fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಮಾರ್ಚ್ 01, 2017

ಗೋಮತೀ ನದಿ

ಗೋಮತೀ ನದಿ ಭಾರತದ ಉತ್ತರಪ್ರದೇಶ ರಾಜ್ಯದಲ್ಲಿ ಹರಿಯುವ ಒಂದು ನದಿ, ಗಂಗಾನದಿಯ ಉಪನದಿಗಳಲ್ಲೊಂದು. ಪಿಲಿಬಿತ್‍ನಿಂದ ಪೂರ್ವಕ್ಕೆ 32 ಕಿಮೀ ದೂರದಲ್ಲಿರುವ ಗೋಮತ್ ತಾಲ್‍ನಲ್ಲಿ (ಉ.ಅ.28° 35ದಿ ; ಪು.ರೇ.80° 75ದಿ) ಹುಟ್ಟಿ 19 ಕಿಮೀ ವರೆಗೆ ಝರಿಯಂತೆ ಹರಿಯುತ್ತದೆ. 56 ಕಿಮೀ ಹರಿದ ಅನಂತರ ಜೊಮ್ಕೈ ನದಿ ಇದನ್ನು ಸಂಗಮಿಸುತ್ತದೆ. ಅಲ್ಲಿಂದ ಮುಂದೆ ಶಾಶ್ವತವಾದ ಪ್ರವಾಹ ರೂಪದಲ್ಲಿ ಇದು ಹರಿಯತೊಡಗುತ್ತದೆ. ಸ್ವಲ್ಪ ದೂರದಲ್ಲಿ ಶಹಜಹಾನ್ಪುರ ದಿಂದ ಖೇರೀಗೆ ಹೋಗುವ ಮಾರ್ಗದಲ್ಲಿ ಗೋಮತಿಗೆ 63 ಮೀ ಉದ್ದದ ಸೇತುವೆ ನಿರ್ಮಾಣವಾಗಿದೆ. ಸೇತುವೆಯನ್ನು ದಾಟಿದ ಮೇಲೆ ಮಂದಗತಿಯಿಂದ ಹರಿಯುವ ಈ ನದಿಗೆ ಅನೇಕ ಉಪನದಿಗಳೂ ನಾಲೆಗಳೂ ಬಂದು ಸೇರುತ್ತವೆ. ಮುಹಮ್ಮದೀಯಿಂದ ಲಖನೌ ವರೆಗೆ ನದಿಯ ಪಾತ್ರದ ಅಗಲ 30-36 ಮೀ. ಇಲ್ಲಿ ನದಿಯ ದಡಗಳು ತಕ್ಕಮಟ್ಟಿಗೆ ಎತ್ತರವಾಗಿವೆ. ಸೀತಾಪುರ ಜಿಲ್ಲೆಯಲ್ಲಿ ಗೋಮತಿಯನ್ನು ಬಂದು ಸೇರುವ ನದಿಗಳು ಕಥ್ನಾ ಮತ್ತು ಸರಾಯಾನ. ಲಖನೌ ನಗರದಲ್ಲಿ ಇದಕ್ಕೆ ಅನೇಕ ಸೇತುವೆಗಳಿವೆ. ಲಖನೌದಿಂದ ಮುಂದೆ ಈ ನದಿ ಬಾರಾಬಂಕಿ, ಸುಲ್ತಾನ್ಪುರ ಮತ್ತು ಜೌನ್ಪುರ ಜಿಲ್ಲೆಗಳನ್ನು ದಾಟಿ ಮುಂದುವರೆಯುತ್ತದೆ. ಅಲ್ಲಿ ನದಿಯ ಮಾರ್ಗ ಅಂಕುಡೊಂಕು; ಪಾತ್ರದ ಅಗಲ 60-180 ಮೀ. ಜೌನ್ಪುರದಲ್ಲಿ 16ನೆಯ ಶತಮಾನದಲ್ಲಿ ಕಟ್ಟಿದ 196 ಮೀ ಉದ್ದದ ಶಾಹೀ ಎಂಬ ಕಲ್ಲುಸೇತುವೆ ತುಂಬ ಪ್ರಸಿದ್ಧವಾದುದು. ಮುಂದೆ ಗೋಮತಿಯನ್ನು ಸೇರುವ ನದಿ ಸಯೀ. ವಾರಾಣಸಿಯಿಂದ ಉತ್ತರಕ್ಕೆ 32 ಕಿಮೀ ದೂರದಲ್ಲಿ ಗೋಮತೀ ನದಿ ಘಾಜಿಪುರ ಜಿಲ್ಲೆಯ ಸೈದ್ಪುರ ಎಂಬ ಊರಿನ ಹತ್ತಿರ ಗಂಗಾನದಿಯನ್ನು ಸಂಗಮಿಸುತ್ತದೆ. ನದಿಯ ಒಟ್ಟು ಉದ್ದ ಸು. 940 ಕಿಮೀ.

ಗೋಮತೀ ನದಿ ಮತ್ತು ಅದರ ಉಪನದಿಗಳಿಂದ 30,437 ಚ.ಕಿಮೀ ಪ್ರದೇಶ ಫಲವತ್ತಾಗಿದೆ. ಅತಿವೃಷ್ಟಿಯಿಂದ ಆಗಾಗ್ಗೆ ನದಿಯಲ್ಲಿ ಅತಿಯಾದ ನೆರೆ ಬರುವುದುಂಟು. ಗೋಮತೀ ನದಿಯಲ್ಲಿ ಮುಹಮ್ಮದೀವರೆಗೆ ದೋಣಿ ಸಂಚಾರ ಸಾಧ್ಯ. ಲಖನೌ, ಸೀತಾಪುರ, ಬಾರಾಬಂಕಿ, ರಾಯ್ಬರೇಲಿ, ಸುಲ್ತಾನ್ಪುರ, ಜೌನ್ಪುರ ನಗರಗಳು ಗೋಮತೀ ನದಿಯ ದಂಡೆಯ ಮೇಲಿವೆ.


ಗೋಮತೀ ನದಿ
गोमती
Gumti
Gomati
River
none  Gomti River at Lucknow
Gomti River at Lucknow
ದೇಶ ಭಾರತ
ಮೂಲಗೋಮತಿ ತಾಲ್
ಉದ್ದ೯೦೦ km (೫೫೯ miapprox.
ನೀರಿನ ಬಿಡುಗಡೆfor ಸೈದಾಪುರ
 - ಸರಾಸರಿ೨೩೪ /s (೮,೨೬೪ cu ft/s) [೧]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು