ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಅ-ಅಃ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅ-ಅಃ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸೋಮವಾರ, ಜೂನ್ 15, 2026
ತಾಯಿ ಹೃದಯ (ಕ-ಕಂ)
ಸೋಮವಾರ, ಡಿಸೆಂಬರ್ 15, 2025
ಅ-ಅಃ & ಕ-ಕ್ಷ ದ ವರೆಗಿನ ಅಕ್ಷರ ರಾಮಾಯಣ (Great Ramayana)
ಅಯೋಧ್ಯೆಯರಸನು ದಶರಥನು
ಆತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು
ಇಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ
ಈಶ್ವರ ಕೃಪೆಯಲಿ ದೊರೆಯಿತು ಪಾಯಸವು
ಉದಾತ್ತ ದೊರೆಯಿತ್ತನು ಮೂವರು ಸತಿಯರಿಗೆ
ಊಟವ ಮಾಡಲು ಪಡೆದರು ನಾಲ್ವರನು
ಋಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು
ೠಕ್ಷ ಜನರನು ಶಿಕ್ಷಿಸಲು ರಾಮನನು
ಎಸುಳೆಗಳೊಂದಿಗೆ ದಂಡಕಾರಣ್ಯಕೆ
ಏಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು
ಒಮ್ಮೆಲೆ ಖರದೂಷಣರ ಬಡಿದು ಜನಕಪುರಕೆ
ಓಲಗದಲಿ ರಾಮನು ಶಿವಧನುವ ಮುರಿದು
ಔತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ
ಅಂಬಾ ಸೀತಾ ಸ್ವಯಂವರ ಸಂಭ್ರಮವು
ಅಃ ಅಃ ಶ್ರೀರಾಮ ಸೀತಾ ವಿವಾಹ ವೈಭವವು
ಕಟುವರ ಬೇಡಿದಳು ಕೈಕೇಯಿ ದಶರಥನ
ಖತಿಗೊಳ್ಳದೆ ಸೀತಾಲಕ್ಷ್ಮಣರೊಡನೆ
ಗಮನ ಕಾನನಕೆ ಉಟ್ಟು ನಾರುಮಡಿ
ಘಟಸಂಭವನಿತ್ತನು ಹರಿಚಾಪವನು
ಙ ಙ ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ
ಚಳಿಗಾಳಿ ಉರಿಬಿಸಿಲ ಸಹಿಸುತ ರಾಘವನು
ಛವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು
ಜಯಜಯ ರಾಘವ ಎನ್ನುತ ಭರತನು ಬಂದು
ಝಗಮಗಿಸುವ ರಾಮಪಾದುಕೆಗಳ ಪಡೆಯಲು
ಜ್ಞಾನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು
ಟವುಳಿಯಾಡದೆ ರಾಜ್ಯವ ನೀಯುವೆನು
ಠಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ
ಡನಿಯುಳಿಯಲು ಪಾದುಕೆಗಳ ಕೈಗೊಂಡು
ಢಕ್ಕೆಯ ಬಾರಿಸುವನೆ ಭರತನು
ಣ ಣ ಣಣ ಶಬ್ದವು ಎಲ್ಲೆಡೆ ಕೇಳಿಸಿತು
ತರುಣಿಯ ಮಾತನು ಲೆಕ್ಕಿಸಿ ರಾಘವ
ಥಳಥಳಿಪ ಜಿಂಕೆಯ ಹಿಂದೋಡಿದನು
ದನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು
ಧಣಿಗಳಾಶ್ರಮ ಸೇರುವ ಮೊದಲೆ
ನಲ್ಲೆಯನಪಹರಿಸಿದ ದಶಶಿರ ರಾವಣನು
ಪತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ
ಫಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ
ಬಲಿಷ್ಟ ಜಟಾಯುವಿಂದ ಉಪಕೃತ ರಾಘವ
ಭವಭಾದೆಯ ಕಳೆಯಲು ಹರಸಿದನು
ಮರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು
ಯಮಪುರಿಗಟ್ಟಿದ ರಾಮನು ವಾಲಿಯನು
ರಮಣೀಯ ವಾರ್ತೆ ತಂದನು ಮಾರುತಿಯು
ಲವಣಾಂಬುಧಿಗೈ ತಂದರು ವಾನರರು
ವತ್ಸಲನಾಶ್ರಯವಿತ್ತು ವಿಭೀಷಣನಿಗೆ
ಶರಧಿಯ ದಾಟಿ ಯುದ್ದವ ಹೂಡಿದರು
ಷಡ್ಗುಣ ಸಹಿತನು ರಾವಣನ ಕೊಂದು
ಸತಿಯೊಡಗೂಡಿ ಅಯೋಧ್ಯೆಗೆ ಹೊರಡಲು
ಹನುಮನು ಭರತಗೆ ವಿಷಯವ ತಿಳುಹಿದನು
ಳಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು
ಕ್ಷಮಾಪೂರ್ಣ ರಾಮಚಂದ್ರನು ಎಲ್ಲರನ್ನೂ ಕಾಪಾಡಲಿ...
(ಇಷ್ಟು ಸುಂದರವಾದ "ಅಕ್ಷರ ರಾಮಾಯಣ"ವನ್ನು ರಚಿಸಿದ ಕವಿ ಅಜ್ಞಾತ (ಸಂಗ್ರಹ ಲೇಖನ). ಕವಿಗೆ ಗೌರವ ಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹ)
ಆತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು
ಇಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ
ಈಶ್ವರ ಕೃಪೆಯಲಿ ದೊರೆಯಿತು ಪಾಯಸವು
ಉದಾತ್ತ ದೊರೆಯಿತ್ತನು ಮೂವರು ಸತಿಯರಿಗೆ
ಊಟವ ಮಾಡಲು ಪಡೆದರು ನಾಲ್ವರನು
ಋಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು
ೠಕ್ಷ ಜನರನು ಶಿಕ್ಷಿಸಲು ರಾಮನನು
ಎಸುಳೆಗಳೊಂದಿಗೆ ದಂಡಕಾರಣ್ಯಕೆ
ಏಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು
ಒಮ್ಮೆಲೆ ಖರದೂಷಣರ ಬಡಿದು ಜನಕಪುರಕೆ
ಓಲಗದಲಿ ರಾಮನು ಶಿವಧನುವ ಮುರಿದು
ಔತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ
ಅಂಬಾ ಸೀತಾ ಸ್ವಯಂವರ ಸಂಭ್ರಮವು
ಅಃ ಅಃ ಶ್ರೀರಾಮ ಸೀತಾ ವಿವಾಹ ವೈಭವವು
ಕಟುವರ ಬೇಡಿದಳು ಕೈಕೇಯಿ ದಶರಥನ
ಖತಿಗೊಳ್ಳದೆ ಸೀತಾಲಕ್ಷ್ಮಣರೊಡನೆ
ಗಮನ ಕಾನನಕೆ ಉಟ್ಟು ನಾರುಮಡಿ
ಘಟಸಂಭವನಿತ್ತನು ಹರಿಚಾಪವನು
ಙ ಙ ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ
ಚಳಿಗಾಳಿ ಉರಿಬಿಸಿಲ ಸಹಿಸುತ ರಾಘವನು
ಛವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು
ಜಯಜಯ ರಾಘವ ಎನ್ನುತ ಭರತನು ಬಂದು
ಝಗಮಗಿಸುವ ರಾಮಪಾದುಕೆಗಳ ಪಡೆಯಲು
ಜ್ಞಾನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು
ಟವುಳಿಯಾಡದೆ ರಾಜ್ಯವ ನೀಯುವೆನು
ಠಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ
ಡನಿಯುಳಿಯಲು ಪಾದುಕೆಗಳ ಕೈಗೊಂಡು
ಢಕ್ಕೆಯ ಬಾರಿಸುವನೆ ಭರತನು
ಣ ಣ ಣಣ ಶಬ್ದವು ಎಲ್ಲೆಡೆ ಕೇಳಿಸಿತು
ತರುಣಿಯ ಮಾತನು ಲೆಕ್ಕಿಸಿ ರಾಘವ
ಥಳಥಳಿಪ ಜಿಂಕೆಯ ಹಿಂದೋಡಿದನು
ದನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು
ಧಣಿಗಳಾಶ್ರಮ ಸೇರುವ ಮೊದಲೆ
ನಲ್ಲೆಯನಪಹರಿಸಿದ ದಶಶಿರ ರಾವಣನು
ಪತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ
ಫಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ
ಬಲಿಷ್ಟ ಜಟಾಯುವಿಂದ ಉಪಕೃತ ರಾಘವ
ಭವಭಾದೆಯ ಕಳೆಯಲು ಹರಸಿದನು
ಮರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು
ಯಮಪುರಿಗಟ್ಟಿದ ರಾಮನು ವಾಲಿಯನು
ರಮಣೀಯ ವಾರ್ತೆ ತಂದನು ಮಾರುತಿಯು
ಲವಣಾಂಬುಧಿಗೈ ತಂದರು ವಾನರರು
ವತ್ಸಲನಾಶ್ರಯವಿತ್ತು ವಿಭೀಷಣನಿಗೆ
ಶರಧಿಯ ದಾಟಿ ಯುದ್ದವ ಹೂಡಿದರು
ಷಡ್ಗುಣ ಸಹಿತನು ರಾವಣನ ಕೊಂದು
ಸತಿಯೊಡಗೂಡಿ ಅಯೋಧ್ಯೆಗೆ ಹೊರಡಲು
ಹನುಮನು ಭರತಗೆ ವಿಷಯವ ತಿಳುಹಿದನು
ಳಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು
ಕ್ಷಮಾಪೂರ್ಣ ರಾಮಚಂದ್ರನು ಎಲ್ಲರನ್ನೂ ಕಾಪಾಡಲಿ...
(ಇಷ್ಟು ಸುಂದರವಾದ "ಅಕ್ಷರ ರಾಮಾಯಣ"ವನ್ನು ರಚಿಸಿದ ಕವಿ ಅಜ್ಞಾತ (ಸಂಗ್ರಹ ಲೇಖನ). ಕವಿಗೆ ಗೌರವ ಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹ)
ಭಾನುವಾರ, ಜೂನ್ 15, 2025
ಅ-ಅಃ (ತುಂಟ ಪುಟ್ಟನ ಪ್ರಶ್ನೆಗಳು)
ಅರಸನು ಆನೆಯ ಏರಿದ್ದೇಕೆ?
ಇಲಿಯೂ ಈಗಲೇ ಓಡಿದ್ದೇಕೆ?
ಉಡವು ಊರಿಗೆ ಹೊರಟದ್ದೇಕೆ?
ಋಷಿಯು ಎತ್ತಲೋ ತಿರುಗಿದ್ದೇಕೆ?
ಏಡಿಯು ಐವರ ಕಡಿದದ್ದೇಕೆ?
ಒಡನೆಯೆ ಓತಿಯ ಹಿಡಿದದ್ದೇಕೆ?
ಔತಣ ಅಂತ ಅಂದದ್ದೇಕೆ?
ಅಃ ಅಹಹಾ ಅಂತ ನಕ್ಕಿದ್ದೇಕೆ?
ಹೇಳೋ ಅಣ್ಣ, ಬೇಗನೇ ಹೇಳೋ..
ಇಲಿಯೂ ಈಗಲೇ ಓಡಿದ್ದೇಕೆ?
ಉಡವು ಊರಿಗೆ ಹೊರಟದ್ದೇಕೆ?
ಋಷಿಯು ಎತ್ತಲೋ ತಿರುಗಿದ್ದೇಕೆ?
ಏಡಿಯು ಐವರ ಕಡಿದದ್ದೇಕೆ?
ಒಡನೆಯೆ ಓತಿಯ ಹಿಡಿದದ್ದೇಕೆ?
ಔತಣ ಅಂತ ಅಂದದ್ದೇಕೆ?
ಅಃ ಅಹಹಾ ಅಂತ ನಕ್ಕಿದ್ದೇಕೆ?
ಹೇಳೋ ಅಣ್ಣ, ಬೇಗನೇ ಹೇಳೋ..
ಕಪಿಯು ಖಜೂರ ತಿಂದಿದ್ದೇಕೆ?
ಗಣಗಣ ಘಂಟೆ ಬಾರಿಸಿತೇಕೆ?
ಚಂದಿರ ಛತ್ರಿಯ ತರಲಿಲ್ಲೇಕೆ?
ಜಲಜ ಝರಿಯೆಡೆ ಹೋಗಿದ್ದೇಕೆ?
ಟಗರು ಠಕ್ಕನ ಗುದ್ದಿದ್ದೇಕೆ?
ಡಮರು ಢಮ ಢಮ ಕುಣಿದ್ದೇಕೆ?
ತಮಟೆಯ ಥರ ಥರ ನಡುಗಿದ್ದೇಕೆ?
ದಮಡಿಯು ಧಬ್ ಧಬ್ ಬಡಿದದ್ದೇಕೆ?
ನಳ್ಳಿಯು ಪರಮನ ಕರೆದದ್ದೇಕೆ?
ಫಲವನು ಬಡಿಸಲು ಹುಡುಕಿದ್ದೇಕೆ?
ಭರ್ಜರಿ ಮರವನು ಹತ್ತಿದ್ದೇಕೆ?
ಭರ್ಜರಿ ಮರವನು ಹತ್ತಿದ್ದೇಕೆ?
ಯಮಳನ ರಮಿಸಲು ಹೋದದ್ದೇಕೆ?
ಲಂಕಿಣಿ ವಧಿಸದೇ ಶಪಿಸಿದ್ದೇಕೆ?
ಷಡ್ಭುಜ ಸಮತಟ್ಟು ಮಾಡಿದ್ದೇಕೆ?
ಹದ್ದಿಗೆ ಹಪ್ಪಳದ ಭೋಜನವೇಕೆ?
ಕ್ಷಮೆಯದು ಜ್ಞಾನಿಗೆ ಇರಲೇಬೇಕೆ?
ಹೇಳೋ ಅಣ್ಣ, ಬೇಗನೇ ಹೇಳೋ..
ಅಕ್ಷರ ಮಾಲೆಗೆ ಪ್ರಶ್ನೆಯ ಹಾರ
ಜಾಣ ಪುಟ್ಟನಿಗೆ ಬೇಕೇ ಉತ್ತರ?
- ಶ್ರೀ ಬೇಂದ್ರೆ ಮಂಜುನಾಥ, ಹಾಸನ (02/11/2013, ವಿಜಯವಾಣಿ)
ಭಾನುವಾರ, ಡಿಸೆಂಬರ್ 15, 2024
ಅ-ಅಃ (ಅ ಆ ಇ ಈ ಕಲಿಯೋಣ)
ಅ ಆ ಇ ಈ ಬರೆಯೋಣ
ಅಮ್ಮನ ನುಡಿಯನು ಕಲಿಯೋಣ
ಉ ಊ ಋ ಬರೆಯೋಣ
ಊರಿನ ನುಡಿಯನು ಕಲಿಯೋಣ
ಎ ಏ ಐ ಬರೆಯೋಣ
ಎಲ್ಲರ ಜೊತೆಯಲಿ ಕಲಿಯೋಣ
ಒ ಓ ಔ ಬರೆಯೋಣ
ಓಡಾಡುತ ನಾವು ಕಲಿಯೋಣ
ಅಂ ಅಃ ಬರೆಯೋಣ
ಅಂದದ ಅಕ್ಷರ ಕಲಿಯೋಣ
ಅಮ್ಮನ ನುಡಿಯನು ಕಲಿಯೋಣ
ಉ ಊ ಋ ಬರೆಯೋಣ
ಊರಿನ ನುಡಿಯನು ಕಲಿಯೋಣ
ಎ ಏ ಐ ಬರೆಯೋಣ
ಎಲ್ಲರ ಜೊತೆಯಲಿ ಕಲಿಯೋಣ
ಒ ಓ ಔ ಬರೆಯೋಣ
ಓಡಾಡುತ ನಾವು ಕಲಿಯೋಣ
ಅಂ ಅಃ ಬರೆಯೋಣ
ಅಂದದ ಅಕ್ಷರ ಕಲಿಯೋಣ
ಮುಂದಿನ ಅಕ್ಷರ ಚಂದದಿ ಕಲಿಯುತ
ಮುಂದಕೆ ನಾವು ಸಾಗೋಣ
ಶುಕ್ರವಾರ, ಸೆಪ್ಟೆಂಬರ್ 06, 2024
ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಂದು ಶಿಕ್ಷಕ ಸ್ವರಾಕ್ಷರ ಕವನ - ನಮನ
□■○● ಶಿಕ್ಷಕರಿಗೆ ●○■□
ಅಕ್ಷರಗಳನ್ನು ತಿದ್ದಿ ತೀಡಿ ಕಲಿಸಿ
ಆಶೀರ್ವದಿಸಿ ಕೈ ಹಿಡಿದು ನಡೆಸಿ
ಇಂದಿನ ನನ್ನಯ
ಈಸ್ಥಿತಿಗೆ ಕಾರಣ ಭೂತರಾದ
ಉರು ಹೊಡಿಸಿ, ಮರೆಯದಂತೆ
ಊಟ ಆಟದ ನಡುವೆ ಪಾಠವ
ಋಷಿ ಮುನಿಗಳ ಯಜ್ಞದಂತೆ
ಎಲ್ಲಾ ವಿಷಯಗಳ ಜೊತೆ ಜೀವನದ
ಏರಿಳಿತ ತಿಳಿಸಿ, ಎಂದೆಂದೂ
ಐದು ಜನರ ಬಾಳಿಗೆ ಬೆಳಕು
ಒದಗಿಸಲು ಸಹಾಯ ಮಾಡಲು
ಓದು ಬರೆಹಗಳನ್ನು ಆಸಕ್ತಿಯಿಂದ
ಔದಾರ್ಯ ಪೂರ್ವಕವಾಗಿ ಮನದ
ಅಂಗಳದಲ್ಲಿ ಇಳಿಸಿದ ಎಲ್ಲಾ ಶಿಕ್ಷಕರಿಗೆ ವಂದನೆ.
@✍🏻 ಉ.ವೇಣುಗೋಪಾಲ್
ಶನಿವಾರ, ಜೂನ್ 15, 2024
ಅ-ಅಃ (ನಮ್ಮ ಭಾಷೆ ಕನ್ನಡ)
ಅ - ಅಮ್ಮನಿಂದ
ಕಲಿತ
ಭಾಷೆ
ಕನ್ನಡ
ಆ - ಆರಾಧಿಸೋ ಮೊದಲ ಭಾಷೆ ಕನ್ನಡ
ಇ - ಇಷ್ಟಪಟ್ಟು ಕಲಿಯೋ ಭಾಷೆ ಕನ್ನಡ
ಈ - ಈಶ್ವರನೊಪ್ಪುವ ಭಾಷೆ ಕನ್ನಡ
ಉ - ಉನ್ಮಾದ ನೀಡುವ ಭಾಷೆ ಕನ್ನಡ
ಊ - ಊಟ ನೀಡುವ ಭಾಷೆ ಕನ್ನಡ
ಋ - ಋಣವ ತೀರಿಸಲಾಗದ ಭಾಷೆ ಕನ್ನಡ
ಎ - ಎದೆಯಲ್ಲಿ ತುಂಬಿರುವ ಭಾಷೆ ಕನ್ನಡ
ಏ - ಏದುಸಿರಲ್ಲೂ ಬೆರೆತಿರೋ ಭಾಷೆ ಕನ್ನಡ
ಐ - ಐಕ್ಯತೆಯ ಮೂಲ ಭಾಷೆ ಕನ್ನಡ
ಒ - ಒಲವಿನ ಭಾವನೆಗಳ ಭಾಷೆ ಕನ್ನಡ
ಓ - ಓಲೈಸುವ ಮಧುರ ಭಾಷೆ ಕನ್ನಡ
ಔ - ಔದಾರ್ಯಕೆ ಹೆಸರಾದ ಭಾಷೆ ಕನ್ನಡ
ಅಂ - ಅಂಧಕಾರವ ತೊರೆವ ಭಾಷೆ ಕನ್ನಡ
ಅಃ - ಅಹಂ ಅಡಗಿಸೋ ಭಾಷೆ ಕನ್ನಡ
ಆ - ಆರಾಧಿಸೋ ಮೊದಲ ಭಾಷೆ ಕನ್ನಡ
ಇ - ಇಷ್ಟಪಟ್ಟು ಕಲಿಯೋ ಭಾಷೆ ಕನ್ನಡ
ಈ - ಈಶ್ವರನೊಪ್ಪುವ ಭಾಷೆ ಕನ್ನಡ
ಉ - ಉನ್ಮಾದ ನೀಡುವ ಭಾಷೆ ಕನ್ನಡ
ಊ - ಊಟ ನೀಡುವ ಭಾಷೆ ಕನ್ನಡ
ಋ - ಋಣವ ತೀರಿಸಲಾಗದ ಭಾಷೆ ಕನ್ನಡ
ಎ - ಎದೆಯಲ್ಲಿ ತುಂಬಿರುವ ಭಾಷೆ ಕನ್ನಡ
ಏ - ಏದುಸಿರಲ್ಲೂ ಬೆರೆತಿರೋ ಭಾಷೆ ಕನ್ನಡ
ಐ - ಐಕ್ಯತೆಯ ಮೂಲ ಭಾಷೆ ಕನ್ನಡ
ಒ - ಒಲವಿನ ಭಾವನೆಗಳ ಭಾಷೆ ಕನ್ನಡ
ಓ - ಓಲೈಸುವ ಮಧುರ ಭಾಷೆ ಕನ್ನಡ
ಔ - ಔದಾರ್ಯಕೆ ಹೆಸರಾದ ಭಾಷೆ ಕನ್ನಡ
ಅಂ - ಅಂಧಕಾರವ ತೊರೆವ ಭಾಷೆ ಕನ್ನಡ
ಅಃ - ಅಹಂ ಅಡಗಿಸೋ ಭಾಷೆ ಕನ್ನಡ
ಕ - ಕನಸಲ್ಲೂ ಕನವರಿಸೋ ಭಾಷೆ ಕನ್ನಡ
ಖ - ಖಗಮೃಗಗಳಿಗೂ ಅರಿಯೋ ಭಾಷೆ ಕನ್ನಡ
ಗ - ಗಾನಗಾರುಡಿಗರ ಭಾಷೆ ಕನ್ನಡ
ಘ - ಘನವೆತ್ತ ಗಂಭೀರ ಭಾಷೆ ಕನ್ನಡ
ಙ - ನ್ಯಾಸ ವಿನ್ಯಾಸದ ಭಾಷೆ ಕನ್ನಡ
ಚ - ಚರಿತ್ರೆಯ ಪುಟಗಳಲ್ಲಿರುವ ಭಾಷೆ ಕನ್ನಡ
ಛ - ಛಿದ್ರಿತ ಮನಗಳ ಬೆಸೆಯೋ ಭಾಷೆ ಕನ್ನಡ
ಜ - ಜಗದಗಲದ ಮೊದಲ ಭಾಷೆ ಕನ್ನಡ
ಝ - ಝರಿತೊರೆಯಲ್ಲಿ ಬೆರೆತ ಭಾಷೆ ಕನ್ನಡ
ಞ - ಜ್ಞಾನ ಸಂಪತ್ತಿನ ಭಾಷೆ ಕನ್ನಡ
ಟ - ಟಗರ ಪೊಗರಿನ ಭಾಷೆ ಕನ್ನಡ
ಠ - ಠಂಕಸಾಲೆಯಲೂ ಸೇರಿದ ಭಾಷೆ ಕನ್ನಡ
ಡ - ಡಮರುಗ ಸದ್ದಲ್ಲೂ ಕೇಳುವ ಭಾಷೆ ಕನ್ನಡ
ಢ - ಢಂಗೂರ ಸಾರಿ ಹೇಳುವ ಭಾಷೆ ಕನ್ನಡ
ಣ - ಮರಣದಲ್ಲೂ ಜೊತೆಯಾಗೋ ಭಾಷೆ ಕನ್ನಡ
ತ - ತನುವಿನೊಳಗಡಗಿರುವ ಭಾಷೆ ಕನ್ನಡ
ಥ - ಥಕಥೈ ಕುಣಿಸುವ ಭಾಷೆ ಕನ್ನಡ
ದ - ಧಾರಾಳ ಮನಸಿನ ಭಾಷೆ ಕನ್ನಡ
ಧ - ಧರೆಯಿರೊವರೆಗೂ ಉಳಿಯೋ ಭಾಷೆ ಕನ್ನಡ
ನ - ನೈದಿಲೆಯೂ ನಾಚುವಂತ ಭಾಷೆ ಕನ್ನಡ
ಪ - ಪರಿಪರಿಯಾಗಿ ಮುದ್ರಿತ ಭಾಷೆ ಕನ್ನಡ
ಫ - ಫಲವೆತ್ತ ಸಮೃದ್ಧ ಭಾಷೆ ಕನ್ನಡ
ಬ - ಬಣ್ಣಿಸಲಸದಳ ಭಾಷೆ ಕನ್ನಡ
ಭ - ಭರ್ಜರಿ ಗಾಂಭೀರ್ಯ ಭಾಷೆ ಕನ್ನಡ
ಮ - ಮನಮನೆಗಳ ತಣಿಸೋ ಭಾಷೆ ಕನ್ನಡ
ಯ - ಯಮನಿಂದಲೂ ಕಾಪಾಡಬಲ್ಲ ಭಾಷೆ ಕನ್ನಡ
ರ - ರತ್ನನೌಕೆಯಲಿ ಸಾಗಿಬಂದ ಭಾಷೆ ಕನ್ನಡ
ಲ - ಲವಲವಿಕೆಗೆ ಮೂಲಭಾಷೆ ಕನ್ನಡ
ವ - ವಚನಾಮೃತಸಾರ ತಿಳಿಸೋ ಭಾಷೆ ಕನ್ನಡ
ಶ - ಶಯ್ಯೆಯಲ್ಲೂ ನೆನೆಯೋ ಭಾಷೆ ಕನ್ನಡ
ಷ - ಷಡ್ವರ್ಗಗಳ ಪಳಗಿಸೊ ಭಾಷೆ ಕನ್ನಡ
ಸ - ಸರಿಗಮಗಳ ಸೆಲೆಯ ಭಾಷೆ ಕನ್ನಡ
ಹ - ಹಳತು ಹೊಸತಿನ ಸಂಗಮ ಭಾಷೆ ಕನ್ನಡ
ಳ - ನಳನಳಿಸೋ ದೀಪಭಾಷೆ ಕನ್ನಡ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
