fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಅಕ್ಟೋಬರ್ 31, 2022

ಕನ್ನಡವೆಂದರೆ ಉಸಿರು

ಮಾತು ಆರಂಭಿಸಿದ ಮೊದಲಿನಿಂದ
ಮಾತು ನಿಲ್ಲಿಸುವ ಕೊನೆವರೆಗೂ
ಕನ್ನಡವೆಂದರೆ ಉಸಿರು.

ರಕ್ತದೊಂದಿಗೆ ಬೆರೆತುಹೋದ
ಹೃದಯದೊಂದಿಗೆ ಮಿಳಿತವಾದ
ಕನ್ನಡವೆಂದರೆ ಉಸಿರು

ಸಾವಿರಾರು ಭಾಷೆ ಜಗದಲ್ಲಿದ್ದರೂ
ತಾಯಿ ಭಾಷೆ ತವರು ಭಾಷೆ
ಕನ್ನಡವೆಂದರೆ ಉಸಿರು

ದೇಶ ವೇಷ ಭಾಷೆ ಬದಲಿಸಿದರೇನು?
ಹೃದಯಭಾಷೆ ಮರೆಯಾಗುವುದೇನು?
ಕನ್ನಡವೆಂದರೆ ಉಸಿರು

ಹೆತ್ತ ತಾಯಿ ಹೊತ್ತ ಭೂಮಿ
ಸ್ವರ್ಗಕ್ಕಿಂತ ಮಿಗಿಲಲ್ಲವೇನು?
ಕನ್ನಡವೆಂದರೆ ಉಸಿರು.

ಶುಕ್ರವಾರ, ಅಕ್ಟೋಬರ್ 28, 2022

ಉಪ್ಪಿನ ಋಣ ಕವನ ತಿಳಿಯಿರಿ

🧂𝕤═𝕡═𝕟═𝟛═𝟙═𝟠═𝟟🧂(8/8)
ಕೃಪೆ:  ಡಾ. ಅಶೋಕಕುಮಾರ
ಮನಸಿನಲ್ಲಿದ್ದರೆ ಸ್ವಾರ್ಥಗುಣ
ತೃಣಕ್ಕೆ ಸಮಾನ ನೀ ಗಳಿಸಿದ ಹಣ
ನಿಸ್ವಾರ್ಥಗುಣಕ್ಕೆ ಮೆಚ್ಚುವುದು ದೇವಗಣ.

ಪೂರ್ಣ ಕವಿತೆಗಾಗಿ  https://t.me/spn3187/41605

ಮಂಗಳವಾರ, ಅಕ್ಟೋಬರ್ 18, 2022

ಗೂಗಲ ಪುಟದ ಕ್ಯಾಲ್ಕೋಲೆಟರ್‌ (Google Calculator Pages) 26

Google ನಲ್ಲಿ ಟೈಪ್ ಮಾಡಿ: "Calculator" ಮತ್ತು ಎಂಟರ್ ಒತ್ತಿರಿ. ಆಗ ನಿಮಗೆ ಆಧುನಿಕ ಯುಗದ ಕ್ಯಾಲ್ಕೋಲೆಟರ್‌ ಕಾಣುತ್ತದೆ. ನಂತರ ಅಲ್ಲಿರುವ ಹುಡುಕಾಟ ಫಲಿತಾಂಶದ ಕ್ಯಾಲ್ಕೋಲೆಟರ್‌ ಬರುತ್ತವೆ. ಅಲ್ಲಿ ನಿಮಗೆ ಬೇಕಾದ ಲೆಕ್ಕವನ್ನು ಮಾಡಿ, ಉತ್ತರವನ್ನು ನೋಡುತ್ತೀರಿ..

ಭಾನುವಾರ, ಅಕ್ಟೋಬರ್ 09, 2022

ಮಹಾ ಭಾರತದ 18 ಪರ್ವಗಳು

1.  ಆದಿ ಪರ್ವ: ಪರಿಚಯ, ವಿಶ್ವ ಸೃಷ್ಟಿ ವಿವರ ಸೃಷ್ಟಿ ಮತ್ತು ಮಹಾಭಾರತ, ಹಿನ್ನೆಲೆ, ಪಾಂಡವ
                      ಮತ್ತು ಕೌರವರ ಜನನ ಹಾಗೂ ಬೆಳವಣಿಗೆ
2.  ಸಭಾ ಪರ್ವಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ
3.  ಅರಣ್ಯಕ ಪರ್ವ: ಹನ್ನೆರಡು ವರ್ಷದ ವನವಾಸ
4.  ವಿರಾಟ ಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ
5.  ಉದ್ಯೋಗ ಪರ್ವ: ಯುದ್ಧದ ತಯಾರಿ
6.  ಭೀಷ್ಮ ಪರ್ವ: ಯುದ್ಧ ಆರಂಭಭೀಷ್ಮ ಕೌರವ ಸೇನಾನಿ ಕೃಷ್ಣನಿಂದ ಭಗವದ್ಗೀತೆ ಉಪದೇಶ
7.  ದ್ರೋಣ ಪರ್ವ: ಯುದ್ಧದ ಮುಂದುವರಿಕೆದ್ರೋಣ ಸೇನಾಧಿಪತ್ಯದಲ್ಲಿ
8.  ಕರ್ಣ ಪರ್ವ: ಕರ್ಣ ಸೇನಾಧಿಪತ್ಯ, ಕರ್ಣಾವಸಾನ
9.  ಶಲ್ಯ ಪರ್ವ: ಶಲ್ಯನ ಸೇನಾಧಿಪತ್ಯ
10.  ಸೌಪ್ತಿಕ ಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ
11.  ಸ್ತ್ರೀ ಪರ್ವ: ಗಾಂಧಾರಿಯ ವಿಲಾಪ
12.  ಶಾಂತಿ ಪರ್ವಯುಧಿಷ್ಠಿರ ಪಟ್ಟಾಭಿಷೇಕಭೀಷ್ಮನಿಂದ ಸಲಹೆ
13.  ಅನುಶಾಸನ ಪರ್ವ: ಭೀಷ್ಮ ಕೊನೆಯ ಮಾತುಗಳು
14.  ಅಶ್ವಮೇಧಿಕ ಪರ್ವ: ಯುಧಿಷ್ಠಿರನಿಂದ ಅಶ್ವಾಮೇಧ ಯಜ್ಞ
15.  ಆಶ್ರಮವಾಸಿಕ ಪರ್ವ: ಧೃತರಾಷ್ಟ್ರಗಾಂಧಾರಿಕುಂತಿಯರ ಆಶ್ರಮವಾಸ, ಕೊನೆಗೆ ಮರಣ
16.  ಮೌಸಲ ಪರ್ವ: ಯಾದವರಲ್ಲಿ ಕಲಹ ("ಯಾದವೀ ಕಲಹ")
17.  ಮಹಾಪ್ರಸ್ತಾನಿಕ ಪರ್ವ: ಪಾಂಡವರ ಮರಣದ ಮೊದಲ ಭಾಗ
18.  ಸ್ವರ್ಗಾರೋಹಣ ಪರ್ವ: ಪಾಂಡವರ ಸ್ವರ್ಗಾರೋಹಣ..

ಮಂಗಳವಾರ, ಅಕ್ಟೋಬರ್ 04, 2022

ನವರಾತ್ರಿಗಳು ಯಾಕೆ ಇದ್ದಾವೆ?

       ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದಿನ ಜೀವನಕ್ಕೂ ಮತ್ತು ಇಂದಿನ ಜೀವನಕ್ಕೂ ಅಜಗಜಾಂತರ ವ್ಯತ್ಯಾಸಗಳು ನಮಗೆ ಕಂಡುಬರುತ್ತವೆ. ಇಂದು ನಾವು ಆಚರಿಸುತ್ತಿರುವ ಎಷ್ಟೋ ಸಂಪ್ರದಾಯಗಳು ಇಂದು-ನಿನ್ನೆ ಜನ್ಮ ತಾಳಿದವಲ್ಲ. ಅವುಗಳೆಲ್ಲವು ಹಿಂದೆಂದೊ ಜನ್ಮ ತಳೆದಿವೆ. ನೀವು ಎಂದಾದರು ಆಲೋಚಿಸಿದ್ದೀರೇ? ನಾವೇಕೆ ವರ್ಷಕ್ಕೆ ಒಂದು ದೀಪಾವಳಿ, ಹೋಳಿಯನ್ನು ಆಚರಿಸುತ್ತೇವೆ ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. ಹೌದು ವಸಂತ ನವರಾತ್ರಿ ಮತ್ತು ಶರನ್ನಾವರಾತ್ರಿ ಎಂಬ ಎರಡು ನವರಾತ್ರಿಗಳನ್ನು ನಾವು ಆಚರಿಸುತ್ತೇವೆ.

        ಈ ಎರಡು ಮಾಸಗಳು ಋತು ಬದಲಾವಣೆಯನ್ನು ಹೊಂದಿರುವ ಮಾಸಗಳಾಗಿದ್ದು, ನಮ್ಮ ಆಹಾರ ಸೇವನೆಯ ಕ್ರಮವು ಈ ಅವಧಿಯಲ್ಲಿ ಪರಸ್ಪರ ಬದಲಾವಣೆಯಿಂದ ಕೂಡಿರುತ್ತದೆ. ನವರಾತ್ರಿಗಳು ನಮ್ಮನ್ನು ನಾವು ಈ ಆಹಾರ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುವ ಗುಣಗಳನ್ನು ಹೊಂದಿದೆ. ಅದು ಹೇಗೆಂದರೆ ಆಸ್ತಿಕ ಭಕ್ತ ಸಮೂಹವು ಈ ನವರಾತ್ರಿಗಳ ಸಂದರ್ಭದಲ್ಲಿ ಉಪವಾಸವಿರುತ್ತಾರೆ. ಇದರಿಂದ ಅವರು ಹೊಸ ಆಹಾರ ಶೈಲಿಗೆ ಒಗ್ಗಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಜನರು ಉಪ್ಪು ಮತ್ತು ಸಕ್ಕರೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದರಿಂದಾಗಿ ಹೆಚ್ಚಿನ ಧನಾತ್ಮಕ ಶಕ್ತಿಯನ್ನು, ಆತ್ಮ ವಿಶ್ವಾಸವನ್ನು ಮತ್ತು ದೃಢ ನಿರ್ಧಾರದ ಶಕ್ತಿಯನ್ನು (ಉಪವಾಸ ಮಾಡುವುದರಿಂದ ದೃಢ ನಿರ್ಧಾರ ಕೈಗೊಳ್ಳುವ ಶಕ್ತಿಯು) ಹೆಚ್ಚಿಸುತ್ತದೆ ಮತ್ತು ಕೊನೆಗೆ ಆ ಋತುವಿನಲ್ಲಿ ಸಂಭವಿಸುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.

ಸೋಮವಾರ, ಅಕ್ಟೋಬರ್ 03, 2022

ಕಸರತ್ತು / ಆಪತ್ತು

ಅಮ್ಮ ಕೊಟ್ಟ ತುತ್ತು ದೇಹಕ್ಕೆ ಕಸರತ್ತು || ವ್ಹಾ.. ವ್ಹಾ.. ||
ಅಮ್ಮ ಕೊಟ್ಟ ತುತ್ತು ದೇಹಕ್ಕೆ ಕಸರತ್ತು || ವ್ಹಾ.. ವ್ಹಾ.. ||
..
ಹುಡುಗಿ ಕೊಟ್ಟ ಮುತ್ತು ಜೀವಕ್ಕೆ ಆಪತ್ತು..

ಶನಿವಾರ, ಅಕ್ಟೋಬರ್ 01, 2022

ಅಕ್ಟೋಬರ್ ತಿಂಗಳ ಮಹತ್ವದ ದಿನಗಳು

ಅಕ್ಟೋಬರ್ ೧: ವಿಶ್ವ ವೃದ್ಧರ ದಿನ, ವನ್ಯಜೀವಿ ಸಪ್ತಾಹ ದಿನ, ವಿಶ್ವ ಸಂಗೀತ ದಿನ, ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತ ದಾನ ದಿನ.

ಅಕ್ಟೋಬರ್ ೨ : ವಿಶ್ವ ಸಸ್ಯಾಹಾರಿಗಳ ದಿನ, ಗಾಂಧೀಜಿಯವರ ಜನ್ಮದಿನಾಚರಣೆ, 
ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ. 

ಅಕ್ಟೋಬರ್ ೩ : ೧೯೯೦ರಲ್ಲಿ ಜರ್ಮನಿ ದೇಶದ ಪುನರೇಕೀಕರಣ, ವಿಶ್ವ ಪ್ರಾಕೃತಿಕ ದಿನ.

ಅಕ್ಟೋಬರ್ ೪ : ೧೯೫೭ರಲ್ಲಿ ಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೧ ಭೂಮಿಯನ್ನು ಪ್ರದಕ್ಷಣೆ ಮಾಡಿದ ಮೊದಲ ಕೃತಕ ಉಪಗ್ರಹವಾಯಿತು, ವಿಶ್ವ ಪ್ರಾಣಿದಯಾ / ಪ್ರಾಣಿ ಕ್ಷೇಮಾಭಿವೃದ್ಧಿ ದಿನ.

ಅಕ್ಟೋಬರ್ ೫ : ವಿಶ್ವ ಹವ್ಯಾಸ ದಿನ.

ಅಕ್ಟೋಬರ್ ೬ : ೧೯೭೩ರಲ್ಲಿ ಈಜಿಪ್ಟ್‌ನ ಸೇನೆ ಇಸ್ರೇಲ್ದೇಶವನ್ನು ಪ್ರವೇಶಿಸಿ ಯೊಮ್ ಕಿಪ್ಪೂರ್ ಯುದ್ಧಪ್ರಾರಂಭವಾಯಿತು. 

ಅಕ್ಟೋಬರ್ ೮ : ವಾಯುಪಡೆ ದಿನ.

ಅಕ್ಟೋಬರ್ ೯ : ವಿಶ್ವ ಅಂಚೆ ದಿನ. 

ಅಕ್ಟೋಬರ್ ೧೦: ೧೯೦೨ರಲ್ಲಿ ಶಿವರಾಮ ಕಾರಂತರ ಜನನ, ವಿಶ್ವ ಮರಣದಂಡನೆ ವಿರೋಧಿ ದಿನ.

ಅಕ್ಟೋಬರ್ ೧೨ : ೧೪೯೨ರಲ್ಲಿ ಕ್ರಿಸ್ಟೊಫರ್ ಕೊಲಂಬಸ್ ಕೆರಿಬಿಯನ್ ಪ್ರದೇಶದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು.

ಅಕ್ಟೋಬರ್ ೧೪ : ವಿಶ್ವ ಗುಣಮಟ್ಟ ದಿನ.

ಅಕ್ಟೋಬರ್ ೧೬ : ವಿಶ್ವ ಆಹಾರ ದಿನ.

ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಬ್ರಿಟಿಶ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ)ಯ ಸ್ಥಾಪನೆ.

ಅಕ್ಟೋಬರ್ ೧೯ :‍ ನೊಬೆಲ್ ಪ್ರಶಸ್ತಿ ವಿಜೇತ ಡಾ. ಸುಬ್ರಮಣ್ಯಂ ಚಂದ್ರಶೇಖರ್ (1910-1995) ಅವರ ಜನ್ಮದಿನ.

ಅಕ್ಟೋಬರ್ ೨೧ : ಪೋಲೀಸ್ ಹುತಾತ್ಮರ ದಿನ.

ಅಕ್ಟೋಬರ್ ೨೪ : ೧೯೪೫ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ (ವಿಶ್ವಸಂಸ್ಥೆ)ಯ ಸ್ಥಾಪನೆ. 

ಅಕ್ಟೋಬರ್ ೨೯ : ಟರ್ಕಿ ಗಣರಾಜ್ಯವಾಗಿ ೧೯೨೩ರಲ್ಲಿ ಮುಸ್ತಫ ಕೆಮಲ್ ಅಟಾತುರ್ಕ್ ಅದರ ಮೊದಲ ರಾಷ್ಟ್ರಪತಿಯಾದನು.

ಅಕ್ಟೋಬರ್ ೩೦ : ವಿಶ್ವ ಉಳಿತಾಯ / ಮಿತವ್ಯಯ ದಿನ.

ಅಕ್ಟೋಬರ್ ೩೧ : ೧೮೭೫ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ, ೧೯೮೪ರಲ್ಲಿ ಇಂದಿರಾ ಗಾಂಧಿಯ ಹತ್ಯೆ.

ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು