ಈಗೀಗ ಸತ್ವವಿಲ್ಲ ಅಮ್ಮನ ನಗುವಲ್ಲಿ..
ಆದರೂ ಅಮ್ಮ ನಗುತ್ತಾಳೆ..
ಅಮ್ಮ ಅಮಾಯಕಳೇ?
ಅಮ್ಮ ಅಸಹಾಯಕಳೇ?
ಪ್ರಶ್ನೆಯಾಗಿ ನನ್ನನು ಕಾಡಿದವಳು..
ಅಮ್ಮ ಅಮಾಯಕಳೂ ಅಲ್ಲ
ಅಮ್ಮ ಅಸಹಾಯಕಳೂ ಅಲ್ಲ
ಅಮ್ಮನೆನ್ನುವ ತಲೆಬರಹಕ್ಕೆ
ಒಮ್ಮೊಮ್ಮೆ ಅಸಹಾಯಕಳು..
ಒಮ್ಮೊಮ್ಮೆ ಅಮಾಯಕಳು..
ಅಪ್ಪ ಸಿಟ್ಟು -ಸೆಡುವಿನಲ್ಲಿ
ಅಚ್ಚಪತ್ತಿದ ಬೆನ್ನ ಮೇಲಿನ ಗೆರೆಗಳು
ಮರಿಗಳು ರೆಕ್ಕೆ ಬಲಿತು
ಹಾರಿ ಹೋದಾಗಿನ
ನೋವಿನ ಗೆರೆಗಳು ಸುಕ್ಕುಗಳು
ಅಮ್ಮನೀಗ ವಯಸ್ಸಾದವಳು
ಅಪ್ಪನೋ ಆಗಲೇ ಪರಲೋಕ
ಒಂಟಿತನದ ಜೊತೆಯಾದವಳು..
ಗೂಡು ಬಿಟ್ಟ ಮರಿಗಳ
ನಿರೀಕ್ಷೆ ತುಂಬಿದ ಮಂಜಾದ ಕಣ್ಣಿನವಳು.
ಅಮ್ಮನಿಗೆಲ್ಲಿಂದ ಬಂತೋ
ಇಷ್ಟೊಂದು ಸಹನೆ...
ಬರದವರಿಗೂ ಕಾಯುವಷ್ಟು..
ಮೃಷ್ಟಾನ್ನದಲಿ ಮರೆತಿರುವವರಿಗೆ
ಕೈತುತ್ತಿಡುವ ಕನಸು ಕಾಣುವವಳು..
ಅಮ್ಮ ಎಂದರೆ ಭೂಮಿ..
ಎದೆಯೆಗೆದು ಬಗೆದು
ನೋವು ನೀಡಿದರೂ
ನೆಲೆ ನೀಡುವ ಅಂತರ್ಯಾಮಿ
ಕಟ್ಟಲಾಗದ ಬೆಲೆಯವಳು..
ಆದರೂ ಅಮ್ಮ ನಗುತ್ತಾಳೆ..
ಅಮ್ಮ ಅಮಾಯಕಳೇ?
ಅಮ್ಮ ಅಸಹಾಯಕಳೇ?
ಪ್ರಶ್ನೆಯಾಗಿ ನನ್ನನು ಕಾಡಿದವಳು..
ಅಮ್ಮ ಅಮಾಯಕಳೂ ಅಲ್ಲ
ಅಮ್ಮ ಅಸಹಾಯಕಳೂ ಅಲ್ಲ
ಅಮ್ಮನೆನ್ನುವ ತಲೆಬರಹಕ್ಕೆ
ಒಮ್ಮೊಮ್ಮೆ ಅಸಹಾಯಕಳು..
ಒಮ್ಮೊಮ್ಮೆ ಅಮಾಯಕಳು..
ಅಪ್ಪ ಸಿಟ್ಟು -ಸೆಡುವಿನಲ್ಲಿ
ಅಚ್ಚಪತ್ತಿದ ಬೆನ್ನ ಮೇಲಿನ ಗೆರೆಗಳು
ಮರಿಗಳು ರೆಕ್ಕೆ ಬಲಿತು
ಹಾರಿ ಹೋದಾಗಿನ
ನೋವಿನ ಗೆರೆಗಳು ಸುಕ್ಕುಗಳು
ಅಮ್ಮನೀಗ ವಯಸ್ಸಾದವಳು
ಅಪ್ಪನೋ ಆಗಲೇ ಪರಲೋಕ
ಒಂಟಿತನದ ಜೊತೆಯಾದವಳು..
ಗೂಡು ಬಿಟ್ಟ ಮರಿಗಳ
ನಿರೀಕ್ಷೆ ತುಂಬಿದ ಮಂಜಾದ ಕಣ್ಣಿನವಳು.
ಅಮ್ಮನಿಗೆಲ್ಲಿಂದ ಬಂತೋ
ಇಷ್ಟೊಂದು ಸಹನೆ...
ಬರದವರಿಗೂ ಕಾಯುವಷ್ಟು..
ಮೃಷ್ಟಾನ್ನದಲಿ ಮರೆತಿರುವವರಿಗೆ
ಕೈತುತ್ತಿಡುವ ಕನಸು ಕಾಣುವವಳು..
ಅಮ್ಮ ಎಂದರೆ ಭೂಮಿ..
ಎದೆಯೆಗೆದು ಬಗೆದು
ನೋವು ನೀಡಿದರೂ
ನೆಲೆ ನೀಡುವ ಅಂತರ್ಯಾಮಿ
ಕಟ್ಟಲಾಗದ ಬೆಲೆಯವಳು..
ಕೃಪೆ : ಕನ್ನಡ ಪ್ರ.ಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.