fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಜುಲೈ 31, 2014

ಬುಧವಾರ, ಜುಲೈ 30, 2014

5 ರಿಂದ 3


6 ಚುಕ್ಕೆ 6 ಸಾಲು

ಅಂದದ ಮನೆಗೊಂದು ಚಂದದ ರಂಗೋಲಿ
ಈ ರಂಗೋಲಿ ನೋಡಲು ಸರಳವಾದರೂ, ಚಿತ್ರಿಸಲಯ ಸ್ವಲ್ಪ ಕಟಿನವಾಗಬಹೂದು. ಆದರೂ ಪ್ರಯತ್ನಿಸಿ.

ಮಂಗಳವಾರ, ಜುಲೈ 29, 2014

ಪದಗಳ ಬಂದ 2

                                                                                                                                                ಉತ್ತರ

ಸೋಮವಾರ, ಜುಲೈ 28, 2014

ನಾಣ್ಯದ ಎರಡು ಮುಖ

ಬಡತನ ಸಿರಿತನವೆನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. 
ಆ ನಾಣ್ಯವನ್ನು ಮೇಲೆಸೆದು ಕಾಯುವಂತೆ ನಮ್ಮ ಬದುಕು ಸಾಗುತ್ತಿರುತ್ತದೆ. ಮುಂದಿನ ಹಂತದಲ್ಲಿ ಅಲ್ಲಿ ಯಾವ ರೀತಿಯ ಬದಲಾವಣೆಯಾದರೂ ಆಗಬಹುದು ಆದರೆ ಅದನ್ನು ಇದೇ ಅಂಥ ಹೇಳಲಾಗುವುದಿಲ್ಲ.

ಭಾನುವಾರ, ಜುಲೈ 27, 2014

ಆನೆ

ಕೆಲವೇ ಗೆರೆಗಳಲ್ಲಿ ಆನೆಯ ರಚನೆ
 ಚಿತ್ರ - 1
 ಚಿತ್ರ -2
ಚಿತ್ರ -  3
 ಚಿತ್ರ -4
 ಚಿತ್ರ -5
 
ಚಿತ್ರ -  6

ಶನಿವಾರ, ಜುಲೈ 26, 2014

ಸ್ವತಂತ್ರ ಸಿದ್ಧಲಿಂಗ

ಪ್ರಾಣಲಿಂಗೈಕ್ಯವಾದ ಬಳಿಕ ವಿಧಿ ನಿಷೇಧ, ಪುಣ್ಯ ಪಾಪ
ಮಾನ ಅಪಮಾನ, ಹೆಚ್ಚು ಕುಂದುಗಳೆಂಬವೇನೂ ಇಲ್ಲ.
ಆತನಿರವು ಬೆಂದ ಪಟದಂತೆ, ಬಯಲ ಚಿತ್ರಿಸಿದ ರೂಹಿನಂತೆ,
ತನ್ನ ತೋರದೆ ತಾನೇ ಶಿವನಾಗಿ ನಿಂದ,
ನಿಜಗುರು ಸ್ವತಂತ್ರಸಿದ್ಧಲಂಗೇಶ್ವರ ನಿಮ್ಮ ಶರಣನು.
                                                    ---> ಸ್ವತಂತ್ರ ಸಿದ್ಧಲಿಂಗ

