ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ ||
ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ || ವಂದೇ ಮಾತರಂ ||
ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ಧೃತ ಖರಕರವಾಲೇ
ಅಬಲಾ ಕೆನೋ ಮಾ ಎತೋ ಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುದಲ ವಾರಿಣೀಂ ಮಾತರಂ || ವಂದೇ ಮಾತರಂ ||
ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ ತೋಮಾರ ಈ
ಪ್ರತಿಮಾ ಗಡೀ ಮಂದಿರೇ ಮಂದಿರೇ || ವಂದೇ ಮಾತರಂ ||
ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀಂ
ಕಮಲಾ ಕಮಲದಲ ವಿಹಾರಿಣೀಂ
ವಾಣೀಂ ವಿದ್ಯಾದಾಯಿನೀ
ನಮಾಮಿ ತ್ವಾಂ ನಮಾಮಿ ಕಮಲಾಂ
ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ || ವಂದೇ ಮಾತರಂ ||
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ || ವಂದೇ ಮಾತರಂ ||
ಅರ್ಥ :
ತಾಯೇ ವಂದಿಸುವೆ.
ತಾಯಿ ಭಾರತಿ ಪವಿತ್ರವಾದ, ಶೀತಲವಾದ ಝರಿ - ತೊರೆಗಳಿಂದ ಒಳ್ಳೆಯ ಮಾಗಿದ ಫಲಗಳಿಂದ, ಗುಡ್ಡ - ಪರ್ವತಗಳಿಂದ, ಸಸ್ಯ - ಗಿಡ - ಮರಗಳಿಂದ ಶ್ಯಾಮಲೆಯಾಗಿ ಕಂಗೊಳಿಸುತ್ತಿದ್ದಾಳೆ.
ಶ್ವೇತ ವಸ್ತ್ರಧಾರಿಯಾಗಿ, ಸುವಾಸನಾಭರಿತ ಹೂಗಳಿಂದ ಅಲಂಕೃತಳಾದ ನೀನು ಮಧುರವಾದ ಮಾತುಗಳನ್ನಾಡುವ ವಾಗ್ದೇವಿಯೂ ಹೌದು, ಯಾವಾಗಲೂ ನಗು-ನಗುತ್ತಿರುವ ಜಗದಾಂಬೆಯು ಹೌದು, ನನಗೆ ಸುಖವನ್ನೂ ವರವನ್ನು ಈಯುವ ತಾಯಿಯೂ ನೀನೇ.
ತಾಯಿ! ಸಿಂಹ ಸಧೃಡವಾಗಿ ಘರ್ಜಿಸುವ ಕೋಟಿ - ಕೋಟಿ ಕಂಠಗಳು ನಿನ್ನೊಡಲಿನಲ್ಲಿವೆ, ತಮ್ಮ ಒರೆಯಿಂದ ಕತ್ತಿಯನ್ನು ಝಳಿಪಿಸಬಲ್ಲ, ಕೋಟಿ ವೀರ ಹಸ್ತಗಳು ನಿನ್ನ ಬಳಿಯಿದೆ. ಶತ್ರುಮರ್ದನಗೈವ ತಾಕತ್ತುಳ್ಳ ತಾಯೇ! ನಿನ್ನನ್ನು ಈ ಜನ ಅಬಲೆ ಎನ್ನುತ್ತಾರೆ...!?
ನನ್ನ ಪಾಲಿಗೆ ಜ್ಞಾನವೂ ನೀನೇ, ಧರ್ಮವೂ ನೀನೇ, ನನ್ನ ಭಾವನೆ ಚಿಂತನೆಗಳೆಲ್ಲವೂ ನೀನೇ, ನನ್ನ ಶರೀರದಲ್ಲಿನ ಪ್ರಾಣ ಮತ್ತು ನನ್ನ ತೋಳಿನ ಶಕ್ತಿ ನೀನು, ನನ್ನ ಹೃದಯದ ಭಕ್ತಿ ನೀನು, ಮಂದಿರದ ಪ್ರತಿಮೆ ನೀನು, ಆದರೆ ನಿನಗೆ ಅದೇ ಎಲ್ಲೆಯಲ್ಲ, ನೀನು ಎಲ್ಲೆಲ್ಲೂ ಇರುವೆ.
ತಾಯೇ ನೀನು ದುರ್ಗೆಯಂತೆ ದಶಾಸ್ತ್ರವುಳ್ಳವಳು, ನೀನೇ ಕಮಲೆ, ನೀನೇ ನನ್ನ ವಾಕ್ ಶಕ್ತಿ, ನೀನೇ ಸಂಸ್ಕೃತಿ - ನನಗೆ ವಿದ್ಯೆ ನೀಡಿದ ದೇವತೆ, ನಿನಗೆ ಸಮನಾದವರಾರೂ ಇಲ್ಲ. ನಗೆಯನ್ನೆ ಮೊಗದ ತುಂಬಾ ಸಿಂಗರಿಸಿಕೊಂಡ ತಾಯೇ ನಿನಗೆ ವಂದಿಸುವೆ.
ಕವಿ : ಬಂಕಿಮಚಂದ್ರ ಚಟರ್ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.