fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಸೆಪ್ಟೆಂಬರ್ 27, 2020

ಗೂಗಲ್ ಗುರುವಿಗೆ ಇಪ್ಪತ್ತೆರಡು (ಸರ್ಚ್ ಎಂದರೆ ಗೂಗಲ್, ಗೂಗಲ್ ಎಂದರೆ ಸರ್ಚ್!)

google image ಗೆ ಚಿತ್ರದ ಫಲಿತಾಂಶ

   
    ಮನುಕುಲದ ಇತಿಹಾಸದ ಪ್ರತಿ ಕಾಲಘಟ್ಟದಲ್ಲೂ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾದ ಘಟನೆಗಳನ್ನು ನಾವು ನೋಡಬಹುದು. ಕಾಲಕ್ರಮದಲ್ಲಿ ಬೇಸಾಯ, ಬೆಂಕಿ, ಚಕ್ರ, ವಿದ್ಯುಚ್ಛಕ್ತಿ ಮೊದಲಾದ ಸಂಗತಿಗಳ ಆವಿಷ್ಕಾರ ಹೇಗೆ ಮಹತ್ವ ಪಡೆದುಕೊಂಡಿತೋ ಕಳೆದ ಶತಮಾನದಲ್ಲಿ ಅಂಥದ್ದೇ ಗೌರವಕ್ಕೆ ಭಾಜನವಾದದ್ದು ಕಂಪ್ಯೂಟರಿನ ಆವಿಷ್ಕಾರ. ಇದಾದ ನಂತರದಲ್ಲಿ ಇಂಥವೇ ಇನ್ನಷ್ಟು ಬೆಳವಣಿಗೆಗಳು ಬಹಳ ಕ್ಷಿಪ್ರಗತಿಯಲ್ಲಿ ಘಟಿಸಿದ್ದು ಈಗ ಇತಿಹಾಸ.
    ಅಂತರಜಾಲದ ಹುಟ್ಟು, ಮೊಬೈಲ್ ಫೋನ್ ವಿಕಾಸವೇ ಮೊದಲಾದ ಇಂತಹ ಐತಿಹಾಸಿಕ ಬೆಳವಣಿಗೆಗಳ ಸಾಲಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಘಟನೆ ಗೂಗಲ್ ಸಂಸ್ಥೆಯ ಪ್ರಾರಂಭ. ಈ ಘಟನೆ ಸಂಭವಿಸಿ ಇದೀಗ ಇಪ್ಪತ್ತೊಂದು ವರ್ಷ. ಕೇವಲ ಎರಡೇ ದಶಕಗಳ ಅವಧಿಯಲ್ಲಿ ಒಂದು ವಾಣಿಜ್ಯ ಸಂಸ್ಥೆ ಪ್ರಪಂಚದ ಜನಸಂಖ್ಯೆಯ ಬಹುದೊಡ್ಡ ಭಾಗದ ಮೇಲೆ ಈ ಪರಿಯ ಪ್ರಭಾವ ಬೀರಿರುವ ಇನ್ನೊಂದು ಉದಾಹರಣೆ ಹುಡುಕಲು ಸಾಕಷ್ಟು ಕಷ್ಟಪಡಬೇಕಾಗುತ್ತದೋ ಏನೋ!

ಒಂದರ ಮುಂದೆ ಒಂದುನೂರು ಸೊನ್ನೆ ಅಂಕಿ ಒಂದನ್ನು ಬರೆದು ಅದರ ಮುಂದೆ ಸೊನ್ನೆಗಳನ್ನು ಸೇರಿಸುತ್ತಾ ಹೋದಂತೆ ಹತ್ತು, ನೂರು, ಸಾವಿರಗಳೆಲ್ಲ ರೂಪುಗೊಳ್ಳುವುದು ನಮಗೆ ಗೊತ್ತಿದೆ. ಒಂದರ ಮುಂದೆ ಹೀಗೆ ನೂರು ಸೊನ್ನೆಗಳನ್ನು ಸೇರಿಸಿದರೆ ಸಿಗುವ ಸಂಖ್ಯೆಗೆ 'Googol' ಎಂಬ ಹೆಸರಿದೆ. ಅಂತರಜಾಲ ದೈತ್ಯ ಗೂಗಲ್‌‌ನ ಹೆಸರಿಗೆ ಸ್ಫೂರ್ತಿಯಾಗಿದ್ದು ಇದೇ ಸಂಖ್ಯೆ. ಹೆಸರಿಡುವಾಗ ಗೊತ್ತಿತ್ತೋ ಇಲ್ಲವೋ, ಆದರೆ ಈ ಸಂಖ್ಯೆಯನ್ನೇ ಮುಟ್ಟಿಬಿಡುವ ತವಕದಿಂದ ಗೂಗಲ್ ಬೆಳೆಯುತ್ತಿರುವುದಂತೂ ಸತ್ಯ.
     ಈ ಬೆಳವಣಿಗೆ ಶುರುವಾದದ್ದು ಅಮೆರಿಕಾದ ಸ್ಟಾನ್‌ಫರ್ಡ್ ವಿವಿಯ ವಿದ್ಯಾರ್ಥಿ ನಿಲಯದಲ್ಲಿ. ಅಲ್ಲಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಹಾಗೂ ಸೆರ್ಗಿ ಬ್ರಿನ್, ಅಂದಿನ ವಿಶ್ವವ್ಯಾಪಿ ಜಾಲದಲ್ಲಿ ನಮಗೆ ಬೇಕಾದ ಮಾಹಿತಿ ಹುಡುಕಿಕೊಳ್ಳಲು ನೆರವಾಗುವ ತಂತ್ರಾಂಶವನ್ನು ರೂಪಿಸಲು ಹೊರಟಿದ್ದರು. ಅವರು ರೂಪಿಸಿದ 'ಬ್ಯಾಕ್‌ರಬ್' ಎಂಬ ಹೆಸರಿನ ಈ ತಂತ್ರಾಂಶ ಕೊಂಡಿಗಳನ್ನು (ಲಿಂಕ್) ವಿಶ್ಲೇಷಿಸುವ ಮೂಲಕ ವಿಶ್ವವ್ಯಾಪಿ ಜಾಲದ ಪುಟಗಳನ್ನು ವರ್ಗೀಕರಿಸುತ್ತಿತ್ತು. ಮುಂದೆ ಗೂಗಲ್ ಸರ್ಚ್ ಇಂಜನ್ ಎಂದು ವಿಶ್ವಖ್ಯಾತಿ ಗಳಿಸಿದ್ದು ಇದೇ ತಂತ್ರಾಂಶ. ಕಾಲೇಜು ಹಾಸ್ಟೆಲಿನಲ್ಲಿ ಹುಟ್ಟಿ ಗೆಳೆಯರೊಬ್ಬರ ಮನೆಯ ಗ್ಯಾರೇಜಿನಲ್ಲಿ ಬೆಳೆದ ಗೂಗಲ್ ಸಂಸ್ಥೆ ಇದೀಗ ವಿಶ್ವದ ಅತಿದೊಡ್ಡ ಹಾಗೂ ಅತ್ಯಂತ ಶ್ರೀಮಂತ ಸಂಸ್ಥೆಗಳ ಪೈಕಿ ಒಂದು.
      ಯಾವ ವಿಷಯದ ಬಗ್ಗೆ ಬೇಕಾದರೂ ಮಾಹಿತಿ ಹುಡುಕಿಕೊಡುವ ಗೂಗಲ್‌ ಸಂಸ್ಥೆಗೆ ತನ್ನದೇ ಹುಟ್ಟುಹಬ್ಬದ ಬಗ್ಗೆ ಗೊಂದಲ ಇರುವಂತಿದೆ. ಇಂದು (ಸೆ. ೨೭) ತನ್ನ ೨ ನೇ ಹುಟ್ಟುಹಬ್ಬ ಎನ್ನುತ್ತಿರುವ ಗೂಗಲ್‌ನನ್ನು 'when was google founded' ಎಂದು ಕೇಳಿದರೆ ಸೆಪ್ಟೆಂಬರ್ ೪, ೧೯೯೮ ಎಂದು ಉತ್ತರಿಸುತ್ತದೆ. ಹಿಂದಿನ ವರ್ಷಗಳಲ್ಲಿ ಅದು ತನ್ನ ಹುಟ್ಟುಹಬ್ಬವನ್ನು ಸೆ. ೭, ೮ ಹಾಗೂ ೨೬ ರಂದು ಆಚರಿಸಿಕೊಂಡದ್ದೂ ಇದೆ ಎಂದು ಸಿನೆಟ್ ವರದಿ ನೆನಪಿಸಿಕೊಂಡಿದೆ.

ಹುಡುಕುವ ಕೆಲಸ
     ಸರ್ಚ್ ಇಂಜನ್ ಸೇವೆ ಒದಗಿಸುವ ಉದ್ದೇಶದಿಂದ ಪ್ರಾರಂಭವಾದ ಈ ಸಂಸ್ಥೆ ಈಗ ಸಂದೇಶ ಕಳುಹಿಸುವುದರಿಂದ ಪ್ರಾರಂಭಿಸಿ ಸ್ವಯಂಚಾಲಿತ ಕಾರುಗಳನ್ನು ತಯಾರಿಸುವವರೆಗೆ ಹಲವು ಕೆಲಸಗಳಲ್ಲಿ ತೊಡಗಿಕೊಂಡಿದೆ. ಜಿ-ಮೇಲ್, ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಗೂಗಲ್ ಹೋಮ್ ಸರಣಿಯ ಸ್ಮಾರ್ಟ್ ಸಹಾಯಕರು, ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ, ಪಿಕ್ಸೆಲ್ ಮೊಬೈಲ್ ಫೋನುಗಳು ಎಲ್ಲವೂ ಗೂಗಲ್ ಸಂಸ್ಥೆಯ ಒಡೆತನದಲ್ಲೇ ಇವೆ. ತನ್ನ ಜಾಲತಾಣಗಳಲ್ಲೆಲ್ಲ ಜಾಹೀರಾತುಗಳನ್ನು ಪ್ರದರ್ಶಿಸುವ ಗೂಗಲ್ ಅದರಿಂದಲೇ ಅಗಾಧ ಪ್ರಮಾಣದ ಹಣವನ್ನು ಸಂಪಾದಿಸುತ್ತದೆ. ಆಡಳಿತಾತ್ಮಕವಾಗಿ 'ಆಲ್ಫಾಬೆಟ್' ಎಂಬ ಮಾತೃಸಂಸ್ಥೆಯ ಕೆಳಗೆ ಕೆಲಸಮಾಡುವ ಗೂಗಲ್ ಶೇರುಗಳ ಒಟ್ಟು ಮೌಲ್ಯ (ಮಾರ್ಕೆಟ್ ಕ್ಯಾಪಿಟಲೈಸೇಶನ್) ೮೦೦ ಬಿಲಿಯನ್ ಡಾಲರುಗಳಿಗಿಂತ ಹೆಚ್ಚು
       ಇಂದು ಗೂಗಲ್ ಎನ್ನುವುದು ಅಂತರಜಾಲ ಬಳಕೆದಾರರಲ್ಲದವರಿಗೂ ಪರಿಚಿತವಾದ ಹೆಸರು. ಜಾಲಲೋಕದಲ್ಲಿ ಏನೇ ಮಾಹಿತಿ ಬೇಕೆಂದರೂ ಗೂಗಲ್ ಮೊರೆಹೋಗುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿದೆ. ಈ ಅಭ್ಯಾಸ ಅದೆಷ್ಟು ವ್ಯಾಪಕವಾಗಿದೆಯೆಂದರೆ ಮಾಹಿತಿಗಾಗಿ ಹುಡುಕುವ ಕೆಲಸಕ್ಕೆ 'ಗೂಗ್ಲಿಂಗ್' (ಗೂಗಲ್ ಮಾಡು, ಗೂಗಲಿಸು) ಎಂಬ ಹೆಸರೇ ಹುಟ್ಟಿಕೊಂಡುಬಿಟ್ಟಿದೆ. ಗೂಗಲ್ ಸಂಸ್ಥೆ ಸರ್ಚ್ ಜೊತೆಯಲ್ಲಿ ಬೇರೆ ಅದೆಷ್ಟೋ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಬಳಕೆದಾರರ ಪಾಲಿಗೆ ಮಾತ್ರ ಇಂದಿಗೂ ಸರ್ಚ್ ಎಂದರೆ ಗೂಗಲ್, ಗೂಗಲ್ ಎಂದರೆ ಸರ್ಚ್.

ತಂತ್ರಜ್ಞಾನ ಜಗತ್ತಿನ ಮಾಂತ್ರಿಕ
    ಬೇಕಾದ ಮಾಹಿತಿಯನ್ನು ಥಟ್ಟನೆ ಹುಡುಕಿಕೊಡಲು ಹುಟ್ಟಿಕೊಂಡ ಗೂಗಲ್ ಸಂಸ್ಥೆ ತಂತ್ರಜ್ಞಾನ ಜಗತ್ತಿನಲ್ಲಿ ಹಲವು ಅದ್ಭುತ ಸಾಧನೆಗಳನ್ನು ಮಾಡಿದೆ. ನಮ್ಮ ಪ್ರಶ್ನೆಯನ್ನು ಇಂತಿಷ್ಟೇ ಪದ ಬಳಸಿ ಇಂಥದ್ದೇ ರೂಪದಲ್ಲಿ ಕೇಳಬೇಕು ಎನ್ನುವಂತಹ ನಿಬಂಧನೆಗಳನ್ನೆಲ್ಲ ಹೋಗಲಾಡಿಸಿದ್ದು ಇದಕ್ಕೊಂದು ಉದಾಹರಣೆ. ಯಂತ್ರಗಳು ನಮ್ಮ ಪ್ರಶ್ನೆಯನ್ನು ಅರ್ಥಮಾಡಿಕೊಂಡು ಅದಕ್ಕೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದರ (ನ್ಯಾಚುರಲ್ ಲ್ಯಾಂಗ್ವೆಜ್ ಪ್ರಾಸೆಸಿಂಗ್) ಹಿನ್ನೆಲೆಯಲ್ಲಿ ಗೂಗಲ್ ಕೊಡುಗೆಯೂ ಸಾಕಷ್ಟು ಪ್ರಮಾಣದಲ್ಲಿದೆ. ಮೇಲ್ನೋಟಕ್ಕೆ ನಮ್ಮ ಗಮನಕ್ಕೆ ಬರುವ ಇಂತಹ ಉದಾಹರಣೆಗಳಲ್ಲದೆ ಮಾಹಿತಿಯ ಶೇಖರಣೆ, ಸಂಸ್ಕರಣೆ ಹಾಗೂ ವಿತರಣೆಯಂತಹ ಕೆಲಸಗಳಲ್ಲೂ ಗೂಗಲ್ ಸಾಕಷ್ಟು ಕೆಲಸ ಮಾಡಿದೆ. ಛಾಯಾವಾಸ್ತವ (ವರ್ಚುಯಲ್ ರಿಯಾಲಿಟಿ), ಅತಿರಿಕ್ತ ವಾಸ್ತವಗಳಂತಹ (ಆಗ್ಮೆಂಟೆಡ್ ರಿಯಾಲಿಟಿ) ಹೊಸ ಕ್ಷೇತ್ರಗಳಲ್ಲೂ ಗೂಗಲ್ ಸಂಸ್ಥೆ ಸಕ್ರಿಯವಾಗಿದೆ.
  ಮಾಹಿತಿ ತಂತ್ರಜ್ಞಾನವೆಂದರೆ ಇಂಗ್ಲಿಷ್ ಮಾತ್ರ ಎನ್ನುವ ತಪ್ಪು ಅಭಿಪ್ರಾಯವನ್ನು ದೂರಮಾಡುವಲ್ಲೂ ಗೂಗಲ್ ಕೊಡುಗೆ ಸಾಕಷ್ಟಿದೆ. ಇಂಗ್ಲಿಷ್ ಭಾಷೆಯಲ್ಲಿ ಬಹಳ ಹಿಂದಿನಿಂದಲೇ ಲಭ್ಯವಿರುವ ಧ್ವನಿ ಗುರುತಿಸುವ (ಸ್ಪೀಚ್ ರೆಕಗ್ನಿಶನ್), ಚಿತ್ರದಲ್ಲಿರುವ ಪಠ್ಯವನ್ನು ಬೇರ್ಪಡಿಸಿ ಗುರುತಿಸುವ (ಓಸಿಆರ್), ಇತರ ಭಾಷೆಗೆ ಅನುವಾದಿಸುವ (ಟ್ರಾನ್ಸ್‌ಲೇಶನ್), ಹಸ್ತಾಕ್ಷರವನ್ನು ಅರ್ಥಮಾಡಿಕೊಳ್ಳುವಂತಹ (ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್) ಸೌಲಭ್ಯಗಳನ್ನೆಲ್ಲ ಕನ್ನಡವೂ ಸೇರಿದಂತೆ ಜಗತ್ತಿನ ಹಲವು ಭಾಷೆಗಳಲ್ಲಿ ಗೂಗಲ್ ಸಂಸ್ಥೆ ಪರಿಚಯಿಸಿದೆ. ವಿವಿಧ ಭಾಷೆಗಳ ಪಠ್ಯವನ್ನು ಸುಲಭಕ್ಕೆ ದಾಖಲಿಸುವಂತೆ ಕೀಬೋರ್ಡ್ ತಂತ್ರಾಂಶಗಳನ್ನು ರೂಪಿಸಿದ್ದೂ ಕಡಿಮೆ ಸಾಧನೆಯೇನಲ್ಲ.

ಕಲಿಯುಗದ ಸರ್ವಾಂತರ್ಯಾಮಿ
   ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕಿಕೊಡುವುದು ಎಂದರೆ ಅದು ಕೇಳಲು ಬಹಳ ಸರಳವೆಂದು ತೋರುತ್ತದೆ. ಕೇಳಲು ಸುಲಭ ಎನಿಸಿದರೂ ಇದು ಭಾರೀ ದೊಡ್ಡ ಪ್ರಮಾಣದಲ್ಲಿ ನಡೆಯುವ ಕೆಲಸ. ಇದರಿಂದಾಗಿ ಇಂದು ಗೂಗಲ್ ಬಳಿ ಕೋಟಿಗಟ್ಟಲೆ ಜಾಲತಾಣಗಳ, ವೆಬ್ ಪುಟಗಳ ಬಗೆಗಿನ ಮಾಹಿತಿ ಲಭ್ಯವಿದೆ. ಇಷ್ಟೆಲ್ಲ ಅಗಾಧ ಪ್ರಮಾಣದ ಮಾಹಿತಿ ಇರುವುದರಿಂದಲೇ ಇಂದು ಆ ಸಂಸ್ಥೆಗೆ ಎಲ್ಲಿಲ್ಲದ ಮಹತ್ವ. ಒಂದು ಖಾಸಗಿ ಸಂಸ್ಥೆಯ ನಿಯಂತ್ರಣದಲ್ಲಿ ಇಷ್ಟೆಲ್ಲ ಮಾಹಿತಿ ಇದೆ ಎನ್ನುವುದು ಖಾಸಗಿತನದ ಬಗ್ಗೆ ಕಾಳಜಿವಹಿಸುವವರ ಚಿಂತೆಗೂ ಕಾರಣವಾಗಿರುವ ಅಂಶ. ಯಾವುದೇ ವಿಷಯದ ಬಗ್ಗೆ ಹುಡುಕಲು ಹೊರಟಾಗ ನಮಗೆ ಯಾವ ಮಾಹಿತಿ ಕಾಣುತ್ತದೆ ಎನ್ನುವುದನ್ನು ಗೂಗಲ್‌ನ ಕ್ರಮವಿಧಿಗಳು ತೀರ್ಮಾನಿಸುತ್ತವೆ ಎನ್ನುವುದು ಈ ಚಿಂತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
   ಅಷ್ಟೇ ಅಲ್ಲ, ವಿಶ್ವವ್ಯಾಪಿ ಜಾಲದ ಅಗಾಧ ಪ್ರಪಂಚದಲ್ಲಿ ಸರಾಗವಾಗಿ ಓಡಾಡಲು ಬಹಳಷ್ಟು ಬಳಕೆದಾರರು ಗೂಗಲ್‌ ಅನ್ನೇ ನಾವಿಕನೆಂದು ಪರಿಗಣಿಸುತ್ತಾರೆ. ಹೀಗಾಗಿ ಗೂಗಲ್ ಮೂಲಕ ಸಿಗುವ ಮಾಹಿತಿ, ಅದು ಸತ್ಯವೋ ಸುಳ್ಳೋ, ಜನರ ಮೇಲೆ ಬಲುಬೇಗ ಪ್ರಭಾವ ಬೀರಿಬಿಡುತ್ತದೆ. ಗೂಗಲ್ ಮ್ಯಾಪ್ಸ್‌ನಲ್ಲಿ ತಪ್ಪಾಗಿ ದಾಖಲಾದ ಒಂದೇ ಕಾರಣದಿಂದ ಡೆಟ್ರಾಯಿಟ್ ನಗರದ ಬಡಾವಣೆಯೊಂದರ ಹೆಸರು ಜನಬಳಕೆಯಲ್ಲೂ ಬದಲಾಗಿಹೋದ ಉದಾಹರಣೆಯೊಂದು ಈಚೆಗೆ ಈ ಸಾಧ್ಯತೆಯ ಗಂಭೀರತೆಯನ್ನು ತೋರಿಸಿಕೊಟ್ಟಿತ್ತು. ಇನ್ನು ನೆಂಟರ ಫೋನ್ ನಂಬರಿನಿಂದ ಪ್ರಾರಂಭಿಸಿ ನಾಲ್ಕು + ನಾಲ್ಕು ಎಷ್ಟು ಎನ್ನುವ ಲೆಕ್ಕದವರೆಗೆ ಪ್ರತಿಯೊಂದು ಮಾಹಿತಿಯೂ ಒಂದಲ್ಲ ಒಂದು ಗೂಗಲ್ ಉತ್ಪನ್ನದ ಮೂಲಕ ಸಿಗುವಂತಾಗಿದೆಯಲ್ಲ, ಇದರಿಂದ ನಮ್ಮ ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮವಾಗಿದೆ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ.
   'ಚಿಂತನಶೀಲ ಸಮಾಜಮುಖಿ' ಪತ್ರಿಕೆ ೨೦೧೮ ರ ಸೆಪ್ಟೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ (ಟಿ. ಜಿ. ಶ್ರೀನಿಧಿ, 27 Sep, 2019 at 09:03 AM (ಮರು ಪ್ರಕಟ )
ನೀವು ಇಲ್ಲಿಯವರೆಗೂ ನೋಡಿರದ ಕೆಲವು ಗೂಗಲ್ ನ ಪುಟಗಳ ಲಿಂಕ್ ಇಲ್ಲಿದೇ....

ಮಂಗಳವಾರ, ಸೆಪ್ಟೆಂಬರ್ 22, 2020

ಅಮ್ಮ ಕೊಟ್ಟ ಉಡುಗೊರೆ..

ಕಾಯುವಿಕೆಯಲ್ಲಿ
ಅಮ್ಮನಿಗಿರುವ ತಾಳ್ಮೆ
ನನಗಂತೂ ಇರಲೇ ಇಲ್ಲ.
ಪ್ರತೀ ಶನಿವಾರ
ಕತ್ತಲಾವರಿಸುತ್ತಿದ್ದಂತೆ
ಹಾದಿ ಕಾಯುವ ಹೊತ್ತು.

ಜೀರುಂಡೆ ಸದ್ದಿನ
ಜಿಟಿ ಜಿಟಿ ಮಳೆಗಾಲವಿರಲಿ
ಚಳಿಗೆ ಸೆರಗೊದ್ದು
ಅತ್ತಿಂದಿತ್ತ ಇತ್ತಿಂದತ್ತ ಗಳಿಗೆಗೊಮ್ಮೆ
“ಇನ್ನೂ ಬಂಜಿಲ್ಲೆ ಎಂತಾ ಆತನ”
ಅಲವತ್ತುಕೊಂಡು ಆತಂಕದ
ಛಾಯೆ ವದನದ ತುಂಬ.

“ಎಂತಕ್ಕೆ ಇಷ್ಟೊತ್ತಾತು?
ಆಗಿಂದ ಕಾಯ್ತಾ ಇದ್ದಿ
ಈಗ ಬರ್ತೆ ಆಗ್ ಬರ್ತೆ ಹೇಳಿ”

ಅಮ್ಮನ ಕೈ ರುಚಿಯ ಅಡಿಗೆ
ಹಲಸಿನ ಹಣ್ಣಿನ ಕಡುಬಿನ ಘಮಲು
ಅಕ್ಕರೆಯಲಿ ನನಗೊಂದೇ
ಬಾಳೆಯಲಿ ಹರಿವಷ್ಟು ತುಪ್ಪ

“ಬಿಡಡಾ ಹ್ಯಾಂಗ್ ಸೊರಗೋಜೆ
ಮನಿಗೆ ಬಂದಾಗಾರು ಸರಿ ತಿನ್ನು ಮಗಾ
ನೌಕರಿ ನೌಕರಿ ಹೇಳಿ ಪ್ಯಾಟೆ ಸೇರ್ಕಂಜೆ”

ಮೆತ್ತನೆಯ ಹಾಸಿಗೆಯಲಿ ಪವಡಿಸಲು
ತಲೆ ಸವರಿ ಹೊದಿಕೆ ಸರಿ ಮಾಡಿ
ಮಗಳ ನಿದ್ದೆಗೆ ಭಂಗ ಬಾರದಂತೆ
ಮೆಲ್ಲಗೆ ಕದಲುವ ಅಮ್ಮ.

“ಇಲ್ನೋಡಿ ಕೂಸಿಗೆ
ಮದುವೆ ಮಾಡ್ತ್ರ ಇಲ್ಯ
ಪ್ಯಾಟೆ ಕೂಳ್ ತಿಂದು ಹ್ಯಾಂಗಾಜು ನೋಡಿ”

ನಿದ್ದೆ ಬಂದಂತೆ ನಟಿಸಿ
ಅಮ್ಮ ಅಪ್ಪ ಆಡುವ ನನ್ನ ಕುರಿತ ಮಾತು
ಒಳಗೊಳಗೆ ನನ್ನಮ್ಮನ ಬಗ್ಗೆ ಹೆಮ್ಮೆ
ಸರಿದ ಆ ದಿನಗಳೆಂದೂ ಬಾರದು.

” ಆಸ್ರಿಗಾತು ಬಾರೆ
ನಿಂಗೆ ಪ್ರೀತಿ ಹೇಳಿ ಬೆಲ್ಲ ಹಾಕಿ
ಮೊಗೆಕಾಯಿ ಶೀ^^ ದ್ವಾಸೆ ಮಾಡಿದ್ನೆ”

ಅದೆಷ್ಟು ಕಾಳಜಿ, ವಾತ್ಸಲ್ಯ, ಪ್ರೀತಿ,ಮಮತೆ
ಬದುಕಿಗೆ ಅಮ್ಮ ಕೊಟ್ಟ ಉಡುಗೊರೆ.

ಆದರೆ
ಈಗ ಕಾಯುವಿಕೆಯೆಂಬುದು
ನನಗೆ ದಿನ ನಿತ್ಯದ ಕಾಯ
ಅಮ್ಮನಿಲ್ಲದ ಆ ಮಧುರ ದಿನಗಳ
ನೆನಪ ಕಣ್ಣು ಮಂಜಾಗಿಸಿಕೊಂಡು.

ಶುಕ್ರವಾರ, ಸೆಪ್ಟೆಂಬರ್ 18, 2020

ಗೂಗಲ 1998ರ ಪುಟ (Google 1998 Pages) 13

ಸನ್ 1998 ರ ಲ್ಲಿ ಗೂಗಲ್ ಪುಟಗಳು ಈ ಕೆಳಕಾಣಿಸಿದಂತೆ ಇತ್ತು, ಗೂಗಲ್ ಪುಟದ ಚಿತ್ರ ಕ್ಲಿಕ್ ಮಾಡಿ


ಪ್ರತಿಯೊಂದು ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆಯಾದಂತೆ ಈ ಗೂಗಲ್ ಸರ್ಚ ಇಂಜಿನ ಕೂಡ ಬದಲಾಗುತ್ತ ಬಂದಿಗೆ.

ಬುಧವಾರ, ಸೆಪ್ಟೆಂಬರ್ 09, 2020

ನೀರು


ವಾಟ್ಸಾಪ್ (WhatsApp)



ಆರಂಭಿಕ ಬಿಡುಗಡೆಯ ದಿನಾಂಕ: ಮೇ 3, 2009
ಪ್ರಾಥಮಿಕ ಬಿಡುಗಡೆ 2009

ಸ್ಥಿರವಾದ ಬಿಡುಗಡೆ
iOS: 2.11.7
Android: 2.11.169
Windows Phone: 2.11.356.0
BlackBerry: 2.11.240
Symbian: 2.11.363
Nokia S40 devices
ಕಾರ್ಯಾಚರಣಾ ವ್ಯವಸ್ಥೆ 
ಲಭ್ಯತೆ m:en:Multilingualism
ವರ್ಗ m:en:Instant messaging
ಪರವಾನಗೆ m:en:Proprietary software
ಜಾಲತಾಣ www.whatsapp.com

ಮೂಲ ಲೇಖಕ(ರು): ಬ್ರಾಯೆನ್ ಅಕ್ಟನ್, ಜಾನ್ ಕೌಮ್
ಇದರಲ್ಲಿ ಬರೆಯಲಾಗಿದೆ: Erlang
ಡೆವಲಪರ್‌(ಗಳು): ಫೇಸ್‌ಬುಕ್‌, Inc.
ಗಾತ್ರ: 152.7 ಮೆ.ಬೈ. (iOS); 25.24 ಮೆ.ಬೈ. (ಆಂಡ್ರಾಯ್ಡ್)
ಮಾಲೀಕ: ಫೇಸ್‌ಬುಕ್‌


          ವಾಟ್ಸ್ ಆಪ್ ಮೆಸ್ಸೆ೦ಜರ್ ಇ೦ಕ್. ಕ೦ಪನಿಯು ೨೦೦೯ರಲ್ಲಿ ಬ್ರಿಯಾನ್ ಆಕ್ಟನ್ ಮತ್ತು ಜಾನ್ ಕೌ೦ ಎ೦ಬವರಿ೦ದ ಸ್ತಾಪಿತವಾಯಿತು. ಇವರಿಬ್ಬರು ಹಿ೦ದೆ ಯಾಹೂ ಕ೦ಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ೦ದ ಹೊರ ಬ೦ದ ಮೇಲೆ ಇಬ್ಬರು ದಕ್ಷಿಣ ಅಮೇರಿಕಕ್ಕೆ ಪ್ರವಾಸದ ಮೇಲೆ ಹೊರಟರು, ನ೦ತರ ಫೇಸ್ ಬುಕ್ ಕ೦ಪನಿಯಲ್ಲಿಯೂ ಕೂಡ ಕೆಲಸವನ್ನು ಹುಡುಕಿ ಹೋಗಿದ್ದರು ಆದರೆ ನಿರಾಶಿತರಾದರು. ಜಾನ್ ಕೌ೦ ತನ್ನ ಉಳಿತಾಯದಲ್ಲಿದ್ದ ಸ್ವಲ್ಪ ಮೊತ್ತದ ಹಣವನ್ನು ಮು೦ದಿನ ಅವನ ಜೀವನಕ್ಕೆ ಉಪಯೋಗಿಸುತ್ತಿದ್ದ, ಜನವರಿ ೨೦೦೯ರಲ್ಲಿ ತಾನೊ೦ದು ಐ ಫೋನ್ ಖರೀದಿಸಿದ ಆಗ ಅವನಿಗೆ ಆಪಲ್ ಕ೦ಪನಿಯು ಅಪ್ಲಿಕೇಶನ್ಗಳ ಹೊಸ ಉದ್ಯಮವನ್ನು ಶುರುಮಾಡುತ್ತಿರುವ ಸ೦ಪೂರ್ಣ ಮಾಹಿತಿ ದೊರಕಿತು. ಆಗ ಅವನು ವೆಸ್ಟ್ ಸಾನ್ ಜೊಸ್ ನಲ್ಲಿ ಇದ್ದ ತನ್ನ ಗೆಳೆಯ ಆಲೆಕ್ಸ್ ಫಿಶ್ಮೆನ್ ರನ್ನು ಭೇಟಿ ಮಾಡುತ್ತಿದ್ದ. ಅಲ್ಲಿ ಮೂವರು "... ಒಬ್ಬ ವ್ಯಕ್ತಿಯ ಹೆಸರ ಪಕ್ಕದಲ್ಲಿ ಅವನ ಸ್ಟೇಟಸ್ ಇರುವುದು" ಇದರ ಬಗ್ಗೆ ಮಾತಾಡುತ್ತಿದ್ದರು, ಆದರೆ ಅವರಿಗೆ ತಿಳಿದಿತ್ತು ಇದು ಐಫೋನ್ ಡೆವೆಲೆಪ್ಪರ್ ಇಲ್ಲದೆ ಸಾಧ್ಯವಿಲ್ಲ ಎ೦ದು. ಅದಕ್ಕಾಗಿ ಫಿಶ್ಮೆನ್, ಕೌ೦ರನ್ನು ರಷ್ಯದ ಇಘೋರ್ ಸೋಲೆನಿಕೊವ್ ಎ೦ಬ ಡೆವೆಲೆಪರ್ ಬಳಿ ಕರೆದೊಯ್ದ, ಈತ ರೆ೦ಟ್ ಎ ಕೋಡರ್.ಕಾ೦ ಎ೦ಬುದನ್ನು ಕ೦ಡುಹಿಡಿದಿದ್ದ. ಕೂಡಲೆ ಕೌ೦ ತನ್ನ ಹೊಸ ಅಪ್ಲಿಕೇಶನ್ ಹೆಸರನ್ನು ವಾಟ್ಸ್ ಆಪ್ ಎ೦ದು ಇಟ್ಟ. ನ೦ತರ ಫೆಬ್ರವರಿಯಲ್ಲಿ ಕೌ೦ ಕಾಲಿಫೋರ್ನಿಯಾದಲ್ಲಿ ವಾಟ್ಸ್ ಆಪ್.ಇ೦ಕ್ ಅಪ್ಲಿಕೇಶನನ್ನು ಸ೦ಘಟಿತಿಸಿದರು. ಮೊದಮೊದಲು ವಾಟ್ಸ್ ಆಪ್ ಒ೦ದಷ್ಟು ಕಲ್ಮಶ ಹೊ೦ದಿತ್ತು ಹಾಗೂ ಸ್ಟಕ್ ಆಗುತಿತ್ತು ಆಗ ಕೌ೦ ತನ್ನ ಪ್ರಯತ್ನವು ವ್ಯರ್ಥವೆ೦ದು ತಿಳಿದ ಆಗ ಆಕ್ಟನ್ ಅವನಿಗೆ ಇನ್ನೂ ಸ್ವಲ್ಪ ತಿ೦ಗಳು ಕಾಯಲು ಹೇಳಿ ಪ್ರೋತ್ಸಾಹಿಸಿದ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು