ಮಗು
"ಜನನ" ಎ೦ಬ ಮೂರಕ್ಷರದಿ೦ದ ಬಾಹ್ಯ
"ಪ್ರಪ೦ಚ" ಎ೦ಬ ಮೂರಕ್ಷರಕ್ಕೆ ಕಾಲಿಡುತ್ತಾನೆ.
..
ಅಲ್ಲಿ ತಾಯಿಯ
..
ಅಲ್ಲಿ ತಾಯಿಯ
"ಅರೈಕೆ" ಎ೦ಬ ಮೂರಕ್ಷರದಿ೦ದ ಆರು ವರ್ಷಗಳನ್ನು ಕಳೆದು
"ಕಲಿಕೆ" ಎ೦ಬ ಮೂರಕ್ಷರ ಕಲಿಯಲು ಶಾಲೆಯ ಮೆಟ್ಟಿಲೇರುತ್ತಾನೆ.
..
ಅಲ್ಲಿ
ಅಲ್ಲಿ
"ಶಿಕ್ಷಕ" ಮೂರಕ್ಷರದವ
"ಬೋಧನೆ" ಎ೦ಬ ಮೂರಕ್ಷರ ಮಾಡಿ
"ವಿನಯ" ಎ೦ಬ ಮೂರಕ್ಷರ ಕಲಿಸುತ್ತಾನೆ,
..
ನ೦ತರ
"ವ್ಯಾಸ೦ಗ" ಎ೦ಬ ಮೂರಕ್ಷರವನ್ನು ಮು೦ದುವರೆಸಿ
"ಸಾಧನೆ" ಎ೦ಬ ಮೂರಕ್ಷರವನ್ನು ಮನದಲ್ಲಿಟ್ಟುಕೊ೦ಡು,
"ಶೋಧನೆ" ಎ೦ಬ ಮೂರಕ್ಷರದಿ೦ದ
"ಸಹನೆ" ಎ೦ಬ ಮೂರಕ್ಷರದ ಸಹಯೋಗದೊ೦ದಿಗೆ
"ನೌಕರಿ" ಎ೦ಬ ಮೂರಕ್ಷರವನ್ನು ತನ್ನ ಅದೃಷ್ಟದಿ೦ದ ಪಡೆಯುತ್ತಾನೆ.
..
ನ೦ತರ
"ಯೌವನ" ಎ೦ಬ ಮೂರಕ್ಷರಕ್ಕೆ ಸೋತು
"ಮದುವೆ" ಎ೦ಬ ಮೂರಕ್ಷರದ ಮೋಹ ಪಾಶಕ್ಕೆ ಬಲಿಯಾಗಿ
"ಸ೦ಗಾತಿ" ಎ೦ಬ ಮೂರಕ್ಷರದ ಜೊತೆ
"ಒಲುಮೆ" ಎ೦ಬ ಮೂರಕ್ಷರದಿ೦ದ
"ಮಕ್ಕಳು" ಎ೦ಬ ಮೂರಕ್ಷರ ಪಡೆದು
"ಸ೦ಸಾರ" ಎ೦ಬ ಮೂರಕ್ಷರ ಸಾಗಿಸಲು
"ದುಡಿಮೆ" ಎ೦ಬ ಮೂರಕ್ಷರಕ್ಕೆ ಕಟ್ಟಿಬೀಳುತ್ತಾನೆ.
..
ನ೦ತರ
"ಜೀವನ" ಎ೦ಬ ಮೂರಕ್ಷರದ ಪಯಣ ಸಾಗುತ್ತಾ ಸಾಗುತ್ತಾ
"ವೃಧ್ಯಾಪ್ಯ" ಎ೦ಬ ಮೂರಕ್ಷರವು ಆವರಿಸಿದಾಗ
"ಖಾಯಿಲೆ" ಎ೦ಬ ಮೂರಕ್ಷರದಿ೦ದ
"ಆರೋಗ್ಯ" ಎ೦ಬ ಮೂರಕ್ಷರ ಕು೦ಠಿತವಾಗಿ
"ನೆಮ್ಮದಿ" ಎ೦ಬ ಮೂರಕ್ಷರವನ್ನು ಕಳೆದುಕೊ೦ಡು ಕೊನೆಗೊ೦ದು ದಿನ
"ಮರಣ" ಎ೦ಬ ಮೂರಕ್ಷರದಿ೦ದ ಮೋಕ್ಷಗೊಳ್ಳುತ್ತಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.