fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಡಿಸೆಂಬರ್ 18, 2023

ಗೂಗಲ ಟ್ಯೂನರ್ ಪುಟದ (Google Tuner Pages) 40


Google ನಲ್ಲಿ ಹೀಗೆ ಟೈಪ್ ಮಾಡಿ: "Google Tuner " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಟ್ಯೂನರ್ " ಕಾಣುತ್ತದೆ. ಅಲ್ಲಿ ನೀವು ನಿಮ್ಮ ದ್ವನಿವರ್ದಕವನ್ನು ಪ್ರಾರಭಿಸಿ ನಿಮಗೆ ಬೇಕಾದಹಾಗೆ ಮಾತಾಡಿದಂತೆ ನಿಮ್ಮ ಟ್ಯೂನಿಂಗ್‌ ಎರಿಳಿತವನ್ನು ಕಾಣಬಹುದು. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಶುಕ್ರವಾರ, ಡಿಸೆಂಬರ್ 15, 2023

ಅ-ಅಃ & ಕ-ಹ ವರೆಗಿನ ಹೆಂಡತಿಯ ಬಗ್ಗೆ

- ಅಂದದ ಹೆಂಡತಿಯನ್ನು ಅನುಮಾನಿಸಬೇಡಿ.

- ರಾದಿಸಿ ಆದರೆ ಅಳಿಸಬೇಡಿ.

- ರುವೆ ನಿನ್ನ ಜೊತೆಎನ್ನಿ, ಇರಬೇಡ ಎನ್ನಬೇಡಿ.

- ದ್ದಾರ ಮಾಡು ನಮ್ಮನ್ನ ಎನ್ನಿ, ಉರುಗುಟ್ಟ ಬೇಡಿ.

- ರಿಗೆ ಹೋಗಿ ಬಾ ಎನ್ನಿ, ಮುಖ ಊದಿಸಬೇಡಿ.

- ಣಾನುಭಂಧ ಬೆಸೆಯಿರಿ, ಋಣ ಹರಿದುಕೊಳ್ಳಬೇಡಿ.

- ಷ್ಟು ಕಷ್ಟಪಡುವೆ ಎನ್ನಿ, ಎಗರಾಡಬೇಡಿ.

- ನಮ್ಮ ಎನ್ನಿ, ಏನೆಲೇ ಎನ್ನಬೇಡಿ.

- ಲು (ಹುಚ್ಚಿ) ಎನ್ನಬೇಡಿಐಲವ್ ಯು ಎನ್ನಿ.

- ಒಂದೇ ನಾವೆಲ್ಲರೂ ಎನ್ನಿಒದ್ದಾಡಬೇಡಿ.

- ಡಾಡಲು ಬಿಡಿ, ಓಡಿಸಬೇಡಿ.

- ದಾರ್ಯ ತೋರಿಸಿಔಡು ಕಚ್ಚಬೇಡಿ.

ಅಂ - ಅಂಗೀಕರಿಸಿಅಸಡ್ಡೆ ಮಾಡಬೇಡಿ.

ಅಃ - ಅಃ (ಹಾ) ಎನ್ನಿಹಂಗಿಸಬೇಡಿ.


- ನಿಕರಿಸಿ, ಕಂಗೆಡಿಸಬೇಡಿ.

- ಡಕ್ ಆಗಿರಿ, ಖಂಡಿಸಬೇಡಿ.

- ಗಂಡನಾಗಿರಿ, ಗಡುಸಾಗಿರಬೇಡಿ.

- ರ್ವದಿಂದಿರಿ, ಘರ್ಜಿಸಬೇಡಿ.

- ಚೆನ್ನಾಗಿ ನೋಡಿಕೊಳ್ಳಿ, ಚಮಚವಾಗಬೇಡಿ.

- ಲದಿಂದ ಬದುಕಿ, ಛರ್ತಿಯಾಗಬೇಡಿ.

- ನುಮದ ಜೋಡಿ ಎನ್ನಿ, ಜಗಳವಾಡಬೇಡಿ.

- ರಿಯಂತೆ (ನೀರುಹರಿ ಎನ್ನಿಝಾಡಿಸಬೇಡಿ.

- ಟೊಮೋಟೊ ತರಹ ಎನ್ನಿ, ಚಟ್ನಿ ಮಾಡಬೇಡಿ.

- ಕ್ಕ ನಾನು ನಿನಗೆ ಎನ್ನಿ, ಠಕ್ಕರಾಗಬೇಡಿ.

- ಮರುಗ ಬಾರಿಸಿ, ಢಕ್ಕೆ ಹೊಡೆಯಬೇಡಿ.

- ಢಂಬಾಚಾರ ಮಾಡಬೇಡಿಡೋಲಾಯಮಾನರಾಗಬೇಡಿ.

- ಕ್ಕವಳು ನೀನು ನನಗೆ ಎನ್ನಿತಕ್ಕಡಿಯಲ್ಲಿ ತೂಗಬೇಡಿ.

- ಥಕ ಕುಣಿಸಬೇಡಿ, ಥರಥರ ನಡುಗಿಸಬೇಡಿ.

- ಯಾವಂತರಾಗಿ, ದಬಾಯಿಸಬೇಡಿ.

- ನವಂತರಾಗರಿ, ದಾನವಂತರಾಗರಿ ಬಾಳಿ.

- ಗು ಮುಖರಾಗಿರಿ, ನಗು ನಗುತಾ ಬಾಳಿರಿ.

- ರಿಹಾರ ಹುಡುಕಿ, ಪರಿಶ್ರಮಪಡಿರಿ.

- ಪುಫ್ಪ ತನ್ನಿರಿ, ಫಲಭರಿತ ಮರವಾಗಿರಿ.

- ದುಕನ್ನು ಆನಂದಿಸಿ, ಬದಲಾಗಬೇಡಿ.

ಸಾಗರ ಸುಲಭವಾಗಿ ದಾಟಿಭಯ ಬೀಳಬೇಡಿ.

- ಮತೆಯ ಮಕರಂದವಾಗಿ, ಮಮಕಾರ ಬಿಡಬೇಡಿ.

- ಯಾರಿವನುಎನ್ನುವಂತಾಗಿರಿ, ಯಾಮಾರಬೇಡಿ.

- ರಾ ರಾಮ ಎನ್ನಿ, ರಾಮಾಯಣ ಮಾಡಬೇಡಿ.

- ವ ಲವಿಕೆಯಿಂದ ಇರಿಲಾವಣಿಗಳನ್ನು ಹಾಡಿ.

- ಯಸ್ಸಾಯಿತು ಎನ್ನಿ, ವರಾತ ಮಾಡಬೇಡಿ.

- ರಣಾಗುವೆ ಎನ್ನಿ, ಶಹನಾಯಿ ಬಾರಿಸಿ.

- ಹಕಾರಿಯಾಗಿ, ಸಹಬಾಳ್ವ ನಡೆಸಿ.

- ಹಾಲಾಹಲ ಬಿಟ್ಟು ಹಂಸ ಪಕ್ಷಿಯಂತೆ ಬಾಳಿ.

ಭಾನುವಾರ, ಡಿಸೆಂಬರ್ 03, 2023

ಅತಿಯಾಗಿ ದ್ವೇಷಿಸು / ಪ್ರೀತಿ

ಅತಿಯಾಗಿ ದ್ವೇಷಿಸಬೇಕು ನಾ ನಿನ್ನ...   || ವಾವ್ಹಾ ವಾವ್ಹಾ ||
ಅತಿಯಾಗಿ 
ದ್ವೇಷಿಸಬೇಕು ನಾ ನಿನ್ನ...  || ವಾವ್ಹಾ ವಾವ್ಹಾ ||

ಯಾಕೆಂದರೆ,

ಅತಿಯಾಗಿ ದ್ವೇಷಿಸುವವರನ್ನು ಮಾತ್ರ
ಅತಿಯಾಗಿ  ಪ್ರೀತಿಸಲು ಸಾಧ್ಯ..

ಬುಧವಾರ, ನವೆಂಬರ್ 29, 2023

ಕನ್ನಡ ಭಾಷೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು (Jnanapith award in Kannada language)

1. ಕುವೆಂಪು (1967)
#ಕುವೆಂಪು(1967): 
       ಕನ್ನಡಕ್ಕೆ ಮೊಟ್ಟಮೊದಲು ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಕುಪ್ಪಳ್ಳಿ ವೆಂಕಟಪ್ಪನವರ ಪುತ್ರ ಪುಟ್ಟಪ್ಪನವರು. ‘ಕುವೆಂಪು’ ಎಂಬ ಕಾವ್ಯನಾಮದಿಂದ ಪ್ರಸಿದ್ಧರು. ಇವರ “ಶ್ರೀ ರಾಮಾಯಣ ದರ್ಶನಂ” ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ 1968 ರಲ್ಲಿ ‘ಜ್ಞಾನಪೀಠ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು. ಕುವೆಂಪುರವರು ಜಲಗಾರ, ಸ್ಮಶಾನಕುರುಕ್ಷೇತ್ರ, ಶೂದ್ರತಪಸ್ವಿ, ಬೆರಳ್‍ಗೆ ಕೊರಳ್- ಅವರು ರಚಿಸಿದ ಜನಪ್ರಿಯ ನಾಟಕಗಳು. 
ಪಾಂಚಜನ್ಯ, ಪಕ್ಷಿಕಾಶಿ, ನವಿಲು, ಮುಂತಾದುವುಗಳು ಅವರ ಕವನ ಸಂಕಲನಗಳು. 
ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಗಳನ್ನೂ ಸಹ ರಚಿಸಿದ್ದಾರೆ.
‘ನೆನಪಿನ ದೋಣಿ’ ಇವರ ಆತ್ಮಕಥೆ.

2. ದ.ರಾ. ಬೇಂದ್ರೆ (1972)
#ದ.ರಾ. ಬೇಂದ್ರೆ(1972):
       ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ ತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಧಾರವಾಡದಲ್ಲಿ 1886ರ ಜನವರಿ 31ರಂದು ಜನಿಸಿದರು. “ನಾಕುತಂತಿ” ವರಕವಿ ದ.ರಾ.ಬೇಂದ್ರೆಯವರ ಕವನ ಸಂಕಲನ. ಇದಕ್ಕಾಗಿ ಬೇಂದ್ರೆಯವರಿಗೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರಕಿತು.
ಅಂಬಿಕಾತನಯ ದತ್ತರ ಪ್ರಮುಖ ಕೃತಿಗಳೆಂದರೆ ಕೃಷ್ಣಕುಮಾರಿ, ಗರಿ, ನಾಕುತಂತಿ, ಸಖಿಗೀತ, ನಾದಲೀಲೆ, ಉಯ್ಯಾಲೆ, ಅರಳುಮರಳು, ನಾಕುತಂತಿ, ಬಾ ಹತ್ತಿರ, ಸೂರ್ಯಪಾನ, ಮೂರ್ತಿ ಮತ್ತು ಕಾಮ ಕಸ್ತೂರಿ, ಹೃದಯ ಸಮುದ್ರ, ಮುಕ್ತ ಕಂಠ, ಸಂಚಯ, ಉತ್ತರಾಯಣ ಮುಂತಾದ ಕವನ ಸಂಗ್ರಹಗಳು.
ಬಾಲಬೋಧೆ, ಪರಾಕಿ, ಕಾವ್ಯ ವೈಖರಿ ಮುಂತಾದ 20ಕ್ಕೂ ಅಧಿಕ ಗದ್ಯ ಬರಹ ಸಂಗ್ರಹಗಳು. 
ಸಾಹಿತ್ಯವಿಮರ್ಶೆ, ಸಾಹಿತ್ಯ ಸಂಶೋಧನೆ, ವಿಚಾರ ಮಂಜರಿ, ಮುಂತಾದ ಹಲವು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ.


3. ಶಿವರಾಮ ಕಾರಂತ (1977)
#ಶಿವರಾಮ ಕಾರಂತ(1977):
       ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸಮೀಪದ ಕೋಟದಲ್ಲಿ 1902 ಅಕ್ಟೋಬರ್ 10 ರಂದು ಜನಿಸಿದರು. ಇವರ ‘ಮೂಕಜ್ಜಿ ಕನಸುಗಳು’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರು ಶ್ರೇಷ್ಠ ಕಾದಂಬರಿಕಾರ, ಕಲಾವಿದ, ಅಲೆಮಾರಿ, ಪತ್ರಕರ್ತ, ಪರಿಸರವಾದಿ, ಸಿನಿಮಾ ನಿರ್ಮಾಪಕರಾಗಿ, ನೃತ್ಯಪಟುವಾಗಿ, ಛಾಯಾಗ್ರಾಹಕರಾಗಿ ಹೀಗೆ ಸಾಹಿತ್ಯ-ಸಂಸ್ಕೃತಿಯ ಹತ್ತು ಹಲವು ಪ್ರಕಾರಗಳಲ್ಲಿ ಕೈಯಾಡಿಸಿ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿಗಳಿಸಿದ್ದರು.

4. ಮಾಸ್ತಿ ವೆಂಕಟೇಶ ಅಯ್ಯಂಗಾರ (1983)
#ಮಾಸ್ತಿ ವೆಂಕಟೇಶ ಅಯ್ಯಂಗಾರ(1983):
       ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರಲ್ಲೊಬ್ಬರಾದ ‘ಸಣ್ಣಕಥೆಗಳ ಜನಕ’ ಎಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು ‘ಶ್ರೀನಿವಾಸ’ ಎಂಬ ಕಾವ್ಯನಾಮದಿಂದ ಸುಪ್ರಸಿದ್ಧರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಂತೂ ‘ಮಾಸ್ತಿ ಕನ್ನಡದ ಆಸ್ತಿ’ ಎಂಬ ನುಡಿಗಟ್ಟಿಗೆ ಪಾತ್ರರಾಗಿದ್ದರು. ಇವರಿಗೆ ಮೈಸೂರು ಅರಸರು ‘ರಾಜಸೇವಾಸಕ್ತ’ ಎಂಬ ಬಿರುದನ್ನು ನೀಡಿದರು. 
ಮಾಸ್ತಿಯವರ ಪ್ರಮುಖ ಕೃತಿಗಳಲ್ಲೊಂದು ‘ಚಿಕ್ಕ ವೀರ ರಾಜೇಂದ್ರ’ ಕಾದಂಬರಿ. ಇನ್ನೊಂದು ‘ಚೆನ್ನಬಸವ ನಾಯಕ’, ರಾಜವಂಶಗಳ ಉನ್ನತಿ ಅವನತಿಗಳು ಇವುಗಳ ಕಾಥಾವಸ್ತು. ಮಾಸ್ತಿಯವರ ಇತರ ಕೃತಿಗಳೆಂದರೆ ಶೇಷಮ್ಮ, ಸುಬ್ಬಣ್ಣ ಮುಂತಾದ ದೊಡ್ಡ ಕಥೆಗಳು. ಗೌಡರ ಮಲ್ಲಿ, ರಾಮನವಮಿ, ಮೂಕನ ಮಕ್ಕಳು, ಸುನೀತಾ, ಬಿನ್ನಹ, ತಾವರೆ ಮಲಾರ, ಚೆಲುವು, ಸಂಕ್ರಾಂತಿ, ಮಾನವ ಇತ್ಯಾದಿ ಕಾವ್ಯಪ್ರಕಾರದ ಕೃತಿಗಳು.

5. ಡಾ.ವಿ.ಕೃ.ಗೋಕಾಕ್‌ (1990)
#ಡಾ.ವಿ.ಕೃ.ಗೋಕಾಕ್‌(1990):
       ಕನ್ನಡ ಸಾಹಿತ್ಯಲೋಕದ ದಿಗ್ಗಜರಲ್ಲಿ ಡಾ|| ವಿ.ಕೃ.ಗೋಕಾಕ್‌ ಒಬ್ಬರು. ಇವರು ಸಾಹಿತ್ಯ ಕ್ಷೇತ್ರದಲ್ಲಿಯಂತೆಯೇ ಭಾಷಾ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದವರು. ವಿನಾಯಕ ಕೃಷ್ಣ ಗೋಕಾಕ್‌ ಅವರು ವಿ.ಕೃ.ಗೋಕಾಕ್‌ ಎಂದೇ ಸುಪರಿಚಿತರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಡಾ.ವಿ.ಕೃ.ಗೋಕಾಕರಿಗೆ ಭಾರತದ ಶ್ರೇಷ್ಠತಮ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ (1990) ಲಭಿಸಲು ಕಾರಣವಾದ ಕೃತಿ ‘ಭಾರತ ಸಿಂಧು ರಶ್ಮಿ’ ಎಂಬ ಮಹಾಕಾವ್ಯ. ಈ ಮಹಾಕಾವ್ಯವು ಎರಡು ಸಂಪುಟಗಳಲ್ಲಿದ್ದು, 12 ಖಂಡಗಳನ್ನು ಹೊಂದಿದೆ.

6. ಡಾ. ಯು.ಆರ್. ಅನಂತಮೂರ್ತಿ (1994)
#ಡಾ. ಯು.ಆರ್. ಅನಂತಮೂರ್ತಿ(1994):
       ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಡಾ. ಯು.ಆರ್. ಅನಂತಮೂರ್ತಿಯವರು. ಅನಂತಮೂರ್ತಿಯವರು ಸಣ್ಣಕತೆಗಾರರಾಗಿ ಹಾಗೂ ಕಾದಂಬರಿಕಾರರಾಗಿ ಪ್ರಸಿದ್ಧರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. 1955ರಲ್ಲಿ ‘ಎಂದೆಂದೂ ಮುಗಿಯದ ಕತೆ’ ಎಂಬ ಕಥಾಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಐದು ದಶಕಗಳ ಕಥೆಗಳು(ಸಮಗ್ರ) ಇವು ಇವರ ಕಥಾಸಂಕಲನಗಳು. 
ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ, ದಿವ್ಯ, ಇವರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಪೂಜೆ ಯಾಕೆ ಕೂಡದು, ಇವುಗಳು ವಿಮರ್ಶೆಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ ಇವರ ಕವನಸಂಕಲನಗಳು.

7. ಗಿರೀಶ್ ಕಾರ್ನಾಡ (1998)
#ಗಿರೀಶ್ ಕಾರ್ನಾಡ(1998):
       ಗಿರೀಶ್ ಕಾರ್ನಾಡರು 1938ರ ಮೇ 19ರಂದು ಮಹಾರಾಷ್ಟ್ರದ ಮಾಥೆರ್ನ ಎಂಬಲ್ಲಿ ಜನಿಸಿದರು. ಇವರ ಮೊದಲನೆ ಕೃತಿ ‘ಯಾಯಾತಿ’ ಎಂಬ ನಾಟಕ. ಈ ನಾಟಕವು ಇವರಿಗೆ ದೊಡ್ಡಮಟ್ಟದಲ್ಲಿ ಪ್ರಶಂಸೆ ಮತ್ತು ಪ್ರಚಾರವನ್ನು ತಂದುಕೊಟ್ಟಿತು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಹಿಟ್ಟಿನಹುಂಜ ಮತ್ತು ಅಗ್ನಿ ಹಾಗೂ ಮಳೆ ಇವು ಪೌರಣಿಕ ನಾಟಕಗಳಾದರೆ, ತುಘಲಕ್, ತಲೆದಂಡ ಹಾಗೂ ಟೀಪುಸುಲ್ತಾನ್ ನಾಟಕಗಳು ಐತಿಹಾಸಿಕ ಹಿನ್ನಲೆಯುಳ್ಳವು. ಜಾನಪದ ವಸ್ತುಗಳನ್ನು ಒಳಗೊಂಡ ನಾಟಕಗಳು ಹಯವದನ, ನಾಗಮಂಡಲ. ಸಾಮಾಜಿಕ ನಾಟಕ ಅಂಜುಮಲ್ಲಿಗೆ, ಗಿರೀಶ್ ಕಾರ್ನಾಡರ್ ನಾಟಕಗಳು ಇಂಗ್ಲಿಷ್, ಹಿಂದಿ, ಮರಾಠಿ ಹಾಗೂ ಭಾರತೀಯ ಭಾಷೆಗಳಲ್ಲಿ ಪ್ರದರ್ಶನಗೊಂಡಿವೆ. ನಾಟಕಗಳ ರಚನೆಯ ಜೊತೆಗೆ ಇವರು ರಂಗಭೂಮಿಯಲ್ಲಿ ಹಾಗೂ ಚಲನಚಿತ್ರ ರಂಗಗಳಲ್ಲಿ ಅಭಿನಯ ಮತ್ತು ನಿರ್ದೇಶಕರಾಗಿ ಜನಪ್ರಿಯರಾಗಿದ್ದಾರೆ.

8. ಡಾ. ಚಂದ್ರಶೇಖರ ಕಂಬಾರ (2010)
#ಡಾ. ಚಂದ್ರಶೇಖರ ಕಂಬಾರ(2010):
       ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೇರಿಯಲ್ಲಿ 2 ಜನವರಿ 1937ರಂದು ಡಾ. ಚಂದ್ರಶೇಖರ ಕಂಬಾರರು ಜನಿಸಿದರು. ಕನ್ನಡ ಸಾಹಿತ್ಯಕ್ಕೆ ಇವರ ಸಮಗ್ರ ಕೊಡುಗೆಗಾಗಿ ಜ್ಞಾನಪೀಠ ಲಭಿಸಿದೆ. ಕಂಬಾರರು ರಚಿಸಿರುವ ಪ್ರಮುಖ ಕೃತಿಗಳೆಂದರೆ, ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಬೆಳ್ಳಿಮೀನು, ಅಕ್ಕುಕ್ಕು ಹಾಡುಗಳೆ, ಚಕೋರಿ ಇವು ಕಾವ್ಯಗಳು. 
ನಾಟಕಗಳು – ಬೆಂಬತ್ತಿದ ಕಣ್ಣು, ನಾರ್ಸಿಸಸ್, ಜೋಕುಮಾರ ಸ್ವಾಮಿ, ಚಾಳೇಶ, ಕಿಟ್ಟಿಯ ಕತೆ, ಜೈ ಸಿದ ನಾಯಕ, ಕಾಡು ಕುದುರೆ, ನಾಯೀ ಕತೆ ಮುಂತಾದುವು. 
ಕಾದಂಬರಿ – ಅಣ್ಣ ತಂಗಿ, ಕರಿಮಾಯಿ, ಜೀಕೆ ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರೆವ್ವಾ ಮತ್ತು ಅರಮನೆ. 
ಜಾನಪದ- ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಸಂಗ್ಯಾಬಾಳ್ಯಾ, ಬಣ್ಣಿಸಿ ಹಾಡವ್ವ ನನ ಬಳಗ, ಬಯಲಾಟಗಳು, ಮಾತಡೋ ಲಿಂಗವೇ ಮುಂತಾದವುಗಳು. 
ಇತರೆ- ಕನ್ನಡ ನಾಟಕ ಸಂಪುಟ, ನೆಲದ ಮರೆಯ ನಿದಾನ.

@spn3187

ಮಂಗಳವಾರ, ನವೆಂಬರ್ 28, 2023

ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಹನಿ-ಗವನ

ಬದುಕು ನಾಕು ದಿನದ ಸಂತಿ
ಯಾಕ ಮಾಡತಿ ನೀ ಚಿಂತಿ

ಸಂಸಾರದಾಗ ಸಿಕ್ಕೊಂಡ ಕುಂತಿ
ವಿಷಯ ವಿಷ ತಿಳಿದ ಸಂಗತಿ

ನಟ್ಟ ನಡು ನೀರಾಗ ಬಂದ ನಿಂತಿ
ಏಳೊ ಹುಚ್ಚಾ ಇದೆಲ್ಲಾ ಭ್ರಾಂತಿ 

ಮಾಡು ಮನ್ಸನ್ಯಾಗ ಜ್ಞಾನ ಕ್ರಾಂತಿ
ಹೊಳೆವೆ ನೀನಾಗ ತೇಜ ಕಾಂತಿ

ನಿನ್ನೊಳಗ ನೀ ಹುಡುಕು ಶಾಂತಿ
ಬೆಳಗುವದಾಗ ಅಧ್ಯಾತ್ಮ ಜ್ಯೋತಿ

█▓▒▒░░░⮊⯮ ಕೃಪೆ: 🙶 ಅನ್ನಪೂರ್ಣ ಸಕ್ರೋಜಿ🙷 ⮈░░░▒▒▓█

ಮಂಗಳವಾರ, ನವೆಂಬರ್ 21, 2023

ಚಾ ಕೊಡಲಿ...... (ಮಾತು-ಕತೆ)


ನಮ್ಮ ದೇಶ ಭಾರತವು ಕ್ರೀಕೆಟ ವಲ್ಡಕಪ್‌ ಸೋತಾಗ ಒಬ್ಬ ಸಂಸಾರಿ ಬೇಜಾರಿನಿಂದ ಮನೆಗೆ ಹೋಗಿರುತ್ತಾನೆ. ಆಗ ಅವನ ಹೆಂಡತಿ ☕ಚಹಾ ಮಾಡಿಕೊಡುವ ಬಗ್ಗೆ ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಕೇಳಿದಾಗ ಆತನ ಉತ್ತರದ ಬಗ್ಗೆ ಕೆಲವು ಕೆಳುಗರಿಗೆ ಹಾಸ್ಯಪೂರಕವೆನಿಸುವ ಕತೆಯನ್ನು ಓದಿ ನೀವು ತಿಳಿದುಕೊಳ್ಳಿ...

ಶನಿವಾರ, ನವೆಂಬರ್ 18, 2023

ಗೂಗಲ ಮೆಟ್ರೊನೋಮ್ ಪುಟದ (Google Metronome Pages) 39


Google ನಲ್ಲಿ ಹೀಗೆ ಟೈಪ್ ಮಾಡಿ: "Metronome" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಮೆಟ್ರೋನೊಮ್" ಕಾಣುತ್ತದೆ. ಅಲ್ಲಿ  ನೀಲಿ ಬಣ್ಣದ ಗುಂಡಿಯ ಮೇಲೆ ಕ್ಲಿಕ್‌ ಮಾಡಿ ನೋಡಬಹುದು. ಆಗ ನೀವು ಆಯ್ಕೆ ಮಾಡಿದ ಸಂಖ್ಯೆ ಮೆಟ್ರೋನೊಮ್ ಧ್ವನಿ ನಿಮಗೆ ಕೇಳಿಸುತ್ತದೆ. ಹೆಚ್ಚಿನ ಮೆಟ್ರೋನೊಮ್ ಧ್ವನಿಗಾಗಿ ಸಂಖ್ಯೆಯನ್ನು ಹೆಚ್ಚಿಸಿ (40 ರಿಂದ 218) ನೋಡಬಹುದು. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...


ಸೋಮವಾರ, ನವೆಂಬರ್ 13, 2023

ಬುಧವಾರ, ನವೆಂಬರ್ 01, 2023

ವಂದೇ ಮಾತರಂ ಪೂರ್ಣ ಸಾಹಿತ್ಯ :

ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ ||

ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ || ವಂದೇ ಮಾತರಂ ||

ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ಧೃತ ಖರಕರವಾಲೇ
ಅಬಲಾ ಕೆನೋ ಮಾ ಎತೋ ಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುದಲ ವಾರಿಣೀಂ ಮಾತರಂ || ವಂದೇ ಮಾತರಂ ||

ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ ತೋಮಾರ ಈ
ಪ್ರತಿಮಾ ಗಡೀ ಮಂದಿರೇ ಮಂದಿರೇ || ವಂದೇ ಮಾತರಂ ||

ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀಂ
ಕಮಲಾ ಕಮಲದಲ ವಿಹಾರಿಣೀಂ
ವಾಣೀಂ ವಿದ್ಯಾದಾಯಿನೀ
ನಮಾಮಿ ತ್ವಾಂ ನಮಾಮಿ ಕಮಲಾಂ
ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ || ವಂದೇ ಮಾತರಂ ||

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ || ವಂದೇ ಮಾತರಂ ||

ಅರ್ಥ :
ತಾಯೇ ವಂದಿಸುವೆ.
ತಾಯಿ ಭಾರತಿ ಪವಿತ್ರವಾದ, ಶೀತಲವಾದ ಝರಿ - ತೊರೆಗಳಿಂದ ಒಳ್ಳೆಯ ಮಾಗಿದ ಫಲಗಳಿಂದ, ಗುಡ್ಡ - ಪರ್ವತಗಳಿಂದ, ಸಸ್ಯ - ಗಿಡ - ಮರಗಳಿಂದ ಶ್ಯಾಮಲೆಯಾಗಿ ಕಂಗೊಳಿಸುತ್ತಿದ್ದಾಳೆ.

ಶ್ವೇತ ವಸ್ತ್ರಧಾರಿಯಾಗಿ, ಸುವಾಸನಾಭರಿತ ಹೂಗಳಿಂದ ಅಲಂಕೃತಳಾದ ನೀನು ಮಧುರವಾದ ಮಾತುಗಳನ್ನಾಡುವ ವಾಗ್ದೇವಿಯೂ ಹೌದು, ಯಾವಾಗಲೂ ನಗು-ನಗುತ್ತಿರುವ ಜಗದಾಂಬೆಯು ಹೌದು, ನನಗೆ ಸುಖವನ್ನೂ ವರವನ್ನು ಈಯುವ ತಾಯಿಯೂ ನೀನೇ.

ತಾಯಿ! ಸಿಂಹ ಸಧೃಡವಾಗಿ ಘರ್ಜಿಸುವ ಕೋಟಿ - ಕೋಟಿ ಕಂಠಗಳು ನಿನ್ನೊಡಲಿನಲ್ಲಿವೆ, ತಮ್ಮ ಒರೆಯಿಂದ ಕತ್ತಿಯನ್ನು ಝಳಿಪಿಸಬಲ್ಲ, ಕೋಟಿ ವೀರ ಹಸ್ತಗಳು ನಿನ್ನ ಬಳಿಯಿದೆ. ಶತ್ರುಮರ್ದನಗೈವ ತಾಕತ್ತುಳ್ಳ ತಾಯೇ! ನಿನ್ನನ್ನು ಈ ಜನ ಅಬಲೆ ಎನ್ನುತ್ತಾರೆ...!?

ನನ್ನ ಪಾಲಿಗೆ ಜ್ಞಾನವೂ ನೀನೇ, ಧರ್ಮವೂ ನೀನೇ, ನನ್ನ ಭಾವನೆ ಚಿಂತನೆಗಳೆಲ್ಲವೂ ನೀನೇ, ನನ್ನ ಶರೀರದಲ್ಲಿನ ಪ್ರಾಣ ಮತ್ತು ನನ್ನ ತೋಳಿನ ಶಕ್ತಿ ನೀನು, ನನ್ನ ಹೃದಯದ ಭಕ್ತಿ ನೀನು, ಮಂದಿರದ ಪ್ರತಿಮೆ ನೀನು, ಆದರೆ ನಿನಗೆ ಅದೇ ಎಲ್ಲೆಯಲ್ಲ, ನೀನು ಎಲ್ಲೆಲ್ಲೂ ಇರುವೆ.

ತಾಯೇ ನೀನು ದುರ್ಗೆಯಂತೆ ದಶಾಸ್ತ್ರವುಳ್ಳವಳು, ನೀನೇ ಕಮಲೆ, ನೀನೇ ನನ್ನ ವಾಕ್ ಶಕ್ತಿ, ನೀನೇ ಸಂಸ್ಕೃತಿ - ನನಗೆ ವಿದ್ಯೆ ನೀಡಿದ ದೇವತೆ, ನಿನಗೆ ಸಮನಾದವರಾರೂ ಇಲ್ಲ. ನಗೆಯನ್ನೆ ಮೊಗದ ತುಂಬಾ ಸಿಂಗರಿಸಿಕೊಂಡ ತಾಯೇ ನಿನಗೆ ವಂದಿಸುವೆ.
ಕವಿ : ಬಂಕಿಮಚಂದ್ರ ಚಟರ್ಜಿ

ಬಾರಿಸು ಕನ್ನಡ ಡಿಂಡಿಮವ...2


1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು