fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಸೆಪ್ಟೆಂಬರ್ 22, 2020

ಅಮ್ಮ ಕೊಟ್ಟ ಉಡುಗೊರೆ..

ಕಾಯುವಿಕೆಯಲ್ಲಿ
ಅಮ್ಮನಿಗಿರುವ ತಾಳ್ಮೆ
ನನಗಂತೂ ಇರಲೇ ಇಲ್ಲ.
ಪ್ರತೀ ಶನಿವಾರ
ಕತ್ತಲಾವರಿಸುತ್ತಿದ್ದಂತೆ
ಹಾದಿ ಕಾಯುವ ಹೊತ್ತು.

ಜೀರುಂಡೆ ಸದ್ದಿನ
ಜಿಟಿ ಜಿಟಿ ಮಳೆಗಾಲವಿರಲಿ
ಚಳಿಗೆ ಸೆರಗೊದ್ದು
ಅತ್ತಿಂದಿತ್ತ ಇತ್ತಿಂದತ್ತ ಗಳಿಗೆಗೊಮ್ಮೆ
“ಇನ್ನೂ ಬಂಜಿಲ್ಲೆ ಎಂತಾ ಆತನ”
ಅಲವತ್ತುಕೊಂಡು ಆತಂಕದ
ಛಾಯೆ ವದನದ ತುಂಬ.

“ಎಂತಕ್ಕೆ ಇಷ್ಟೊತ್ತಾತು?
ಆಗಿಂದ ಕಾಯ್ತಾ ಇದ್ದಿ
ಈಗ ಬರ್ತೆ ಆಗ್ ಬರ್ತೆ ಹೇಳಿ”

ಅಮ್ಮನ ಕೈ ರುಚಿಯ ಅಡಿಗೆ
ಹಲಸಿನ ಹಣ್ಣಿನ ಕಡುಬಿನ ಘಮಲು
ಅಕ್ಕರೆಯಲಿ ನನಗೊಂದೇ
ಬಾಳೆಯಲಿ ಹರಿವಷ್ಟು ತುಪ್ಪ

“ಬಿಡಡಾ ಹ್ಯಾಂಗ್ ಸೊರಗೋಜೆ
ಮನಿಗೆ ಬಂದಾಗಾರು ಸರಿ ತಿನ್ನು ಮಗಾ
ನೌಕರಿ ನೌಕರಿ ಹೇಳಿ ಪ್ಯಾಟೆ ಸೇರ್ಕಂಜೆ”

ಮೆತ್ತನೆಯ ಹಾಸಿಗೆಯಲಿ ಪವಡಿಸಲು
ತಲೆ ಸವರಿ ಹೊದಿಕೆ ಸರಿ ಮಾಡಿ
ಮಗಳ ನಿದ್ದೆಗೆ ಭಂಗ ಬಾರದಂತೆ
ಮೆಲ್ಲಗೆ ಕದಲುವ ಅಮ್ಮ.

“ಇಲ್ನೋಡಿ ಕೂಸಿಗೆ
ಮದುವೆ ಮಾಡ್ತ್ರ ಇಲ್ಯ
ಪ್ಯಾಟೆ ಕೂಳ್ ತಿಂದು ಹ್ಯಾಂಗಾಜು ನೋಡಿ”

ನಿದ್ದೆ ಬಂದಂತೆ ನಟಿಸಿ
ಅಮ್ಮ ಅಪ್ಪ ಆಡುವ ನನ್ನ ಕುರಿತ ಮಾತು
ಒಳಗೊಳಗೆ ನನ್ನಮ್ಮನ ಬಗ್ಗೆ ಹೆಮ್ಮೆ
ಸರಿದ ಆ ದಿನಗಳೆಂದೂ ಬಾರದು.

” ಆಸ್ರಿಗಾತು ಬಾರೆ
ನಿಂಗೆ ಪ್ರೀತಿ ಹೇಳಿ ಬೆಲ್ಲ ಹಾಕಿ
ಮೊಗೆಕಾಯಿ ಶೀ^^ ದ್ವಾಸೆ ಮಾಡಿದ್ನೆ”

ಅದೆಷ್ಟು ಕಾಳಜಿ, ವಾತ್ಸಲ್ಯ, ಪ್ರೀತಿ,ಮಮತೆ
ಬದುಕಿಗೆ ಅಮ್ಮ ಕೊಟ್ಟ ಉಡುಗೊರೆ.

ಆದರೆ
ಈಗ ಕಾಯುವಿಕೆಯೆಂಬುದು
ನನಗೆ ದಿನ ನಿತ್ಯದ ಕಾಯ
ಅಮ್ಮನಿಲ್ಲದ ಆ ಮಧುರ ದಿನಗಳ
ನೆನಪ ಕಣ್ಣು ಮಂಜಾಗಿಸಿಕೊಂಡು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು