ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಅದು ಕೆಲಸ ನಿಲ್ಲಿಸಿದ್ರೆ ಪ್ರಾಣ ಹೋದಂತೆ. ನಮ್ಮ ದೇಹದಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳು ಮೂತ್ರದ ರೂಪದಲ್ಲಿ ಹೊರ ಹೋಗುತ್ತವೆ. ಆದ್ರೆ ಈಗಿನ ಜೀವನ ಶೈಲಿಯಿಂದಾಗಿ ನಾವು ನಮ್ಮ ದೇಹದ ಅತಿ ಮುಖ್ಯ ಅಂಗಗಳಲ್ಲಿ ಒಂದಾದ ಮೂತ್ರಪಿಂಡದ ಬಗ್ಗೆ ಹೆಚ್ಚಾಗಿ ಗಮನ ನೀಡ್ತಾ ಇಲ್ಲ. ಇದ್ರಿಂದಾಗಿ ಸಾಕಷ್ಟು ಮೂತ್ರಪಿಂಡ ಖಾಯಿಲೆಗಳು ಕಾಣಿಸಿಕೊಳ್ತಿವೆ.
ಕಿಡ್ನಿ ಖಾಯಿಲೆಯನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುತ್ತೆ. ಕೊನೆ ಹಂತದವರೆಗೂ ಈ ರೋಗ ಪತ್ತೆಯಾಗುವುದಿಲ್ಲ. ಸಾಮಾನ್ಯವಾಗಿ ಮೂತ್ರಪಿಂಡ ಖಾಯಿಲೆಗೆ ಮುಖ್ಯ ಕಾರಣ ನೀರು. ಒಂದು ಲೋಟ ನೀರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಜೀವ ಉಳಿಸುವ ಶಕ್ತಿ ಹೊಂದಿದೆ.
- ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದ್ರೆ ಅಂಗವೈಫಲ್ಯ ಕಾಣಿಸಿಕೊಳ್ಳುತ್ತದೆ.
- ದೇಹದಲ್ಲಿರುವ ಅಪಾಯಕಾರಿ ಜೀವಾಣುಗಳು ಮೂತ್ರದ ಮೂಲಕ ಹೊರ ಹೋಗುತ್ತದೆ. ದೇಹದಲ್ಲಿ ನೀರೇ ಇಲ್ಲವೆಂದಾದ್ರೆ ಕಿಡ್ನಿ ಮೇಲೆ ಒತ್ತಡ ಜಾಸ್ತಿಯಾಗುತ್ತದೆ.
- ನೀರಿನ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಿದ್ದಲ್ಲಿ ಕಿಡ್ನಿಯಲ್ಲಿ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಇದು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ.
- ಅಧ್ಯಯನವೊಂದರ ಪ್ರಕಾರ ಸುಮಾರು 13 ಸಾವಿರ ಮಂದಿ ಕಿಡ್ನಿ ಫೇಲ್ ಆಗಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ನೀರಿನ ಕೊರತೆ.
- ಹಿರಿಯರಲ್ಲಿ ಹಾಗೂ ಹೃದಯ ಖಾಯಿಲೆ ಹಾಗೂ ಮಧುಮೇಹ ಖಾಯಿಲೆಯಿಂದ ಬಳಲುತ್ತಿರುವವರಲ್ಲಿ ಕಿಡ್ನಿ ಸಮಸ್ಯೆ ಬಹುಬೇಗ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅವರು ಅತಿ ಹೆಚ್ಚು ನೀರು ಸೇವಿಸುವುದು ಅಗತ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.