fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಅಕ್ಟೋಬರ್ 31, 2021

ನಮ್ಮ ಕನ್ನಡ ನಾಡು

ಕನ್ನಡ ನಾಡಿನ ಅಂದವ ನೋಡ
ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ
ಮನ ತಣಿಸುವ ಹಚ್ಚ ಹಸಿರು
ಮಲೆನಾಡಿನ ಸೌಂದರ್ಯದುಸಿರು

ಜೋಗಿನ ಜಲಪಾತದ ಸೊಬಗಿನ ಇಂಪು
ಪಂಚ ಕೋಟಿ ಜನರಾಡುವ ಕನ್ನಡದ ಕಂಪು
ಬೇಲೂರು ಹಳೇಬೀಡು ಮೈಸೂರು
ಸದಾ ಆಕರ್ಷಿಸಿಸುವ ತವರೂರು

ಸುಂದರ ಇತಿಹಾಸ ಸೃಷ್ಟಿಸಿದ ನಾಡು
ಕಲೆ ವಾಸ್ತುಶಿಲ್ಪ ಸಾಹಿತ್ಯದ ಬೀಡು
ವಿದೇಶಿಯರು ಹೊಗಳುವ ಮೈಸೂರು ದಸರ
ನಾಡಿನ ಜನತೆಯ ಸಂತಸದ ಸಡಗರ

ನಾಡನ್ನು ಕಟ್ಟಿದ ರಾಜರ ವೈಭವ
ಕವಿಗಳು ರಚಿಸಿದ ಸಾಹಿತ್ಯ ಭಂಡಾರ
ಪ್ರವಾಸಿಗರ ಕೈ ಬೀಸಿ ಕರೆಯುವ ತಾಣ
ನೆಲೆಯೂರಲು ಯೋಗ್ಯವಾದ ವಾಸಸ್ಥಾನ

ನೀ ಒಮ್ಮೆ ಬಂದು ನೋಡು ಬಾರ
ಕನ್ನಡನಾಡಿನ ಅಂದವ ಸವಿಯಬಾರ
-ಮಾಕೃಮ

ಗುರುವಾರ, ಅಕ್ಟೋಬರ್ 14, 2021

ಹಬ್ಬ

ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು

1.ಶೈಲಪುತ್ರಿಪರ್ವತ ರಾಜ ಹಿಮಾಲಯದ ಮಗಳಾದ ಪಾರ್ವತಿಯ ರೂಪದಲ್ಲಿ ಶೈಲಪುತ್ರಿ ದೇವಿಯನ್ನು ನವರಾತ್ರಿಯ ಮೊದಲನೇ ದಿನ ಪೂಜಿಸಲಾಗುತ್ತದೆ. ಆಕೆ ಒಂದು ಕೈಯಲ್ಲಿ ತ್ರಿಶೂಲ ಮತ್ತು ಇನ್ನೊಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ. ಹಿಮಾಲಯದ ಮೇಲೆ ಕುಳಿತಿರುವ ನಂದಿಯ ಮೇಲೆ ಈಕೆ ಸವಾರಿ ಮಾಡುತ್ತಾಳೆ. ಈ ವೃಷಭ ವಾಹನವು ಶಿವನ ರೂಪವಾಗಿದೆ. ತೀವ್ರ ತಪಸ್ಸು ಮಾಡುವ ಶೈಲಪುತ್ರಿ ಎಲ್ಲಾ ಕಾಡು ಪ್ರಾಣಿಗಳ ರಕ್ಷಕಿ ಕೂಡ ಆಗಿದ್ದಾಳೆ.

2.ಬ್ರಹ್ಮಚಾರಿಣಿನವದುರ್ಗೆಯ 9 ಅವತಾರಗಳಲ್ಲಿ ಬ್ರಹ್ಮಚಾರಿಣಿ ಎರಡನೇ ಅವತಾರವಾಗಿದೆ. ನವರಾತ್ರಿಯ ಎರಡನೇ ದಿನ ಅವಳನ್ನು ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿ ಈ ಪ್ರಪಂಚದ ಎಲ್ಲಾ ಸ್ಥಿರ ಮತ್ತು ಚರ ಜ್ಞಾನವನ್ನು ಬಲ್ಲವಳು. ಆಕೆಯ ರೂಪವು ಬಿಳಿ ಬಟ್ಟೆಯಲ್ಲಿ ಸುತ್ತಿದ ಹುಡುಗಿಯ ರೂಪದಲ್ಲಿದ್ದು, ಒಂದು ಕೈಯಲ್ಲಿ ಅಷ್ಟದಳ ಮಾಲೆ ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ಇದನ್ನು ಅಕ್ಷಯಮಾಲಾ ಮತ್ತು ಕಮಂಡಲ ಧಾರಿಣಿ ಬ್ರಹ್ಮಚಾರಿಣಿ ಎಂದು ಕರೆಯಲಾಗುತ್ತದೆ. ಅವಳು ತನ್ನ ಸರ್ವಜ್ಞ ಜ್ಞಾನವನ್ನು ನೀಡುವ ಮೂಲಕ ತನ್ನ ಭಕ್ತರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ. ಬ್ರಹ್ಮಚಾರಿಣಿಯ ರೂಪವು ತುಂಬಾ ಸರಳ ಮತ್ತು ಭವ್ಯವಾಗಿದೆ. ಇತರ ದೇವತೆಗಳಿಗೆ ಹೋಲಿಸಿದರೆ, ಅವಳು ಸೌಮ್ಯ, ಕೋಪ ಮುಕ್ತ ಮತ್ತು ಶೀಘ್ರವಾಗಿ ವರವನ್ನು ನೀಡುವವಳು.


ಶನಿವಾರ, ಅಕ್ಟೋಬರ್ 09, 2021

ನಮ್ಮ ನಂಬಿಕೆಗಳು 10


೧೦) ನಾವೇಕೆ ವಿಗ್ರಹಗಳನ್ನು ಪೂಜಿಸುತ್ತೇವೆ?
ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎಂದು ಅಧ್ಯಯನಕಾರರು ಸ್ಪಷ್ಟ ಪಡಿಸಿದ್ದಾರೆ. ಮನೋವಿಜ್ಞಾನಿಗಳ ಪ್ರಕಾರ ಮನುಷ್ಯನು ತಾನು ನೋಡುವುದರ ಆಧಾರದ ಮೇಲೆ ಆಲೋಚನೆಗಳನ್ನು ಹೊಂದುತ್ತಾನಂತೆ. ಒಂದು ವೇಳೆ ನಿಮ್ಮ ಮುಂದೆ ಮೂರು ವಸ್ತುಗಳು ಇದ್ದಲ್ಲಿ, ಅದರಲ್ಲಿ ಯಾವ ವಸ್ತುವನ್ನು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳು ಬದಲಾಗುತ್ತವೆಯಂತೆ. ಕಾರಣವಾಗಿಯೇ ಪ್ರಾಚೀನ ಕಾಲದಲ್ಲಿ ಮೂರ್ತಿ ಪೂಜೆಯು ಆರಂಭಗೊಂಡಿತು. ಯಾವಾಗ ಜನರು ದೇವರನ್ನು ಮೂರ್ತಿಯ ರೂಪದಲ್ಲಿ ನೋಡಲು ಆರಂಭಿಸಿದರೋ, ಆಗಲೇ ಅವರ ಮನಸ್ಸನ್ನು ಏಕ ಚಿತ್ತದಿಂದ ದೇವರ ಮೇಲೆ ನೆಲೆಗೊಳಿಸಲು ಸಾಧ್ಯವಾಗುತ್ತ ಹೋಯಿತು. ಇದರಿಂದ ಅವರ ಧ್ಯಾನಕ್ಕೆ ಯಾವುದೇ ಭಂಗ ಬರುತ್ತಿರಲಿಲ್ಲ ಮತ್ತು ಅವರಲ್ಲಿ ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತಿತ್ತು.

ಭಾನುವಾರ, ಅಕ್ಟೋಬರ್ 03, 2021

ಪುಣ್ಯ.. / ಗುನ್ಯಾ..

ರೋಗಿಗಳಿಗೆ ರಕ್ತ ಕೊಟ್ರೆ ಪುಣ್ಯ..

ರೋಗಿಗಳಿಗೆ ರಕ್ತ ಕೊಟ್ರೆ ಪುಣ್ಯ..
( ಭಿಕ್ಷುಕರಿಗೆ ದುಡ್ಡು ಕೊಟ್ರೆ ಪುಣ್ಯ..

ಭಿಕ್ಷುಕರಿಗೆ ದುಡ್ಡು ಕೊಟ್ರೆ ಪುಣ್ಯ.. )
ಆದರೆ,
ಸೊಳ್ಳೆಗೆ ರಕ್ತ ಕೊಟ್ರೆ, ಚಿಕನ್ ಗುನ್ಯಾ.. 
(ವಾಹ್ ವಾಹ್)

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು