ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಡಿಸೆಂಬರ್ 31, 2025

ಅಂದು - ಇಂದು ( 25 ವರ್ಷಗಳ ಹಿಂದೆ )


ಅಂದುಇಂದು
1. ಎಲ್ಲರೂ ಮಕ್ಕಳನ್ನು ಹೊಂದಬೇಕೆಂದು ಬಯಸಿದ್ದರು.ಅನೇಕ ಜನರು ಮಕ್ಕಳನ್ನು ಹೊಂದಲು ಹೆದರುತ್ತಾರೆ.
2. ಮಕ್ಕಳು ತಮ್ಮ ಹೆತ್ತವರನ್ನು ಗೌರವಿಸಿದರು.ಈಗ ಪೋಷಕರು ತಮ್ಮ ಮಕ್ಕಳನ್ನು ಗೌರವಿಸಬೇಕು.
3. ನಾವು ಎಲ್ಲಾ ನೆರೆಹೊರೆಯವರನ್ನು ತಿಳಿದುಕೊಂಡೆವು.ಈಗ ನಾವು ನಮ್ಮ ನೆರೆಹೊರೆಯವರಿಗೆ ಅಪರಿಚಿತರು.
4. ಇಡೀ ಕುಟುಂಬವನ್ನು ಪೋಷಿಸಲು ಒಬ್ಬ ವ್ಯಕ್ತಿ ಮಾತ್ರ ಕೆಲಸ ಮಾಡುತ್ತಿದ್ದ.
ಈಗ ಎಲ್ಲರೂ ಒಂದು ಮಗುವನ್ನು ಬೆಂಬಲಿಸಲು ಕೆಲಸ ಮಾಡಬೇಕು.
5. ಶ್ರೀಮಂತರು ಬಡವರಂತೆ ನಟಿಸಿದರು.ಈಗ ಬಡವರು ಶ್ರೀಮಂತರಂತೆ ನಟಿಸುತ್ತಿದ್ದಾರೆ.
6. ಎಲ್ಲರೂ ಸಂತೋಷವಾಗಿ ಕಾಣಲು ಕೊಬ್ಬು ಇರಬೇಕೆಂದು ಬಯಸಿದ್ದರು.ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆರೋಗ್ಯವಾಗಿರಲು ಆಹಾರ ಕ್ರಮದಲ್ಲಿರುತ್ತಾರೆ.
7. ಜನರು ಕಷ್ಟಪಟ್ಟು ಕೆಲಸ ಮಾಡಲು ಶಕ್ತಿಯ ಅಗತ್ಯವಿರುವುದರಿಂದ ಬಹಳಷ್ಟು ತಿನ್ನಬೇಕಾಯಿತು.ಈಗ ನಾವು ಕೊಲೆಸ್ಟ್ರಾಲ್ ಭಯದಿಂದ ಕೊಬ್ಬಿನ ಆಹಾರವನ್ನು ತಿನ್ನಲು ಹೆದರುತ್ತಿದ್ದೇವೆ.
8. ಗ್ರಾಮಸ್ಥರು ಉದ್ಯೋಗ ಹುಡುಕಲು ನಗರಕ್ಕೆ ಸೇರುತ್ತಿದ್ದರು.ಈಗ ಪಟ್ಟಣದ ಜನರು ಶಾಂತಿಯನ್ನು ಕಂಡುಕೊಳ್ಳಲು ಒತ್ತಡದಿಂದ ಪಲಾಯನ ಮಾಡುತ್ತಿದ್ದಾರೆ.
9. ಮದುವೆ ಸುಲಭ ಆದರೆ ವಿಚ್ಚೆದನ ಕಷ್ಟವಾಗಿತ್ತು.ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ಕಷ್ಟ ಆದರೆ ವಿಚ್ಚೆದನ ತುಂಬಾ ಸುಲಭ.
10. ಜನರು ಪುಸ್ತಕಗಳನ್ನು ಅಧ್ಯಯನ ಮಾಡಲು ಮತ್ತು ಓದಲು ಇಷ್ಟಪಟ್ಟರು.ಈಗ ಜನರು ಸಾಮಾಜಿಕ Appಗಳನ್ನು ನವೀಕರಿಸಲು ಹಾಗೂ  ಸಂದೇಶಗಳನ್ನು ಓದಲು ಇಷ್ಟಪಡುತ್ತಾರೆ.


ಇಂದಿನ ಜೀವನಕ್ಕೆ ಮೇಲಿನವು ಕಷ್ಟಕರ ಸಂಗತಿಯಾಗಿದೆ ಎಂದು ನಾವು ಅರಿತುಕೊಂಡೆವು.

ಶುಕ್ರವಾರ, ಡಿಸೆಂಬರ್ 19, 2025

ಗೂಗಲಿನ 63ನೇ ಪುಟದ ವಿಚಿತ್ರ - Katamari

 "Katamari" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಬಣ್ಣದ ಚೆಂಡು" Google ಪುಟದ ಮೇಲೆ " ಕಾಣುತ್ತದೆ. ನೀವು ಆ ಬಣ್ಣದ ಚೆಂಡಿನ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ಬಾಣದ ಕೀ ಗಳಿಂದ ಚಲಿಸಬಹುದು ಆಗ ಅದು ತಿರುಗುತ್ತಾ ಆ ಪುಟದಲ್ಲಿರುವ ಸುದ್ದಿಯನ್ನು ತನ್ನ ಚೆಂಡಿಗೆ ಅಂಟಿಸಿಕೊಳ್ಳುತ್ತಾ ಮುಂದೆ ಚಲಿಸುತ್ತದೆ. ಪ್ರತಿ ಬಾರಿ ಕೀ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಆ ಪುಟದಲ್ಲಿರುವ ಸುದ್ದಿಯನ್ನು ತನ್ನ ಚೆಂಡಿಗೆ ಅಂಟಿಸಿಕೊಳ್ಳುತ್ತಾ ತಿರುಗುತ್ತಾ ಮುಂದೆ ಸಾಗುತ್ತದೆ . ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಸೋಮವಾರ, ಡಿಸೆಂಬರ್ 15, 2025

ಅ-ಅಃ & ಕ-ಕ್ಷ ದ ವರೆಗಿನ ಅಕ್ಷರ ರಾಮಾಯಣ (Great Ramayana)

ಅಯೋಧ್ಯೆಯರಸನು ದಶರಥನು

ಆತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು

ಇಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ

ಈಶ್ವರ ಕೃಪೆಯಲಿ ದೊರೆಯಿತು ಪಾಯಸವು

ಉದಾತ್ತ ದೊರೆಯಿತ್ತನು ಮೂವರು ಸತಿಯರಿಗೆ

ಊಟವ ಮಾಡಲು ಪಡೆದರು ನಾಲ್ವರನು

ಋಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು

ೠಕ್ಷ ಜನರನು ಶಿಕ್ಷಿಸಲು ರಾಮನನು

ಎಸುಳೆಗಳೊಂದಿಗೆ ದಂಡಕಾರಣ್ಯಕೆ

ಏಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು

ಒಮ್ಮೆಲೆ ಖರದೂಷಣರ ಬಡಿದು ಜನಕಪುರಕೆ

ಓಲಗದಲಿ ರಾಮನು ಶಿವಧನುವ ಮುರಿದು

ಔತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ

ಅಂಬಾ ಸೀತಾ ಸ್ವಯಂವರ ಸಂಭ್ರಮವು

ಅಃ ಅಃ ಶ್ರೀರಾಮ ಸೀತಾ ವಿವಾಹ ವೈಭವವು


ಕಟುವರ ಬೇಡಿದಳು ಕೈಕೇಯಿ ದಶರಥನ

ಖತಿಗೊಳ್ಳದೆ ಸೀತಾಲಕ್ಷ್ಮಣರೊಡನೆ

ಗಮನ ಕಾನನಕೆ ಉಟ್ಟು ನಾರುಮಡಿ

ಘಟಸಂಭವನಿತ್ತನು ಹರಿಚಾಪವನು

ಙ ಙ ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ


ಚಳಿಗಾಳಿ ಉರಿಬಿಸಿಲ ಸಹಿಸುತ ರಾಘವನು

ಛವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು

ಜಯಜಯ ರಾಘವ ಎನ್ನುತ ಭರತನು ಬಂದು

ಝಗಮಗಿಸುವ ರಾಮಪಾದುಕೆಗಳ ಪಡೆಯಲು

ಜ್ಞಾನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು

ಟವುಳಿಯಾಡದೆ
 ರಾಜ್ಯವ ನೀಯುವೆನು

ಠಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ

ಡನಿಯುಳಿಯಲು ಪಾದುಕೆಗಳ ಕೈಗೊಂಡು

ಢಕ್ಕೆಯ ಬಾರಿಸುವನೆ ಭರತನು

ಣ ಣ ಣಣ ಶಬ್ದವು ಎಲ್ಲೆಡೆ ಕೇಳಿಸಿತು


ತರುಣಿಯ ಮಾತನು ಲೆಕ್ಕಿಸಿ ರಾಘವ

ಥಳಥಳಿಪ ಜಿಂಕೆಯ ಹಿಂದೋಡಿದನು

ದನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು

ಧಣಿಗಳಾಶ್ರಮ ಸೇರುವ ಮೊದಲೆ

ನಲ್ಲೆಯನಪಹರಿಸಿದ ದಶಶಿರ ರಾವಣನು


ಪತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ


ಫಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ

ಬಲಿಷ್ಟ ಜಟಾಯುವಿಂದ ಉಪಕೃತ ರಾಘವ

ಭವಭಾದೆಯ ಕಳೆಯಲು ಹರಸಿದನು

ಮರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು


ಯಮಪುರಿಗಟ್ಟಿದ ರಾಮನು ವಾಲಿಯನು

ರಮಣೀಯ ವಾರ್ತೆ ತಂದನು ಮಾರುತಿಯು

ಲವಣಾಂಬುಧಿಗೈ ತಂದರು ವಾನರರು

ವತ್ಸಲನಾಶ್ರಯವಿತ್ತು ವಿಭೀಷಣನಿಗೆ

ಶರಧಿಯ ದಾಟಿ ಯುದ್ದವ ಹೂಡಿದರು

ಷಡ್ಗುಣ ಸಹಿತನು ರಾವಣನ ಕೊಂದು

ಸತಿಯೊಡಗೂಡಿ ಅಯೋಧ್ಯೆಗೆ ಹೊರಡಲು

ಹನುಮನು ಭರತಗೆ ವಿಷಯವ ತಿಳುಹಿದನು

ಳಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು

ಕ್ಷಮಾಪೂರ್ಣ ರಾಮಚಂದ್ರನು ಎಲ್ಲರನ್ನೂ ಕಾಪಾಡಲಿ...



(
ಇಷ್ಟು ಸುಂದರವಾದ "ಅಕ್ಷರ ರಾಮಾಯಣ"ವನ್ನು ರಚಿಸಿದ ಕವಿ ಅಜ್ಞಾತ (ಸಂಗ್ರಹ ಲೇಖನ). ಕವಿಗೆ ಗೌರವ ಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹ)


ಬುಧವಾರ, ಡಿಸೆಂಬರ್ 03, 2025

ಗದ್ದೆ - ಒದ್ದೆ

ವಿದ್ಯಾರ್ಥಿ ಗಳೆಂದರೆ ಭತ್ತ ಬೆಳೆವ "ಗದ್ದೆ" ||  ವಾವ್ಹಾ   ||

ವಿದ್ಯಾರ್ಥಿ ಗಳೆಂದರೆ ಭತ್ತ ಬೆಳೆವ "ಗದ್ದೆ" ||  ವಾವ್ಹಾ   ||

ಆದರೆ

ಗುರುಗಳ ಹೊಡೆತಕ್ಕೆ 
ರಾತ್ರಿ ಹಾಸಿಗೆಯೂ ಆಗ್ತಿತ್ತು "ಒದ್ದೆ".

1.. ಜಾಹೀರಾತು

2.ಜಾಹೀರಾತು