ಗುರುವಾರ, ಜುಲೈ 24, 2014

ಪರದಾಟ



  • ಪರ ಊರಿಗೆ ಹೋದಾಗ ಪಡುವ ಸಂಕಟ    
  • ಪರ ಪರ ಎಂದು ಕೆರೆದುಕೊಳ್ಳಬೇಕೆನಿಸುವಂಥ ಅವಸ್ಥೆ    
  • ಪ್ರಮುಖರೆಲ್ಲ ಔಟಾಗಿ ಪರಾಜಯಕ್ಕೆ ಹತ್ತಿರವಾಗುತ್ತಿದ್ದಂತೆ ಆಟ ಗೆಲ್ಲಲೇಬೇಕೆಂದು ಪಡುವ ಪ್ರಯತ್ನ    
  • ಹೆಣಭಾರದ ವಸ್ತುಗಳನ್ನು ಹೊತ್ತು ಸಾಗಿಸುವಾಗಿನ ಹೆಣಗುವಿಕೆ    
  • ಪರದೆಯ ಹಿಂದೆ ಶ್ರಮ ಪಡುವವರ ಕಷ್ಟ    
  • ಜೀವನವೆಂಬ ಆಟದ ಮೈದಾನದಲ್ಲಿ ಭಗವಂತ ಆಡಿಸುವ ಆಟ    
  • ಅತ್ತ ದರಿ, ಇತ್ತ ನಾರಿ ಎಂಬಂಥ ಸ್ಥಿತಿಯಲ್ಲಿ ಆಯ್ಕೆಗಾಗಿನ ಕಸರತ್ತು   
  •  ಗಟ್ಟಿ ಪರೋಟ ಕೊಟ್ಟಾಗ ತಿನ್ನಲೂ ಆಗದ ಬಿಡಲೂ ಆಗದ ಸ್ಥಿತಿ    
  • ನಗರ ವಾಸಿಗಳ ದಿನಚರಿಯ ಸಾಮಾನ್ಯ ಅಂಶ    
  • ಬಿಡುವ ಹಾಗೂ ಇಲ್ಲ, ತೊಡುವ ಹಾಗೂ ಇಲ್ಲ. ಆಗ ಪರದಾಡುವುದೊಂದೇ ದಾರಿ    
  • ಈ ಆಟ ಡ್ರಾನಲ್ಲಿ ಕೊನೆಗೊಳ್ಳುವುದೇ ಹೆಚ್ಚು    
  • ಒಂದು ದಿನವೂ ಸುಖಪಡದ ರೈತನ ನಿತ್ಯ ಹಳವಂಡ    
  • ಹೊತ್ತು ಹೊತ್ತಿನ ಊಟಕ್ಕಾಗಿ ಪುರುಸೊತ್ತಿಲ್ಲದೇ ಆಡುವ ಒತ್ತಾಯದ ಆಟ-ವಿಶ್ವನಾಥ ಸುಂಕಸಾಳ

ಬುಧವಾರ, ಜುಲೈ 23, 2014

ಅನಂತನಾಗ್


ಜನನ ಅನಂತ ನಾಗರಕಟ್ಟೆ ಸೆಪ್ಟೆಂಬರ್ ೪, ೧೯೪೮
ವೃತ್ತಿ ಚಲನಚಿತ್ರ ನಟ
ಅನಂತನಾಗ್(ಅನಂತ್-ನಾಗರಕಟ್ಟೆ) - ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು ಮತ್ತು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿದ್ದವರು.

ಪರಿವಿಡಿ

ಜೀವನ
ಸಪ್ತಭಾಷಾ ನಟ
ವಿವಿಧ ಭಾಷೆಗಳ ಪ್ರಸಿದ್ಧ ಚಿತ್ರಗಳಲ್ಲಿ
ಕನ್ನಡ ಚಿತ್ರರಂಗದಲ್ಲಿ
ರಾಜಕಾರಣದ ಬದುಕು
ಕನ್ನಡ ಚಿತ್ರಗಳು
ಹಿಂದಿ ಚಿತ್ರಗಳು
ಆಂಗ್ಲ ಚಿತ್ರಗಳು
ಜನಪ್ರಿಯ ಧಾರಾವಾಹಿಗಳು

ಜೀವನ

ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ ೪, ೧೯೪೮ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು.
ಅನಂತನಾಗ್ ಅವರ ಸಹೋದರ ಶಂಕರನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್. ಇವರಿಬ್ಬರೂ ಚಲನಚಿತ್ರರಂಗದಲ್ಲಿ, ಸಕ್ರಿಯರಾಗಿದ್ದವರು.

ಸಪ್ತ (7) ಭಾಷಾ ನಟ

ಚಿತ್ರರಂಗದಲ್ಲಿ ಅವರಿವರನ್ನು ‘ಓ, ಅವರು ಪಂಚ ಭಾಷಾ ತಾರೆ ಎಂದು ಕೆಲವರನ್ನು ಕರೆಯುವುದುಂಟು’. ಅನಂತನಾಗ್ ಸಪ್ತಭಾಷಾ ತಾರೆ. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿ ಎಲ್ಲೆಲ್ಲೂ ವಿಜ್ರಂಭಿಸಿದ್ದಾರೆ.

ವಿವಿಧ ಭಾಷೆಗಳ ಪ್ರಸಿದ್ಧ ಚಿತ್ರಗಳಲ್ಲಿ

ಅನಂತನಾಗ್ ಅವರು ಶ್ಯಾಂ ಬೆನೆಗಾಲ್ ಅವರ ‘ಅಂಕುರ್’ ಚಿತ್ರದಿಂದ ಚಿತ್ರರಂಗಕ್ಕೆ ಬಂದವರು.
ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ, ಮಂಗಳಸೂತ್ರ್. ಯುವ, ಕೊಂಡುರಾ, ಉತ್ಸವ್-ಮುಂತಾದ ಹಲವಾರು ಹಿಂದಿ ಚಿತ್ರಗಳಲ್ಲಿ ಅನಂತ್ ನಟಿಸಿದ್ದಾರೆ. ಕೆಲವೊಂದು ಪಾತ್ರಗಳಿಗೆ ಅನಂತ್ ಬೇಕೇ ಬೇಕು ಎಂದು ಬಯಸುವ ಚಿತ್ರರಂಗದ ಪ್ರಸಿದ್ಧರು ಎಲ್ಲೆಡೆಯ ಮೂಲೆ ಮೂಲೆಗಳಲ್ಲಿದ್ದಾರೆ. ಮರಾಠಿಯ ಅಮೋಲ್ ಪಾಲೇಕರ್ ನಿರ್ದೇಶನದ ‘ಅನಹತ್’, ಮಲಯಾಳಂನ ‘ಸ್ವಾತಿ ತಿರುನಾಳ್’, ತೆಲುಗಿನ ‘ಅನುಗ್ರಹಂ’, ಇಂಗ್ಲಿಷಿನ ‘ಸ್ಟಂಬಲ್’ ಮುಂತಾದ ಹಲವಾರು ಚಿತ್ರಗಳನ್ನು ಈ ನಿಟ್ಟಿನಲ್ಲಿ ಗಮನಿಸಬಹುದು. ಇವೆಲ್ಲಾ ಯಾರೋ ಒಬ್ಬ ನಟರು ಬಂದು ಅಭಿನಯಿಸಿ ಹೋದರು ಎಂಬಂತಹ ಪಾತ್ರಗಳಲ್ಲದೆ ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹವಾದ ಚಿತ್ರಗಳು ಎಂಬುದನ್ನು ನಾವು ಗಮನಿಸಬೇಕು.

ಕನ್ನಡ ಚಿತ್ರರಂಗದಲ್ಲಿ

ಅನಂತನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬಂದದ್ದು ೧೯೭೩ರಲ್ಲಿ ಮೂಡಿಬಂದ ಪಿ. ವಿ. ನಂಜರಾಜ ಅರಸ್ ಅವರ ‘ಸಂಕಲ್ಪ’ ಚಿತ್ರದಿಂದ. ‘ಸಂಕಲ್ಪ’ ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ.
ಅನಂತನಾಗ್ ಅವರನ್ನು ಕನ್ನಡಕ್ಕೆ ಅಮೂಲ್ಯವಾಗಿ ಉಳಿಸಿದ ಚಿತ್ರ ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಅವರ ‘ಹಂಸಗೀತೆ’. ‘ಹಂಸಗೀತೆ’ಯಿಂದ ಅನಂತನಾಗ್ ಕಲಾ ಸಾಂಸ್ಕೃತಿಕ ಲೋಕಗಳಲ್ಲಿ ಜನಪ್ರಿಯರಾದರು. ಮುಂದೆ ೧೯೭೭ರ ದೊರೈ ಭಗವಾನರ ‘ಬಯಲುದಾರಿ’ ಅವರನ್ನು ಕನ್ನಡದ ಮನೆಮನೆಯಲ್ಲೂ ಮನಮನಗಳಲ್ಲೂ ಪ್ರತಿಷ್ಟಾಪಿಸಿತು.
ಅನಂತ್ ಅಭಿನಯಿಸಿದ ಕೆಲವೊಂದು ಚಿತ್ರಗಳಂತೂ ಬೇರೆಯವರಿಗೆ ಅದು ಸಾಧ್ಯ ಎಂದು ಊಹಿಸಲೂ ಕಷ್ಟಕರವಾದದ್ದು. ಅನಂತ್ ಅವರು ಅಭಿನಯಿಸಿರುವ ವಿವಿಧ ಭಾಷೆಗಳ ಪ್ರಸಿದ್ಧ ಚಿತ್ರಗಳಿರಲಿ ಕನ್ನಡದ್ದೇ ಚಿತ್ರಗಳನ್ನು ನೋಡಿದರೂ ‘ಹಂಸಗೀತೆ’, ‘ಕನ್ನೇಶ್ವರ ರಾಮ’, ‘ಬರ’, ‘ಅವಸ್ಥೆ’, ‘ಉದ್ಭವ’, ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬೆಳದಿಂಗಳ ಬಾಲೆ’, ‘ಮತದಾನ’, ‘ಮೌನಿ’, ‘ಅನುರೂಪ’, ‘ರಾಮಾಪುರದ ರಾವಣ’, ‘ಸಿಂಹಾಸನ’, ‘ಅನ್ವೇಷಣೆ’, ‘ಮಾಲ್ಗುಡಿ ಡೇಸ್’ ಇವೆಲ್ಲಾ ಅನಂತ್, ನಾಸಿರುದ್ದೀನ್ ಷಾ ಅಂಥಹ ಕೆಲವರಿಗೆ ಮಾತ್ರ ಸಾಧ್ಯವಿರುವಂತದ್ದು.
ಅನಂತ್ ಅವರನ್ನು ಎಷ್ಟು ವಿಭಿನ್ನವಾಗಿ ಬೇಕಿದ್ದರೂ ಬಳಸಬೇಕೆಂಬುದಕ್ಕೆ ‘ನಾನಿನ್ನ ಬಿಡಲಾರೆ’ ಚಿತ್ರ ಒಂದು ಅಪೂರ್ವ ನಿದರ್ಶನ. ‘ಬಯಲು ದಾರಿ’ ಚಿತ್ರದ ನಂತರದಲ್ಲಿ ಕನ್ನಡದ ಪ್ರಸಿದ್ಧ ನಿರ್ದೇಶಕ ಜೋಡಿ ದೊರೈ ಭಗವಾನರು ಅನಂತನಾಗ್ ಅವರನ್ನು ಗುತ್ತಿಗೆಗೆ ಹಿಡಿದಷ್ಟು ಒಂದಾದ ಮೇಲೊಂದು ಸುಂದರ ಚಿತ್ರಗಳನ್ನು ನಿರ್ಮಿಸಿದರು. ಅದರಲ್ಲೂ ಅನಂತನಾಗ್ ಲಕ್ಷ್ಮೀ ಜೋಡಿ ಅಂತೂ, ಇವರು ನಿಜ ಜೀವನದಲ್ಲಿ ಸತಿ ಪತಿಗಳು ಎಂಬ ಹೃದ್ಭಾವ ಮೂಡಿಸುವಷ್ಟು ಸುಂದರ ಪಾತ್ರಗಳಲ್ಲಿ ಸುಂದರ ಜೋಡಿಯಾಗಿ ಕಂಗೊಳಿಸಿದರು. ‘ಬೆಂಕಿಯ ಬಲೆ’, ‘ಚಂದನದ ಗೊಂಬೆ’, ‘ಇಬ್ಬನಿ ಕರಗಿತು’, ಮುದುಡಿದ ತಾವರೆ ಅರಳಿತು’, ‘ಮಕ್ಕಳಿರಲವ್ವ ಮನೆತುಂಬ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ನಾ ನಿನ್ನ ಬಿಡಲಾರೆ’, ‘ಧೈರ್ಯಲಕ್ಷ್ಮಿ’, ‘ಬಿಡುಗಡೆಯ ಬೇಡಿ’ ಮುಂತಾದ ಚಿತ್ರಗಳಲ್ಲಿ ಈ ಜೋಡಿ ಸಾಮಾನ್ಯ ಜನಜೀವನವನ್ನು ಪ್ರತಿಬಿಂಬಿಸಿದ ಪಾತ್ರಗಳು ಅವಿಸ್ಮರಣೀಯ. ‘ಅರುಣರಾಗ’, ‘ಅನುಪಮ’, ‘ಮುಳ್ಳಿನಗುಲಾಬಿ’, ‘ಹೊಸ ನೀರು’ , ‘ದೇವರ ಕಣ್ಣು’, ‘ಜನ್ಮಜನ್ಮದ ಅನುಬಂಧ’, ‘ಬಾಡದ ಹೂವು’ ಮುಂತಾದವು ಅನಂತ್ ಇತರ ನಟಿಯರೊಂದಿಗೆ ನಟಿಸಿದ ಇಂತದ್ದೇ ಮನಮುಟ್ಟುವ ಚಿತ್ರಗಳ ಸಾಲಿಗೆ ಸೇರಿದಂತಹವು.
ಒಬ್ಬ ಸುರದ್ರೂಪಿ ನಟರಾಗಿದ್ದ ಅನಂತನಾಗ್ ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಮಿಂಚಿದ್ದು, ಚಲನಚಿತ್ರರಂಗದಲ್ಲಿ ಇನ್ಯಾವುದೇ ಹೋಲಿಕೆಗೂ ಸಿಗದಷ್ಟು ಮಿಗಿಲಾದದ್ದು. ‘ಚಾಲೆಂಜ್ ಗೋಪಾಲಕೃಷ್ಣ’, ‘ಗೋಲ್ ಮಾಲ್ ರಾಧಾಕೃಷ್ಣ’, ‘ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು’, ‘ಹೆಂಡ್ತೀಗ್ಹೇಳ್ಬೇಡಿ’, ‘ಗೌರಿ ಗಣೇಶ’, ‘ಗಣೇಶ ಸುಬ್ರಮಣ್ಯ’, ‘ಮನೇಲಿ ಇಲಿ ಬೀದೀಲಿ ಹುಲಿ’, ‘ಧೈರ್ಯಲಕ್ಷ್ಮಿ’, ‘ನಾರದ ವಿಜಯ’, ‘ಹಾಸ್ಯರತ್ನ ರಾಮಕೃಷ್ಣ’, ‘ಯಾರಿಗೂ ಹೇಳ್ಬೇಡಿ’, ‘ಗಾಯತ್ರಿ ಮದುವೆ’, ‘ಇನ್ನೊಂದು ಮದುವೆ’, ‘ಯಾರಿಗೆ ಸಾಲುತ್ತೆ ಸಂಭಳ’, ‘ಉಂಡು ಹೋದ ಕೊಂಡುಹೋದ’, ‘ಉದ್ಭವ’, ‘ಹೆಂಡ್ತಿ ಬೇಕು ಹೆಂಡ್ತಿ’, ‘ಸಮಯಕ್ಕೊಂದು ಸುಳ್ಳು’, ‘ನಾನೇನೂ ಮಾಡ್ಲಿಲ್ಲ’ ಇಂಥಹ ಹಲವಾರು ಚಿತ್ರಗಳನ್ನು ಈ ಪಟ್ಟಿಗೆ ಸೇರಿಸಬಹುದು. ಸದ್ಯದಲ್ಲೇ ಇಂಥಹ ನಿರೀಕ್ಷೆ ಹುಟ್ಟಿಸಿರುವ ‘ಸಕ್ಕರೆ’ ಎಂಬ ಚಿತ್ರ ಬಿಡುಗಡೆಯ ಸಮೀಪದಲ್ಲಿದೆ.
ತಾವು ಅಷ್ಟೊಂದು ದೊಡ್ಡ ನಟರಾದರೂ ಅನಂತ್ ಇತರ ನಾಯಕರು ಪ್ರಧಾನವಾಗಿದ್ದ ಚಿತ್ರಗಳಲ್ಲಿನ ಬೆಂಬಲಿತ ಪಾತ್ರಗಳಲ್ಲಿ ನಟಿಸಲು ಎಂದೂ ಹಿಂಜರಿದವರಲ್ಲ. ರಾಜ್ ಕುಮಾರ್ ಅವರೊಡನೆ ‘ಕಾಮನಬಿಲ್ಲು’; ವಿಷ್ಣುವರ್ಧನರೊಡನೆ ‘ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’; ರವಿಚಂದ್ರನ್ ಜೊತೆ ‘ರಣಧೀರ’, ಶಾಂತಿಕ್ರಾಂತಿ’; ಉಪೇಂದ್ರರೊಡನೆ ‘ಹಾಲಿವುಡ್’ ಇವೇ ಮುಂತಾದ ಅನಂತ್ ನಟಿಸಿದ ಅನೇಕ ಚಿತ್ರಗಳನ್ನು ಈ ಪಟ್ಟಿಯಲ್ಲಿ ಸೇರಿಸಬಹುದು.
‘ಮುಂಗಾರುಮಳೆ’, ‘ಗಾಳಿಪಟ’ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರವಹಿಸಿದ್ದರೂ ಚಿತ್ರದ ಚೌಕಟ್ಟಿನಲ್ಲಿ ಅವರು ಪ್ರಧಾನವಾಗಿ ಎದ್ದು ಕಾಣುತ್ತಾರೆ.
ಭಾರತದ ಖ್ಯಾತ ಧಾರಾವಾಹಿಗಳಲ್ಲೊಂದಾದ ತಮ್ಮ ಸಹೋದರ ದಿವಂಗತ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಲ್ಲದೆ ಕನ್ನಡದಲ್ಲಿಯೂ ಕಿರುತೆರೆಯ ಹಲವಾರು ಪ್ರಸಿದ್ಧ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.
ಅನಂತ್ ಯಾವುದೇ ಪಾತ್ರವಾದರೂ, ಎಷ್ಟೇ ಚಿಕ್ಕ ಸ್ಪೇಸ್ ಇದ್ದರೂ ಅದರ ವ್ಯಾಪ್ತಿಯನ್ನು ವಿಸ್ತೃತವಾಗಿ ಪ್ರೇಕ್ಷಕನ ಅನುಭಾವಕ್ಕೆ ತರಬಲ್ಲ ಅಸಮಾನ್ಯ ನಟರೆನಿಸಿದ್ದು , ಎಲ್ಲೇ ಇದ್ದರೋ, ಹೇಗೇ ಇದ್ದರೂ, ಯಾವುದೇ ಸಣ್ಣ ಪಾತ್ರವೇ ಇದ್ದರೂ ಯಾವುದೇ ಸೀಮೆಗಳ ಬಂಧನವಿಲ್ಲದೆ ಅನಂತರಾಗಿರುವವರು.

ರಾಜಕಾರಣದ ಬದುಕು

ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ, ಕರ್ನಾಟಕ ಸರ್ಕಾರದಲ್ಲಿನ ಶಾಸಕರಾದ ಅನಂತನಾಗ್, ನಂತರ ಜೆ.ಹೆಚ್.ಪಟೇಲ್ ಅವರ ಮಂತ್ರಿಮಂಡಲದಲ್ಲಿ ಮಂತ್ರಿಗಳಾಗಿದ್ದರು.

ಕನ್ನಡ ಚಿತ್ರಗಳು

ಸಂಖ್ಯೆ ವರ್ಷ ಚಿತ್ರದ ಹೆಸರು




1975 ದೇವರ ಕಣ್ಣು




1975 ಹಂಸಗೀತೆ




1976 ಬಯಲು ದಾರಿ




1977 ಕನ್ನೇಶ್ವರ ರಾಮ




1977 ಅನುರೂಪ




1978 ಕುದುರೆಮುಖ




1978 ಮಾತು ತಪ್ಪದ ಮಗ




1978 ಪ್ರೇಮಾಯಣ




1978 ಮಧುರ ಸಂಗಮ




೧೦ 1979 ನಾ ನಿನ್ನ ಬಿಡಲಾರೆ




೧೧ 1979 ಚಂದನದ ಗೊಂಬೆ




೧೨ 1980 ಮಿಂಚಿನ ಓಟ




೧೩ 1980 ಧೈರ್ಯ ಲಕ್ಷ್ಮಿ




೧೪ 1980 ಒಂದು ಹೆಣ್ಣು ಆರು ಕಣ್ಣು




೧೫ 1980 ನಾರದ ವಿಜಯ




೧೬ 1980 ಜನ್ಮ ಜನ್ಮದ ಅನುಬಂಧ




೧೭ 1980 ಪ್ರೇಮಜ್ವಾಲೆ




೧೮ 1981 ಅನುಪಮ




೧೯ 1981 ಗಾಳಿಮಾತು




೨೦ 1981 ಮರೆಯದ ಹಾಡು




೨೧ 1981 ಶ್ರೀಮಾನ್




೨೨ 1982 ಅಂದದ ಅರಮನೆ




೨೩ 1982 ಬಾಡದ ಹೂವು




೨೪ 1982 ಮುಳ್ಳಿನ ಗುಲಾಬಿ




೨೫ 1982 ಬರ




೨೬ 1982 ನನ್ನ ದೇವರು




೨೭ 1982 ಹಾಸ್ಯರತ್ನ ರಾಮಕೃಷ್ಣ




೨೮ 1982 ಬೆತ್ತಲೆ ಸೇವೆ




೨೯ 1983 ಸಿಂಹಾಸನ




೩೦ 1983 ಅನ್ವೇಷಣೆ




೩೧ 1983 ಬೆಂಕಿಯ ಬಲೆ




೩೨ 1983 ಕಾಮನಬಿಲ್ಲು




೩೩ 1983 ಭಕ್ತಪ್ರಹಲ್ಲಾದ




೩೪ 1983 ಇಬ್ಬನಿ ಕರಗಿತು




೩೫ 1983 ಮುದುಡಿದ ತಾವರೆ ಅರಳಿತು




೩೬ 1983 ಗಾಯತ್ರಿ ಮದುವೆ




೩೭ 1983 ಮಕ್ಕಳೇ ದೇವರು




೩೮ 1983 ಚಲಿಸದ ಸಾಗರ




೩೯ 1983 ನೋಡಿ ಸ್ವಾಮಿ ನಾವಿರೋದು ಹೀಗೆ




೪೦ 1984 ಸುಖ ಸಂಸಾರಕ್ಕೆ ೧೨ ಸೂತ್ರಗಳು




೪೧ 1984 ಪ್ರೇಮವೆ ಬಾಳಿನ ಬೆಳಕು




೪೨ 1984 ಪ್ರೇಮಸಾಕ್ಷಿ




೪೩ 1984 ರಾಮಾಪುರದ ರಾವಣ




೪೪ 1984 ಒಲವೇ ಬದುಕು




೪೫ 1984 ಆಕ್ಸಿಡೆಂಟ್




೪೬ 1984 ಮಕ್ಕಳಿರಲವ್ವ ಮನೆತುಂಬ




೪೭ 1985 ಬಿಡುಗಡೆಯ ಬೇಡಿ




೪೮ 1985 ಪರಮೇಶಿ ಪ್ರೇಮ ಪ್ರಸಂಗ




೪೯ 1985 ಶ್ವೇತಗುಲಾಬಿ




೫೦ 1985 ಹಾವು ಏಣಿಯಾಟ




೫೧ 1985 ಸೇಡಿನ ಹಕ್ಕಿ




೫೨ 1985 ಶಬ್ದಗಳು




೫೩ 1985 ಹೆಂಡ್ತಿ ಬೇಕು ಹೆಂಡ್ತಿ




೫೪ 1986 ಹೊಸ ನೀರು




೫೫ 1986 ನೆನಪಿನ ದೋಣಿ




೫೬ 1986 ಅರುಣರಾಗ




೫೭ 1986 ಮನೆಯೇ ಮಂತ್ರಾಲಯ




೫೮ 1987 ತಾಯಿ




೫೯ 1987 ಅಗ್ನಿಪರ್ವ




೬೦ 1987 ಅವಸ್ಥೆ




೬೧ 1987 ಕುರುಕ್ಷೇತ್ರ




೬೨ 1987 ಅತಿರಥ ಮಹಾರಥ




೬೩ 1987 ಧೈವಶಕ್ತಿ




೬೪ 1988 ಬ್ರಹ್ಮ ವಿಷ್ಣು ಮಹೇಷ್ವರ




೬೫ 1988 ರಣಧೀರ




೬೬ 1988 ಶಾಂತಿನಿವಾಸ




೬೭ 1988 ವರ್ಣಚಕ್ರ




೬೮ 1988 ಶ್ರೀ.ವೆಂಕಟೇಶ್ವರ ಮಹಿಮೆ




೬೯ 1988 ಬಾಳೊಂದು ಭಾವಗೀತೆ




೭೦ 1988 ಮುತ್ತೈದೆ




೭೧ 1989 ಅಮಾನುಷ




೭೨ 1989 ಹೆಂಡ್ತಿಗೇಳ್‌ಬೇಡಿ




೭೩ 1989 ಇದು ಸಾಧ್ಯ




೭೪ 1989 ಗಗನ




೭೫ 1990 ಗೋಲ್‌ಮಾಲ್ ರಾಧಾಕೃಷ್ಣ




೭೬ 1990 ರಾಮರಾಜ್ಯದಲ್ಲಿ ರಾಕ್ಷಸರು




೭೭ 1990 ಸ್ವರ್ಣ ಸಂಸಾರ




೭೮ 1990 ಚಾಲೆಂಜ್ ಗೋಪಾಲಕೃಷ್ಣ




೭೯ 1990 ಉದ್ಭವ




೮೦ 1990 ಅಭಿಮನ್ಯು




೮೧ 1990 ಮತ್ತೆ ಹಾಡಿರು ಕೋಗಿಲೆ




೮೨ 1990 ಅನಂತ ಪ್ರೇಮ




೮೩ 1990 ಗಣೇಶನ ಮದುವೆ




೮೪ 1990 ಇವಳೆಂತ ಹೆಂಡ್ತಿ




೮೫ 1991 ಮನೇಲಿ ಇಲಿ ಬೀದೀಲಿ ಹುಲಿ




೮೬ 1991 ಗೋಲ್‌ಮಾಲ್ ಭಾಗ-೨




೮೭ 1991 ರೋಲ್‌ಕಾಲ್ ರಾಮಕೃಷ್ಣ




೮೮ 1991 ಗೌರಿ ಗಣೇಶ




೮೯ 1991 ಹೊಸಮನೆ ಅಳಿಯ




೯೦ 1991 ನಾಗಿಣಿ




೯೧ 1992 ಉಂಡು ಹೋದ ಕೊಂಡು ಹೋದ




೯೨ 1992 ವಜ್ರಾಯುಧ




೯೩ 1992 ಗಣೇಶ ಸುಬ್ರಹ್ಮಣ್ಯ




೯೪ 1992 ಒಂದು ಸಿನಿಮಾ ಕಥೆ




೯೫ 1992 ಶಕ್ತಿ ಯುಕ್ತಿ




೯೬ 1992 ಮರಣ ಮೃದಂಗ




೯೭ 1992 ಝೇಂಕಾರ




೯೮ 1993 ರಾಜಕೀಯ




೯೯ 1993 ಆತಂಕ




೧೦೦ 1993 ಮಾಂಗಲ್ಯ ಬಂಧನ




೧೦೧ 1993 ಕಾದಂಬರಿ




೧೦೨ 1993 ನಿಷ್ಕರ್ಷ




೧೦೩ 1994 ತೂಗುವೆ ಕೃಷ್ಣನ




೧೦೪ 1994 ಯಾರಿಗೂ ಹೇಳ್ಬೇಡಿ




೧೦೫ 1995 ಬೆಳದಿಂಗಳ ಬಾಲೆ




೧೦೬ 1995 ನಿಲುಕದ ನಕ್ಷತ್ರ




೧೦೭ 1996 ಸಮಕ್ಕೊಂದು ಸುಳ್ಳು




೧೦೮ 1996 ತಾಳಿ ಪೂಜೆ




೧೦೯ 1996 ನಿರ್ಬಂಧ




೧೧೦ 1996 ಜೀವನದಿ




೧೧೧ 1997 ಗಣೇಶ ಐ ಲವ್ ಯು




೧೧೨ 1999 ವಿಶ್ವ




೧೧೩ 1999 ನಾನೇನು ಮಾಡಿಲ್ಲ




೧೧೪ 2000 ಟೈಗರ್ ಪದ್ಮಿನಿ




೧೧೫ 2000 ಚಾಮುಂಡಿ




೧೧೬ 2000 ಕೃಷ್ಣಲೀಲೆ




೧೧೭ 2000 ನನ್ನ್ ಹೆಂಡ್ತಿ ಚೆನ್ನಾಗಿದ್ದಾಳೆ




೧೧೮ 2000 ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ




೧೧೯ 2001 ಮತದಾನ




೧೨೦ 2001 ಕುರಿಗಳು ಸಾರ್ ಕುರಿಗಳು




೧೨೧ 2001 ಅಸುರ




೧೨೨ 2001 ಆಂಟಿಪ್ರೀತ್ಸೆ




೧೨೩ 2001 ಚಿತ್ರ




೧೨೪ 2001 ಅಮ್ಮ




೧೨೫ 2001 ನೀಲ




೧೨೬ 2002 ಭೂತಯ್ಯನ ಮಕ್ಕಳು




೧೨೭ 2002 ಮನಸೇ ಓ ಮನಸೇ




೧೨೮ 2002 ನಾನು ನಾನೇ




೧೨೯ 2002 ಹಾಲಿವುಡ್




೧೩೦ 2003 ಆನಂದ




೧೩೧ 2003 ಬೆಂಗಳೂರು ಬಂದ್




೧೩೨ 2003 ಲಂಕೇಶ್ ಪತ್ರಿಕೆ




೧೩೩ 2003 ಪ್ರೀತಿ ಪ್ರೇಮ ಪ್ರಣಯ




೧೩೪ 2003 ಖುಷಿ




೧೩೫ 2004 ಸಾಗರಿ




೧೩೬ 2004 ಬಿಡಲಾರೆ




೧೩೭ 2004 ಪಕ್ಕದಮನೆ ಹುಡುಗಿ




೧೩೮ 2005 ನೆನಪಿರಲಿ




೧೩೯ 2005 ವಿಷ್ಣುಸೇನ




೧೪೦ 2006 ಶ್ರೀ




೧೪೧ 2006 ಉಪ್ಪಿದಾದಾ ಎಂ.ಬಿ.ಬಿ.ಎಸ್




೧೪೨ 2006 ರವಿಶಾಸ್ತ್ರಿ




ಹಿಂದಿ ಚಿತ್ರಗಳು

  • ಅಂಕುರ
  • ನಿಶಾಂತ
  • ಕಲಿಯುಗ್
  • ಗೆಹ್ರಾಯುನ್
  • ಉತ್ಸವ್
  • ಯೂವಾ

ಆಂಗ್ಲ ಚಿತ್ರಗಳು

ಜನಪ್ರಿಯ ಧಾರಾವಾಹಿಗಳು