fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ನವೆಂಬರ್ 14, 2016

ಸಂಜೀವಿನಿ ಆಂಜನೇಯ

ಧನ್ವಂತರಿ ಗಣಪತಿ ಹಾಗೂ ಸಂಜೀವಿನಿ ಆಂಜನೇಯ ದೇವಾಲಯ
ಕೇತೋಹಳ್ಳಿ, ರಾಮನಗರ ಜಿಲ್ಲೆ
ketuhalli temple, Dhanvanthari Ganapati, Sanjeevani Anjaneya, Devaraj Kothari. ಸಂಜೀವಿನಿ ಆಂಜನೇಯ, ಧನ್ವಂತರಿ ಗಣಪತಿ, ಕೇತುಹಳ್ಳಿ. ರಾಮನಗರ, Ramnagarಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಬಿಡದಿ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಸಿಗುವ ಊರೇ ಕೇತೋಹಳ್ಳಿ. ಹಿಂದೆ ಸಂಗಬಸವನದೊಡ್ಡಿ ಎಂದು ಕರೆಸಿಕೊಂಡಿದ್ದ ಊರು ಈಗ ಕೇತೋಹಳ್ಳಿ ಎಂಬ ಹೆಸರಿನೊಂದಿಗೆ  ಪುಣ್ಯಕ್ಷೇತ್ರವಾಗಿ ಪರಿಣಮಿಸಿದೆ.
ಬೆಂಗಳೂರಿಗೆ 41 ಕಿ.ಲೋ. ಮೀಟರ್ ದೂರದಲ್ಲಿರುವ ಈ ಪುಟ್ಟಗ್ರಾಮ ಕ್ಷೇತ್ರವಾಗಲು ಕಾರಣ ದೇವರಾಜ ಕೊಠಾರಿ. ಅವರು ಶ್ರೀ ಭಗವಾನ್ ಮಹಾವೀರ್ ಮಾನವತಾ ಟ್ರಸ್ಟ್ ವತಿಯಿಂದ ಇಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ರಸ್ತೆಗೆ ಹೊಂದಿಕೊಂಡಂತೆಯೇ ಇರುವ ಈ ದೇವಾಲಯದಲ್ಲಿ ಧನ್ವಂತರಿ ಗಣಪತಿ, ಸಂಜೀವಿನಿ ಆಂಜನೇಯ, ಸುಬ್ರಹ್ಮಣ್ಯ, ನಂಜುಂಡೇಶ್ವರ ಮೊದಲಾದ ಹಲವು ದೇವತಾವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.
ketuhalli temple, Dhanvanthari Ganapati, Sanjeevani Anjaneya, Devaraj Kothari. ಸಂಜೀವಿನಿ ಆಂಜನೇಯ, ಧನ್ವಂತರಿ ಗಣಪತಿ, ಕೇತುಹಳ್ಳಿ. ರಾಮನಗರ, Ramnagarಕೊಠಾರಿಯವರು ಮೊದಲಿಗೆ 1999ರ ಜನವರಿ 22ರಂದು ಧನ್ವಂತರಿ ಗಣಪತಿ ದೇವಾಲಯ ನಿರ್ಮಿಸಿದರು. ಇಲ್ಲಿ ಧನ್ವಂತರಿ ಗಣಪತಿಯ ವಿಗ್ರಹವನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದರು. ಧನ್ವಂತರಿ ಎಂದರೆ ಸುರಲೋಕದ ವೈದ್ಯ. ಹೀಗಾಗಿ ಇಲ್ಲಿಗೆ ಬರುವ ಭಕ್ತರ ರೋಗಗಳನ್ನು ನಿವಾರಿಸುವ ಗಣಪನಿಗೆ ಧನ್ವಂತರಿ ಗಣಪನೆಂದು ಕರೆದ ಕೊಠಾರಿ ಅವರು, ತಮ್ಮ ಟ್ರಸ್ಟ್ ವತಿಯಿಂದ ಪಕ್ಕದಲ್ಲೇ ಇರುವ ತಮ್ಮ ಜಾಗದಲ್ಲಿ ಉಚಿತ ಆರೋಗ್ಯ ತಪಾಸಣಾ ಕೇಂದ್ರವನ್ನೂ ತೆರೆದರು. ಪ್ರತಿ ನಿತ್ಯ ಸಂಜೆ ಇಲ್ಲಿಗೆ ಆಗಮಿಸುವ ವೈದ್ಯರು ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಿ, ಉಚಿತವಾಗಿ ಔಷಧವನ್ನೂ ನೀಡುತ್ತಾರೆ. ಇದಕ್ಕಾಗುವ ಎಲ್ಲ ಖರ್ಚು ವೆಚ್ಚಗಳನ್ನೂ ಟ್ರಸ್ಟ್ ಭರಿಸುತ್ತದೆ ಎನ್ನುತ್ತಾರೆ ಕೊಠಾರಿಯವರು.
ಗಣಪತಿಯ ಪಕ್ಕದಲ್ಲಿ ನಂಜುಂಡೇಶ್ವರ, ಎಡಭಾಗದಲ್ಲಿ ಸುಬ್ರಹ್ಮಣ್ಯ ದೇವಾಲಯಗಳನ್ನು ನಿರ್ಮಿಸಿರುವ ಅವರು, ದೇವಾಲಯದ ಸುತ್ತಲೂ ಶಿರಡಿ ಸಾಯಿಬಾಬಾ, ಲಕ್ಷ್ಮೀ, ಗುರುರಾಯರ ಬೃಂದಾವನವೇ ಮೊದಲಾದ ಹಲವು ಪುಟ್ಟ ಪುಟ್ಟ ವಿಗ್ರಹಗಳನ್ನೂ ಪ್ರತಿಷ್ಠಾಪಿಸಿದ್ದಾರೆ.
ಪಕ್ಕದಲ್ಲಿರುವ ವಿಶಾಲ ಜಾಗದ ಬಯಲಿನಲ್ಲಿ ಕೇವಲ ಮೇಲ್ಛಾವಣಿ ಮಾತ್ರ ಇರುವ ತೆರೆದ ದೇವಾಲಯ ನಿರ್ಮಿಸಲಾಗಿದ್ದು, ಇಲ್ಲಿ 11 ಅಡಿ ಎತ್ತರದ ಸಂಜೀವಿನಿ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇಲ್ಲಿ ಆಂಜನೇಯನ ಪ್ರತಿಷ್ಠಾಪನೆ ಆದದ್ದು 2000ದ ಮಾರ್ಚ್ 12ರಂದು.
ketuhalli temple, Dhanvanthari Ganapati, Sanjeevani Anjaneya, Devaraj Kothari. ಸಂಜೀವಿನಿ ಆಂಜನೇಯ, ಧನ್ವಂತರಿ ಗಣಪತಿ, ಕೇತುಹಳ್ಳಿ. ರಾಮನಗರ, Ramnagar17 ಟನ್ ತೂಕವಿರುವ ಕೃಷ್ಣಶಿಲೆಯ ಈ ವಿಗ್ರಹ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಬೇಲೂರು ಹಳೇಬೀಡಿನಲ್ಲಿ ಇರುವ ಶಿಲಾಬಾಲಿಕೆಯರ ಕೈಗಳಲ್ಲಿ ಇರುವ ಬಳೆಗಳು ತಿರುಗುವ ರೀತಿಯಲ್ಲೇ ಇಲ್ಲಿರುವ ಸಂಜೀವಿನಿ ಆಂಜನೇಯನ ವಿಗ್ರಹದಲ್ಲಿರುವ ಎರಡೂ ಕೈಗಳ ಮತ್ತು ಕಾಲುಗಳಲ್ಲಿರುವ ಬಳೆ, ಕಡಗಗಳು ತಿರುಗುತ್ತವೆ. ಇಂದಿಗೂ ಭಾರತದಲ್ಲಿ ಜಕ್ಕಣನ ಪರಂಪರೆಯನ್ನು ಉಳಿಸಬಲ್ಲ ಶಿಲ್ಪಿಗಳಿದ್ದಾರೆ ಎಂಬುದಕ್ಕೆ ಈ ವಿಗ್ರಹ ಸಾಕ್ಷಿಯಾಗಿದೆ.
ವೃತ್ತಿಯಲ್ಲಿ ಚಾರ್ಟ ರ್ಡ್ ಅಕೌಂಟೆಂಟ್ ಆದ ದೇವರಾಜ ಕೊಠಾರಿ ಅವರು ದೇವಾಲಯದ ಪಕ್ಕದಲ್ಲಿ ವಿಶಾಲವಾದ ಸಭಾಭವನವನ್ನೂ ನಿರ್ಮಿಸಿದ್ದು, ಇಲ್ಲಿ ತಿಂಗಳಿಗೊಮ್ಮೆ ಉಚಿತ ಆರೋಗ್ಯ ಶಿಬಿರವನ್ನೂ ನಡೆಸುತ್ತಾ ಬಂದಿದ್ದಾರೆ. ಶಿಬಿರದ ಸಮಯದಲ್ಲಿ ಬಡ ಮಹಿಳಾ ರೋಗಿಗಳಿಗೆ ಉಚಿತವಾಗಿ ಸೀರೆಯನ್ನೂ ವಿತರಿಸುವುದು ವಿಶೇಷ. ಈ ದೇವಾಲಯದ ಪ್ರಾಂಗಣದಲ್ಲಿ ಮಹಾವೀರರ ದೇವಾಲಯವೂ ಇದೆ. ಇಲ್ಲಿ ಪಾಶ್ವನಾಥ, ನಾಕೋಡ್, ಅಧೀಶ್ವರ ಭಗವಾನ್, ಪದ್ಮಾವತಿಯೇ ಮೊದಲಾದ ಹಲವು ದೇವತಾವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಒಟ್ಟಾರೆಯಾಗಿ ಹಲವು ಧರ್ಮಗಳ ಸಮನ್ವಯ ಕೇಂದ್ರವಾಗಿರುವ ಈ ದೇವಾಲಯ ಸೇವಾಕ್ಷೇತ್ರವಾಗಿಯೂ ಮನಸೆಳೆದಿದೆ. ಇತ್ತೀಚೆಗೆ ಕೈಲಾಸ ಮಾನಸ ಸರೋವರದ ಯಾತ್ರೆಯನ್ನೂ ಮಾಡಿ ಬಂದಿರುವ ಕೊಠಾರಿ ಅವರು ಈ ದೇವಾಲಯಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

     ಸಂಪರ್ಕ: ಧರ್ಮಕ್ಷೇತ್ರ, ನಂ. 138, ಕೇತುಹಳ್ಳಿ (ಬಿಡದಿ ರಾಮನಗರ ಮಧ್ಯೆ), ಸಂಗಬಸವನದೊಡ್ಡಿ, ಮೈಸೂರು ಮುಖ್ಯರಸ್ತೆ, ರಾಮನಗರ ಜಿಲ್ಲೆ. ದೂರವಾಣಿ - 9886716443.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು