ಶನಿವಾರ, ನವೆಂಬರ್ 26, 2016

ಉರಿಲಿಂಗದೇವ

ಅಂಕಿತ ನಾಮಉರಿಲಿಂಗದೇವ 
ಕಾಲ1160 
ದೊರಕಿರುವ ವಚನಗಳು48 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿ
ಹುಟ್ಟಿದ ಸ್ಥಳಅವಸೆ ಕಂಧಾರ 
ಪರಿಚಯಕಾಲ 1160. ಸ್ಥಳಅವಸೆ ಕಂಧಾರಪುಲಿಗೆರೆಯ ಮಹಾಲಿಂಗದೇವನ ಗುರುಪರಂಪರೆಗೆ ಸೇರಿದ ಶಿವಲೆಂಕ ಮಂಚಣ್ಣನ ಶಿಷ್ಯದಲಿತ ವಚನಕಾರ ಉರಿಲಿಂಗಪೆದ್ದಿಯು ಉರಿಲಿಂಗದೇವನ ಶಿಷ್ಯಉರಿಲಿಂಗದೇವನ ಲಿಂಗನಿಷ್ಠೆಯನ್ನು ಪರೀಕ್ಷಿಸಲೆಂದು ಅನ್ಯಮತೀಯರು ಅವನ ಗುಡಿಸಿಲಿಗೆ ಬೆಂಕಿ ಇಟ್ಟರೂ ಆತ ವಿಚಲಿತನಾಗದೆ ಪೂಜಾಮಗ್ನನಾಗಿದ್ದ ಎಂಬ ಕಥೆ ಇದೆಈತನ 48 ವಚನಗಳು ದೊರೆತಿವೆಅಕ್ಕಮಹಾದೇವಿಯ ಶೈಲಿ ಮತ್ತು ಮನೋಧರ್ಮಗಳು ಇವನ ರಚನೆಗಳಲ್ಲೂ ಕಾಣುತ್ತವೆತನ್ನನ್ನೇ ಪತ್ನಿ ಎಂದೂ ಶಿವನನ್ನು ಪತಿ ಎಂದೂ ಭಾವಿಸಿದ ನಿಲುವು ಇವನ ರಚನೆಗಳಲ್ಲಿ ಕಾಣುತ್ತದೆ.


ಅಂತರಂಗದಲ್ಲಿ ಆವರಿಸಿಬಹಿರಂಗದಲ್ಲಿ ತೋರುವೆ.
ಕಂಗಳ ಕೊನೆಯಲ್ಲಿ ಮೂರುತಿಯಾಗಿಮನದ ಕೊನೆಯಲ್ಲಿ ತೋರುವೆ.
ಎನ್ನ ಬ್ರಹ್ಮರಂಧ್ರದಲ್ಲಿ ತೋರುವ ಪರಂಜ್ಯೋತಿ
ಉರಿಲಿಂಗದೇವ ನೀನಯ್ಯಾ.

ಕಾಮೆಂಟ್‌ಗಳಿಲ್ಲ: