಿತು ಇಂದಿಗೆ

ನಮ್ಮ ಬಾಳಿನ ಗ್ರಂಥವ
ತನ್ನ ಹೆಸರಲಿ ಬರೆಯುತಿರುವ
ಈ ಪುಟ್ಟ ಕೃತಿಕರ್ತೃವಿಗೆ
ವರುಷವಾಯಿತು ಇಂದಿಗೆ

..- ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆಲ್‌ವೇರ್, ಕೊಲೆರಾಡೊ, ಯು.ಎಸ್.ಏ.


((ನಮ್ಮ ಮಗಳು ಸೌದಾಮಿನಿಗೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಬರೆದ ಕವನ))

ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಮುನ್ನ ಇದನ್ನು ಓದಿ

BY TEAM SAMADHAAN

ನಿಮಗೆ ತಿಳಿದಿರುವ ಹಾಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣದೆ ದರ್ಭಾರ್!!! ಯಾರು ನೋಡಿದರು ಅವರ ಬಳಿ ಇರುತ್ತದೆ ಸಾಮಾಜಿಕ ಜಾಲತಾಣದ ಖಾತೆ. ಹಾಗೆಯೆ ನಾವು ಹಲವಾರು ವಿಷಯವನ್ನು ನಾವು ತಿಳಿಯಬೇಕಾದರೆ ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾತ್ರ. ಹೌದು ಈ ಮಾತು ಅಕ್ಷರಶಃ ಸತ್ಯ ಅಲ್ಲವೇ.


ಇಂತಹ ಸಾಮಾಜಿಕ ಜಾಲತಾಣ ಬಳಕೆ ಮಾಡುವ ಸಮಯದಲ್ಲಿ ಕೆಲವೊಂದು ವಿಷಯವನ್ನು ನೀವು ಗಂಭಿರವಾಗಿ ಪರಿಗಣನೆ ಮಾಡಬೇಕಾಗುತ್ತದೆ. ನಾವು ಯಾವುದೇ ಸಾಮಾಜಿಕ ಜಾಲತಾಣ ಬಳಕೆ ಮಾಡುವ ಕೆಲವು ವಿಷಯವನ್ನು ತಿಳಿದು ಬಳಕೆ ಮಾಡಬೇಕಾಗುತ್ತದೆ. ಹಾಗಾದರೆ ನಾವು ಈ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಏನೆಲ್ಲಾ ಗಮನಿಸಬೇಕು . ಇಲ್ಲವಾದಲ್ಲಿ ಏನೇಲ್ಲ ಸಮಸ್ಯೆ ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ನೋಡೋಣ ಬನ್ನಿ.
ಮೋಸದ ಉದ್ದೇಶದ ಸಂಪರ್ಕ :-
ನಿಮಗೆ ತಿಳಿಯದ ಯಾವುದೇ ಅಪರಿಚಿತ ವ್ಯಕ್ತಿಗೆ ಸಂದೇಶ ಕಳುಯಿಸುವುದು , ರಿಕ್ವೆಸ್ಟ್ ಕಳುಹಿಸುವುದು ಮಾಡುವುದು ಅಧಿಕವಾದಲ್ಲಿ ಫೇಸ್ ಬುಕ್ ಸಂಸ್ಥೆ ಗಮನಿಸಿದಲ್ಲಿ ಅದನ್ನು ನಿಮ್ಮ ಫೇಸ್ ಬುಕ್ ಖಾತೆಯು ರದ್ದು ಆಗಲಿದೆ.

ಮಾದಕ ವಸ್ತುಗಳು :-
ಫೇಸ್‌ಬುಕ್‌ ಮೂಲಕ ಮಾದಕ ವಸ್ತುಗಳ ಮಾರಾಟ ಅಥವಾ ಖರೀದಿಯಾಗುತ್ತಿದ್ದ ಸುದ್ದಿಯ ನಂತರ ಫೇಸ್‌ಬುಕ್ ಎಚ್ಚೆತ್ತಿದೆ. ಒಂದು ವೇಳೆ ಅಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಅಂತಹ ಫೇಸ್ ಬುಕ್ ಸಹ ಡಿಲಿಟ್ ಆಗಲಿದೆ .


ಫೋಟೋ ಗಳ ಪೋಸ್ಟ್ ಮಾಡುವುದು : –
ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಯ ಫೋಟೋ ಅಥವಾ ವಿಡಿಯೋಗಳನ್ನು ಪೋಸ್ಟ್ ಮಾಡಿದರೆ , ಅಥವಾ ಅದಕ್ಕೆ ಸಂಬದಿಸಿದ ಮಾಹಿತಿ ಪೋಸ್ಟ್ ಮಾಡಿದರೆ ಅಂತಹ ವ್ಯಕ್ತಿಯ ಖಾತೆಯನ್ನು ಡಿಲಿಟ್ ಮಾಡಲಾಗುವುದು ಜೊತಗೆ ಕಾನೂನು ಪ್ರಕಾರ ಶಿಸ್ಕ್ಷೆಯನ್ನು ಸಹ ವಿಧಿಸಲಾಗುವುದು.

ಭಯೋತ್ಪಾದನೆ :-
ಭಯೋತ್ಪಾದನೆ ಅಂಶಗಳನ್ನು ಹೊಂದಿರುವ ಚಿತ್ರಗಳು, ವಿಡಯೋಗಳನ್ನು ಪೋಸ್ಟ್ ಅಥವಾ ಶೇರ್ ಮಾಡುವ ಫೇಸ್‌ಬುಕ್ ಖಾತೆಗಳನ್ನು ಫೇಸ್‌ಬುಕ್ ಸ್ಥಗಿತಗೊಳಿಸಲಿದೆ ಎಂಬುದನ್ನು ತಿಳಿದಿರಿ. ಇಲ್ಲಿಯೂ ಸಹ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ . ಇಷ್ಟು ಮಾತ್ರವಲ್ಲದೆ ಯಾವುದೇ ವ್ಯಕತ್ಯನ್ನು ಇಲ್ಲಿ ನೀವು ಪೋಸ್ಟ್ ಮಾಡಿದಾಗ ಅದು ಯಾರನ್ನು ಅಪಹಾಸ್ಯ ಮಾಡದೇ ಇರಬೇಕು . ಖಂಡಿತ ಅಂತಹ ಸಮಯದಲ್ಲಿ ನೀವು ಭಾರಿ ದೊಡ್ಡ ಸಮಸ್ಯೆ ಎದ್ರಿಸುವುದು ತುಂಬಾನೆ ಕಷ್ಟಕರವಾದದ್ದು.

ಇಷ್ಟು ಮಾತ್ರವಲ್ಲದೆ ನಿಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾದರೆ ಅದನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನೂ ಅರಿತಿರಿ. ಜಾಲತಾಣಗಳಲ್ಲಿ ಜಗಳವಾಡುವಂತಹ ಪರಿಸ್ಥಿತಿ ಎದುರಾದರೆ ಈ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವಿದ್ದರೆ ಒಳಿತು. ಏಕೆಂದರೆ ಒಬ್ಬ ವ್ಯಕ್ತಿ ತಮಾಷೆಗೆ ಹಾಕಿದ ಪೋಸ್ಟ್ ಇನ್ಯರೋದೋ ಜೀವಕ್ಕೆ ಕುತ್ತು ತರಬಹುದು . ಅದ್ದರಿಂದ ಈ ಮೇಲಿನ ಯಾವುದೇ ವಿಷಯದಲ್ಲಿ ಭಾಗಿ ಆಗುವ ಮುನ್ನ ಖಂಡಿತ ನೀವು ಎಚ್ಚರಿಕೆ ಇರುವುದು ಉಚಿತ ಎನ್ನುವುದೇ ನಮ್ಮ ಲೇಖನ ಉದ್ದೇಶ.

ಬದುಕಿನಲ್ಲಿ ಮೂರ(3)ಕ್ಷರದ ಮಹತ್ವ

ಮಗು
*"ಜನನ"* ಎ೦ಬ ಮೂರಕ್ಷರದಿ೦ದ ಬಾಹ್ಯ
*"ಪ್ರಪ೦ಚ"* ಎ೦ಬ ಮೂರಕ್ಷರಕ್ಕೆ ಕಾಲಿಡುತ್ತಾನೆ.
..
ಅಲ್ಲಿ ತಾಯಿಯ
*"ಅರೈಕೆ"* ಎ೦ಬ ಮೂರಕ್ಷರದಿ೦ದ ಆರು ವರ್ಷಗಳನ್ನು ಕಳೆದು
*"ಕಲಿಕೆ"* ಎ೦ಬ ಮೂರಕ್ಷರ ಕಲಿಯಲು ಶಾಲೆಯ ಮೆಟ್ಟಿಲೇರುತ್ತಾನೆ.
..
ಅಲ್ಲಿ
*"ಶಿಕ್ಷಕ"* ಮೂರಕ್ಷರದವ
*"ಬೋಧನೆ"* ಎ೦ಬ ಮೂರಕ್ಷರ ಮಾಡಿ
*"ವಿನಯ"* ಎ೦ಬ ಮೂರಕ್ಷರ ಕಲಿಸುತ್ತಾನೆ,
..
ನ೦ತರ
*"ವ್ಯಾಸ೦ಗ"* ಎ೦ಬ ಮೂರಕ್ಷರವನ್ನು ಮು೦ದುವರೆಸಿ
*"ಸಾಧನೆ"* ಎ೦ಬ ಮೂರಕ್ಷರವನ್ನು ಮನದಲ್ಲಿಟ್ಟುಕೊ೦ಡು,
*"ಶೋಧನೆ"* ಎ೦ಬ ಮೂರಕ್ಷರದಿ೦ದ
*"ಸಹನೆ"* ಎ೦ಬ ಮೂರಕ್ಷರದ ಸಹಯೋಗದೊ೦ದಿಗೆ
*"ನೌಕರಿ"* ಎ೦ಬ ಮೂರಕ್ಷರವನ್ನು ತನ್ನ ಅದೃಷ್ಟದಿ೦ದ ಪಡೆಯುತ್ತಾನೆ.
..
ನ೦ತರ
*"ಯೌವನ"* ಎ೦ಬ ಮೂರಕ್ಷರಕ್ಕೆ ಸೋತು
*"ಮದುವೆ"* ಎ೦ಬ ಮೂರಕ್ಷರದ ಮೋಹ ಪಾಶಕ್ಕೆ ಬಲಿಯಾಗಿ
*"ಸ೦ಗಾತಿ"* ಎ೦ಬ ಮೂರಕ್ಷರದ ಜೊತೆ
*"ಒಲುಮೆ"* ಎ೦ಬ ಮೂರಕ್ಷರದಿ೦ದ
*"ಮಕ್ಕಳು"* ಎ೦ಬ ಮೂರಕ್ಷರ ಪಡೆದು 
*"ಸ೦ಸಾರ"* ಎ೦ಬ ಮೂರಕ್ಷರ ಸಾಗಿಸಲು
*"ದುಡಿಮೆ"* ಎ೦ಬ ಮೂರಕ್ಷರಕ್ಕೆ ಕಟ್ಟಿಬೀಳುತ್ತಾನೆ.
..
ನ೦ತರ
*"ಜೀವನ"* ಎ೦ಬ ಮೂರಕ್ಷರದ ಪಯಣ ಸಾಗುತ್ತಾ ಸಾಗುತ್ತಾ
*"ವೃಧ್ಯಾಪ್ಯ"* ಎ೦ಬ ಮೂರಕ್ಷರವು ಆವರಿಸಿದಾಗ
*"ಖಾಯಿಲೆ"* ಎ೦ಬ ಮೂರಕ್ಷರದಿ೦ದ
*"ಆರೋಗ್ಯ"* ಎ೦ಬ ಮೂರಕ್ಷರ ಕು೦ಠಿತವಾಗಿ
*"ನೆಮ್ಮದಿ"* ಎ೦ಬ ಮೂರಕ್ಷರವನ್ನು ಕಳೆದುಕೊ೦ಡು ಕೊನೆಗೊ೦ದು ದಿನ
*"ಮರಣ"* ಎ೦ಬ ಮೂರಕ್ಷರದಿ೦ದ ಮೋಕ್ಷಗೊಳ್ಳುತ್ತಾನೆ