ಜಕಾರ್ತಾ: ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ವಿಶ್ವದಾಖಲೆ ಮಾಡುವ ಸಾಧ್ಯತೆಯಿರುವ ಇಂಡೋನೇಶಿಯಾದ ಈ ವ್ಯಕ್ತಿಗೆ 145 ವರ್ಷ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಕೇಂದ್ರ ಜಾವಾದ ಸ್ರಾಜೆನ್ ರೆಜೆನ್ಸಿ ಯ ಗ್ರಾಮವೊಂದರಲ್ಲಿ ವಾಸಿಸುವ ಸೊಡಿಮೆಜೊ, 1870 ಡಿಸೆಂಬರ್ 31 ರಂದು ಜನಿಸಿರುವುದಕ್ಕೆ ಗುರುತಿನ ಚೀಟಿ ತೋರಿಸುತ್ತಾರೆ.
ಸೊಡಿಮೆಜೊ ತನ್ನ ಬಾಲ್ಯದಲ್ಲಿ ಕಂಡಿರಬಹುದಾದ ಡಚ್ ವಸಾಹತುಸಾಹಿ ಆಡಳಿತ ತೆರಳಿ ವರ್ಷಗಳೇ ಕಳೆದಿದೆ, ಆದರೆ ಸೊಡಿಮೆಜೊ ಈಗಿನ ಆಧುನಿಕತೆಯನ್ನು ಕಾಣುತ್ತಿದ್ದು, ತನ್ನ ಮನೆಯ ಮುಂದೆ ಕೂತು ದಿನಕ್ಕೆ ಒಂದು ಪ್ಯಾಕೆಟ್ ಸಿಗರೇಟ್ ಸೇದಿ, ರಾತ್ರಿಯಲ್ಲಿ ರೇಡಿಯೋ ಕೇಳುವ ಮೂಲಕ ಸಮಯ ಕಳೆಯುತ್ತಾರೆ.
ಅವರಿಗೆ ಕಿವಿ ಕೇಳುವುದು ದುರ್ಲಭ ಆದುದರಿಂದ ಜನ ಬಹಳ ಗಟ್ಟಿಯಾಗಿ ಮಾತನಾಡಬೇಕಿದೆ, ಅವರ ಕಂಠವು ಕ್ಷೀಣಿಸಿದ್ದು, ಸಣ್ಣ ಸಣ್ಣ ವಾಕ್ಯಗಳನ್ನಷ್ಟೇ ಮಾತನಾಡುತ್ತಾರೆ.
ಹಾಗೆಯೇ ದೃಷ್ಟಿದೋಷ ಕೂಡ ಇದ್ದು, ಅವರು ಕಾಣಬೇಕಾದರೆ ಅವರ ಕಣ್ಣುಗಳ ಹತ್ತಿರಕ್ಕೆ ವಸ್ತುಗಳನ್ನು ಹಿಡಿಯಬೇಕಿದೆ.ಅವರ 46 ವರ್ಷದ ಮೊಮ್ಮಗ ಸುರಯಾನೊ ವಿವರಿಸುವಂತೆ, ಈ ಹಿರಿ ವ್ಯಕ್ತಿ ತನ್ನ ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದು, ಅವರೇ ಈ ವ್ಯಕ್ತಿಯ ದಿನನಿತ್ಯದ ಬೇಡಿಕೆಗಳನ್ನು ಪೂರೈಸುತ್ತಿದ್ದಾರಂತೆ.
ಗಿನ್ನಿಸ್ ವಿಶ್ವದಾಖಲೆ ಪುಸ್ತಕಕ್ಕೆ ಇನ್ನು ಇವರ ಹೆಸರು ಸೇರ್ಪಡೆಯಾಗಿಲ್ಲ. 1993 ರಲ್ಲಿ ತನ್ನ ಪತ್ನಿ ತೀರಿಕೊಂಡಾಗ ಇನ್ನು ಹೆಚ್ಚು ವರ್ಷ ಬದುಕುವುದಿಲ್ಲ ಎಂದುಕೊಂಡಿದ್ದರು ಆದರೆ ಅದು ಕಳೆದು 23 ವರ್ಷಗಳ ನಂತರವೂ ವಿಶ್ವದ ಆಗುಹೋಗುಗಳನ್ನು ನೋಡುತ್ತಿದ್ದಾರೆ ಎಂದು ವಿವರಿಸುತ್ತಾರೆ ಸುರಯಾನೊ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.