fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಜುಲೈ 14, 2014

ಬಸವಕಲ್ಯಾಣ


ಪವಿತ್ರ ಪುಣ್ಯತಾಣ ಬಸವಕಲ್ಯಾಣ

ಬಸವಣ್ಣ, basavanna, ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,
  
  ಬಸವಕಲ್ಯಾಣ ಬೀದರ್ ಜಿಲ್ಲೆಯ ಪವಿತ್ರ ಯಾತ್ರಾಸ್ಥಳ. ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ರಾಜಧಾನಿಯಾಗಿ ಮೆರೆದ ಬಸವಕಲ್ಯಾಣ ಕ್ರಾಂತಿಯೋಗಿ, ಜಗಜ್ಯೋತಿ ಬಸವಣ್ಣನವರ ಪಾದಧೂಳಿನಿಂದ ಪವಿತ್ರ ಪುಣ್ಯಕ್ಷೇತ್ರವಾಯಿತು.
        ಚಾಳುಕ್ಯರ ೧ನೆಯ ಸೋಮೇಶ್ವರ 11ನೆಯ ಶತಮಾನದಲ್ಲಿ ಕಲ್ಯಾನಪುರವನ್ನು ನಿರ್ಮಿಸಿ ತನ್ನ ರಾಜಧಾನಿಯಾಗಿ ಮಾಡಿಕೊಂಡ. 6ನೆಯ ವಿಕ್ರಮಾದಿತ್ಯನ ಕಾಲದಲ್ಲಿ ಕಲ್ಯಾಣ ವೈಭವದ ಉತ್ತುಂಗಕ್ಕೇರಿತು. 12ನೆಯ ಶತಮಾನದ ರಾಜಕೀಯ ಮತ್ತು ಧಾರ್ಮಿಕ ಕ್ರಾಂತಿಗಳಿಂದಾಗಿ ಕಲ್ಯಾಣಕ್ಕೆ ವಿಶಿಷ್ಟ ಸ್ಥಾನ ದೊರೆಯಿತು.
ಬಸವೇಶ್ವರರ ನೇತೃತ್ವದಲ್ಲಿ ನಡೆದ ವೀರಶೈವ ಧರ್ಮಪ್ರಸಾರ ಕಾರ್ಯಕ್ಕೆ ಕಲ್ಯಾಣವೇ ಕೇಂದ್ರವಾಯಿತು. ಆ ಕಾಲದಲ್ಲೇ ಕಲ್ಯಾಣ ವೀರಶೈವ ಧರ್ಮ ಸಭೆಸಮ್ಮೇಳನವಿಚಾರಗೊಷ್ಠಿಆಧ್ಯಾತ್ಮ ಸಾಧನೆಗಳಿಗೆ  ಕೇಂದ್ರವಾಯಿತು. ಸಹಸ್ರಾರು ಶರಣ, ಶರಣೆಯರು ಇಲ್ಲಿಗೆ ಆಗಮಿಸಿ ಅನುಭವ ಮಂಟಪದಲ್ಲಿ ಕಲೆತು ವಚನಾಮೃತಗಳನ್ನು ಸವಿಯುತ್ತಿದ್ದರು. ಅನುಭವ ಮಂಟಪದಲ್ಲಿ ಬಸವೇಶ್ವರಅಲ್ಲಮಪ್ರಭುಚನ್ನಬಸವಣ್ಣಸಿದ್ಧರಾಮಅಕ್ಕ ಮಹಾದೇವಿಮಡಿವಾಳ ಮಾಚಯ್ಯ ಮೊದಲಾದವರು ವೀರಶೈವ ಸಂಪ್ರದಾಯ ಕುರಿತ ಮಹತ್ವದ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಕ್ಕ, ಬಸವಣ್ಣರಿದ್ದ ಕಲ್ಯಾಣ ಅವಿಮುಕ್ತ ಕ್ಷೇತ್ರವಾಯಿತು.ಬಿಜ್ಜಳನ ಹತ್ಯೆಯ ಬಳಿಕ ಕಲ್ಯಾಣ ಕಳಾಹೀನವಾಯ್ತು.
ಚಾಳುಕ್ಯರ ಕಾಲದಲ್ಲಿ ಕಲ್ಯಾಣದಲ್ಲಿ ಅನೇಕ ದೇವಾಲಯಗಳು, ಬಸದಿಗಳುಮಠ, ಮಂದಿರಗಳು ನಿರ್ಮಾಣವಾದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ಭಾವನ ಗಂಧವಾರಣನೆಂಬ ಸಾಮಂತ ಕಟ್ಟಿಸಿದ ತುಂಬೇಶ್ವರ ದೇವಸ್ಥಾನ. ಜೈನಗೋಷ್ಠಿಗಾಗಿ ದಾನ ಚಿಂತಾಮಣಿ ಅತ್ತಿಮಬ್ಬೆ ಕಟ್ಟಿಸಿದ್ದ ಚಂದ್ರಪ್ರಭ ಜಿನಾಲಯಅರಮನೆಯ ದಕ್ಷಿಣ ಭಾಗದಲ್ಲಿ ಭೀಮರಸ ಕಟ್ಟಿಸಿದ್ಧ ಭೀಮೇಶ್ವರ ದೇವಾಲಯ, ಕೇಶವ ದೇವಾಲಯತ್ರಿಭುವನಮಲ್ಲ ಮಾಣಿಕನ ದೇವಾಲಯನಾರಾಯಣ ದೇವಾಲಯ, ಸ್ವಯಂಭೂ ಹಾಟಕೇಶ್ವರನೀಲಕಂಠ ದೇಗುಲಮಧುಕೇಶ್ವರತ್ರಿಪುರಾಂತಕ ದೇವಾಲಯಗಳಿದ್ದವೆಂಬ ಉಲ್ಲೇಖಗಳಿವೆ. ನಾರಾಯಣಪುರ ದೇವಾಲಯ ಹೊರತು ಪಡಿಸಿ, ಮಿಕ್ಕೆಲ್ಲ  ದೇವಾಲಯಗಳೂ ಈಗ ನಾಶವಾಗಿವೆ.
ಬಸವೇಶ್ವರರು ಧ್ಯಾನ ಮಾಡುತ್ತಿದ್ದ ಗವಿಅಕ್ಕನಾಗಮ್ಮನ ಗವಿಮೋಳಿಗೆ ಮಾರಯ್ಯಮಡಿವಾಳ ಮಾಚಯ್ಯಅಲ್ಲಮಪ್ರಭು,ರುದ್ರಮುನಿಅಂಬಿಗರ ಚೌಡಯ್ಯಉರಿಲಿಂಗಿ ಪೆದ್ದಿ ಮೊದಲಾದ ಶರಣರ ಸ್ಮಾರಕಮಂದಿರಗುಹಾದಿ ಸ್ಥಳಗಳು,ಪ್ರಭುದೇವರ ಗದ್ದಿಗೆಪರುಷಗಟ್ಟಿಅನುಭವ ಮಂಟಪದ ನೆಲಗಟ್ಟು ಮೊದಲಾದುವು ಅಲ್ಲಿ ನಡೆದ ಧಾರ್ಮಿಕ ಕ್ರಾಂತಿಗೆ ಸಾಕ್ಷಿಯಾಗಿ ನಿಂತಿವೆ.
ಬೀದರ್ ಶೋಲಾಪುರ ರಸ್ತೆಯಲ್ಲಿ ಬೀದರ್ ನಿಂದ 80 ಕಿಲೋ ಮೀಟರ್ ದೂರದಲ್ಲಿದೆ.
ಸಂಪರ್ಕ: ನಿರ್ದೇಶಕರುಪ್ರವಾಸೋದ್ಯಮ ಇಲಾಖೆಖನಿಜ ಭವನರೇಸ್‌ಕೋರ್ಸ್ ರಸ್ತೆಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು