ಕೆಲವೇ ಪ್ರೀತಿಸೋ ಹೃದಯಗಳು ಮಾತ್ರ ನಮ್ಮ ನಗೆಯಲ್ಲಿರೋ ಸಣ್ಣ ಸುಳ್ಳುಗಳನ್ನು, ಕಣ್ಣಿರಿನಲ್ಲಿರೋ ಸತ್ಯನ್ನ ಗುರುತಿಸುತ್ತಾರೆ ಎಂದಿಗೂ ಅವರನ್ನು ಕಳೆದುಕೊಳ್ಳಬಾರದು.
ನೆನಪಿರಲಿ
ಹಣ ಇದ್ರೆ ಸತ್ತ ಪ್ರೇಯಸಿಗೆ ತಾಜ್ ಮಹಲ್ ಬೇಕಾದರೂ ಕಟ್ಟಬಹುದು ಹಣ ಇಲ್ಲ ಅಂದರೆ ಬದುಕಿರೋ ಪ್ರೇಯಸಿಗೆ ತಾಳಿನೂ ಕಟ್ಟಕ್ಕೆ ಆಗಲ್ಲ!!..ಸರೀನಾ... ತಪ್ಪ ..?
ಕಡಲಲ್ಲಿ ಸಾವಿರ ಮುತ್ತುಗಳು ಸಿಗಬಹುದು ಆದರೆ ಜೀವನದಲ್ಲಿ ಸಿಗುವುದು ಎರಡೆ ಮುತ್ತುಗಳು ಅದುವೆ ಪ್ರೀತಿ ಮತ್ತು ಸ್ನೇಹ ಇದರಲ್ಲಿ ಯಾವುದನ್ನೆ ಕಳಕೊಂಡರು ಮನಸಿಗೆ ನೊವಾಗುತ್ತೆ ಅಲ್ವ
ಯಾರ ಯೋಗ್ಯತೆಯನ್ನು ಅವರ ಲೋಪಗಳ ಆಧಾರದ ಮೇಲೆ ನಿರ್ಣಯಿಸಬಾರದು.
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ. — ಶಂಕರಾಚಾರ್ಯರು
"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... " — ಕುವೆಂಪು ('ಕನ್ನಡ ದೀಕ್ಷೆ)
ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ. — ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ — ವಿನೋಬಾ ಭಾವೆ
ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ. — ವಿನೋಬಾ ಭಾವೆ
ಉತ್ತಮ ಗುರೂ ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು. — ವಿನೋಬಾ ಭಾವೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.