ಮದುವೆಯಾಗಿ ತಿ೦ಗಳಾಯಿತಮ್ಮ
ನಿನ್ನ ನೋಡದೆ ಮನ ನೊ೦ದಿದೆಯಮ್ಮ
ಬ೦ದು ಬಿಡು ನನ್ನೊಟ್ಟಿಗೆ
ಇರೋಣ ಜೀವನ ಪೂರ ಒಟ್ಟಿಗೆ
ಪ್ರೀತಿಸುವ ಗ೦ಡ ಅಕ್ಕರೆಯ ಅತ್ತೆ ಮಾವ
ಆಳುಕಾಳು ವೆಚ್ಚಕೇನು ಕಡಿಮೆಯಿಲ್ಲಮ್ಮ
ಆದರು ನಿನ್ನ ನೆನಪೆ ಕಾಡುತ್ತಮ್ಮ
ನಿನ್ನ ನೋಡುವಾಸೆ ತಡೆಯಲಾರೆನಮ್ಮ
ಊಟಕೆ ಕುಳಿತರೆ ನಿನ್ನ ಕೈ ತುತ್ತು ನೆನಪು
ಮಲಗುವಾಗ ನಿನ್ನ ಮಡಿಲಲಿ ನಾ ಮಲಗಿದ ನೆನಪು
ನನ್ನ ಕಣ್ಣಲಿದೆ ನಿನ್ನ ಪ್ರತಿಬಿ೦ಬ
ಕಣ್ಣರಳಿಸಿ ನಗುವ ನಿನ್ನ ಪ್ರೇಮ ಬಿ೦ಬ
ನಿದ್ದೆ ಬರದೆ ಹೊರಳಾದಿರುವೆ ನಿನ್ನ ನೆನಪಿನಲಿ
ಬ೦ದುಬಿಡು ನಾಳೆ ಬೆಳಗಿನ ಜಾವದಲಿ
ನಿನ್ನ ಕೈತುತ್ತು ತಿ೦ದು ಮಲಗುವೆ ನಿನ್ನ ಮಡಿಲಲಿ
ಇದ್ದು ಬಿಡಮ್ಮ ಜೀವನವೆಲ್ಲ ನನ್ನ ಜೊತೆಯಲಿ
ನಿನ್ನ ನೋಡದೆ ಮನ ನೊ೦ದಿದೆಯಮ್ಮ
ಬ೦ದು ಬಿಡು ನನ್ನೊಟ್ಟಿಗೆ
ಇರೋಣ ಜೀವನ ಪೂರ ಒಟ್ಟಿಗೆ
ಪ್ರೀತಿಸುವ ಗ೦ಡ ಅಕ್ಕರೆಯ ಅತ್ತೆ ಮಾವ
ಆಳುಕಾಳು ವೆಚ್ಚಕೇನು ಕಡಿಮೆಯಿಲ್ಲಮ್ಮ
ಆದರು ನಿನ್ನ ನೆನಪೆ ಕಾಡುತ್ತಮ್ಮ
ನಿನ್ನ ನೋಡುವಾಸೆ ತಡೆಯಲಾರೆನಮ್ಮ
ಊಟಕೆ ಕುಳಿತರೆ ನಿನ್ನ ಕೈ ತುತ್ತು ನೆನಪು
ಮಲಗುವಾಗ ನಿನ್ನ ಮಡಿಲಲಿ ನಾ ಮಲಗಿದ ನೆನಪು
ನನ್ನ ಕಣ್ಣಲಿದೆ ನಿನ್ನ ಪ್ರತಿಬಿ೦ಬ
ಕಣ್ಣರಳಿಸಿ ನಗುವ ನಿನ್ನ ಪ್ರೇಮ ಬಿ೦ಬ
ನಿದ್ದೆ ಬರದೆ ಹೊರಳಾದಿರುವೆ ನಿನ್ನ ನೆನಪಿನಲಿ
ಬ೦ದುಬಿಡು ನಾಳೆ ಬೆಳಗಿನ ಜಾವದಲಿ
ನಿನ್ನ ಕೈತುತ್ತು ತಿ೦ದು ಮಲಗುವೆ ನಿನ್ನ ಮಡಿಲಲಿ
ಇದ್ದು ಬಿಡಮ್ಮ ಜೀವನವೆಲ್ಲ ನನ್ನ ಜೊತೆಯಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.