ಮನದ ಕಾವು ಆರಿದ ಮೇಲೆ ತೊಡುವ ಬಟ್ಟೆ
ಕಾಷಾಯ ವೇಷ
ಕೋವಿ ಯುದ್ಧಕ್ಕೆ;
ಕಾವಿ ಶಾಂತಿಗೆ
ತ್ಯಾಗದ ಪ್ರತೀಕವಿದು
ಯಾವ ಕಾವಿಯೊಳಗೆ ಯಾವ ಹಾವಿದೆಯೊ ಬಲ್ಲವರಾರು?
ಕಾವಿ ತೊಟ್ಟವರೆಲ್ಲ ತ್ಯಾಗಿಗಳಲ್ಲ, ನಿತ್ಯಾನಂದ ಸ್ವಾಮಿಯೂ ಆಗಿರಬಹುದು
ಕಾವಿ ತೊಟ್ಟರೇನು ಬಂತು, ಮನದ ಕಾವು ತ್ಯಜಿಸದಿದ್ದರೆ?
ಭಾರತದಲ್ಲಿ ಇದಕ್ಕೆ ಒಳ್ಳೆ ಮಾರ್ಕೆಟ್ ಇದೆ
ಸರ್ವವನ್ನೂ ತ್ಯಜಿಸಿದವನು ಧರಿಸುವಂಥದ್ದು. ಆದರೆ ಇದನ್ನು ತೊಟ್ಟ ಮೇಲೆ ಎಲ್ಲವೂ ಅಂಟಿಕೊಳ್ಳುತ್ತದೆ
ವೋಟ್ ಬ್ಯಾಂಕ್ನ ಶೇಖರಣಾ ಮಾಧ್ಯಮ
ಕಾವಿ ಕಂಡಲ್ಲಿ ಅಡ್ಡಬೀಳುವುದರಿಂದ ರಾಜಕಾರಣಿಗಂತೂ ಲಾಭವಿದೆ
ಉದರ ನಿಮಿತ್ತ ಕಾವಿ ತೊಟ್ಟವರು ಬೇರೆಯವರನ್ನು ಬಾವಿಗೆ ಬೀಳಿಸುತ್ತಾರೆ
ಅಧ್ಯಾತ್ಮದತ್ತ ಹೊರಳಿದವರ ಗಣವೇಷ
ಇದು ತುಂಬ ಸೋವಿ
ಕಾಮಿಗಳು ಅವಿತುಕೊಳ್ಳುವ ಸುರಕ್ಷಿತ ಅಡಗು ತಾಣ
-ವಿಶ್ವನಾಥ ಸುಂಕಸಾಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.