ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಜೂನ್ 15, 2026

ತಾಯಿ ಹೃದಯ (ಕ-ಕಂ)

  • - ಕನಸೊಂದು ಹೊತ್ತು ಬಂದಿಹುದು ಕೂಸು
  • ಕಾ - ಕಾಣಿಸಿತು ನನಸಾಗಿಸೋ ತಾಯಿ ಮನಸ್ಸು
  • ಕಿ - ಕಿಲ ಕಿಲ ಎಂದು ನಗುತಿರಲು
  • ಕೀ - ಕೀಟಲೆಗೆ ತಾಯಿ ಹೃದಯ ನಲಿದಿರಲು
  • ಕು - ಕುಹೂ ಕುಹೂ ಕೋಗಿಲೆಯ ನಾದಕ್ಕೆ
  • ಕೂ - ಕೂಗುತಿದೆ ಮಗುವಿನ ಹೃದಯ ನಾದ
  • ಕೃ - ಕೃತಜ್ಞತೆಯ ಮಾತುಗಳು ಹೊರಬರಲು
  • ಕೆ - ಕೆಂಪಾದ ಕೆನ್ನೆಯ ಮುತ್ತಿಕ್ಕಿದಳು ಮಹಾತಾಯಿ
  • ಕೇ - ಕೇಳಿಸಿತು ಹಸುಗೂಸಿಗೆ ಒಡಲಾಳದ ಮಾತು
  • ಕೈ - ಕೈಚಾಚಿದ ತಾಯಿ ಮಗುವಿಗೆ ಕರೆದಿರಲು
  • ಕೊ - ಕೊರತೆಯೊಂದೆ ಮಗುವಿಗೆ ಓಡಾಡುವ ಹಂಬಲ
  • ಕೋ - ಕೋಣೆಯ ಗೋಡೆಗಳು ಸಹಕರಿಸಲು ಕೊನೆಗೆ
  • ಕೌ - ಕೌತುಕದ ಮಗು ಮನಸ್ಸು ನಡೆದಾಡುತಿರಲು
  • ಕಂ - ಕಂದ ಎಂದು ಬಂದು ತಾಯಿ ಬಿಗಿದಪ್ಪಿಕೊಂಡಳು. 
  • ಈ ಕವಿತೆಯನ್ನು ಬರೆದ ಮೂಲ ಲೇಖಕರ ನಿಖರವಾದ ಹೆಸರು ಚಿತ್ರದಲ್ಲಿ ಉಲ್ಲೇಖವಾಗಿಲ್ಲ. ಇದು ಕನ್ನಡದ ಗುಣಿತಾಕ್ಷರಗಳ (ಕ, ಕಾ, ಕಿ, ಕೀ...) ಮಾದರಿಯನ್ನು ಬಳಸಿ ತಾಯಿಯ ಪ್ರೀತಿಯನ್ನು ವರ್ಣಿಸಲು ಸಾಮಾಜಿಕ ಜಾಲತಾಣಗಳಲ್ಲಿ (Social Media) ಯಾರೋ ಒಬ್ಬರು ರಚಿಸಿರುವ ಒಂದು ಸುಂದರವಾದ ಅನಾಮಧೇಯ (Anonymous) ಭಾವಗೀತೆ ಅಥವಾ ವಾಟ್ಸಾಪ್ ಕವನವಾಗಿದೆ. ಇಂತಹ ಕಾವ್ಯಗಳನ್ನು ಭಾಷಾ ಕಲಿಕೆ ಮತ್ತು ತಾಯಿಯ ಮಮತೆಯನ್ನು ಕೊಂಡಾಡಲು ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ.
  • ಕಾಮೆಂಟ್‌ಗಳಿಲ್ಲ:

    ಕಾಮೆಂಟ್‌‌ ಪೋಸ್ಟ್‌ ಮಾಡಿ

    ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

    1.. ಜಾಹೀರಾತು

    2.ಜಾಹೀರಾತು