fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಜುಲೈ 07, 2014

ಕುಣಿಯುವ ನಾಣ್ಯ

ಡ್ಯಾನ್ಸ್ ಎಂದರೆ ಮಕ್ಕಳಿಗೆ ಬಹಳ ಇಷ್ಟ. ಅದರಲ್ಲೂ ನಿರ್ಜೀವ ವಸ್ತುವನ್ನು ಕುಣಿಸುವಾಗ ಅವುಗಳಿಗೆ ಸಿಗುವ ಮಜಾನೇ ಬೇರೆ. ಇನ್ನು ಸುಮ್ಮನೆ ಇರುವ ಒಂದು ನಾಣ್ಯ ತಕಧಿಮಿತ ಎಂದರೆ ಎಷ್ಟು ಖುಷಿಯಾಗಬೇಡ! ನಾಣ್ಯವನ್ನು ಹಾಗೆ ಕುಣಿವಂತೆ ಮಾಡೋದು ಬಹಳ ಸುಲಭ. 
ಏನೇನು ಬೇಕು?   
  • ಬೌಲ್   
  • ತಣ್ಣನೆ ನೀರು  
  •  ನಾಣ್ಯ   
  • ಗಾಜಿನ ಬಾಟಲ್ 
ಏನು ಮಾಡಬೇಕು? 
ಬೌಲ್ ಒಳಗೆ ತಣ್ಣನೆ ನೀರು ಹಾಕಿ.ಈಗ ಬಾಟಲಿಯನ್ನು ತೆಗೆದುಕೊಂಡು, ಬೌಲ್ ಒಳಗೆ ಕುತ್ತಿಗೆ ಮುಳುಗುವ ಹಾಗೆ ಅದ್ದಿ. ಯಾವುದೇ ಕಾರಣಕ್ಕೂ ನೀರು ಬಾಟಲಿಯ ಒಳ ಹೋಗುವ ಹಾಗಿಲ್ಲ.ನಂತರ ಬಾಟಲಿಯನ್ನ ನೇರ ನಿಲ್ಲಿಸಿ, ಅದರ ಮುಚ್ಚುಳದ ತುದಿಯಲ್ಲಿ ನಾಣ್ಯವನ್ನು ಇಡಿ.ಬಾಟಲಿಯನ್ನು ಎರಡೂ ಕೈಯಿಂದ ಬಿಗಿ ಮಾಡಿ ಹಾಗೆಯೇ ಇಟ್ಟುಕೊಳ್ಳಿ. ನಾಣ್ಯ ಕುಣಿಯುವುದನ್ನು ಗಮನಿಸಿ.(ಬಾಟಲಿಯೊಳಗೆ ಆವರಿಸಿರುವ ತಣ್ಣನೆಯ ವಾತಾವರಣದ ಮೇಲೆ ನಿಮ್ಮ ಮೈಶಾಖ ಆಕ್ರಮಣ ಮಾಡಲು ಶುರುಮಾಡುತ್ತದೆ. ಆಗ ಮೇಲ್ಮುಖ ಒತ್ತಡ ಉಂಟಾಗಿ, ನಾಣ್ಯ ಕುಣಿಯುತ್ತದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು