ಹಳೆಯ ಐನೂರು ಮತ್ತು ಸಾವಿರ ರೂಪಾಯಿ ನೋಟುಗಳ ಚಲಾವಣೆ ಮೇಲೆ ನಿಷೇಧ ಹೇರಿರುವ ಕೇಂದ್ರ ಸರ್ಕಾರ ಜನಸಾಮನ್ಯರ ದೃಷ್ಟಿಯಿಂದ ಈ ಹಿಂದೆ ನೀಡಿದ್ದ ಕೆಲವೊಂದು ವಿನಾಯಿತಿಗಳನ್ನು ವಿಸ್ತರಿಸಿದೆ. ವಿಶೇಷ ಎಂದರೆ ಇನ್ನೂ ಮೂರು ದಿನಗಳವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಕಟ್ಟದೇ ನೆಮ್ಮದಿಯಾಗಿ ಸಂಚರಿಸಬಹುದು. ಇದರ ಜೊತೆಗೆ ಹೊಸದಾಗಿ ಕೆಲವು ವಿನಾಯಿತಿಗಳನ್ನು ಸೇರ್ಪಡೆಗೊಳಿಸಿದೆ.
- ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಕಟ್ಟುವುದರಿಂದ ನೀಡಲಾಗಿದ್ದ ವಿನಾಯಿತಿಯನ್ನು ಮತ್ತೆ ನವೆಂಬರ್ 14ರವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸುತ್ತೋಲೆ ಹೊರಡಿಸಿದೆ.
- ಸರ್ಕಾರಿ ಆಸ್ಪತ್ರೆಗಳು, ಔಷಧಿ ಅಂಗಡಿಗಳು, ರೈಲ್ವೆ ಮತ್ತು ಸರ್ಕಾರಿ ಸ್ವಾಮ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಬುಕ್ಕಿಂಗ್ ಕೌಂಟರ್, ವಿಮಾನಯಾನ ಟಿಕೆಟ್ ಬುಕ್ಕಿಂಗ್ ಕೌಂಟರ್‌ಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು ಮುಂದುವರಿಸಲಾಗಿದೆ.
- ಗ್ರಾಹಕರ ಕೋ-ಅಪರೇಟಿವ್ ಸೊಸೈಟಿಗಳಲ್ಲಿ ಹಳೆಯ ಐನೂರು, ಸಾವಿರ ರೂಪಾಯಿ ನೋಟುಗಳನ್ನು ಕೊಟ್ಟು ಖರೀದಿ ಮಾಡಬಹುದಾಗಿದೆ.
- ಹಾಲಿನ ಕೇಂದ್ರಗಳಲ್ಲೂ ಹಳೆಯ ಐನೂರು, ಸಾವಿರ ರೂಪಾಯಿ ನೋಟು ಚಲಾವಣೆಗೆ ಅವಕಾಶವಿದೆ.
- ಪೆಟ್ರೋಲ್, ಡೀಸೆಲ್, ಗ್ಯಾಸ್ ಸ್ಟೇಷನ್‌ಗಳು, ಚಿತಾಗಾರಗಳಲ್ಲೂ ಹಳೆಯ ಐನೂರು, ಸಾವಿರ ರೂಪಾಯಿ ನೋಟನ್ನು ಬಳಸಬಹುದಾಗಿದೆ.
ಹಾಲಿ ಇರುವ ಈ ವಿನಾಯಿತಿಗಳ ಪಟ್ಟಿಗೆ ಹೊಸದನ್ನು ಸೇರ್ಪಡೆ ಮಾಡಿ ಕೇಂದ್ರ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿದೆ.
- ನ್ಯಾಯಾಲಯಗಳ ಶುಲ್ಕವನ್ನು ಹಳೆಯ ಐನೂರು, ಸಾವಿರ ರೂಪಾಯಿ ನೋಟಿನ ರೂಪದಲ್ಲೇ ಪಾವತಿ ಮಾಡಬಹುದಾಗಿದೆ.
- ಅಧಿಕೃತ ಗುರುತಿನ ಚೀಟಿ ಹೊಂದಿರುವ ಗ್ರಾಹಕರು ಗ್ರಾಹಕರ ನ್ಯಾಯಬೆಲೆ ಅಂಗಡಿಗಳಲ್ಲೂ ಹಳೆಯ ನೋಟು ನಡೆಯಲಿದೆ.
- ವಿದ್ಯುತ್, ನೀರು, ಸ್ಥಳೀಯ ಸಂಸ್ಥೆಗಳಿಗೆ ಹಳೆಯ ಐನೂರು, ಸಾವಿರ ರೂಪಾಯಿ ನೋಟಿನಲ್ಲಿ ಶುಲ್ಕ ಮತ್ತು ತೆರಿಗೆ ಪಾವತಿ ಮಾಡಬಹುದು. ಆದರೆ ಮುಂಗಡ ತೆರಿಗೆ ಅಥವಾ ಶುಲ್ಕ ಪಾವತಿಗೆ ಅವಕಾಶವಿಲ್ಲ.
- ಇತ್ತ, ಕರ್ನಾಟಕದಲ್ಲಿ ವಿದ್ಯುತ್ ಶುಲ್ಕವನ್ನು ಹಳೆಯ ನೋಟುಗಳಲ್ಲೇ ಪಾವತಿ ಮಾಡಬಹುದು ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಆರ್‌ಬಿಐನಲ್ಲಿ ನಗದು ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಹಣಕಾಸು ಸಚಿವಾಲಯ ನಿಧಾನಕ್ಕೆ ಎಟಿಎಂಗಳಲ್ಲಿ ಹಣ ಸರಬರಾಜನ್ನು ಹೆಚ್ಚಿಸಲಾಗುತ್ತದೆ ಎಂದಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.