fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಉರಿಲಿಂಗದೇವ

ಅಂಕಿತ ನಾಮಉರಿಲಿಂಗದೇವ 
ಕಾಲ1160 
ದೊರಕಿರುವ ವಚನಗಳು48 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿ
ಹುಟ್ಟಿದ ಸ್ಥಳಅವಸೆ ಕಂಧಾರ 
ಪರಿಚಯಕಾಲ 1160. ಸ್ಥಳಅವಸೆ ಕಂಧಾರಪುಲಿಗೆರೆಯ ಮಹಾಲಿಂಗದೇವನ ಗುರುಪರಂಪರೆಗೆ ಸೇರಿದ ಶಿವಲೆಂಕ ಮಂಚಣ್ಣನ ಶಿಷ್ಯದಲಿತ ವಚನಕಾರ ಉರಿಲಿಂಗಪೆದ್ದಿಯು ಉರಿಲಿಂಗದೇವನ ಶಿಷ್ಯಉರಿಲಿಂಗದೇವನ ಲಿಂಗನಿಷ್ಠೆಯನ್ನು ಪರೀಕ್ಷಿಸಲೆಂದು ಅನ್ಯಮತೀಯರು ಅವನ ಗುಡಿಸಿಲಿಗೆ ಬೆಂಕಿ ಇಟ್ಟರೂ ಆತ ವಿಚಲಿತನಾಗದೆ ಪೂಜಾಮಗ್ನನಾಗಿದ್ದ ಎಂಬ ಕಥೆ ಇದೆಈತನ 48 ವಚನಗಳು ದೊರೆತಿವೆಅಕ್ಕಮಹಾದೇವಿಯ ಶೈಲಿ ಮತ್ತು ಮನೋಧರ್ಮಗಳು ಇವನ ರಚನೆಗಳಲ್ಲೂ ಕಾಣುತ್ತವೆತನ್ನನ್ನೇ ಪತ್ನಿ ಎಂದೂ ಶಿವನನ್ನು ಪತಿ ಎಂದೂ ಭಾವಿಸಿದ ನಿಲುವು ಇವನ ರಚನೆಗಳಲ್ಲಿ ಕಾಣುತ್ತದೆ.


ಅಂತರಂಗದಲ್ಲಿ ಆವರಿಸಿಬಹಿರಂಗದಲ್ಲಿ ತೋರುವೆ.
ಕಂಗಳ ಕೊನೆಯಲ್ಲಿ ಮೂರುತಿಯಾಗಿಮನದ ಕೊನೆಯಲ್ಲಿ ತೋರುವೆ.
ಎನ್ನ ಬ್ರಹ್ಮರಂಧ್ರದಲ್ಲಿ ತೋರುವ ಪರಂಜ್ಯೋತಿ
ಉರಿಲಿಂಗದೇವ ನೀನಯ್ಯಾ.

ವಿಶ್ವಕ್ಕೇ ಹಿರಿಯಜ್ಜ ಈಗ 145 ರ ಹರೆಯ (145 Year Old Man)

ಜಕಾರ್ತಾ: ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ವಿಶ್ವದಾಖಲೆ ಮಾಡುವ ಸಾಧ್ಯತೆಯಿರುವ ಇಂಡೋನೇಶಿಯಾದ ಈ ವ್ಯಕ್ತಿಗೆ 145 ವರ್ಷ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಕೇಂದ್ರ ಜಾವಾದ ಸ್ರಾಜೆನ್ ರೆಜೆನ್ಸಿ ಯ ಗ್ರಾಮವೊಂದರಲ್ಲಿ ವಾಸಿಸುವ ಸೊಡಿಮೆಜೊ, 1870 ಡಿಸೆಂಬರ್ 31 ರಂದು ಜನಿಸಿರುವುದಕ್ಕೆ ಗುರುತಿನ ಚೀಟಿ ತೋರಿಸುತ್ತಾರೆ.
               ಸೊಡಿಮೆಜೊ ತನ್ನ ಬಾಲ್ಯದಲ್ಲಿ ಕಂಡಿರಬಹುದಾದ ಡಚ್ ವಸಾಹತುಸಾಹಿ ಆಡಳಿತ ತೆರಳಿ ವರ್ಷಗಳೇ ಕಳೆದಿದೆ, ಆದರೆ ಸೊಡಿಮೆಜೊ ಈಗಿನ ಆಧುನಿಕತೆಯನ್ನು ಕಾಣುತ್ತಿದ್ದು, ತನ್ನ ಮನೆಯ ಮುಂದೆ ಕೂತು ದಿನಕ್ಕೆ ಒಂದು ಪ್ಯಾಕೆಟ್ ಸಿಗರೇಟ್ ಸೇದಿ, ರಾತ್ರಿಯಲ್ಲಿ ರೇಡಿಯೋ ಕೇಳುವ ಮೂಲಕ ಸಮಯ ಕಳೆಯುತ್ತಾರೆ. 
ಅವರಿಗೆ ಕಿವಿ ಕೇಳುವುದು ದುರ್ಲಭ ಆದುದರಿಂದ ಜನ ಬಹಳ ಗಟ್ಟಿಯಾಗಿ ಮಾತನಾಡಬೇಕಿದೆ, ಅವರ ಕಂಠವು ಕ್ಷೀಣಿಸಿದ್ದು, ಸಣ್ಣ ಸಣ್ಣ ವಾಕ್ಯಗಳನ್ನಷ್ಟೇ ಮಾತನಾಡುತ್ತಾರೆ. 
              ಹಾಗೆಯೇ ದೃಷ್ಟಿದೋಷ ಕೂಡ ಇದ್ದು, ಅವರು ಕಾಣಬೇಕಾದರೆ ಅವರ ಕಣ್ಣುಗಳ ಹತ್ತಿರಕ್ಕೆ ವಸ್ತುಗಳನ್ನು ಹಿಡಿಯಬೇಕಿದೆ.ಅವರ 46 ವರ್ಷದ ಮೊಮ್ಮಗ ಸುರಯಾನೊ ವಿವರಿಸುವಂತೆ, ಈ ಹಿರಿ ವ್ಯಕ್ತಿ ತನ್ನ ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದು, ಅವರೇ ಈ ವ್ಯಕ್ತಿಯ ದಿನನಿತ್ಯದ ಬೇಡಿಕೆಗಳನ್ನು ಪೂರೈಸುತ್ತಿದ್ದಾರಂತೆ. 
              ಗಿನ್ನಿಸ್ ವಿಶ್ವದಾಖಲೆ ಪುಸ್ತಕಕ್ಕೆ ಇನ್ನು ಇವರ ಹೆಸರು ಸೇರ್ಪಡೆಯಾಗಿಲ್ಲ. 1993 ರಲ್ಲಿ ತನ್ನ ಪತ್ನಿ ತೀರಿಕೊಂಡಾಗ ಇನ್ನು ಹೆಚ್ಚು ವರ್ಷ ಬದುಕುವುದಿಲ್ಲ ಎಂದುಕೊಂಡಿದ್ದರು ಆದರೆ ಅದು ಕಳೆದು 23 ವರ್ಷಗಳ ನಂತರವೂ ವಿಶ್ವದ ಆಗುಹೋಗುಗಳನ್ನು ನೋಡುತ್ತಿದ್ದಾರೆ ಎಂದು ವಿವರಿಸುತ್ತಾರೆ ಸುರಯಾನೊ. 

ಕೃಪೆ: Posted by: GN | Source: IANS

ತಿಳಿ • ಅರಿಯುವಿಕೆಯ ಪ್ರಕ್ರಿಯೆ
 • ಜ್ಞಾನಿಗಳ ತಳಿಯಲ್ಲಿ ಬರುವ ವಂಶವಾಹಿ
 • ತಿಳಿದವನು ಯಾವತ್ತೂ ತಿಳಿತಿಳಿಯಾಗಿರುತ್ತಾನೆ
 • ಹೆಚ್ಚು ತಿಳಿದಂತೆಲ್ಲ ಕಷ್ಟಗಳೇ ಹೆಚ್ಚು
 • ನಿಜವಾದ ತಿಳುವಳಿಕೆ ಮೂಡುವುದು ಕಲಿಯುವುದು ಬಿಟ್ಟ ಮೇಲೆಯೇ
 • ಕುತೂಹಲದ ಕಣ್ಣಿನವಗೆ ತಿಳಿಯಲು ಎಲ್ಲೆಲ್ಲೂ ಅವಕಾಶವಿರುತ್ತದೆ
 • ಹೆಚ್ಚು ತಿಳಿ, ಕಡಿಮೆ ಕಳಿ
 • ಅರಿತವಗೆ ಅರಿಗಳೆಲ್ಲ ದೂರ
 • ಅನಿವಾರ್ಯತೆ ಮತ್ತು ಸೋಲು ತಂದು ಕೊಡುವ ಬಳುವಳಿ
 • ತೊಡಲು ಅರಿವೆ ಇಲ್ಲದಿದ್ದರೂ ಅರಿವುದನು ಬಿಡಬಾರದು
 • ಬೇರೆಯವರು ನಿಮ್ಮನ್ನು ದಡ್ಡ ಎಂದು ಹಳಿಯುವುದನ್ನು ತಪ್ಪಿಸಲು ತಿಳಿದುಕೊಳ್ಳುವುದೊಂದೇ ಪರಿಹಾರ
 • ಹಳಿ ತಪ್ಪದಂತೆ ತಡೆಯುವ ತಡೆ ಗೋಡೆ
 • ತಿಳಿದವ ಬೆಳೆವ
-ವಿಶ್ವನಾಥ ಸುಂಕಸಾಳ

ಕಾಳಧನಿಕರಿಗೆ ಮೋದಿಯಿಂದ ಮತ್ತೊಂದು ಶಾಕ್! ಅಕೌಂಟ್'ಗೆ ದೊಡ್ಡ ಮೊತ್ತ ಹಾಕಿದವರಿಗೆ ಉಳಿಯೋದು ಬಿಡಿಗಾಸು ಮಾತ್ರ..

ಕೊಟ್ಟಿದ್ದು ತನಗೆ,
ಬಚ್ಚಿಟ್ಟಿದ್ದು ಪರರಿಗೆ
ಅನ್ನೋ ಸ್ಥಿತಿಗೆ ಕಪ್ಪು ಕುಳವನ್ನ ತಂದಿರೋ ಹೆಗ್ಗಳಿಕೆ ಕೇಂದ್ರದ ಮುಡಿಗೇರ್ತಿದೆ.
ಏನಪ್ಪಾ ಇದು ಅಂತಾ ಕುತೂಹಲನಾ? ಇದರ ಕಂಪ್ಲೀಟ್ ಡೀಟೇಲ್ಸ್ ಮುಂದಿದೆ.
           ನೋಟ್ ನಿಷೇಧದ ನಂತರ ಕೇಂದ್ರ ಸರ್ಕಾರ ಕಾಳಧನಿಕರಿಗೆ ಮತ್ತೊಂದು ಶಾಕ್ ನೀಡಿದೆ. 2.5 ಲಕ್ಷಕ್ಕೂ ಅಧಿಕ ಹಣವನ್ನ ಯಾರೇ ತಮ್ಮ ಖಾತೆಗೆ ಜಮಾ ಮಾಡಿದ್ರೂ ಸೂಕ್ತ ದಾಖಲೆ ನೀಡಬೇಕು. ಒಂದು ವೇಳೆ ಆ ದಾಖಲೆಗಳಲ್ಲಿ  ಲೋಪವಿದ್ದಲ್ಲಿ ಠೇವಣಿ ಹಣಕ್ಕೆ ಇನ್ಮುಂದೆ ತೆರಿಗೆ ಜೊತೆ ದಂಡವೂ ಬೀಳಲಿದೆ.
      ನೋಟ್​ ಬ್ಯಾನ್'​ಗೂ ಮೊದಲೇ ಕೇಂದ್ರ ಸರ್ಕಾರ ಕಾಳಧನಿಕರಿಗೆ ಕಪ್ಪು ಹಣವನ್ನೂ ಕೂಡ ಅಕೌಂಟ್​'ಗೆ ಜಮೆ ಮಾಡಿ, ಸರಿಯಾದ ತೆರಿಗೆ ಕಟ್ಟಲು ಅವಕಾಶವನ್ನ ನೀಡಿತ್ತು. ಆದ್ರೆ ಇದನ್ನ ಕಪ್ಪುಕುಳಗಳು ಗಣನೆಗೆ ತೆಗೆದುಕೊಂಡಿರಲಿಲ್ಲ. ಆದ್ರೆ ಅದರ ಪರಿಣಾಮವನ್ನ ಈಗ ಅನುಭವಿಸುವಂತಾಗಿದೆ.
ಕಪ್ಪುಹಣ ಠೇವಣಿ ಮಾಡಿದರೆ ಉಳಿಯುವುದೆಷ್ಟು?
5 ಲಕ್ಷ ಠೇವಣಿ:
ಶೇ.30  - ಆದಾಯ ತೆರಿಗೆ - 1.5 ಲಕ್ಷ
ಶೇ.3 - ಶಿಕ್ಷಣ ಸೆಸ್ - 4,500 ರೂ.
ಶೇ. 200 ದಂಡ - 3.09 ಲಕ್ಷ ರೂ.
ಒಟ್ಟು ತೆರಿಗೆ - 4,63,500 ರೂ.
ಉಳಿಯುವುದು - 36,500 ರೂ.

10 ಲಕ್ಷ ಠೇವಣಿ:
ಶೇ.30  - ಆದಾಯ ತೆರಿಗೆ - 3, 00, 000
ಶೇ.3 - ಶಿಕ್ಷಣ ಸೆಸ್ - 9000 ರೂ.
ಶೇ. 200 ದಂಡ - 6, 18,000 ರೂ.
ಒಟ್ಟು ತೆರಿಗೆ - 9,27,000 ರೂ.
ಉಳಿಯುವುದು - 73,500 ರೂ.

15 ಲಕ್ಷ ಠೇವಣಿ:
ಶೇ.30  - ಆದಾಯ ತೆರಿಗೆ -4,50, 000
ಶೇ.3 - ಶಿಕ್ಷಣ ಸೆಸ್ - 13, 500 ರೂ.
ಶೇ. 200 ದಂಡ - 9, 27,000 ರೂ.
ಒಟ್ಟು ತೆರಿಗೆ - 13, 90,500 ರೂ.
ಉಳಿಯುವುದು - 1,09, 000 ರೂ.

ಲಕ್ಷಗಟ್ಟಲೇ ಠೇವಣಿ ಮಾಡಿದ್ರೆ ಉಳಿಯೋದು ಪುಡಿಗಾಸು. ಇನ್ನು, ಬಚ್ಚಿಟ್ಟ ಹಣವನ್ನ ಹಾಗೇ ಇಟ್ರೆ ಮೌಲ್ಯವಿಲ್ಲ.
ಬೇನಾಮಿ ಲೆಕ್ಕ ಕೊಟ್ಟರೆ 7 ವರ್ಷ ಜೈಲು?
ದಂಡದಿಂದ ತಪ್ಪಿಸಿಕೊಳ್ಳಲು ಕೆಲವರು ಬೇನಾಮಿ ಅಕೌಂಟ್ ಸೃಷ್ಟಿ ಮಾಡಿರುವ ಪ್ರಮೇಯಗಳು ಇವೆ, ಅದೂ ಸಾಲದು ಎಂಬಂತೆ ಮತ್ತೊಬ್ಬರ ಅಕೌಂಟ್'​ನಲ್ಲಿ ಜಮೆ ಮಾಡಿ, ಅವರಿಗೆ ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ನೀಡುವ ವ್ಯವಹಾರಗಳು ನಡೆಯುತ್ತಿವೆ. ಇಂಥವರೇನಾದ್ರೂ ಸಿಕ್ಕಿಬಿದ್ರೆ ದಂಡದ ಜೊತೆ 7 ವರ್ಷಗಳ ಕಾರಾಗೃಹ ಶಿಕ್ಷೆ ಕೂಡ ಅನುಭವಿಸಬೇಕಾಗುತ್ತೆ.

ಹೀಗೆ ಕಪ್ಪುಕುಳಗಳ ಎಲಾ ರೀತಿಯ ವಾಮಮಾರ್ಗವನ್ನೂ ಬಂದ್ ಮಾಡುವ ಕೆಲಸ ನಡೆಯುತ್ತಿದೆ. ಈ ಮಧ್ಯೆ ಇಂದಿನಿಂದ ಮತ್ತೆ ಎಲ್ಲಾ ಬ್ಯಾಂಕ್'​ಗಳಲ್ಲಿ ವ್ಯವಹಾರಗಳು ಪುನಾರಂಭವಾಗುತ್ತಿವೆ. ದೇಶಾದ್ಯಂತ ನೋಟು ವಿನಿಮಯ ನಡೆಯಲಿದೆ.
ಕೃಪೆ- ಧಾನ್ಯಶ್ರೀ, ನ್ಯೂಸ್ ಡೆಸ್ಕ್ ಸುವರ್ಣ ನ್ಯೂಸ್ 

ನರೇಂದ್ರ ದಾಮೋದರದಾಸ್ ಮೋದಿ (Narendra Damodardas Modi)

 ಜನನ: ಸೆಪ್ಟೆಂಬರ್ ೧೭೧೯೫೦ ಇವರು ಭಾರತದ ಪ್ರಧಾನ ಮಂತ್ರಿಗಳು. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಹೊಂದಿದ್ದಾರೆ. ಇವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗು ಎನ್ ಡಿ ಎ ಯ ಪಕ್ಷದ ವತಿಯಿಂದ ಸ್ಪರ್ಧಿಸಿ ಗೆದ್ದು ಭಾರತದ ೧೫ನೆಯ ಪ್ರಧಾನಮಂತ್ರಿಯಾಗಿದ್ದಾರೆ. ಮೋದಿಯವರು, ಗುಜರಾತ್ ನ ವಡೋದರ ಹಾಗೂ ವಾರಾಣಸಿ ಚುನಾವಣಾ ಕ್ಷೇತ್ರಗಳಲ್ಲಿ ನಿಂತು, ಅತ್ಯಂತ ಬಹುಮತದಿಂದ ಜಯಗಳಿಸಿದ್ದಾರೆ. 
ಹಾಲಿ
ಅಧಿಕಾರ ಸ್ವೀಕಾರ 
೨೬ ನೇ ಮೇ ೨೦೧೪
ರಾಷ್ಟ್ರಪತಿಪ್ರಣಬ್ ಮುಖರ್ಜಿ
ಪೂರ್ವಾಧಿಕಾರಿಮನಮೋಹನ್ ಸಿಂಗ್

ಗುಜರಾತ್ ರಾಜ್ಯದ ೧೪ನೆಯ ಮುಖ್ಯಮಂತ್ರಿ ,ಭಾರತದ ಪ್ರಧಾನ ಮಂತ್ರಿ
ಅಧಿಕಾರ ಅವಧಿ
7 ಅಕ್ಟೋಬರ್ 2001 – 22 May 2014
ರಾಜ್ಯಪಾಲ
ಪೂರ್ವಾಧಿಕಾರಿಕೇಶುಭಾಯಿ ಪಟೇಲ್
ಉತ್ತರಾಧಿಕಾರಿಆನಂದಿ ಬೆನ್ ಪಟೇಲ್
ವೈಯುಕ್ತಿಕ ಮಾಹಿತಿ
ಜನನ
ನರೇಂದ್ರ ದಾಮೋದರದಾಸ್ ಮೋದಿ Narendra Damodardas Modi
17 ಸಪ್ಟೆಂಬರ್ 1950
ರಾಜಕೀಯ ಪಕ್ಷಭಾರತೀಯ ಜನತಾ ಪಕ್ಷ
ಅಭ್ಯಸಿಸಿದ ವಿದ್ಯಾಪೀಠಗುಜರಾತ್ ವಿಶ್ವವಿದ್ಯಾಲಯ
ಧರ್ಮಹಿಂದೂ
ಸಹಿ

           ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 66ನೇ ಹುಟ್ಟು ಹಬ್ಬ ಸಂಭ್ರಮ.. ಈಗಾಗಲೇ ಪ್ರಧಾನಿ ಗುಜರಾತ್​ನ ಗಾಂಧಿನಗರಕ್ಕೆ ತೆರಳಿ ತಾಯಿ ಹೀರಾಬೆನ್​ರವರ ಆಶೀರ್ವಾದ ಪಡೆದಿದ್ದಾರೆ. 
            ಪ್ರಧಾನಿಯವರು ನವಸಾರಿ ಜಿಲ್ಲೆಯ ಬುಡಕಟ್ಟು ಅಂಗವಿಕಲ ಮಕ್ಕಳೊಂದಿಗೆ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಬುಡಕಟ್ಟು ಜಿಲ್ಲೆಯಾದ ದಾಹೋದ್‌ಗೆ ತೆರಳಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. 
             ಸೂರತ್ ಮೂಲದ ಬೇಕರಿಯೊಂದರ ಮಾಲೀಕರು, ಸ್ವಯಂ ಸೇವಾ ಸಂಸ್ಥೆಯೊಂದರ ಜೊತೆಗೂಡಿ ಪಿರಮಿಡ್ ಆಕಾರದ ಬೃಹತ್ ಕೇಕ್ ತಯಾರಿಸಿದ್ದಾರೆ. 
             ಸೂರತ್ ನ ‘ಅತುಲ್ ಬೇಕರಿ’ ಸ್ವಯಂ ಸೇವಾ ಸಂಸ್ಥೆ ‘ಶಕ್ತಿ ಫೌಂಡೇಶನ್’ ಜೊತೆಗೂಡಿ ಈ ಕೇಕ್ ತಯಾರಿಸಿದ್ದು, ಮಹಿಳಾ ಸಬಲೀಕರಣಕ್ಕಾಗಿ 5 ಸಾವಿರ ಮಹಿಳೆಯರ ಸಮ್ಮುಖದಲ್ಲಿ ಮೋದಿ ಕೇಕ್ ಕತ್ತರಿಸಲಿದ್ದಾರೆ. ಈ ಮೂಲಕ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. 

ಅಮ್ಮ ಬಾಮದುವೆಯಾಗಿ ತಿ೦ಗಳಾಯಿತಮ್ಮ
ನಿನ್ನ ನೋಡದೆ ಮನ ನೊ೦ದಿದೆಯಮ್ಮ
ಬ೦ದು ಬಿಡು ನನ್ನೊಟ್ಟಿಗೆ
ಇರೋಣ ಜೀವನ ಪೂರ ಒಟ್ಟಿಗೆ

ಪ್ರೀತಿಸುವ ಗ೦ಡ ಅಕ್ಕರೆಯ ಅತ್ತೆ ಮಾವ
ಆಳುಕಾಳು ವೆಚ್ಚಕೇನು ಕಡಿಮೆಯಿಲ್ಲಮ್ಮ
ಆದರು ನಿನ್ನ ನೆನಪೆ ಕಾಡುತ್ತಮ್ಮ
ನಿನ್ನ ನೋಡುವಾಸೆ ತಡೆಯಲಾರೆನಮ್ಮ

ಊಟಕೆ ಕುಳಿತರೆ ನಿನ್ನ ಕೈ ತುತ್ತು ನೆನಪು
ಮಲಗುವಾಗ ನಿನ್ನ ಮಡಿಲಲಿ ನಾ ಮಲಗಿದ ನೆನಪು
ನನ್ನ ಕಣ್ಣಲಿದೆ ನಿನ್ನ ಪ್ರತಿಬಿ೦ಬ
ಕಣ್ಣರಳಿಸಿ ನಗುವ ನಿನ್ನ ಪ್ರೇಮ ಬಿ೦ಬ

ನಿದ್ದೆ ಬರದೆ ಹೊರಳಾದಿರುವೆ ನಿನ್ನ ನೆನಪಿನಲಿ
ಬ೦ದುಬಿಡು ನಾಳೆ ಬೆಳಗಿನ ಜಾವದಲಿ
ನಿನ್ನ ಕೈತುತ್ತು ತಿ೦ದು ಮಲಗುವೆ ನಿನ್ನ ಮಡಿಲಲಿ
ಇದ್ದು ಬಿಡಮ್ಮ ಜೀವನವೆಲ್ಲ ನನ್ನ ಜೊತೆಯಲಿ

Posted by ಎನ್. ಸ್ವಾಮಿನಾಥನ್.