fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಜೂನ್ 26, 2016

ಆಯ್ದಕ್ಕಿ ಲಕ್ಕಮ್ಮ

ಅಂಕಿತ ನಾಮ: ಮಾರಯ್ಯಪ್ರಿಯ ಅಮರೇಶ್ವರಲಿಂಗ
ಕಾಲ: 1160
ದೊರಕಿರುವ ವಚನಗಳು: 25 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ ಸು. 1160. ಆಯ್ದಕ್ಕಿ ಮಾರಯ್ಯನ ಹೆಂಡತಿ. ಈಕೆಯ 25 ವಚನಗಳು ದೊರೆತಿವೆ. ಕಲ್ಯಾಣದಲ್ಲಿ ಅಕ್ಕಿಯನ್ನು ಆಯ್ದು ಜೀವಿಸುತ್ತಿದ್ದ ಈ ದಂಪತಿಗೆ ಬಸವಣ್ಣ ಒಮ್ಮೆ ಅಕ್ಕಿಯ ದಾನ ನೀಡಿ, ಮಾರಯ್ಯ ಅದನ್ನು ಮನೆಗೆ ತಂದಾಗ ಲಕ್ಕಮ್ಮನು ಇಷ್ಟೊಂದು ಅಕ್ಕಿಯ ಆಸೆ ಅರಸನಿಗೆ ಇರಬೇಕು, ಶರಣನಿಗಲ್ಲ ಎಂದು ಹೇಳಿ ದುಡಿಮೆಯನ್ನು ತಪ್ಪಿಸುವ ದಾನವನ್ನು ಹಿಂದಿರುಗಿಸುವಂತೆ ಮಾಡಿದ ಕಥೆ ‘ಶೂನ್ಯಸಂಪಾದನೆ’ಯಲ್ಲಿ ಇದೆ.

ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ,
ಬಯಕೆಯರತ ಕೈಯಲ್ಲಿ ತಂಡುಲವನಾಯ್ದುಕೊಂಡು
ಸಂದ ಪ್ರಮ ಥರ ಅಂಗಳಕ್ಕೆ ಬೇಗ ಹೋಗಿ, ಕೊಂಡುಬಾರಯ್ಯಾ,
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಮಾರಯ್ಯಾ.
ಅವಾರಿಯೆಂದು ಮಾಡುವಲ್ಲಿ ಅವರಿವರೆಂದು ಪ್ರಮಾಣಿಸಲುಂಟೆ ?
ಸಮಯಕ್ಕೆ ಹೋಗಿ ಸಮಯವನರಿಯರೆಂದು ಭವಗೆಡಲುಂಟೆ ?
ಭಾವಜ್ಞನಾದಡೆ ಭಾವವನರಿದಲ್ಲಿ ಶುಚಿಯಾಗಿರಬಲ್ಲಡೆ ಮಾರಯ್ಯಪ್ರಿಯ
ಅಮಲೇಶ್ವರಲಿಂಗವ ಹೊದ್ದುವ ಭಾವ.
ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ ?
ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ ?
ಘನಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ.
ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ
ಮಾರಯ್ಯಾ.

ಶುಕ್ರವಾರ, ಜೂನ್ 24, 2016

ಅಮೃತಾಂಜನ



·         ನಾನು ಚಿಕ್ಕವನಿರುವಾಗ ನನ್ನ ಅಜ್ಜಿ ತಲೆ ನೋವಿಗೆ ಇದನ್ನೇ ಹಚ್ಚುತ್ತಿದ್ದಳು
·         ಅಮೃತ ಮಥನದಲ್ಲಿ ಅಮೃತ ಸುರರ ಪಾಲಾಯಿತು, ವಿಷ ಅಸುರರ ಪಾಲಾಯಿತು, ಮನುಷ್ಯರಿಗಾಗಿ ಮತ್ತೆ ಮಥಿಸಿದಾಗ ಅಮೃತಾಂಜನ ಸೃಷ್ಟಿಯಾಯಿತು
·         ಎಲ್ಲಾ ವಿವಾಹಿತರೂ ಯಾವತ್ತೂ ಜೊತೆಗಿಟ್ಟುಕೊಳ್ಳಬೇಕಾದದ್ದು
·         ತಲೆ ನೋವಿನ ಜೊತೆಗೆ ತಲೆ ನೋವು ತರುವವರನ್ನೂ ಓಡಿಸುತ್ತೆ
·         ಇದರ ಘಮ್ಮನೆ ಪರಿಮಳವೇ ಹೇಳುತ್ತೆ ಇಲ್ಲೆಲ್ಲೋ ತಲೆನೋವಿದೆ ಎಂದು
·         ಗಂಡ ಹೆಂಡತಿ ಇಬ್ಬರ ನಡುವಿನ ಸ್ನೇಹಿತ
·         ತಲೆ ನೋವು ಬಂದಾಗ ಹಣೆಗೂ ಇದಕ್ಕೂ 'ಹಣಾಹಣಿ'
·         ಕೆಲವರಿಗೆ ಇದರ ವಾಸನೆಯಿಂದ ನಿದ್ದೆಯೇ ಬರದು, ಇನ್ನು ಕೆಲವರಿಗೆ ಇದಿಲ್ಲದಿದ್ದರೆ ನಿದ್ದೆಯೇ ಬರದು
·         ಜನಜಂಗುಳಿಯಲ್ಲಿ ನೆಲೆಸಿರುವವರಿಗೆ ಅಮೃತಾಂಜನವೇ ರಕ್ಷಕ
·         ಆಂಜನೇಯ ಹೊತ್ತು ತಂದ ಸಂಜೀವಿನಿ ಪರ್ವತದ ಮೂಲಿಕೆಗಳಿಂದ ತಯಾರಿಸಿದ್ದರಿಂದ ಇದಕ್ಕೆ ಹೆಸರು
·         ರಾಜಕಾರಣಿಗಳು ತಮ್ಮ ಭಾಷಣಕ್ಕೂ ಮುನ್ನ ಮಾಡಬಹುದಾದ ದೊಡ್ಡ ಉಪಕಾರವೆಂದರೆ ಕೇಳುಗರಿಗೆ ಮೊದಲು ಇದನ್ನು ವಿತರಿಸುವುದು
·         ನಿಮ್ಮ ಸ್ನೇಹಿತನ ಮದುವೆಯಲ್ಲಿ ಕೊಡಬಹುದಾದ ದೊಡ್ಡ ಉಡುಗೊರೆಯೆಂದರೆ ಅಮೃತಾಂಜನದ ದೊಡ್ಡ ಬಾಕ್ಸ್
·         ಮೃತನ ಬಳಿ ಹಚ್ಚಿಕೊಂಡು ಹೋದರೂ ಆತನ ನಾಸಿಕ ಅರಳುವುದು
-ವಿಶ್ವನಾಥ ಸುಂಕಸಾಳ

ಬುಧವಾರ, ಜೂನ್ 22, 2016

ಅಮ್ಮ…… ನಿನಗೆ ಗೊತ್ತೇ



ಅಮ್ಮ…… ನಿನಗೆ ಗೊತ್ತೇ …… ನೀ ಒಡಲಲ್ಲಿ ಹೊತ್ತಿರುವ ನಾನು ನಿನ್ನ ಸೌಂದರ್ಯದ ಚಿತ್ರಗಾರ ಎಂದು
ಪ್ರೀತಿಯ ಮುತ್ತ ಒಡಲಲ್ಲಿ ಬಚ್ಚಿಟ್ಟು ನೋವ ಸಹಿಸಿ.. ನಗುವ ಹರಿಸಿ ನನ್ನ ಭುವಿಗೆ ತರುವ ನಿನ್ನ ಒಡಲ ಮೇಲೆ ನಾ ಮೂಡಿಸುವ ಗೆರೆಗಳು ಮೊಗದ ಮೇಲೆ ನಾ ತರುವ ನಗುವು ಮಾತೃ ಸ್ವರೂಪದ ದೈವತ್ವವು……..
ನನ್ನ ಭೂಮಿಗೆ ತರುವ ನಿನಗೆ ನಾ ನೀಡುವ ಕಾಣಿಕೆ ಎಂದು
-Sunitha Manjunath

By ಕರ್ನಾಟಕ ಇನ್ಫೋಲೈನ್ on February 25, 2012

ಮಂಗಳವಾರ, ಜೂನ್ 21, 2016

ಅಂತಾರಾಷ್ಟ್ರೀಯ ಯೋಗ ದಿನ




ಓಂ ಅಸತೋಮ ಸದ್ಗಮಯ |


 ತಮಸೋಯ ಜ್ಯೋತಿರ್ಗಮಯ |


ಮೃತ್ಯೋರ್ಮಾ ಅಮೃಂತಂಗಮಯ |


 ಓಂ ಶಾಂತಿ ಶಾಂತಿ ಶಾಂತಿ : ||
        
      ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮರತ್ವದ ಕಡೆಗೆ,ಸಾಗಲಿ ಜೀವನ ಮತ್ತು ಎಲ್ಲರಿಗೂ ಶಾಂತಿ ಲಭಿಸಲಿ ಎಂಬ ಸಂದೇಶ ವೇದಗಳಿಂದ ಬಂದಿದೆ. ಹೀಗೆ ಸಾಗುವುದೇ ಅರ್ಥಪೂರ್ಣ ಜೀವನವಲ್ಲವೇ ?
 ಸೃಷ್ಠಿಯ ಆರಂಭದಲ್ಲಿ ಕತ್ತಲೆ ಮಾತ್ರವಿದ್ದು, ಎಲ್ಲೆಲ್ಲೂ ಕತ್ತಲೆಯೇ ಆವರಿಸಿಕೊಂಡಿದ್ದು ನಂತರ ಜಗತ್ತಿಗೆ  ಬೆಳಕು  ಆಗಮಿಸಿ ಓಂಕಾರದ ನಾದ ಹೊಮ್ಮಿತು. ಹೀಗೆ ನಾದದ ಮೂಲಕ ವೇದದ ಆರಂಭವಾಯಿತು. ವೇದಗಳೇ ವಿಶ್ವದ ಪ್ರಥಮ  ಐತಿಹಾಸಿಕ ಮತ್ತು ಲಿಖಿತ ಸಾಹಿತ್ಯದ ದಾಖಲೆಗಳು. ವೇದಗಳು ನಮ್ಮಧರ್ಮದ ಮೂಲವೆನ್ನುತ್ತಾರೆ.  ನಾಲ್ಕು ವೇದಗಳೆಂದರೆ - ಋಗ್ವೇದ, ಯಜುರ್ವೇದ, ಸಾಮವೇದ, ಆಥರ್ವಣ ವೇದ. ಇದರಲ್ಲಿ ಪ್ರತಿಯೊಂದರಲ್ಲಿ ನಾಲ್ಕು ಭಾಗಗಳಿವೆ. ನಂತರ ಹೊರ ಬಂದದ್ದು  ಅಷ್ಟಾಂಗ ಯೋಗ.  ಯೋಗ - ಅಷ್ಟಾಂಗ ಯೋಗದ ಮೂರನೆಯ ಹಂತವಾಗಿದೆ. ಅಷ್ಟಾಂಗ ಯೋಗದಲ್ಲಿರುವ ಎಂಟು ಅಂಗಗಳೆಂದರೆ- ಯಮ, ನಿಯಮ, ಆಸನ, ಪ್ರಾಣಾಯಾಮ,ಪ್ರತ್ಯಾಹಾರ, ಧಾರಣ, ಧ್ಯಾನ,ಮತ್ತು ಸಮಾಧಿ ಎಂದು ಯೋಗ ಸೂತ್ರಕಾರರಾದ ಪತಂಜಲಿ ಮುನಿಗಳು ತಿಳಿಸಿದ್ದಾರೆ.
           ಉತ್ತಮ ಆರೋಗ್ಯ ಯಾರಿಗೆ ತಾನೇ ಬೇಡ?  ಇದಕ್ಕಾಗಿ ನಮ್ಮ ಪೂರ್ವಜರು ವಿವಿಧ ರೀತಿಯಲ್ಲಿ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಇದರಲ್ಲಿ ನಮ್ಮನ್ನು ನಾವೇ ಮಾನಸಿಕ ಹಾಗೂ ಶಾರೀರಿಕವಾಗಿ  ಸರಿಪಡಿಸಿಕೊಳ್ಳುವ ಮಾರ್ಗದಲ್ಲಿ ಯೋಗವಿದ್ಯೆಯೂ ಒಂದು.  ಮೂಲತ: ಭಾರತದ ಕೊಡುಗೆಯಾದ ಯೋಗ - ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದುದು. ಸುಮಾರು 5,000 ವರ್ಷಗಳಿಗೂ ಹಿಂದಿನ ವಿದ್ಯೆಯಾಗಿದ್ದು ಮಂತ್ರಗಳ ಮೂಲಕ  ಋಗ್ವೇದದಲ್ಲಿ  ಪರಿಚಯಿಸಲ್ಪಟ್ಟಿದೆ. ನಂತರ ಉಪನಿಷತ್ತುಗಳಲ್ಲಿ ಸ್ವಲ್ಪ ಸುಧಾರಿತ ರೂಪದಲ್ಲಿ ದಾಖಲಾಗಿದೆ. ಯೋಗಕ್ಕೆ  ಯೋಗಸೂತ್ರಗಳ ಮೂಲಕ ಸರಿಯಾದ ರೂಪ ನೀಡಿದವರು ಯೋಗ ಪಿತಾಮಹ ರೆಂದು ಕರೆಯಲ್ಪಡುವ ಪತಂಜಲಿ ಮಹರ್ಷಿಗಳು. ಯೋಗ ಸೂತ್ರಗಳನ್ನು ಪತಂಜಲಿ ಮುನಿ 2 ನೇ ಶತಮಾನದಲ್ಲಿ ರಚಿಸಿದ್ದು ಇದರಲ್ಲಿ ಮುಖ್ಯವಾಗಿ ಜ್ಞಾನ ಯೋಗ, ಭಕ್ತಿ ಯೋಗ, ಕರ್ಮಯೋಗ, ರಾಜಯೋಗ , ಹಠಯೋಗ,  ಮಂತ್ರಯೋಗ, ಶಿವಯೋಗ, ನಾದ ಯೋಗ, ಲಯ ಯೋಗ,..ಮೊದಲಾದ ಯೋಗ ಪಥಗಳಿವೆ. ಇದರಲ್ಲಿ ಹಠ ಯೋಗ  ಉತ್ತಮ ಆರೋಗ್ಯಕ್ಕೆ ರಹದಾರಿಯಿದ್ದಂತೆ. ಇದು  ಪಂಚಧಾತುಗಳಿಂದ  ರಚಿತವಾಗಿರುವ, ಸಣ್ಣ ವಿಶ್ವವೇ ಆಗಿರುವ ನಮ್ಮ ದೇಹವನ್ನು  ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮತ್ತು   ಎಲ್ಲ ರೀತಿಯ ಕಾಯಿಲೆಗಳಿಂದ ಮುಕ್ತಿಗೊಳಿಸಲು ಸಹಕಾರಿಯಾಗಿದೆ.
            ‘ ಯೋಗ ಕರ್ಮಸು ಕೌಶಲಂ ‘ ಎಂದು ಭಗವದ್ಗೀತೆ ತಿಳಿಸುತ್ತದೆ.ಅಂದರೆ ಯಾವುದೇ ಕೆಲಸವನ್ನು ಕುಶಲತೆಯಿಂದ ಯಶಸ್ವಿಯಾಗಿ ನಿರ್ವಹಿಸುವುದೂ ಯೋಗವೇ. ಹಾಗೆಯೇ ‘ಸಮತ್ವಂ ಯೋಗ ಮುಚ್ಯತೇ’ – ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯೂ ಯೋಗ ಎಂದು ಗೀತೆಯಲ್ಲಿದೆ. ‘ಯೋಗ’ ಯುಜ್ ‘ (ಅರ್ಥ ಸೇರಿಸು) ಎಂಬ ಸಂಸ್ಕೃತ ಧಾತುವಿನಿಂದ  ಉಂಟಾಗಿದೆ. ಯೋಗವೆಂದರೆ ಮನಸ್ಸು ಮತ್ತು ಶರೀರಗಳ ಒಂದುಗೂಡುವಿಕೆ.  ಸ್ವಸ್ಥ ಸದೃಢ ಶರೀರ ಮನಸ್ಸು ಮತ್ತು ಏಕಾಗ್ರ ಚಿತ್ತವಿದ್ದರೆ ಏನನ್ನೂ ಸಾಧಿಸಲು ಸಾಧ್ಯ. ಪತಂಜಲಿ ಮುನಿಗಳು ತಿಳಿಸಿರುವ ಎಂಟು ಅಂಗಗಳೂ ಇದಕ್ಕೆ ಅವಶ್ಯಕ. 1. ಯಮ –ನಡವಳಿಕೆಗಳು, 2. ನಿಯಮ - ಕ್ರಮಬದ್ಧತೆ,ಶಿಸ್ತು, ಜೀವನ ಮೌಲ್ಯಗಳು, 3. ಆಸನ - ದೇಹದ ಭಂಗಿ/ನಿಲುವು 4. ಪ್ರಾಣಾಯಾಮ -  ಉಸಿರಾಟದ ನಿಯಂತ್ರಣ , 5. ಪ್ರತ್ಯಾಹಾರ - ಇಂದ್ರಿಯ ನಿಗ್ರಹ 6. ಧಾರಣ - ಮನಸ್ಸಿನ ಏಕಾಗ್ರತೆ ಆಲೋಚನೆಗಳ ಹಿಡಿತ 7. ಧ್ಯಾನ –ಏಕಾಗ್ರ ಚಿತ್ತದಿಂದ ಚಿಂತನೆ, ಯಾವುದೇ ಮಗ್ನತೆ, ಧ್ಯಾನಿಸುವ ಸ್ಥಿತಿ  8. ಸಮಾಧಿ – ತಲ್ಲೀನತೆ, ಧ್ಯಾನದಿಂದ ಭಾವ ಪರವಶ ಸ್ಥಿತಿ,
             ‘ ಪ್ರತಿ ಜೀವಿಯೂ ಮೂಲತ: ದಿವ್ಯವೇ ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ನಮ್ಮ ಶರೀರದ ಒಳಗೆ ಮತ್ತು ಹೊರಗೆ ಸುಪ್ತವಾಗಿರುವ ದಿವ್ಯತ್ವವನ್ನು ಜಾಗೃತಗೊಳಿಸಿ ಬದುಕ ಬೇಕು.  . ಇದಕ್ಕೆ ಯಾವುದಾದರೂ ಯೋಗ ಮಾರ್ಗವನ್ನು  ( ಅಥವಾ ಎಲ್ಲ ) ಬಳಸಿ ಗುರಿ ಸಾಧಿಸಿ ಮುಕ್ತಿ ಪಡೆಯಿರಿ ಎಂದೂ ಅವರು ಹೇಳಿದ್ದಾರೆ. ಮಹರ್ಷಿ ಅರವಿಂದರು ನಮ್ಮೊಳಗಿನ ದಿವ್ಯತ್ವವನ್ನು ಅಭಿವ್ಯಕ್ತಗೋಳಿಸಿ ಆತ್ಮ ಸಾಕ್ಷಾತ್ಕಾರದತ್ತ ಮುನ್ನಡೆಯಲು ಇರುವ ವ್ಯವಸ್ಥಿತ ಮಾರ್ಗವೇ ಯೋಗ ಎಂದಿದ್ದಾರೆ.ಮಾನವನನ್ನು ಹಂತಹಂತವಾಗಿ  ಉತ್ತಮವಾಗಿ ಪರಿವರ್ತಿಸಿ ಮಹಾ ಮಾನವ, ದೇವ ಮಾನವನನ್ನಾಗಿ ಮಾಡುವ ವೈಜ್ಞಾನಿಕತೆಯೇ ಯೋಗ.
               ಯೋಗದ ಅಂಶಗಳು ನಮ್ಮ ಜೀವನದ ಅವಿಭಾಜ್ಯ  ಅಂಗವೂ ಹೌದು. ಪ್ರಾರ್ಥನೆ,ಉಸಿರಾಟ, ಭಂಗಿಗಳು ಇತ್ಯಾದಿ. ಆದರೆ ಯಾವುದನ್ನು ಹೇಗೆ ವ್ಯವಸ್ಥಿತವಾಗಿ ಮಾಡುವುದು  ಎಂದು ಯೋಗ ತಿಳಿಸುತ್ತದೆ. ಒಟ್ಟಿನಲ್ಲಿ ಪ್ರಕೃತಿಯಿಂದ ಪ್ರೇರಣೆ ಪಡೆದು ರಚಿಸಿದ ಶಾಸ್ತ್ರವೇ ಯೋಗದ ಮೂಲ.
      ಯೋಗಾಸನಗಳಲ್ಲಿ ಪ್ರಕೃತಿಯಲ್ಲಿ ಇರುವ ಮೃಗ-ಪಕ್ಷಿಗಳ  ಭಂಗಿಯನ್ನು ಆಧರಿಸಿಯೇ ಆಸನಗಳನ್ನು ರಚಿಸಿ,ಹೆಸರಿಸಲಾಗಿದೆ.. ಹಾಗೇ ಮರಗಳ ,ಋಷಿಗಳ ಹೆಸರಿನ, ಆಸನಗಳೂ ಇವೆ. ಮುಖ್ಯವಾಗಿ 84 ಆಸನಗಳಿವೆ ಎಂದು ಹೇಳಲಾಗಿದೆ.  ಆಸನಾನಿ ಸಮಸ್ತಾನಿ ಯಾವಂತು ಜೀವ ಜಂತವ: ಎಂದು ಘೇರಂಡ ಸಂಹಿತೆಯಲ್ಲಿ ಸೂಚಿಸಲಾಗಿದೆ. ಸೃಷ್ಟಿಯಲ್ಲಿರುವ ಎಲ್ಲಾ ಜೀವಿಗಳಷ್ಟೂ ಆಸನಗಳಿವೆ ಎನ್ನಲಾಗಿದೆ. ಸೂರ್ಯ ನಮಸ್ಕಾರವು ಯೋಗಾಸನ ಮತ್ತು ಪ್ರಾಣಾಯಾಮಗಳನ್ನೊಳಗೊಂಡಿದ್ದು ಅತ್ಯಂತ ಪರಿಣಾಮಕಾರಿಯಾಗಿದೆ.
          ಯೋಗಾಭ್ಯಾಸದಿಂದ  ಆಗುವ ಪ್ರಯೋಜನಗಳು ಅನೇಕ.ನಿರತಂರ ಯೋಗಾಭ್ಯಾಸದಿಂದ ನರಮಂಡಲದ ಸಾಮರ್ಥ್ಯ ಹೆಚ್ಚಿ ದೇಹ ಉತ್ತಮವಾಗಿ ಕಾರ್ಯವೆಸಗುತ್ತದೆ.ಶರೀರದಲ್ಲಿರುವ ಕಲುಷಿತ  ವಸ್ತುಗಳು, ತ್ಯಾಜ್ಯಗಳೂ ಹೊರಹಾಕಲ್ಪಟ್ಟು  ಆರೋಗ್ಯ ಸುಧಾರಿಸುತ್ತದೆ. ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ರಕ್ತ ಪರಿಚಲನೆ ಸರಿಯಾಗುತ್ತದೆ. ಪಾಚಕಾಂಗಗಳು  ಸಮರ್ಥವಾಗಿ ಕೆಲಸ ಮಾಡಲು ಸಹಕಾರಿ. ಹೃದಯ,ಶ್ವಾಸಕೋಶ, ಕಿಡ್ನಿ,ಮೆದುಳು,ದೇಹದ ಎಲ್ಲ ಪ್ರಮುಖ ಅಂಗಗಳು ಸುಸ್ಥಿತಿಯಲ್ಲಿರುತ್ತವೆ.  ವಾಗುತ್ತವೆ. ಮಾನಸಿಕ ಸಂತೋಷ ಹೆಚ್ಚುತ್ತದೆ. ದೇಹಕ್ಕೆ,ಮನಸ್ಸಿಗೆ  ವಿಶ್ರಾಂತಿ ದೊರೆತಾಗ ಹೆಚ್ಚಿನ ಸಾಧನೆ ಸಾಧ್ಯವಾಗುತ್ತದೆ.
          ಬೆಳಿಗ್ಗೆ ಬೇಗನೇ ಎದ್ದು ಯೋಗಾಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ  ಶಿಸ್ತಿನ ಜೀವನ ನಡೆಸಲು , ಏಕಾಗ್ರತೆ ಹೊಂದಲು  ಕಷ್ಟವಾಗದು.  ಹದಿಹರೆಯದವರಿಗೆ, ಮಹಿಳೆಯರಿಗೆ , ಯೋಗ ಒಂದು ವರದಾನವಿದ್ದಂತೆ. ಜೀವನದ ವಿವಿಧ ಹಂತಗಳಲ್ಲಿ ಸಮರ್ಥವಾಗಿ ಎಲ್ಲ ದೈಹಿಕ ,ಮಾನಸಿಕ ತೊಂದರೆಗಳಿಂದ ಗುಣ ಹೊಂದಬಹುದು. ವಿದೇಶೀಯರೂ ಯೋಗಾಭ್ಯಾಸದಿಂದ ಆಕರ್ಷಿತರಾಗಿ ಎಲ್ಲ ದೇಶಗಳಲ್ಲೂ ಅನುಸರಿಸುತ್ತಿದ್ದಾರೆ. ಪ್ರತಿಯೊಂದು ಆಸನವೂ,ಪ್ರಾಣಾಯಾಮವೂ  ಲಾಭಕಾರಿಯಾಗಿದ್ದು ಚಿಕಿತ್ಸೆಯಾಗಿ ಪರಿಣಾಮಕಾರಿಯಾಗಿದೆ. ದೇಹದ ಎಲ್ಲ ವ್ಯಾಧಿಗಳಿಗೆ ಯೋಗ ಯಾವುದೇ ಅಡ್ಡ ಪರಿಣಾಮವಿಲ್ಲದ ಸುಲಭ ಚಿಕಿತ್ಸೆಯಾಗಿದೆ. ಆದರೆ ಯೋಗ ನಿರಂತರ ನಮ್ಮ ಜೀವನ ಶೈಲಿಯಾಗಬೇಕು. ಯಾರಿಗೆ ಎಷ್ಟು ಅಗತ್ಯವೋ ಅದನ್ನು ನಿರ್ಣಯಿಸಲು,ಕಲಿಸಲು ಪ್ರಸಿದ್ಧ ಯೋಗ ಕೇಂದ್ರಗಳಲ್ಲಿ ನುರಿತ ತಜ್ಞರು, ಶಿಕ್ಷಕರಿದ್ದಾರೆ.   ಪ್ರತಿಯೊಬ್ಬರೂ ಗುರುವಿನ ಮೂಲಕ ಕಲಿಯಬೇಕು. ಎಲ್ಲವೂ ಎಲ್ಲರೂ ಮಾಡಲು ಎಲ್ಲ ಹಂತದಲ್ಲೂ ಸಾಧ್ಯವಿಲ್ಲ. ತಮಗೆ ಬೇಕಾದಷ್ಟನ್ನು ಕಲಿತು ದಿನವೂ ನಿಯಮಗಳೊಂದಿಗೆ ಅಭ್ಯಸಿಸಿದರೆ ನೆಮ್ಮದಿಯಲ್ಲಿ ಬದುಕಲು ಸಾಧ್ಯ.  
              ಯೋಗವನ್ನು ಎಲ್ಲ ವಯೋಮಾನದವರೂ ಕಲಿತು ಮಾಡಬಹುದು. ದೈಹಿಕ,ಮಾನಸಿಕವಾಗಿ ಸದೃಢರಾಗಬಹುದು. ದೇಹೋ ದೇವಾಲಯ: ಪ್ರೋಕ್ತ: ಸ ಜೀವ : ಶಿವ: | ಎಂದು ಮೈತ್ರೇಯ್ಯುಪನಿಷತ್ ನಲ್ಲಿ ಹೇಳಿರುವಂತೆ ದೇಹವೇ ದೇವಾಲಯ, ದೇಹದಲ್ಲಿರುವ ಜೀವವೇ ಮಂಗಳವನ್ನುಂಟುಮಾಡುವ ದೇವರು. ದೇಹವನ್ನು ಮನಸ್ಸನ್ನು ಆರೋಗ್ಯವಾಗಿರಿಸಿಕೊಂಡು ನಮ್ಮನ್ನು ನಾವು ಅರಿಯುವ ಪ್ರಯತ್ನ ಮಾಡುತ್ತಾ ಜೀವನದ ಗುರಿ ಸಾಧಿಸುವುದು ನಮ್ಮೆಲ್ಲರದಾಗಿರಲಿ. ಬೆಳಕಿನಿಂದ ಬೆಳಕನ್ನು ಪಡೆದು ಬೆಳಕಿನತ್ತ ಸಾಗೋಣ. ಇಂದು ಅಂತರಾಷ್ಟ್ರೀಯ ಯೋಗ ದಿನವನ್ನು  ಆಚರಿಸಲ್ಪಡುತ್ತಿರುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಷಯ. ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ  ಯೋಗದ ಮಹತ್ವವನ್ನು ತಿಳಿಸಿ ‘ಭಾರತದ ಪುರಾತನ ಸಂಸ್ಕೃತಿಯ ಅಮೂಲ್ಯ ಕೊಡುಗೆ.ಇದು ಮನಸ್ಸು ಮತ್ತು ದೇಹದ ಒಗ್ಗೂಡುವಿಕೆ,ಆಲೋಚನೆ ಮತ್ತು ಕ್ರಿಯೆಗಳನ್ನೊಳಗೊಂಡಿದೆ. ಯೋಗ ಎಂದರೆ ವ್ಯಾಯಾಮವಲ್ಲ  ವಿಶ್ವದೆಲ್ಲೆಡೆ  ಒಂದಾಗಿ ನಿಸರ್ಗದೊಡನೆ ಗುರುತಿಸಿಕೊಳ್ಳುವಿಕೆ. ಪ್ರಕೃತಿ-ಮಾನವನ ನಡುವೆ ಸೌಹಾರ್ದ ತರುವ ಮತ್ತು ಸರ್ವಾಂಗೀಣ ದೃಷ್ಟಿಯ ಆರೋಗ್ಯ ಪದ್ಧತಿಯಾಗಿದೆ.ಜೀವನಶೈಲಿಯಲ್ಲಿ ಬದಲಾವಣೆಯೊಂದಿಗೆ ಅರಿವನ್ನು ಹೆಚ್ಚಿಸುವುದು.ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳಲು ಸಹಕಾರಿಯಾಗಿದೆ. ನಾವು ಯೋಗ ದಿನಾಚರಣೆಯನ್ನು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಲು ಪ್ರಯತ್ನಿಸೋಣ ‘  ಎಂದು ಹೇಳಿದಾಗ ವಿಶ್ವಸಂಸ್ಥೆ ಸಮ್ಮತಿಸಿ    ಜಗತ್ತಿನ 192 ರಾಷ್ಟ್ರಗಳಲ್ಲಿ  ಅಂತರಾಷ್ಟ್ರೀಯ ಯೋಗ ದಿನಾಚರಿಸಲು ಕರೆ ನೀಡಿದ್ದು 177 ರಾಷ್ಟ್ರಗಳು ಸಹ ಪ್ರಾಯೋಜಕರಾಗಲು ಮುಂದೆ ಬಂದಿರುವುದು ಸುಯೋಗವೇ ಸರಿ.
          2015 ಜೂನ್ 21 ರಂದು ದಕ್ಷಿಣಾಯನದ ಆರಂಭ ದಿನ ( ಅತ್ಯಂತ ಹೆಚ್ಚು ಹಗಲಿರುವ ದಿನ )ಯೋಗ ದಿನಾಚರಣೆಯನ್ನು   ಆಚರಿಸುವ ಸುಸಂದರ್ಭದಲ್ಲಿ ಯೋಗ ಪಿತಾಮಹ ಪತಂಜಲಿ ಮಹರ್ಷಿಗಳಿಗೆ ಭಕ್ತಿಪೂರ್ವಕ ನಮನಗಳು. ವಿಶ್ವದೆಲ್ಲೆಡೆ ಯೋಗದಿಂದ ಆರೋಗ್ಯ ಪಡೆಯೋಣ. ನೆಮ್ಮದಿಯ ಬದುಕು ಎಲ್ಲರಿಗೂ ಸಿಗುವಂತಾಗಲಿ.
ಮಮತಾ ದೇವ

ಸೋಮವಾರ, ಜೂನ್ 20, 2016

ಮಲಗೋ ಮಲಗೆನ್ನ ಮರಿಯೆ

ಮಲಗೋ ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಭುವಿಗೆ?||

ತಾವರೆ ದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ
ನಿದ್ದೆಯ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು

ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ
ಚೆಲುವಲ್ಲಿ ಸಾಟಿಯೆ ಕಾಮ?
ತಿಮ್ಮಪ್ಪನಿಗೂ ಮೂರು ನಾಮ

- ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ

ಭಾನುವಾರ, ಜೂನ್ 19, 2016

’ಅಪ್ಪ ಅಪ್ಪ ನನಗೆ ನೀನೇ ಬೇಕಪ್ಪ’

                                 

        ಅಪ್ಪಂದಿರ ದಿನ ಬಂತು, ಎಲ್ಲರಿಗೂ ಅಪ್ಪ ಅಂದ್ರೆ ತುಂಬಾ ವಿಶೇಷ. ನಂಗು ಕೂಡ. ಆದ್ರೆ ನಾನು ಅವರ ಜೊತೆ ಕಳೆದ ಕ್ಷಣ ಕಡಿಮೆ ಇದ್ದರೂ ಅವರ ಪ್ರೀತಿ ನಂಗೆ ಅಪಾರವಾಗಿ ಸಿಕ್ಕಿದೆ. ನಾನು೮ ವರ್ಷ ಇದ್ದಾಗ ಅಪ್ಪ-ಅಮ್ಮನ್ನ ಕಳ್ಕೊಂಡೆ. ಆದ್ರೆ ಅವರ ನೆನಪು ನನ್ನ ಮನಸಲ್ಲಿ ಅಚ್ಚಳಿಸದೇ ಉಳಿದಿದೆ. ಆ ಮುದ್ದು ನೆನಪನ್ನ ನಿಮ್ಮ ಜೊತೆ ಹಂಚ್ಕೊತಾ ಇದ್ದೀನಿ.

    ನಾನು ನನ್ನಪ್ಪನಿಗೆ ತುಂಬಾ ಮುದ್ದಿನ ಒಬ್ಬಳೇ ಮಗಳು, ಅದರಲ್ಲಂತು ನನ್ನಪ್ಪನಿಗೆ ನಾನು ಅಂದ್ರೆ ಪಂಚಪ್ರಾಣ. ನನ್ನ ಅಮ್ಮ ದೊಡ್ಡ ಸಂಸಾರದ ದೊಡ್ಡ ಸೊಸೆ ಆಗಿದ್ರಿಂದ ಮನೆಯ ಎಲ್ಲ ಜವಾಬ್ದಾರಿ ನನ್ನಮ್ಮನ್ದೆ. ನಾದಿನಿಯರ ಮದುವೆ, ಬಾಣಂತನ ಇದರಲ್ಲಿಯೇ ನನ್ನಮ್ಮ ಕಳೆದುಹೋದ್ರು. ಹಾಗಾಗೀ ನಂಗು ನನ್ನಪ್ಪನಿಗೂ ಅವಿನಾಭಾವ ಸಂಬಂಧ. ನಂಗೆ ಒಂದು ರೀತಿ ಅಮ್ಮ, ಅಪ್ಪ ಎಲ್ಲ ಅವರೇ ಆಗಿದ್ರೂ.

        ಅವರೇ ನಂಗೆ ಸ್ನಾನ, ಊಟ ಎಲ್ಲ ಮಾಡಿಸಬೇಕು. ಒಂದು ದಿನ ಕೂಡ ನಾನು ಕಥೆ ಕೇಳದೆ ಮಲಗೇ ಇಲ್ಲ. ಒಂದು ದಿನ ಅಂತು ನನ್ನಪ್ಪ ಎಲ್ಲಿಗೋ ಹೊರಗೆ ಹೋಗಿದ್ರು, ಹಾಗಾಗಿ ನನ್ನಮ್ಮ ಬಲವಂತದಲ್ಲಿ ನನ್ನ ತಲೆಗೆ ಎಣ್ಣೆ ಹಾಕಿ ನಿನ್ನಪ್ಪ ಬಂದ ಮೇಲೆ ಅವರೇ ಸ್ನಾನ ಮಾಡಿಸ್ತಾರೆ ಅಂತ ಹೇಳಿದ್ದವರು, ನಂಗೆ ನಿದ್ದೆ ಬರ್ತಾ ಇದೆ ಅನ್ನೋ ಕಾರಣಕ್ಕೆ ಅವ್ರೆ ನಂಗೆ ಸ್ನಾನ ಮಾಡಿಸೋಕ್ಕೆ ಬಚ್ಚಲು ಮನೆಗೇ ಕರ್ಕೊಂಡೋಗಿ ನೀರು ಹಾಕೋಕೆ ಶುರು ಮಾಡಿದ್ರು, ಆದ್ರೆ ನಾನು ಅಲ್ಲಿದ್ದ ಟವೆಲ್ ಸುತ್ತ್ಕೊಂಡು ನನ್ನಪ್ಪನ್ನ ಹುಡ್ಕೊಂಡು ಹೋಗಿದ್ದೆ. ಅವಾಗ ನಂಗೆ ೬ ವರ್ಷ.

          ನಾನು ನನ್ನಪ್ಪ ಬರೋ ತನಕ ಊಟ ಮಾಡ್ತಾ ಇರಲಿಲ್ಲ. ಕೆಲವು ಸಲ ನನ್ನಪ್ಪ ಮನೆಗೆ ಬರೋದು ತಡ ಆದ್ರೆ ನಂಗೆ ಎಲ್ಲಿ ನಿದ್ರೆ ಬರುತ್ತೋ ಅಂತ ನನ್ನಮ್ಮ ಏನೇನೋ ಕಥೆ ಹೇಳಿ, ಆಟ ಆಡಿಸಿ ಪಾಪ ಊಟ ಮಾಡಿಸ್ತಿದ್ರು. ಆದ್ರೆ ನನ್ನಪ್ಪ ಬಂದ ಮೇಲೆ ಎಷ್ಟೇ ನಿದ್ರೆ ಮಾಡ್ತಿದ್ರು ಕೂಡಾ ನಾನು ಎದ್ದು ನನ್ನಪ್ಪನ ಜೊತೆ ಒಂದು ತುತ್ತಾದರೂ ತಿನ್ನಲೆಬೇಕು.

      ಒಂದು ಸಲ ನಾನು ಶಾಲೆ ಇಂದ ಬರುವಾಗ ಜೋರು ಮಳೆ.. ನನ್ನಪ್ಪ ತಮ್ಮೆಲ್ಲಾ ಕೆಲಸ ಬಿಟ್ಟು, ಕೊಡೆ ಹಿಡ್ಕೊಂಡು ನನ್ನ ಶಾಲೆ ಹತ್ರ ಬಂದಿದ್ರು, ನನ್ನನ್ನು ತಮ್ಮ ಹೆಗಲ ಮೇಲೆ ಕೂಡಿಸ್ಕೊಂಡು ಮನೆಗೆ ಕರ್ಕೊಂಡು ಬನ್ದ್ರು. ನನ್ನ ಒಂದು ದಿನ ಕೂಡ ಬಿಟ್ಟು ಇರ್ತಿರ್ಲಿಲ್ಲ. ಆದ್ರೆ ನಂಗೆ ಹೇಳದೆ ತುಂಬಾನೇ ದೂರ ಹೋದ್ರು.

      ಅಪ್ಪ ನಂಗೆ ನಿಮ್ಮ ನೆನಪು ತುಂಬಾನೇ ಆಗುತ್ತೇ. ನಂಗೆ ಮತ್ತೆ ನಿಮ್ಮ ಮಡಿಲಲ್ಲಿ ಮಲಗ್ಬೇಕು ಅನಿಸುತ್ತೆ. ನಿಮಗೆ ಒಂದು ಸಿಹಿ ಸುದ್ದಿ ಹೇಳ್ಬೇಕು – ನಾನು, ನಿಮ್ಮ ಪುಟಾಣಿ ಮಗಳು – ಈವಾಗ ಒಂದು ಪುಟ್ಟ ಮಗನಿಗೆ ಅಮ್ಮ ಆಗಿದ್ದೇನೆ. ನಿಮ್ಮ ಮಗಳ ಮೇಲಿನ ಪ್ರೀತಿಯಿಂದ ನೀವೇ ಇವನ ರೂಪದಲ್ಲಿ ವಾಪಸ್ಸು ಬಂದಿದ್ದೀರಾ ಅನ್ನಿಸ್ತಿದೆ.. ಹೌದಲ್ವ ಪಪ್ಪಾ…

 – ಇಬ್ಬನಿ June 22, 2014

ಬುಧವಾರ, ಜೂನ್ 15, 2016

ಮೇ ಟಾಪ್ - 3 ವೀಕ್ಷಣೆಗಳು

 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಮೇ 2016

ಪ್ರಕಟನೆಗಳ ವೀಕ್ಷಣೆ ಟಾಪ್ 3 
  ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ರಷ್ಯಾ

ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್ 

Chrome

Opera

Firefox

ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3 

Android

Windows

Linux

ಆಪರೇಟಿಂಗ್ ಸಿಸ್ಟಮ್ಗಳ ವರ್ಷನಗಳ ಪ್ರಕಾರ

 Windows 8.1
  Windows 7
Google Web Preview
 ಕಳೆದ ತಿಂಗಳ ಪುಟವೀಕ್ಷಣೆಗಳು
1,706+ (ಒಟ್ಟು 61,368+)
ಕಳೆದ ತಿಂಗಳಲ್ಲಿ  G+ ಒಟ್ಟು ಸದಸ್ಯರು ಸಂಖ್ಯೆ
+ 67
ಇಂದಿಗೆ ಒಟ್ಟು ದೇಶಗಳ ವೀಕ್ಷಣೆಗಳು
+ 82

ಮಂಗಳವಾರ, ಜೂನ್ 14, 2016

ನದಿ ನರಸಿಂಹಸ್ವಾಮಿ


Nandi Narasimha, Temple, Maralur, Mallur, Channapattana, ನದಿ ನರಸಿಂಹ, ಮಳೂರು, ಚನ್ನಪಟ್ಟಣಬೆಂಗಳೂರಿನಿಂದ ಮೈಸೂರಿಗೆ ಹೋಗುವ ಹೆದ್ದಾರಿಯಲ್ಲಿ ರೇಷ್ಮೆಯ ನಾಡು ಎಂದೇ ಹೆಸರಾದ ಚನ್ನಪಟ್ಟಣದ ಹೊರವಲಯದಲ್ಲಿರುವ ದೊಡ್ಡ ಮಳೂರಿನ ಬಳಿ ಬಲಕ್ಕೆ ತಿರುಗಿದರೆ ಪುರಾತನ ದೇವಾಲಯವಿರುವ ನದಿ ನರಸಿಂಹಸ್ವಾಮಿಯ ನೆಲವೀಡಿಗೆ ಹೋಗುತ್ತೇವೆ.
ಕಣ್ವ ಮಹರ್ಷಿಗಳು ಪ್ರತಿಷ್ಠಾಪಿಸಿದ ಈ ನರಸಿಂಹಸ್ವಾಮಿ ನದಿಯ ಪಕ್ಕದಲ್ಲಿರುವ ಕಾರಣ ನದಿ ನರಸಿಂಹ ಎಂದೇ ಖ್ಯಾತನಾಗಿದ್ದಾನೆ. ಈಗ ಊರಿನ ಹೊರಗೆ ದೇವಾಲಯವಿದೆ. ಆದರೆ, ಹಿಂದೆ ಊರೇ ಇಲ್ಲಿತ್ತು ಎನ್ನುತ್ತಾರೆ ಊರ ಹಿರಿಯರು.
ಒಮ್ಮೆ ಪ್ರವಾಹ ಬಂದು ಊರಿಗೆ ಊರೇ ಮುಳುಗಿಹೋಯಿತು. ಆಗ ಇಲ್ಲಿ ಉಳಿದಿದ್ದೆಲ್ಲಾ ಬರಿ ಮರಳು. ಹೀಗಾಗಿ ಊರು ಮರಳೂರು ಎಂದು ಹೆಸರಾಯ್ತು. ಚಿಕ್ಕ ಮರಳೂರು, ದೊಡ್ಡ ಮರಳೂರು ಎಂಬ ಭಾಗವೂ ಆಯ್ತು.  ದೊಡ್ಡ ಮರಳೂರು ಅಪ್ರಮೇಯನ ದೇವಾಲಯದಿಂದ ಖ್ಯಾತವಾದರೆ, ಚಿಕ್ಕಮರಳೂರು ನರಸಿಂಹಸ್ವಾಮಿಯಿಂದ ಖ್ಯಾತವಾಯ್ತು.
ಒಮ್ಮೆ ಕಣ್ವ ಮಹರ್ಷಿಗಳ ಕನಸಿನಲ್ಲಿ ಬಂದ ಲಕ್ಷ್ಮೀನಾರಾಯಣ, ಕಾವೇರಿಯ ತಟದಲ್ಲಿ ತನ್ನನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಸೂಚಿಸಿದನಂತೆ. ಅಂದು ಕಣ್ವರು ಪ್ರತಿಷ್ಠಾಪಿಸಿದ ಈ ನರಸಿಂಹ ಅಲ್ಲಿಯೇ ನೆಲೆಸಿ ತನ್ನ ಬಳಿಗೆ ಬರುವ ಭಕ್ತರನ್ನು ಪೊರೆಯುತ್ತಿದ್ದಾನೆ ಎನ್ನುತ್ತಾರೆ ಅರ್ಚಕರು.
Nandi Narasimha, Temple, Maralur, Mallur, Channapattana, ನದಿ ನರಸಿಂಹ, ಮಳೂರು, ಚನ್ನಪಟ್ಟಣನಾಲ್ವಡಿ ಕೃಷ್ಣರಾಜ ಒಡೆಯರು  ದೇವಾಲಯಕ್ಕೆ 12 ಎಕರೆ ಭೂಮಿಯನ್ನು ಇನಾಂ ಆಗಿ ನೀಡಿದ್ದರು ಎಂಬುದನ್ನು ಇತಿಹಾಸ ತಿಳಿಸುತ್ತದೆ. ಸ್ವಾತಿ ನಕ್ಷತ್ರದಲ್ಲಿ ನಡೆಯುವ ಪೂಜೆ ಇಲ್ಲಿನ ವಿಶೇಷ. ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಶನಿವಾರ ಇಲ್ಲಿ ಪರ ನಡೆಯುತ್ತದೆ.
ಪಾಂಚರಾತ್ರಾಗಮ ರೀತ್ಯ ನಿತ್ಯ ಪೂಜೆ, ಅಭಿಷೇಕ ಜರುಗುತ್ತದೆ. ಪ್ರತಿ ಮಂಗಳವಾರ ದೇವಾಲಯದಲ್ಲಿ ವಿಶೇಷ ಪೂಜೆ ಇರುತ್ತದೆ.
ನದಿ ನರಸಿಂಹನ ದೇವಾಲಯ ಸಾಧಾರಣ ಕಗ್ಗಲಿನಿಂದ ನಿರ್ಮಿಸಲಾಗಿದೆ. ದೇವಾಲಯದ ಬಿತ್ತಿಗಳಲ್ಲಿ ಯಾವುದೇ ವಿಶೇಷ ಕೆತ್ತನೆಗಳಿಲ್ಲ. ಆದರೆ, ದೇವಾಲಯದ ಗರ್ಭಗೃಹದಲ್ಲಿರುವ ಮೂರ್ತಿ ಮನಮೋಹಕವಾಗಿದೆ. ಲಕ್ಷ್ಮೀನರಸಿಂಹಸ್ವಾಮಿಯಶಾಂತವದನ ಹೃನ್ಮನ ಸೆಳೆಯುತ್ತದೆ. ಭಕ್ತಿಭಾವ ಮೂಡಿಸುತ್ತದೆ. ಗರ್ಭಗೃಹದ ಪಕ್ಕದಲ್ಲಿ ವಿಘ್ನನಿವಾರಕ ವಿನಾಯಕನ ಸುಂದರ ವಿಗ್ರಹವಿದೆ. ದೇವಾಲಯದ ಗರ್ಭಗೃಹದ ಮುಂದೆ ಜನರು ಸಾಲುಗಟ್ಟಿ ನಿಲ್ಲಲು ನಿರ್ಮಿಸಿರುವ ಕಬ್ಬಿಣದ ಸರಳುಗಳಿಗೆ ಸುಲಿಯದ ತೆಂಗಿನ ಕಾಯಿಗಳನ್ನು ಭಕ್ತರು ಕಟ್ಟಿರುವುದು ಗಮನ ಸೆಳೆಯುತ್ತದೆ. ಇಲ್ಲಿ ಹರಕೆ ಹೊತ್ತು ತೆಂಗಿನ ಕಾಯಿ ಕಟ್ಟಿದರೆ ನೆರವೇರುತ್ತದೆ ಎಂಬುದು ನಂಬಿಕೆ. ಅಂತೆಯೇ ವಿವಿಧ ಧಾನ್ಯಗಳನ್ನು ಕೈಯಲ್ಲಿ ಹಿಡಿದು ಅಗರಬತ್ತಿ ಹಚ್ಚಿಸಿ ಅದರಲ್ಲಿ ಸಿಕ್ಕಿಸಿ ದೇವಾಲಯಕ್ಕೆ 48 ಪ್ರದಕ್ಷಿಣೆ ಹಾಕಿದರೆ ಅಂದುಕೊಂಡದ್ದು ನಡೆಯುತ್ತದೆ ಎಂದೂ ಜನ ನಂಬಿದ್ದಾರೆ.

ದೇವಾಲಯದ ಸುತ್ತಲೂ ಪ್ರಹ್ಲಾದ, ಧ್ರುವ, ಹನುಮಂತ, ಹಯಗ್ರೀವ, ಪರಾಶರ ಮೊದಲಾದ ಕೆತ್ತನೆಗಳಿವೆ. 

ಶುಕ್ರವಾರ, ಜೂನ್ 10, 2016

ನುಡಿಮುತ್ತು - 35

ಕೆಲವೇ ಪ್ರೀತಿಸೋ ಹೃದಯಗಳು ಮಾತ್ರ ನಮ್ಮ ನಗೆಯಲ್ಲಿರೋ ಸಣ್ಣ ಸುಳ್ಳುಗಳನ್ನು, ಕಣ್ಣಿರಿನಲ್ಲಿರೋ ಸತ್ಯನ್ನ ಗುರುತಿಸುತ್ತಾರೆ ಎಂದಿಗೂ ಅವರನ್ನು ಕಳೆದುಕೊಳ್ಳಬಾರದು.

ನೆನಪಿರಲಿ
ಹಣ ಇದ್ರೆ ಸತ್ತ ಪ್ರೇಯಸಿಗೆ ತಾಜ್ ಮಹಲ್ ಬೇಕಾದರೂ ಕಟ್ಟಬಹುದು ಹಣ ಇಲ್ಲ ಅಂದರೆ ಬದುಕಿರೋ ಪ್ರೇಯಸಿಗೆ ತಾಳಿನೂ ಕಟ್ಟಕ್ಕೆ ಆಗಲ್ಲ!!..ಸರೀನಾ... ತಪ್ಪ ..?

ಕಡಲಲ್ಲಿ ಸಾವಿರ ಮುತ್ತುಗಳು ಸಿಗಬಹುದು ಆದರೆ ಜೀವನದಲ್ಲಿ ಸಿಗುವುದು ಎರಡೆ ಮುತ್ತುಗಳು ಅದುವೆ ಪ್ರೀತಿ ಮತ್ತು ಸ್ನೇಹ ಇದರಲ್ಲಿ ಯಾವುದನ್ನೆ ಕಳಕೊಂಡರು ಮನಸಿಗೆ ನೊವಾಗುತ್ತೆ ಅಲ್ವ

ಯಾರ ಯೋಗ್ಯತೆಯನ್ನು ಅವರ ಲೋಪಗಳ ಆಧಾರದ ಮೇಲೆ ನಿರ್ಣಯಿಸಬಾರದು.

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ. — ಶಂಕರಾಚಾರ್ಯರು

"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... " ಕುವೆಂಪು ('ಕನ್ನಡ ದೀಕ್ಷೆ)

ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ. — ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ — ವಿನೋಬಾ ಭಾವೆ

ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ. — ವಿನೋಬಾ ಭಾವೆ

ಉತ್ತಮ ಗುರೂ ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು. — ವಿನೋಬಾ ಭಾವೆ