fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಜನವರಿ 15, 2019

ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಮುನ್ನ ಇದನ್ನು ಓದಿ

BY TEAM SAMADHAAN

ನಿಮಗೆ ತಿಳಿದಿರುವ ಹಾಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣದೆ ದರ್ಭಾರ್!!! ಯಾರು ನೋಡಿದರು ಅವರ ಬಳಿ ಇರುತ್ತದೆ ಸಾಮಾಜಿಕ ಜಾಲತಾಣದ ಖಾತೆ. ಹಾಗೆಯೆ ನಾವು ಹಲವಾರು ವಿಷಯವನ್ನು ನಾವು ತಿಳಿಯಬೇಕಾದರೆ ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾತ್ರ. ಹೌದು ಈ ಮಾತು ಅಕ್ಷರಶಃ ಸತ್ಯ ಅಲ್ಲವೇ.


ಇಂತಹ ಸಾಮಾಜಿಕ ಜಾಲತಾಣ ಬಳಕೆ ಮಾಡುವ ಸಮಯದಲ್ಲಿ ಕೆಲವೊಂದು ವಿಷಯವನ್ನು ನೀವು ಗಂಭಿರವಾಗಿ ಪರಿಗಣನೆ ಮಾಡಬೇಕಾಗುತ್ತದೆ. ನಾವು ಯಾವುದೇ ಸಾಮಾಜಿಕ ಜಾಲತಾಣ ಬಳಕೆ ಮಾಡುವ ಕೆಲವು ವಿಷಯವನ್ನು ತಿಳಿದು ಬಳಕೆ ಮಾಡಬೇಕಾಗುತ್ತದೆ. ಹಾಗಾದರೆ ನಾವು ಈ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಏನೆಲ್ಲಾ ಗಮನಿಸಬೇಕು . ಇಲ್ಲವಾದಲ್ಲಿ ಏನೇಲ್ಲ ಸಮಸ್ಯೆ ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ನೋಡೋಣ ಬನ್ನಿ.
ಮೋಸದ ಉದ್ದೇಶದ ಸಂಪರ್ಕ :-
ನಿಮಗೆ ತಿಳಿಯದ ಯಾವುದೇ ಅಪರಿಚಿತ ವ್ಯಕ್ತಿಗೆ ಸಂದೇಶ ಕಳುಯಿಸುವುದು , ರಿಕ್ವೆಸ್ಟ್ ಕಳುಹಿಸುವುದು ಮಾಡುವುದು ಅಧಿಕವಾದಲ್ಲಿ ಫೇಸ್ ಬುಕ್ ಸಂಸ್ಥೆ ಗಮನಿಸಿದಲ್ಲಿ ಅದನ್ನು ನಿಮ್ಮ ಫೇಸ್ ಬುಕ್ ಖಾತೆಯು ರದ್ದು ಆಗಲಿದೆ.

ಮಾದಕ ವಸ್ತುಗಳು :-
ಫೇಸ್‌ಬುಕ್‌ ಮೂಲಕ ಮಾದಕ ವಸ್ತುಗಳ ಮಾರಾಟ ಅಥವಾ ಖರೀದಿಯಾಗುತ್ತಿದ್ದ ಸುದ್ದಿಯ ನಂತರ ಫೇಸ್‌ಬುಕ್ ಎಚ್ಚೆತ್ತಿದೆ. ಒಂದು ವೇಳೆ ಅಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಅಂತಹ ಫೇಸ್ ಬುಕ್ ಸಹ ಡಿಲಿಟ್ ಆಗಲಿದೆ .


ಫೋಟೋ ಗಳ ಪೋಸ್ಟ್ ಮಾಡುವುದು : –
ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಯ ಫೋಟೋ ಅಥವಾ ವಿಡಿಯೋಗಳನ್ನು ಪೋಸ್ಟ್ ಮಾಡಿದರೆ , ಅಥವಾ ಅದಕ್ಕೆ ಸಂಬದಿಸಿದ ಮಾಹಿತಿ ಪೋಸ್ಟ್ ಮಾಡಿದರೆ ಅಂತಹ ವ್ಯಕ್ತಿಯ ಖಾತೆಯನ್ನು ಡಿಲಿಟ್ ಮಾಡಲಾಗುವುದು ಜೊತಗೆ ಕಾನೂನು ಪ್ರಕಾರ ಶಿಸ್ಕ್ಷೆಯನ್ನು ಸಹ ವಿಧಿಸಲಾಗುವುದು.

ಭಯೋತ್ಪಾದನೆ :-
ಭಯೋತ್ಪಾದನೆ ಅಂಶಗಳನ್ನು ಹೊಂದಿರುವ ಚಿತ್ರಗಳು, ವಿಡಯೋಗಳನ್ನು ಪೋಸ್ಟ್ ಅಥವಾ ಶೇರ್ ಮಾಡುವ ಫೇಸ್‌ಬುಕ್ ಖಾತೆಗಳನ್ನು ಫೇಸ್‌ಬುಕ್ ಸ್ಥಗಿತಗೊಳಿಸಲಿದೆ ಎಂಬುದನ್ನು ತಿಳಿದಿರಿ. ಇಲ್ಲಿಯೂ ಸಹ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ . ಇಷ್ಟು ಮಾತ್ರವಲ್ಲದೆ ಯಾವುದೇ ವ್ಯಕತ್ಯನ್ನು ಇಲ್ಲಿ ನೀವು ಪೋಸ್ಟ್ ಮಾಡಿದಾಗ ಅದು ಯಾರನ್ನು ಅಪಹಾಸ್ಯ ಮಾಡದೇ ಇರಬೇಕು . ಖಂಡಿತ ಅಂತಹ ಸಮಯದಲ್ಲಿ ನೀವು ಭಾರಿ ದೊಡ್ಡ ಸಮಸ್ಯೆ ಎದ್ರಿಸುವುದು ತುಂಬಾನೆ ಕಷ್ಟಕರವಾದದ್ದು.

ಇಷ್ಟು ಮಾತ್ರವಲ್ಲದೆ ನಿಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾದರೆ ಅದನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನೂ ಅರಿತಿರಿ. ಜಾಲತಾಣಗಳಲ್ಲಿ ಜಗಳವಾಡುವಂತಹ ಪರಿಸ್ಥಿತಿ ಎದುರಾದರೆ ಈ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವಿದ್ದರೆ ಒಳಿತು. ಏಕೆಂದರೆ ಒಬ್ಬ ವ್ಯಕ್ತಿ ತಮಾಷೆಗೆ ಹಾಕಿದ ಪೋಸ್ಟ್ ಇನ್ಯರೋದೋ ಜೀವಕ್ಕೆ ಕುತ್ತು ತರಬಹುದು . ಅದ್ದರಿಂದ ಈ ಮೇಲಿನ ಯಾವುದೇ ವಿಷಯದಲ್ಲಿ ಭಾಗಿ ಆಗುವ ಮುನ್ನ ಖಂಡಿತ ನೀವು ಎಚ್ಚರಿಕೆ ಇರುವುದು ಉಚಿತ ಎನ್ನುವುದೇ ನಮ್ಮ ಲೇಖನ ಉದ್ದೇಶ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು