fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಜುಲೈ 19, 2014

ಮನ್ಸು ಜಾರೋಯ್ತು, ಪವರ್ರೂ ವೊಂಟೋಯ್ತು

                                           ಎಲ್ಲಿ ಜಾರಿತೋ ಮನವು, ಎಲ್ಲೆ ಮೀರಿತೋ, ಕಾಣದಾಯಿತೋ..?ಮಂತ್ರಿ ಪೋಸ್ಟ್‌ಗೆ ರಾಜೀನಾಮೆ ವಗಾಯಿಸಿದ್ಮೇಕೆ ಫುಲ್ ಫೀಲಿಂಗ್‌ನಾಗೆ ಹಿಂಗಂತ ಹಾಡ್ಕಂಡು ಸೋಭಕ್ಕೋರು ವಿಧಾನಸೌಧದಿಂದ ಎಕ್ಸಿಟ್ಟು ತಕ್ಕತಾಯಿದ್ರು. ಅದೇ ಟೇಮ್ಗೆ ಸರ್ಯಾಗಿ 'ಸೋ ಎನ್ನಿರೇ ಸೋಭಕ್ಕ ಎನ್ನಿರೇ' ಅಂತ ಹಾಡೇಳ್ಕಂಡು ಮೈಲಾರಿನೂ ಅಡ್ಡ ಬಂದ. ಸೋಭಕ್ಕೋರು ಹಾಡ್ತಾಯಿದ್ದಿದ್ನ ಕೇಳುಸ್ಕಂಡು ಅಲ್ಲಿ-ಇಲ್ಲಿ ವುಡ್ಕಕ್ಕೆ ಸುರು ಹಚ್ಕಂಡ. 'ಸಟ್ನಳ್ಳಿ ದಾಸಯ್ಯ ಹಿಟ್ನೋತ್ಗೆ ಹಾಜರ್ರು ಅನ್ನಂಗೆ ಟೇಮ್ಗೆ ಸರ್ಯಾಗಿ ಬಂದ್ಬುಟ್ಟಲ್ಲಾ ಮೈಲಾರಿ. ಬಂದೋನು ಅದೇನು  ವುಡುಕ್ತಾಯಿರೋದು ?' ಅಂದ್ರು ಸೋಭಕ್ಕೋರು. 'ಸಂದಾಕಿ ಕೇಳುದ್ರಿ ಬುಡಿ. ನೀವೇ ಅದೇನೋ ಜಾರೋಯ್ತು, ಕಾಣ್ದಾಗೋಯ್ತು ಅಂತ ಯೋಳ್ತಾಯಿದ್ದೀರಿ. ಏನರ ಬಿದ್ದೋಯ್ತಾ ಅಂತ ವುಡುಕ್ತಾಯಿವ್ನಿ ಕಣೇಳಿ' ಅಂತಂದ ಮೈಲಾರಿ. 
                    'ಲೇ ಹಳೇ ಬೇವಾರ್ಸಿ ನಾನು ಭಾವಗೀತೆ ಯೋಳ್ಕಂಡು ಪೀಲಿಂಗ್ನಾಗೆ ವೋಯ್ತಾಯಿದ್ರೆ ಬಂದು ಡವ್ವು ಕಟ್ತಾಯಿದ್ದೀಯ' ಅಂತ ಸೋಭಕ್ಕೋರು ಬೈದ್ರು. 'ಭಾವನ ಗೀತೆನೋ, ಮಾವನ ಗೀತೆನೋ ನಂಗೆ ತಿಳೀವಲ್ದು ಕಣಕ್ಕ. ಈವಾಗ ಪೀಲಿಂಗು ಆಗಂಥದ್ದು ಏನಾಗದೆ ನಿಮ್ಗೆ?' ಅಂತೇಳಿ ಮೈಲಾರಿ ಕೇಳ್ದ. 'ಇನ್ನಾಗಂಟ ಕರೆಂಟ್ ಮಂತ್ರಿ ಅಗಿದ್ದೆ ಕಣ್ಲಾ. ಈವತ್ತು ರಾಜೀನಾಮೆ ಕೊಟ್ಟಾಕ್ದೆ. ರಾಜೀನಾಮೆ ಪತ್ರಾನ ಬರ್ಯೋವಾಗ ಕರೆಂಟು ಕಂಬಾನೆ ನನ್ ತಲೆಮ್ಯಾಲೆ ಬಿದ್ದಂಗೆ, ಟ್ರಾನ್ಸ್‌ಫಾರ್ಮರ್ರು ಶಾಕ್ ವೊಡ್ದಂಗೆ, ಇರೋಬರೋ ಲೈಟುಗ್ಳು ಪಟಪಟಾಂತ ವೊಡ್ದೋದಂಗೆ ಆಬುಟ್ಟಿತ್ತಪ್ಪ. ವೊಟ್ನಾಗೆ ಸ್ಯಾನೆ ಬ್ಯಾಸ್ರ ಆಗೋಗಿತ್ತೇಳು. ಈವಾಗ ನೋಡು ನನ್ ಲೈಫು ಕರೆಂಟು ಇಲ್ದಿರೋ ಕಂಬಿ ಥರ ಆಗೋಗದೆ' ಅಂದ್ರು ಸೋಭಕ್ಕ. 'ವೋ ಹಂಗಾ ? ರಾಜಿನಾಮೆ ಪತ್ರಾವ ನಮ್ಮೂರ್ಗೆ ಬಂದು, ನಮ್ಮಟ್ಟಿನಾಗೆ ಕೂತು ಬರೀಬೇಕಾಗಿತ್ತೇಳಿ. ಯಾಕೇಳಿ ಅಲ್ಲಿ ಲೈಟು ಕಂಬಾನೂ ಇರಲ್ಲ ತಲೆಮ್ಯಾಲೆ ಬೀಳಕ್ಕೆ, ಟ್ರಾನ್ಸ್‌ಪಾರ್ಮರ್ರು ಇಲ್ಲ ಶಾಕ್ ವೊಡ್ಯಕ್ಕೆ, ಇನ್ನ ತಂತಿನಾಗಂತೂ ಕರೆಂಟೇ ಇರಲ್ಲ ಅಂತೀನಿ. ಅದುಕ್ಕೆ ಅಲ್ವೇ, ನಾವು ಬಟ್ಟೆ ವೊಗ್ದು ತಂತಿಮ್ಯಾಲೆ ವೊಣಗಾಕೋದು' ಅಂತಂದ ಮೈಲಾರಿ. 'ಅಲ್ಲ ಕಣಕ್ಕ ರಾಜೀನಾಮೆ ಕೊಡು ಅಂತ ಯಾರರ ಕೇಳಿದ್ರಾ? ನೀವೇ ತಾನೆ ನಾನು ವೋಯ್ತಿನಿ, ವೋಯ್ತಿನಿ, ಟಾಟಾ, ಬಾಯ್ ಬಾಯ್ ಅಂತ ವೋಗೋವಾಗ, ಬರೋವಾಗ ಪದಾವ ಹಾಡ್ತಾಯಿದ್ದಿದ್ದು' ಅಂತೇಳಿ ಮೈಲಾರಿ ವಸಿ ಗರಂ ಆಗೋದ. 
                    'ಅಲ್ಲಲೇ ಕಮಂಗಿ, ನಂಗೆ ಕಮ್ಲ ಪಕ್ಸುದೊಳ್ಗೆ ಯಾರ್ಲಾ ಅವ್ರೆ ದಿಕ್ಕು. ನಾನು ಯಾರನ್ನ ನಂಬಾದು ನೀನೇ ವಸಿ ಯೋಳು ?' ಅಂದ್ರು ಸೋಭಕ್ಕ. 'ಸಂದಾಕದೆ ನೀವೇಳೋ ಚಂದಮಾಮ ಸ್ಟೋರಿ. ಇನ್ನೇನು ಸರ್ಕಾರ ಅವಾಗ್ಲೋ ಈವಾಗ್ಲೋ ಬಿದ್ದೋಯ್ತದೆ ಅನ್ನೋವಾಗ ರಾಜೀನಾಮೆ ವಗಾಯ್ಸಿದ್ದೀರಿ. ಯಡೂರಪ್ನೋರು ಪಕ್ಸ ಬುಟ್ಟಾಗ್ಲೆ ನೀವು ಬುಡೋದಪ್ಪ. ನಿಮ್ಗೆ ಅಕ್ಕಿಮ್ಯಾಲಾಸೆ, ನೆಂಟ್ರುಮ್ಯಾಲೆ ಪ್ರೀತಿ'.'ಮಂತ್ರಿ ಪೋಸ್ಟು ಬೇಕಾಯಿತ್ತು ಅದುಕ್ಕೆ ಇನ್ನಾಗಂಟ ಇದ್ದೋದ್ರಿ. ಸರ್ಕಾರ ಏನರ ಇನ್ನಾ ಒಂದು ವರ್ಸ ಇರ್ತಾಯಿದ್ದಿದ್ರೆ ಬುಟ್ಟು ವೋಯ್ತಾಯಿದ್ರಾ ? ಗೂಟ ವೊಡ್ಕಂಡು ಇರ್ತಾ ಇದ್ರಲ್ವಾ ? ಇರೋಗಂಟ ಇದ್ದು ಎದ್ದೋಗೋ ಮಾತು ಬಿದ್ದೋಗ್ಲಿ ಅಂತ ಈವಾಗ ನಂಗ್ಯಾರು ದಿಕ್ಕು, ನಾನು ಯಾರುನ್ನ ನಂಬೋದು ಅದು ಇದು ಅಂತ ರಾಗ ಕಟ್ತಾಯಿದ್ದೀರಿ.  
                    ನೀವೇನೋ ವೊಳ್ಳೇರು ಅಂದ್ಕಂಡಿದ್ದೆ. ಇದ್ಯಾಕೋ ಸರಿ ಕಾಣಾಕ್ಕಿಲ್ಲ ಬುಡಿ ಬುಡಿ' ಅಂತೇಳ್ದ ಮೈಲಾರಿ. 'ಏನ್ಲಾ ಮೈಲಾರಿ ಹಿಂಗೆಲ್ಲಾ, ವೋ ವಸಿ ವುಸಾರಾಗಿ ಮಾತಾಡಲೇ. ನೀನೇನರ ಸಿಯೆಮ್ಮು ಸೆಟ್ರು ಮನೆತಾವಿಂದ ಬಂದ್ಯಾ ಹೆಂಗೆ ? ನಂಗೆ ಡೈಲಾಗು ಬುಡ್ತಾಯಿದ್ದೀಯ. ಇರು ಯಡರೂಪ್ನೋರ್ಗೆ ಯೋಳಿ ನಿಂಗೆ ಸರ್ಯಾಗಿ ಮಾಡುಸ್ತೀನಿ. ವೋಗೋಗಲೇ ಇದೇ ಪಾಲಿಟಿಕ್ಸು ಅಂತಂದ್ರು ಸೋಭಕ್ಕ'. 'ಪಾಲಿಟಿಕ್ಸ್ ಮಾಡ್ಕಳಿ. ಟ್ರಿಕ್ಸು ಮಾಡಕ್ಕೆ ವೋಬೇಡಿ. ಅಲ್ಲಾ, ಲೇಡೀಸು ಮ್ಯಾಲೆ ಇದ್ಕಿದ್ದಂಗೆ ನಿಮ್ಗೆ ಅದೇನು ಪ್ರೀತಿ ಬಂದ್ಬುಡ್ತು ಅಂತೀನಿ. ಅಬ್ಬಬ್ಬ, ಸಿಎಂಗೆ ಪತ್ರ ಬರ್ಯೋದೇನು, ಕೂಗಾಡೋದೇನು, ನಾಲ್ಕೂವರೆ ವರ್ಸ ಮಂತ್ರಿ ಆಗಿದ್ರಲ್ಲ, ಯಾವಾಗಾದ್ರೂ ಹಿಂಗೆ ಮಾತಾಡಿದ್ರಾ ?' ಅಂತೇಳಿ ಮೈಲಾರಿ ಕೇಳ್ದ. ಆಟೋತ್ಗೆ ಸೋಭಕ್ಕೆ ನಾಟ್ ರೀಚಬಲ್ ಅಗೋಗಿದ್ರು. --->ಕೆ.ವಿ.ಪ್ರಭಾಕರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು