fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಮಾರ್ಚ್ 10, 2017

ನುಡಿಮುತ್ತು 44 (ರಾಜಕೀಯ)

  • ಜನದ ಆಕಾಂಕ್ಷೆ ಹಾಗೂ ಆಶೋತ್ತರಗಳು ಕಾಂಗ್ರೆಸ್ಸಿನ ಕುಟುಂಬ ರಾಜಕಾರಣದಿಂದ ನುಚ್ಚುನೂರಾಗಿದೆ. ಆಡಳಿತ ಯಂತ್ರ ಕೈಕೊಟ್ಟಾಗ ಅಥವಾ ದುರ್ವರ್ತನೆ ಬಯಲಾದಾಗ ಎಲ್ಲವನ್ನು ಜಾತ್ಯತೀತತೆ ಹೆಸರಿನಲ್ಲಿ ಮರೆಮಾಚುವುದು ಕಾಂಗ್ರೆಸ್ ಗೆ ಮಾಮೂಲಿಯಾಗಿದೆ. ಇದು ಇನ್ಮುಂದೆ ನಡೆಯುವುದಿಲ್ಲ. ನೆನಪಿರಲಿ, ಇಂದಿನ ಯುವ ಪೀಳಿಗೆ ಪ್ರಶ್ನಿಸದೆ ಕಾಂಗ್ರೆಸ್ಸಿನ ನಡೆಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ -ರಾಜಕೀಯದ ಬಗ್ಗೆ
  • ನಾವು ಜಗನ್ನಾಥ ದೇವರನ್ನು ಶಾಂತಿ, ಐಕ್ಯತೆ ಹಾಗೂ ಸದ್ಭಾವನೆ ಕರುಣಿಸುವಂತೆ ಬೇಡುತ್ತೇವೆ. ಕರುಣಾಮಯಿ ದೇವರು ಕೂಡಾ ಅತ್ಯಂತ ನಿರ್ಗತಿಕರು, ನಮ್ಮ ರೈತರು, ಬಡವರ್ಗಕ್ಕೆ ಹೊಸ ಚೈತನ್ಯ ಕೊಟ್ಟು ಪ್ರಗತಿ ಕಾಣುವಂತೆ ಶಕ್ತಿಯನ್ನು ಮುಂಬರುವ ವರ್ಷಗಳಲ್ಲಿ ನೀಡಲಿ. ನಮ್ಮ ರೈತ ಸಮುದಾಯದ ಅಣ್ಣ ತಮ್ಮಂದಿರು ಹಾಗೂ ಅಕ್ಕ ತಂಗಿಯರಿಗೆ ಅನುಕೂಲವಾಗಲೆಂದು ಸಮೃದ್ಧವಾಗಿ ಮಳೆ ಸುರಿಸುವಂತೆ ದೇವರನ್ನು ಬೇಡುತ್ತೇವೆ- ಗುಜರಾತ್ ಬಗ್ಗೆ
  • ಗುಜರಾತಿನ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಸಂತಸ ತಂದಿದೆ. ಇದಕ್ಕಾಗಿ ನಾನು ನಮ್ಮ ಕಾರ್ಯಕರ್ತರ ಪರಿಶ್ರಮವೇ ಕಾರಣ ಎನ್ನುತ್ತೇನೆ. ಗುಜರಾತಿನ ಜನತೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಈ ಮೂಲಕ ಅರ್ಪಿಸುತ್ತೇನೆ. ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ರಾಜಕೀಯವನ್ನು ಧಿಕ್ಕರಿಸಿ ನಮ್ಮ ಮೇಲೆ ಇಟ್ಟ ನಂಬಿಕೆಯನ್ನು ಎಂದೂ ಹುಸಿಗೊಳಿಸುವುದಿಲ್ಲ.-ರಾಜಕೀಯದ ಬಗ್ಗೆ
  • ಗುಜರಾತಿನ ಅಭಿವೃದ್ಧಿಯಲ್ಲಿ ಯುವಕರು ಸಕ್ರಿಯ ಪಾಲುದಾರರಾಗಿದ್ದಾರೆ. ಕೌಶಲ್ಯ ಅಭಿವೃದ್ಧಿ ವಿಷಯದಲ್ಲಿ ಗುಜರಾತ್ ವಿಸ್ತಾರವಾದ, ದೀರ್ಘಕಾಲದ ದೂರದರ್ಶಿತ್ವ, ಹೊಂದಾಣಿಕೆಯುಳ್ಳ, ಸಮನ್ವಿತ ಯೋಜನೆಯನ್ನು ಗುಜರಾತ್ ಹೊಂದಿದೆ. -ಯುವ ಜನತೆ ಬಗ್ಗೆ
  • ಗುಜರಾತಿನ ವಾರ್ಷಿಕ ಯೋಜನೆ 2013-14 ಶಕ್ತಿಯುತ ಆರ್ಥಿಕ ಸ್ಥಾನ ಹಾಗೂ ವೈಬ್ರಂಟ್ ಪ್ರಗತಿ ಸ್ಯೂಚಂಕವನ್ನು ಪ್ರತಿಬಿಂಬಿಸುತ್ತದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಎಚ್ ಡಿಐ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳು ನಮ್ಮ ಯೋಜನೆಯಲ್ಲಿ ಆದ್ಯತೆ ಪಡೆದಿವೆ-ಗುಜರಾತ್ ಬಗ್ಗೆ
  • ನನ್ನ ಸಾರ್ವಜನಿಕ ಜೀವನದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಅತ್ಯಂತ ತೃಪ್ತಿದಾಯಕ ಕ್ಷಣಗಳಲ್ಲಿ ಒಂದೆನಿಸಿದೆ. ಈ ಪುಟ್ಟ ಮಕ್ಕಳ ಮೇಲೆ ಕನಸಿನ ಬೀಜ ಬಿತ್ತಿ ಉತ್ತಮ ಅಡಿಪಾಯ ಹಾಕಿ ಶಕ್ತಿಯುತ ಭವಿಷ್ಯವನ್ನು ನಿರೀಕ್ಷಿಸುವಾಗ ಸಿಗುವ ಆನಂದ ಬೇರೆಡೆ ಸಿಗುವುದಿಲ್ಲ, ಗೆಳೆಯರೆ, ಎಲ್ಲರಿಗೂ ಶಿಕ್ಷಣ ಕೊಡಿಸುವ ನಮ್ಮ ಯೋಜನೆಯ ಜೊತೆ ಬನ್ನಿ ಕೈಜೋಡಿಸಿ -ಶಿಕ್ಷಣದ ಬಗ್ಗೆ
  • ಏನು ಮಾಡಿದರೂ ಜನ ಸುಮ್ಮನಿರುತ್ತಾರೆ ಎಂದು ಯುಪಿಎ ಸರ್ಕಾರ ನಿರ್ಲಕ್ಷಿಸುತ್ತಿದೆ ಹಾಗೂ ಯುವಕರ ಬಗ್ಗೆ ಒಂದಿಷ್ಟು ಕಾಳಜಿ ಇಲ್ಲ. ಯುಪಿಎ ನಡೆ ನುಡಿ ನೋಡಿದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದಂತೆ ಇಲ್ಲ. ನಮ್ಮ ಗುರಿ ಜನರ ನಂಬಿಕೆ ಗಳಿಸುವುದು ಹಾಗೂ ಅವರಿಗೆ ಸಿಗಬೇಕಾದ ಮನ್ನಣೆ ದೊರೆಕಿಸಿಕೊಡುವುದು-ರಾಜಕೀಯದ ಬಗ್ಗೆ
  • ಉಪ ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕಿ ಗೆಲ್ಲಿಸಿದ ಜನರ ವಿಶ್ವಾಸ ಕಂಡು ನನ್ನ ಹೃದಯ ತುಂಬಿ ಬಂದಿದೆ. ಈ ವಿಜಯದೊಂದಿಗೆ ಜನರು ಕಾಂಗ್ರೆಸ್ ಸರ್ಕಾರದಿಂದ ಎಷ್ಟು ಬೇಸತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಬಿಜೆಪಿ 2 ಲೋಕಸಭೆ ಸೀಟುಗಳನ್ನು ಬಹುಮತದೊಂದಿಗೆ ಗೆದ್ದಿರುವುದು ಜನರ ನಂಬಿಕೆ ಹಾಗೂ ಕೇಂದ್ರದಲ್ಲಿ ಯಾವ ಸರ್ಕಾರ ಬೇಕು ಎಂಬುದನ್ನು ಸೂಚಿಸುತ್ತದೆ, ಜನ ಬದಲಾವಣೆ ಬಯಸಿದ್ದಾರೆ.-ಗುಜರಾತ್ ಬಗ್ಗೆ
  • ಕೃಷಿ ಮಹೋತ್ಸವದ ಮೂಲಕದ ಗುಜರಾತಿನ ಕೃಷಿಕರು ತಮ್ಮ ನೈಪುಣ್ಯತೆ ಹಾಗೂ ಹೊಸತನವನ್ನು ಜಗಜ್ಜಾಹೀರುಗೊಳಿಸಬಹುದು. ಭೂಮಿಯ ಫಲವತ್ತತೆ, ಉತ್ಪನ್ನಗಳ ಗುಣಮಟ್ಟ ಹೆಚ್ಚಳ, ಹೆಚ್ಚಿನ ಕಾರ್ಯಕ್ಷಮತೆ ಎಲ್ಲವೂ ಕೃಷಿ ಮಹೋತ್ಸವದಿಂದ ಸಾಧ್ಯ. ಇದರಿಂದ ಗ್ರಾಮೀಣ ಯುವಕರಿಗೆ ಹೆಚ್ಚಿನ ಉದ್ಯೋಗ ಹಾಗೂ ಹಳ್ಳಿಗಳ ಅಭಿವೃದ್ಧಿ ಸಾಧ್ಯ-ಗುಜರಾತ್ ಬಗ್ಗೆ
  • ನಮ್ಮ ರಾಷ್ಟ್ರದ ಯುವಕರಲ್ಲಿ ಅಪಾರ ಶಕ್ತಿಯಿದೆ. ಭವಿಷ್ಯದ ಹಿತದೃಷ್ಟಿಯಿಂದ ನಾವು ಯುವಕರನ್ನು ಕೇಂದ್ರಬಿಂದುವನ್ನಾಗಿಸಬೇಕು. ಯುವಕರನ್ನು ಮುಂದಿಟ್ಟುಕೊಂಡರೆ ನಾವು ಹಿಂದಿಕ್ಕಲಾಗದ ವೇಗದಲ್ಲಿ ಕಾರ್ಯಗಳನ್ನು ಸಾಧಿಸಬಹುದು-ಯುವಜನತೆ ಬಗ್ಗೆ
  • ನಮ್ಮ ರಾಷ್ಟ್ರದ ಯುವಕರ ಅಭಿಮತ ಕೇಳುವುದು ಬಹುಮುಖ್ಯ. ಮೊದಲ ಬಾರಿ ಮತದಾರ ಎಂದಷ್ಟೇ ತಿಳಿದರೆ ದೊಡ್ಡ ತಪ್ಪಾಗುತ್ತದೆ, ಅವರನ್ನು ಹೊಸ ಪೀಳಿಗೆಯ ಶಕ್ತಿ ಎಂದು ತಿಳಿಯಬೇಕು-ಯುವಜನತೆ ಬಗ್ಗೆ
  • ಆತ್ಮವಿಶ್ವಾಸವೇ ಜಯದ ಮೊದಲ ಗುಟ್ಟು, ಪ್ರತಿಯೊಬ್ಬ ವ್ಯಕ್ತಿ ಹೊಂದಿರತಕ್ಕ ಶ್ರೇಷ್ಠ ಗುಣ ಇದಾಗಿದೆ. ನಿಮ್ಮಲ್ಲಿ ನಿಮಗೆ ನಂಬಿಕೆ ಇದ್ದರೆ, ನೀವು ಸಾಧಿಸಬಹುದು, ನಂಬಿಕೆ ಇಲ್ಲದಿದ್ದರೆ ನೀವು ಏನು ಸಾಧಿಸಲು ಸಾಧ್ಯವಿಲ್ಲ- ಹುರಿದುಂಬಿಕೆ ಬಗ್ಗೆ
  • ಕ್ರೀಡೆಯನ್ನು ನಾನು ಬರೀ ದೈಹಿಕ ಕಸರತ್ತಿಗೆ ಪೂರಕವಾದ ಅಂಶ ಎಂದು ತಿಳಿದಿಲ್ಲ. ನಾನು ಕ್ರೀಡೆಯನ್ನು ಶಿಕ್ಷಣದ ಉಪಕರಣವಾಗಿ ಬಳಸಿ ಮನಸ್ಸಿನ ಹತೋಟಿ ಹಾಗೂ ಉಲ್ಲಾಸ ತರಲು ಇರುವ ಶಿಸ್ತಿನ ಸಂಸ್ಕೃತಿ ಎಂದು ತಿಳಿಯುತ್ತೇನೆ- ಕ್ರೀಡೆ ಬಗ್ಗೆ
  • ಒಡೆದಿದ್ದನ್ನು ಒಟ್ಟುಗೂಡಿಸುವುದು, ಐಕ್ಯತೆ ಸಾಧಿಸುವುದು ಹಾಗೂ ಹೊಸ ಮಾರ್ಗ ತೋರಿಸುವುದು ಯುವಕರಿಂದ ಮಾತ್ರ ಸಾಧ್ಯ. ಒಗ್ಗಟ್ಟು ಇದ್ದರೆ ಬದಲಾವಣೆ ತರಲು ಸಾಧ್ಯ. ಬದಲಾವಣೆ ತರಲು ಯಾವುದನ್ನು ಭಂಗಗೊಳಿಸಬೇಕಿಲ್ಲ, ಆದರೆ, ಬದಲಾವಣೆ ತರಲೇಬೇಕಿದೆ- ಯುವಜನತೆ ಬಗ್ಗೆ
  • ನಿರ್ಧಾರ ಕೈಗೊಳ್ಳಲು ಆಗದ ಮನಸ್ಥಿತಿಯಲ್ಲಿದ್ದರೂ ದೃಢತೆಯಿಂದ ಕಾರ್ಯೋನ್ಮುಖರಾಗಿರುವುದು ಎಲ್ಲವೂ ಇಂದಿನ ಯುವಜನತೆಯ ಲಕ್ಷಣ-ಯುವಜನತೆ ಬಗ್ಗೆ
  • ವಿಶ್ವವಿದ್ಯಾಲಯ ಅಥವಾ ಉನ್ನತ ಶಿಕ್ಷಣ ವಿದ್ಯಾಕೇಂದ್ರದಿಂದ ಪಡೆಯುವ ಶಿಕ್ಷಣವು ಜಾಗತಿಕ ಮಟ್ಟದ ಗುಣಮಟ್ಟವನ್ನು ಹೊಂದಿರಬೇಕು. ಜಾಗತಿಕ ಗ್ರಾಮವಾಗಿ ವೈವಿಧ್ಯತೆಯೇ ಎಲ್ಲೆಡೆ ತುಂಬಿರುವಾಗ ನಾವು ಪಡೆಯುವ ಶಿಕ್ಷಣದ ಮಟ್ಟವೂ ಪೂರಕವಾಗಿರಬೇಕು.-ಶಿಕ್ಷಣದ ಬಗ್ಗೆ
  • ಜೀವಮಾನದ ಅವಧಿಗೆ ನಾವು ವಿದ್ಯಾರ್ಥಿಗಳಾಗಿರಬೇಕು. ಜೀವನದ ಪ್ರತಿಕ್ಷಣ ಏನಾದರೂ ಕಲಿಕೆಯಲ್ಲಿ ತೊಡಗಿರಬೇಕು. ಕಲಿಕೆ ನಮ್ಮ ಜೀವನದ ಬಹುಮುಖ್ಯ ಅಂಶವಾಗಿರಬೇಕು. ನಿಮ್ಮ ವಂಸವಾಹಿಯಲ್ಲಿ ಕಲಿಕಾ ವಿಧಾನ ಭಾಗವಾಗಬೇಕು-
  • ಶಿಕ್ಷಣದ ಬಗ್ಗೆ
  • ವಿಶ್ವವಿದ್ಯಾಲಯಗಳಿಂದ ರೋಬೊಟ್ ಗಳನ್ನು ತಯಾರಿಸುವುದು ನಮಗೆ ಬೇಕಿಲ್ಲ; ನಾವು ಉತ್ತಮ ಮಾನವರನ್ನು ಸೃಷ್ಟಿಸಬೇಕಿದೆ. ತಂತ್ರಜ್ಞಾನವನ್ನು ಅರೆದು ಕುಡಿದಿರುವ ರೊಬೊಟ್ ಗಳ ಸಹಾಯದಿಂದ ನಾವು ವಿಶ್ವವನ್ನು ಸರಿಪಡಿಸಲು ಸಾಧ್ಯವಿಲ್ಲ. ಜೀವನದಲ್ಲಿ ಭಾವನಾತ್ಮಕ ಅಂಶಗಳಿಲ್ಲದಿದ್ದರೆ ಮಾನವ ಜನಾಂಗಕ್ಕೆ ಉಪಯುಕ್ತವಾಗಲು ಸಾಧ್ಯವೇ ಇಲ್ಲ- ಶಿಕ್ಷಣದ ಬಗ್ಗೆ
  • 21ನೇ ಶತಮಾನ ಜ್ಞಾನದ ಶತಮಾನ ಹಾಗೂ ಜ್ಞಾನ ಪ್ರಮುಖ ವಿಷಯವಾದಾಗ ಇಡೀ ವಿಶ್ವ ತಿರುಗಿ ನೋಡುವುದು ಭಾರತದ ಕಡೆಗೆ ಎಂಬುದನ್ನು ಮರೆಯುವಂತಿಲ್ಲ. ಜ್ಞಾನಭರಿತ ಸಮಾಜದ ಉದಯ ಎಂಬುದು ಈಗ ಬರೀ ಹೇಳಿಕೆಯಾಗಿ ಉಳಿದಿಲ್ಲ ವಾಸ್ತವವಾಗಿದೆ. ಮಾನವ ವಿಕಾಸದ ಪ್ರತಿ ಕ್ರಿಯೆಯ ಮೂಲ ಹರಿವು ಜ್ಞಾನ ಪ್ರವಾಹದಿಂದ ಉಂಟಾಗಲಿದೆ.- ಶಿಕ್ಷಣದ ಬಗ್ಗೆ
  • ನಾವು ಎಂದಿಗೂ ಶಕ್ತಿಯ ಆರಾಧಕರು; ನಾವು ಭವ್ಯ ಹಾಗೂ ದಿವ್ಯ ಗುಜರಾತ್ ನಿರ್ಮಾಣದ ಮಹತ್ವದ ನಿರ್ಣಯ ತೆಗೆದುಕೊಂಡವರು ನಾವು(15 ಆಗಸ್ಟ್ 2012)-ಗುಜರಾತ್ ಬಗ್ಗೆ
  • ದೇಶಕ್ಕೆ 'ಸ್ವರಾಜ್ಯ' ಸಿಕ್ಕಿದೆ ಆದರೆ, 'ಸುರಾಜ್ಯ' ದ ಕನಸು ದುರಾದೃಷ್ಟವಶಾತ್ ಫಲಿಸಿಲ್ಲ. ಇಂದು, ದೇಶದ ಎದುರು ಯಾವುದಾದರೂ ದೊಡ್ಡ ಸವಾಲು ಇದ್ದರೆ ಅದು 'ಸುರಾಜ್ಯ' ಹಾಗೂ ಕಳೆದ ದಶಕದಿಂದ ಗುಜರಾತ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು ಸುರಾಜ್ಯ ಪಡೆಯುವುದೇ ನಮ್ಮ ಗುರಿ (15 ಆಗಸ್ಟ್ 2012)- ಗುಜರಾತ್ ಬಗ್ಗೆ
  • ಏನೋ ಒಂದು ಆಗಲಿ ಎಂದು ಕನಸು ಕಾಣಬೇಡಿ, ಏನಾದರೂ ಶ್ರೇಷ್ಠವಾದದ್ದು ಸಂಭವಿಸಲಿ ಎಂದು ಕನಸು ಕಾಣಿರಿ-ಯುವಜನತೆ ಬಗ್ಗೆ
  • ನಿಮ್ಮ ಕನಸುಗಳು ಸ್ಥಿರವಾಗಿರಬೇಕು. ಕನಸುಗಳು ಸ್ಥಿರವಾಗಿದ್ದರೆ ಅದು ಮುಂದೆ ಸಂಕಲ್ಪದ ರೂಪ ಪಡೆಯುತ್ತದೆ. ಸ್ಥಿರವಾದ ಕನಸು ಹಾಗೂ ದೃಢ ಸಂಕಲ್ಪದ ಜೊತೆ ಪರಿಶ್ರಮ ಮಿಳಿತವಾದರೆ ಎಲ್ಲವೂ ಸಿದ್ಧಿಯಾಗುತ್ತದೆ-ಯುವಜನತೆ ಬಗ್ಗೆ
  • ಹಾವು ಹಿಡಿಯುವವರ ನಾಡು ಎಂದು ಕರೆಯಲ್ಪಡುತ್ತಿದ್ದ ದೇಶ ಈಗ ಮೌಸ್ ಹಿಡಿಯುವವರ ನಾಡಾಗಿದೆ. ಐಟಿ ಸೆಕ್ಟರ್ ವಿಕ್ರಮದಿಂದಾಗಿ ಒಂದು ಮೌಸ್ ಕ್ಲಿಕ್ ಮೂಲಕ ನಮ್ಮ ಯುವಜನತೆ ಇಂದು ವಿಶ್ವಕ್ಕೆ ಹೊಸ ಸ್ವರೂಪ ನೀಡಬಲ್ಲವರಾಗಿದ್ದಾರೆ- ಯುವಜನತೆ ಬಗ್ಗೆ
  • ರಾಷ್ಟ್ರೀಯ ಹಬ್ಬಗಳು ಅಭಿವೃದ್ಧಿಯ ಪ್ರತೀಕವಾಗಬೇಕಿದೆ. ಗಣತಂತ್ರ ದಿನ ಅಥವಾ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತ್ರಿವರ್ಣ ಧ್ವಜ ಹಾರಿಸಿ ರಾಜಧಾನಿಗಳಲ್ಲಿ ಸಂಭ್ರಮಿಸುವುದಕ್ಕೆ ಮಾತ್ರ ಸೀಮಿತವಾಗಬಾರದು ಎಂಬುದನ್ನು ಲೋಕ್ ಶಿಕ್ಷಣ್ (ಸಮೂಹ ಶಿಕ್ಷಣ) ಅವಕಾಶವನ್ನು ಎಲ್ಲರಿಗೂ ಸಿಗುವಂತೆ ಮಾಡಬೇಕು- ಸಾಮಾಜಿಕ ಸಬಲೀಕರಣದ ಬಗ್ಗೆ
  • ವಿಶ್ವದಲ್ಲಿ ಯುವಜನತೆಯಿಂದ ತುಂಬಿದ ರಾಷ್ಟ್ರವೆಂದರೆ ಅದು ಭಾರತ. ಇಷ್ಟು ದೊಡ್ಡ ಪ್ರಮಾಣದಲ್ಲಿ ಯುವಶಕ್ತಿ ಹೊಂದಿರುವ ರಾಷ್ಟ್ರ ಸಣ್ಣ ಕನಸು ಕಾಣುವುದು ಸರಿಯಲ್ಲ. ಈ ಅಪರಾಧ ಎಂದಿಗೂ ಕೂಡದು. ನಾವು ದೊಡ್ಡ ಕನಸು ಕಾಣಬೇಕು. ನಮ್ಮ ಯುವ ಸಮುದಾಯ ದೊಡ್ಡ ಕನಸು ಕಾಣುವಂತೆ ಮಾಡಬೇಕು ಹಾಗೂ ಅವರಿಗೆ ಕನಸು ಸಾಕಾರಗೊಳಿಸುವ ಸೂಕ್ತ ಅವಕಾಶ ನೀಡಬೇಕು-ಯುವಜನತೆ ಬಗ್ಗೆ
  • ಸುಧಾರಣೆ ಈಗ ಐಚ್ಛಿಕವಾಗಿ ಉಳಿದಿಲ್ಲ, ಕಡ್ಡಾಯವಾಗಿಬಿಟ್ಟಿದೆ-ಸುಧಾರಣೆ ಬಗ್ಗೆ
  • ವ್ಯಕ್ತಿಯನ್ನು ಹಿರಿಯ, ಕಿರಿಯ ಎಂದು ಭೇದ ಮಾಡಲು ಬರುವುದಿಲ್ಲ. ಬದಲಾವಣೆಗಳನ್ನು ಜಾರಿಗೆ ತರುವಾಗ ವ್ಯಕ್ತಿಯ ಗೌರವ, ಯೋಗ್ಯತೆಗೆ ತಕ್ಕಂತೆ ಹೆಚ್ಚಿನ ಒತ್ತು ನೀಡಲಾಗುತ್ತದೆ- ಕೌಶಲ್ಯ ಅಭಿವೃದ್ಧಿ ಬಗ್ಗೆ
  • ನನಗೆ ಒಂದು ಕನಸಿಗೆ ಸಮಾಜದಲ್ಲಿ ಅವಿರತವಾಗಿ ಜ್ಞಾನ ವಾಹಿನಿ ಹರಿಯುತ್ತಿರಬೇಕು, ಪ್ರತಿಯೊಬ್ಬ ವ್ಯಕ್ತಿಯೂ ಜ್ಞಾನ ಸೃಷ್ಟಿ ಕಾರ್ಯದಲ್ಲಿ ನಿರತನಾಗಿರಬೇಕು, ತಮ್ಮ ನೆಚ್ಚಿನ ಕೋರ್ಸುಗಳನ್ನು ಓದುವ ಸ್ವಾತಂತ್ರ್ಯ ಯುವ ಜನತೆಗಿರಬೇಕು, ಜಾಗತಿಕ ಶಿಕ್ಷಣ ತಂತ್ರಜ್ಞಾನದ ಮೂಲಕ ಲಭ್ಯವಾದರೂ ಗುರುವಿಗಿರುವ ಮಹತ್ವವನ್ನು ಉಳಿಸಿಕೊಂಡಿರಬೇಕು-ಶಿಕ್ಷಣದ ಬಗ್ಗೆ
  • ನಾನು ನನ್ನ ಗುಜರಾತಿನ ನಾಗರೀಕರ ನಾಳೆಗಳು ಇನ್ನಷ್ಟು ಪ್ರಭೆಯಿಂದ ಕೂಡಿರುತ್ತದೆ ಎಂದು ಭರವಸೆ ನೀಡುತ್ತೇನೆ, ನಾನು ನನ್ನ ಗುಜರಾತಿನ ನಾಗರೀಕರ ನಾಳೆಗಳು ಇನ್ನಷ್ಟು ಪ್ರಗತಿಶೀಲವಾಗಿರುತ್ತದೆ ಎಂದು ಭರವಸೆ ನೀಡುತ್ತೇನೆ. ನಾನು ನನ್ನ ಗುಜರಾತಿನ ನಾಗರೀಕರ ನಾಳೆಗಳು ಇನ್ನಷ್ಟು ಸಂತಸಮಯವಾಗಿರುತ್ತದೆ ಎಂದು ಭರವಸೆ ನೀಡುತ್ತೇನೆ. ನಾನು ನನ್ನ ಗುಜರಾತಿನ ನಾಗರೀಕರ ನಾಳೆಗಳು ಇನ್ನಷ್ಟು ಸಮೃದ್ಧಿ, ಶಾಂತಿಯುತ ಹಾಗೂ ಹೆಚ್ಚಿನ ಗುಣಾತ್ಮಕವಾಗಿರುತ್ತದೆ ಎಂದು ಆಶ್ವಾಸನೆ ನೀಡುತ್ತೇನೆ- ಗುಜರಾತ್ ಬಗ್ಗೆ
  • ಅಭಿವೃದ್ಧಿ ಗುರಿ ಇಟ್ಟುಕೊಂಡು ಚುನಾವಣೆಯನ್ನು ಎದುರಿಸುವುದು ಅಷ್ಟು ಸುಲಭವಲ್ಲ ಹಾಗೂ ನನ್ನ ಜನರು ವೈಯಕ್ತಿಕ ಹಾಗೂ ಭಾವನಾತ್ಮಕ ಅಂಶಗಳಿಂದ ಮೇಲೆದ್ದು ಅಭಿವೃದ್ಧಿಯೇ ಎಲ್ಲಕ್ಕಿಂತ ಮುಖ್ಯ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ- ಚುನಾವಣೆ ಹಾಗೂ ಪ್ರಜಾಪ್ರಭುತ್ವದ ಬಗ್ಗೆ
  • ಪ್ರಜಾಪ್ರಭುತವ ಮೂಲ ಇರುವುದೇ ತಾಳ್ಮೆ ಹಾಗೂ ಟೀಕೆಯಲ್ಲಿ, ನೀವು ಟೀಕೆಗಳನ್ನು ಎದುರಿಸಲು ಅಸಮರ್ಥರಾದರೆ, ಟೀಕೆಗಳನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ, ನೀವು ಪ್ರಜಾಪ್ರಭುತ್ವವನ್ನು ಕಾಯಲು ಸಾಧ್ಯವಿಲ್ಲ. ನೀವು ಈ ಕೆಲಸಕ್ಕೆ ಅರ್ಹರಲ್ಲ- ಚುನಾವಣೆ ಹಾಗೂ ಪ್ರಜಾಪ್ರಭುತ್ವದ ಬಗ್ಗೆ
  • ಪ್ರಜಾಪ್ರಭುತ್ವದ ಬೇರು ಇರುವುದು ಸಾಮೂಹಿಕ ಶಿಕ್ಷಣದಲ್ಲಿ, ಈ ಅಡಿಪಾಯ ಶಕ್ತಿಯುತವಾದರೆ ದೇಶದ ಭಾವಿ ಪ್ರಜೆಗಳು ನಮ್ಮ ಮಕ್ಕಳು ಚುನಾವಣಾ ಪ್ರಕ್ರಿಯೆ ಬಗ್ಗೆ ಕೂಡಾ ಶಿಕ್ಷಿತರಾಗುತ್ತಾರೆ- ಚುನಾವಣೆ ಹಾಗೂ ಪ್ರಜಾಪ್ರಭುತ್ವದ ಬಗ್ಗೆ
  • ದೇಶದ ಪ್ರತಿಬಿಂಬ ಎಂದರೆ ಬರೀ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಲ್ಲ. ದೇಶದ ಮೃಧುಭಾಗವೂ ಕೂಡಾ ಎಣಿಕೆಗೆ ಬರುತ್ತದೆ, ಕ್ರೀಡೆಗಳು ಈ ವಿಭಾಗಕ್ಕೆ ಸೇರಿದ್ದು, ಇಡೀ ವಿಶ್ವದ ಗಮನವನ್ನು ದೇಶದತ್ತ ಸೆಳೆಯುವ ಶಕ್ತಿ ಹೊಂದಿದೆ-ಕ್ರೀಡೆ ಬಗ್ಗೆ
  • ನಮ್ಮ ಜೀವನದಲ್ಲಿ ಕ್ರೀಡೆಗೆ ಮಹತ್ವದ ಸ್ಥಾನ ನೀಡದಿದ್ದರೆ ನಾವು ಕ್ರೀಡಾಸ್ಪೂರ್ತಿಯಂಥ 'ಸಂಸ್ಕಾರ' ವನ್ನು ಸಮಾಜದಲ್ಲಿ ಬಿತ್ತಲು ಸಾಧ್ಯವಿಲ್ಲ. ಈ ರೀತಿ ಸಂಸ್ಕಾರವಿಲ್ಲದಿದ್ದರೆ ಸಮಾಜದ ಬೆಳೆವಣಿಗೆ ಸಾಧ್ಯವಿಲ್ಲ- ಕ್ರೀಡೆ ಬಗ್ಗೆ
  • ಸಾಮಾಜಿಕ ಜೀವನದಲ್ಲಿ ಕ್ರೀಡೆ ಅವಿಭಾಜ್ಯ ಹಾಗೂ ಅತ್ಯಗತ್ಯವಾದ ಅಂಗವಾಗಬೇಕು. ಸ್ಪರ್ಧಾತ್ಮಕತೆಗೆ ಇದರ ಉಪ ಉತ್ಪನ್ನ ಅಷ್ಟೇ-ಕ್ರೀಡೆ ಬಗ್ಗೆ
  • ವೈಬ್ರಂಟ್ ಗುಜರಾತ್ ಎಂಬುದು ಬಂಡವಾಳ ಹೂಡಿಕೆ ಅಥವಾ ಆರ್ಥಿಕ ಆದಾಯ ತರುವ ಯೋಜನೆಗಳಷ್ಟೇ ಅಲ್ಲ. ಇದು ಆರ್ಥಿಕ ವಾತಾವರಣಕ್ಕೆ ಗುಣಾತ್ಮಕ ಸೂಜಿಮದ್ದು ನೀಡುವುದು ಹಾಗೂ ಸಾಮಾಜಿಕ ಆರ್ಥಿಕ ಕಾರ್ಯಕ್ರಮದಲ್ಲಿ ಒಗ್ಗೂಟ್ಟಿನಿಂದ ಕಾರ್ಯ ನಿರ್ವಹಿಸುವುದು ಹಾಗೂ ಜಾಗತಿಕ ಮತ್ತು ಪ್ರಾದೇಶಿಕ ಒಗ್ಗೂಡುವಿಕೆ ಮೂಲಕ ಅಭಿವೃದ್ಧಿ ಸಾಧಿಸುವುದಾಗಿದೆ- ವೈಬ್ರಂಟ್ ಗುಜರಾತ್ ಬಗ್ಗೆ
  • ಒಂದಾನೊಂದು ಕಾಲದಲ್ಲಿ ಭಾರತದಿಂದ ಜಗತ್ತಿಗೆ ಗುಜರಾತ್ ಹೆಬ್ಬಾಗಿಲಾಗಿತ್ತು. ಈಗ ಭಾರತದಿಂದ ಗುಜರಾತ್ ಜಾಗತಿಕ ಹೆಬ್ಬಾಗಿಲಾಗಿದೆ.- ವೈಬ್ರಂಟ್ ಗುಜರಾತ್ ಬಗ್ಗೆ
  • ಗುಜರಾತಿನ ಕೃಷಿ ಮಹೋತ್ಸವಗಳ ಮೂಲಕ ರೈತರು ಸುಧಾರಣೆ ಹಾಗೂ ಹೊಸತನಗಳನ್ನು ಕಾಣುವ ಮೂಲಕ ತಮ್ಮಕೌಶಲ್ಯ ಅಭಿವೃದ್ಧಿ ಮಾಡಿಕೊಳ್ಳಬಹುದಾಗಿದೆ. ಕೃಷಿ ಮಹೋತ್ಸವಗಳ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಉತ್ತಮ ಇಳುವರಿ ಕಾಣುವುದು, ಯುವಕರಿಗೆ ಹೆಚ್ಚಿನ ಉದ್ಯೋಗವಕಾಶ ಸಾಧ್ಯವಾಗಿದೆ ತನ್ಮೂಲಕ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಿದೆ- ಗುಜರಾತ್ ಬಗ್ಗೆ
  • ಯುವ ಜನತೆಯ ರೂಪದಲ್ಲಿ ಭಾರತ ಹೊಸ ಶಕ್ತಿಯನ್ನು ಹೊಂದಿದೆ ಪ್ರಜಾಪ್ರಭುತ್ವದಲ್ಲಿ ಈ ಶಕ್ತಿ ಸಮರ್ಥವಾಗಿ ಪಾಲ್ಗೊಳಲು ಅವಕಾಶವಿದೆ. ಹಾಗೂ ಗೆಳೆಯರೆ! ಭಾರತದ ಶ್ರೇಷ್ಠತೆಯನ್ನು ಗುಜರಾತ್ ಯಾವಾಗಲೂ ಪ್ರತಿನಿಧಿಸುತ್ತದೆ- ಗುಜರಾತ್ ಬಗ್ಗೆ
  • ನೀವು ವಾಸಿಸಲು ಉತ್ತಮವಾದ ಸ್ಥಳ ಬೇಕಾದರೆ ನಿಮ್ಮ ನೆಲೆಯನ್ನು ಪರಿಪೂರ್ಣ ಘಟಕವಾಗಿ ಕಾಣಬೇಕು. ಸಮರ್ಥವಾಗಿ ಆರ್ಥಿಕ ಪ್ರಗತಿ ಕಾಣಬೇಕಾದರೆ ಜನರ ಪಾಲುದಾರಿಕೆ ಮುಖ್ಯ. ಅಭಿವೃದ್ಧಿಯ ಪ್ರಗತಿ ಸ್ಥಿರವಾದ ಪ್ರಕ್ರಿಯೆಯಾಗಿರಬೇಕಾದರೆ ಪರಿಸರದೊಡನೆ ಸ್ಪಂದಿಸುವುದು ಅಗತ್ಯ-ಆಡಳಿತದ ಬಗ್ಗೆ
  • ಯಾವುದೇ ಸಾಧ್ಯ ಎಂಬುದನ್ನು ದೇಶಕ್ಕೆ ಗುಜರಾತ್ ತೋರಿಸುತ್ತಿದೆ. ಒಮ್ಮೆ ಈ ಹಾದಿ ಹಿಡಿದರೆ ಮತ್ತೆ ಹಿಂತಿರುಗಿ ನೋಡುವ ಮಾತಿಲ್ಲ. ಜನರು ಐಕ್ಯತೆಯಿಂದ ಸಂತಸದಿಂದ ತಮ್ಮ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿದ ಫಲಿತಾಂಶ ಸಿಕ್ಕಿದೆ- ಗುಜರಾತ್ ಬಗ್ಗೆ
  • 6 ಕೋಟಿ ಗುಜರಾತಿಗಳು ಎಂಬುದು ಬರೀ ಪದವಾಗಿ ಉಳಿದಿಲ್ಲ. ಇದು ಈಗ ಐಕ್ಯತೆಯ ಮಂತ್ರವಾಗಿ ಮಾನವ ಶಕ್ತಿಯಾಗಿ ಕಾಣಿಸುತ್ತಿದೆ! ಪ್ರತಿಯೊಬ್ಬ ಗುಜರಾತಿಯೂ ಅಂತರ್ಗತವಾಗಿ ಶಾಂತಿ, ಸದ್ಭಾವನೆ ಹಾಗೂ ಅಭಿವೃದ್ಧಿ ಚಿಂತನೆ ನಡೆಸಿದ್ದಾರೆ- ಗುಜರಾತ್ ಬಗ್ಗೆ
  • ಇಂದು ಜನರು ಅಭಿವೃದ್ದಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅವರು ಗುಜರಾತ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಗುಜರಾತ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದರ್ಥ. ಅಂದರೆ, ಇವೆರಡು ಒಂದೇ ನಾಣ್ಯದ ಎರಡು ಮುಖಗಳು- ಗುಜರಾತ್ ಬಗ್ಗೆ
  • ಭಾರತೀಯ ಪ್ರಜಾಪ್ರಭುತ್ವದಲ್ಲಿ ಸಂಯುಕ್ತ ವ್ಯವಸ್ಥೆ ಕೇಂದ್ರ ಭಾಗವನ್ನೇ ಆಕ್ರಮಿಸಿದೆ. ಅದರೆ ಯುಪಿಎ ಹಠಮಾರಿತನದಿಂದ ದೇಶವನ್ನು ಒಡೆದು ಒಕ್ಕೂಟ ವ್ಯವಸ್ಥೆಯನ್ನು ಸ್ವಾರ್ಥಕ್ಕಾಗಿ ಬಳಸುತ್ತಿದೆ. ಹಿಂಬಾಗಿಲ ಮೂಲಕ ಅಧಿಕಾರ ಪಡೆಯುವ ಹುನ್ನಾರ ನಡೆಸಿದೆ- ಅಡಳಿತದ ಬಗ್ಗೆ
  • ಜಾತ್ಯತೀತ ಎಂಬ ಶಬ್ದಕ್ಕೆ ಹಲವಾರು ಜನ ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ನನ್ನ ಕೇಳಿದರೆ ಇದಕ್ಕೆ ಅತ್ಯಂತ ಸರಳ ಉತ್ತರವೆಂದರೆ- ಭಾರತವನ್ನು ಎಲ್ಲಕ್ಕಿಂತ ಮುಂದಿಡುವುದೇ ಆಗಿದೆ- ರಾಜಕೀಯದ ಬಗ್ಗೆ
  • ಯುವಜನತೆ ರೂಪದಲ್ಲಿ ಭಾರತ ಅಗಾಧ ಶಕ್ತಿಯನ್ನು ಹೊಂದಿದೆ. ಪ್ರಜಾಪ್ರಭುತ್ವದ ಬಲದಿಂದ ಈ ಶಕ್ತಿ ಸಮರ್ಥವಾಗಿ ಪಾಲ್ಗೊಳ್ಳಬಹುದಾಗಿದೆ. ಹಾಗೂ ಗೆಳೆಯರೆ, ಗುಜರಾತ್ ಯಾವಾಗಲೂ ಭಾರತದ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತದೆ- ಗುಜರಾತ್ ಬಗ್ಗೆ
  • ಜನಶಕ್ತಿಯ ಜೊತೆಗೆ ಒಳ್ಳೆ ಆಡಳಿತವು ಕೈಜೋಡಿಸಿದರೆ ನೈಜ, ಆಳವಾದ ಶಾಶ್ವತ ಬದಲಾವಣೆ ತರಲು ಸಾಧ್ಯ. ಈ ಹೊಂದಾಣಿಕೆಯಿಂದ ಭ್ರಷ್ಟಾಚಾರದಿಂದ ಹಿಡಿದು ಅಪೌಷ್ಟಿಕತೆ ಹಾಗೂ ಅನಕ್ಷರತೆಯಂಥ ಪಿಡುಗನ್ನು ದೂರಾಗಿಸಬಹುದು -ಆಡಳಿತ ಬಗ್ಗೆ
  • ನಾನು ಕನಸು ಕಾಣುವುದಿಲ್ಲ, ನಾನು ಕನಸನ್ನು ಬಿತ್ತುತ್ತೇನೆ! ಗುಜರಾತಿನ ಜನರ ಕಣ್ಣಲ್ಲಿ ಪ್ರತಿದಿನವೂ ಹೊಸ ಕನಸಿನ ಬೀಜ ಬಿತ್ತುತ್ತೇನೆ. ಈ ಕನಸುಗಳು ಮನವರಿಕೆಯಾದರೆ ನನಗೆ ಇನ್ನೇನು ಬೇಕು- ಗುಜರಾತ್ ಬಗ್ಗೆ
  • 21ನೇ ಶತಮಾನ ಜ್ಞಾನದ ಹಾಗೂ ಜ್ಞಾನವಂತ ಮಾನವ ಶಕ್ತಿಯ ಶತಮಾನವಾಗಿದೆ. ಈ ಜ್ಞಾನದಳವನ್ನು ಬೆಳೆಸಬೇಕಾದರೆ ಗುಜರಾತಿ ಪುಸ್ತಕಗಳೊಡನೆ ತನ್ನ ಬಂಧವನ್ನು ಹೆಚ್ಚಿಸಿಕೊಳ್ಳಬೇಕು- ಸಾಮಾಜಿಕ ಸಬಲೀಕರಣ ಬಗ್ಗೆ
  • ಸ್ವರ್ಣಿಮ್ ಗುಜರಾತ್ ಅನೇಕ ಸಂಭ್ರಮ, ಸಂತಸಗಳನ್ನು ಕಾಣಲಿದೆ. ಅದರೆ, ಯಾರಾದರೂ ನನ್ನನ್ನು' ಮುಖ್ಯಮಂತ್ರಿಯಾಗಿ ನಿಮಗೆ ಇಷ್ಟವಾದ ಕಾರ್ಯಕ್ರಮ ಯಾವುದು?' ಎಂದು ಪ್ರಶ್ನಿಸಿದರೆ, ಗೆಳೆಯರೆ, ನನ್ನ ನೆಚ್ಚಿನ ಯೋಜನೆ ಎಂದರೆ ಅದು 'ವಾಂಛೆ ಗುಜರಾತ್' ಅದು ನನ್ನ ಹೃದಯಕ್ಕೆ ಹತ್ತಿರವಾದದ್ದು-ಸಾಮಾಜಿಕ ಸಬಲೀಕರಣ ಬಗ್ಗೆ
  • ಸಮಾಜದಲ್ಲಿ ಒಳ್ಳೆ ಬದಲಾವಣೆ ತರಲು ಮಾಡುವ ಸಣ್ಣ ಸಣ್ಣ ಪ್ರಯತ್ನಗಳೇ ಮುಂದೆ ದೊಡ್ಡ ಫಲವನ್ನು ನೀಡುತ್ತದೆ-ಸಾಮಾಜಿಕ ಸಬಲೀಕರಣ ಬಗ್ಗೆ
  • ನಿಮ್ಮ ಗ್ರಾಮದಲ್ಲಿ ಗ್ರಂಥ ಮಂದಿರ ಸ್ಥಾಪನೆ ಬಗ್ಗೆ ಎಲ್ಲರೂ ಯೋಚಿಸಬೇಕು. ನಿಮ್ಮ ಗ್ರಾಮದಲ್ಲಿ ಏಕೆ 'ಗ್ರಂಥ ಮಂದಿರ?' ದಿಂದ ವಂಚಿತವಾಗಿದೆ ಎಂಬುದನ್ನು ಮನಗಾಣಬೇಕು. 50 ಪುಸ್ತಕ,ಮ್ 100 ಪುಸ್ತಕ ಸಂಗ್ರಹದಿಂದ ಈ ಕಾರ್ಯ ಶುರುವಾಗಲಿದೆ- ಸಾಮಾಜಿಕ ಸಬಲೀಕರಣ ಬಗ್ಗೆ
  • ಜ್ಞಾನದ ಬಗ್ಗೆ ಶ್ರದ್ಧೆ, ಭಕ್ತಿ ಇದ್ದರೆ 21ನೇ ಶತಮಾನ ಭಾರತದ ಶತಮಾನವಾಗಬಲ್ಲುದು, ಇದಕ್ಕಾಗಿ 'ವಾಂಛೆ ಗುಜರಾತ್' ಚಳವಳಿ ಮೂಲಕ ಭದ್ರ ಬುನಾದಿ ಹಾಕಲಾಗಿದೆ- ಸಾಮಾಜಿಕ ಸಬಲೀಕರಣ ಬಗ್ಗೆ
  • ಮಾಹಿತಿ ನಿಮಗೆ ಊರುಗೋಲಾಗಿ ನಿಮ್ಮನ್ನು ದಡಮುಟ್ಟಿಸಬಹುದು ಆದರೆ, ಕತ್ತಲೆಯಲ್ಲಿ ದಾರಿ ಹುಡುಕಬೇಕಾದರೆ ನಿಮಗೆ ಜ್ಞಾನದ ಬೆಳಕು ಬೇಕು. ಜ್ಞಾನ ಮಾತ್ರ ನಿಮಗೆ ದಾರಿದೀಪವಾಗಬಲ್ಲದು- ಶಿಕ್ಷಣದ ಬಗ್ಗೆ
  • ಅಭಿವೃದ್ಧಿಗೆ ಓದು ಇಂಧನವಾಗಿ ಕಾರ್ಯ ನಿರ್ವಹಿಸುತ್ತದೆ-ಶಿಕ್ಷಣದ ಬಗ್ಗೆ
  • ಸ್ವರೂಪವಿಲ್ಲ, ಪ್ರಣಾಳಿಕೆಯಿಲ್ಲದ ಜ್ಞಾನವು ಪ್ರಜ್ಞರಹಿತವಾದದ್ದು-ಶಿಕ್ಷಣದ ಬಗ್ಗೆ
  • ದೀಪದ ಜ್ವಾಲೆಯಂತೆ ಪ್ರತಿಯೊಬ್ಬರಲ್ಲೂ ನೈಸರ್ಗಿಕವಾಗಿ ಉನ್ನತ ಸ್ಥಾನಕ್ಕೇರುವ ಪ್ರವೃತ್ತಿ ಇರುತ್ತದೆ. ನಾವು ಈ ಹುಟ್ಟುಗುಣವನ್ನು ಬೆಳೆಸೋಣ-ಹುರಿದುಂಬಿಸುವಿಕೆ ಬಗ್ಗೆ
  • ಕೆಲಸವೇ ನಿಮ್ಮ ಹೆಬ್ಬಯಕೆಯಾಗಲಿ-ಹುರಿದುಂಬಿಸುವಿಕೆ ಬಗ್ಗೆ
  • ಯಾವುದೇ ಕಾರ್ಯ ನಿರ್ವಹಿಸಲು ಸಿಗುವ ಅವಕಾಶವನ್ನು ಅದೃಷ್ಟ ಎಂದು ಭಾವಿಸುತ್ತೇನೆ. ನನ್ನ ತನು ಮನವನ್ನು ಅದಕ್ಕೆ ಅರ್ಪಿಸಿ ಸಿಗುವ ಎಲ್ಲಾ ಅವಕಾಶಗಳ ಹೆಬ್ಬಾಗಿಲು ತೆರೆದು ಮುನ್ನಡೆಯುತ್ತೇನೆ-ಹುರಿದುಂಬಿಸುವಿಕೆ ಬಗ್ಗೆ
  • ಪ್ರತಿಯೊಬ್ಬರಲ್ಲೂ ಒಳ್ಳೆಯದು ಹಾಗೂ ಕೆಟ್ಟದ್ದು ಇರುತ್ತದೆ, ಯಾರು ಒಳ್ಳೆಯ ಮಾರ್ಗ ಅನುಸರಿಸುತ್ತಾರೋ ಅವರ ಜೀವನದಲ್ಲಿ ಯಶಸ್ವಿಯಾಗುತ್ತಾರೆ-ಹುರಿದುಂಬಿಸುವಿಕೆ ಬಗ್ಗೆ
  • ಕಠಿಣ ಪರಿಶ್ರಮ ಎಂದಿಗೂ ದಣಿವು ಉಂಟು ಮಾಡುವುದಿಲ್ಲ, ಅದು ತೃಪ್ತಿಯನ್ನು ಮಾತ್ರ ನೀಡುತ್ತದೆ-ಹುರಿದುಂಬಿಸುವಿಕೆ ಬಗ್ಗೆ
  • ಸಮಾಜಕ್ಕೆ ಸೇವೆ ಸಲ್ಲಿಸಲು ಅವಕಾಶ ಪಡೆದರೆ ಅದು ನಾವು ಸಮಾಜ ನಮಗೆ ನೀಡಿದ ಸಾಲದ ಮರು ಪಾವತಿ ಮಾಡಿದಂತೆ-ಹುರಿದುಂಬಿಸುವಿಕೆ ಬಗ್ಗೆ
  • ನೀವು ಮಲಗಿದಾಗ ನಿಮಗೆ ಬೀಳುವ ಕನಸುಗಳು ನಿಜವಾದ ಕನಸೇ ಅಲ್ಲ, ನಿಜವಾದ ಕನಸುಗಳು ನನಸಾಗುವ ತನಕ ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ.-ಹುರಿದುಂಬಿಸುವಿಕೆ ಬಗ್ಗೆ
  • ನಮ್ಮ ಪ್ರಕಾರ ಧರ್ಮವೆಂದರೆ ಕಾರ್ಯದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುವಿಕೆ ಹಾಗೂ ಶ್ರದ್ಧಾ ಭಕ್ತಿಯಿಂದ ಕಾರ್ಯ ನಿರ್ವಹಿಸಿದರೆ ಅದೇ ಸನ್ಮಾರ್ಗವನ್ನು ತೋರುತ್ತದೆ.-ಹುರಿದುಂಬಿಸುವಿಕೆ ಬಗ್ಗೆ
  • ಗುಜರಾತ್ ಅಂದರೆ ವ್ಯಾಪಾರದ ಜೊತೆಗೆ ಸಂಪ್ರದಾಯ, ವಾಣಿಜ್ಯದ ಜೊತೆ ಸಂಸ್ಕೃತಿ, ಉದ್ಯಮದ ಜೊತೆ ಮನರಂಜನೆ ಮತ್ತು ಅಭಿವೃದ್ಧಿಯ ಜೊತೆ ಆಪತ್ತು ನಿರ್ವಹಣೆ.-ಆಡಳಿತದ ಬಗ್ಗೆ
  • ವೈಯಕ್ತಿಕ ಪ್ರಯತ್ನಗಳು ಅತ್ಯದ್ಭುತವಾಗಿರುತ್ತವೆ. ಆದರೆ, ಸಂಘಟಿತ ಪ್ರಯತ್ನಗಳು ಹೆಚ್ಚು ಪರಿಣಾಮ ಬೀರುತ್ತವೆ.-ಆಡಳಿತದ ಬಗ್ಗೆ
  • ಫೈಲ್ ನಲ್ಲಿ ಲೈಫ್ ತರುವುದಕ್ಕೆ ನನ್ನ ಹೋರಾಟ.-ಆಡಳಿತದ ಬಗ್ಗೆ
  • ರೆಡ್ ಟೇಪಿಸಂ ಎನ್ನುವುದು ಇಲ್ಲಿ ಇಲ್ಲವೇ ಇಲ್ಲ, ರೆಡ್ ಕಾರ್ಪೆಟ್ ಮಾತ್ರ.-ಆಡಳಿತದ ಬಗ್ಗೆ
  • 3000 ದಿನಗಳ ಸೇವೆ ಸಲ್ಲಿಸಿರುವ ನನ್ನ ಅನುಭವದಿಂದ ಹೇಳುತ್ತೇನೆ, ಇಲ್ಲಿ ಅಸಾಧ್ಯವೆನ್ನುವ ಮಾತೇ ಇಲ್ಲ.-ಆಡಳಿತದ ಬಗ್ಗೆ
  • ಬರೀ ಉತ್ತಮ ಆಡಳಿತ ನೀಡದರೆ ಸಾಲದು ; ಅದು ಜನಪರವಾಗಿರಬೇಕು ಮತ್ತು ಪ್ರೋತ್ಸಾಹದಾಯಕವಾಗಿಯೂ ಇರಬೇಕು. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಜನರನ್ನು ತೊಡಗಿಸಿಕೊಳ್ಳುವುದೇ ಒಳ್ಳೆಯ ಆಡಳಿತ.-ಆಡಳಿತದ ಬಗ್ಗೆ
  • ಉತ್ತಮ ಆಡಳಿತವೆನ್ನುವುದು ಕೆಟ್ಟ ರಾಜಕೀಯ ಎಂಬ ಅನಿಸಿಕೆಗೆ ಬದಲಾಗಿ, ಉತ್ತಮ ಆಡಳಿತವೆಂದರೆ ಉತ್ತಮ ರಾಜಕೀಯ ಎಂದು ಅರಿಯಬೇಕು. ಮುಂದಿನ ಚುನಾವಣೆಯನ್ನು ಗಮನದಲ್ಲಿಡುವ ಬದಲು ಮುಂದಿನ ಜನಾಂಗವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಕೆಲಸ ಮಾಡಬೇಕು.-ಆಡಳಿತದ ಬಗ್ಗೆ
  • ಉತ್ತಮ ಆಡಳಿತ ಫಲ ಬಡವರು ಮತ್ತು ಕೆಳವರ್ಗದವರಿಗೆ ದೊರಕಬೇಕಿದ್ದರೆ ಅಭಿವೃದ್ಧಿಯನ್ನು ಒಂದು ಚಳವಳಿಯನ್ನಾಗಿ ರೂಪಿಸುವುದು ಅಗತ್ಯ.-ಆಡಳಿತದ ಬಗ್ಗೆ
  • ಅತ್ಯಂತ ಸ್ವಚ್ಛವಾದ ಮತ್ತು ಸ್ಥಿರವಾದ ಆಡಳಿತ ನೀಡಲು ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಳ್ಳುವುದು ಅತಿ ಅವಶ್ಯಕ.-ಆಡಳಿತದ ಬಗ್ಗೆ
  • ಒಳ್ಳೆಯ ಆಡಳಿತವೆನ್ನುವುದು ಫೈರ್ ಫೈಟಿಂಗ್ ಅಥವಾ ಆಪತ್ತು ನಿರ್ವಹಣೆಯಲ್ಲ. ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸುವುದಕ್ಕಿಂತ ಸಮಸ್ಯೆಯ ಮೂಲಕ್ಕೆ ಹೋಗಿ ಪರಿಹಾರ ಕಂಡುಕೊಳ್ಳುವುದು ಈ ಕ್ಷಣದ ಅಗತ್ಯ.-ಆಡಳಿತದ ಬಗ್ಗೆ
  • ಉತ್ತಮ ಆಡಳಿತ ನೀಡಬೇಕಿದ್ದರೆ ಸ್ವಶಿಸ್ತು ರೂಢಿಸಿಕೊಳ್ಳಬೇಕು. ಆಂತರಿಕ ಶಿಸ್ತಿನಿಂದ ಮಾತ್ರ ಏನಾದರೂ ಸಾಧಿಸಲು ಸಾಧ್ಯ.-ಆಡಳಿತದ ಬಗ್ಗೆ
  • ಪಾರದರ್ಶಕತೆ ಭ್ರಷ್ಟಾಚಾರವನ್ನು ನಿಗ್ರಹಿಸಿದರೆ, ಉತ್ತಮ ಆಡಳಿತ ಪಾರದರ್ಶಕತೆಗಿಂತಲೂ ಹೆಚ್ಚಿನ ಸಾಧನೆ ತೋರಲು ದಾರಿ ಮುಕ್ತವಾಗಿಸುತ್ತದೆ. ಮುಕ್ತತೆ ಎಂದರೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸೂಕ್ತವ್ಯಕ್ತಿಗಳನ್ನು ಸೇರಿಸಿಕೊಳ್ಳುವುದು. ಪಾರದರ್ಶಕತೆ ಮಾಹಿತಿ ಹಕ್ಕಾದರೆ, ಮುಕ್ತತೆ ಪಾಲ್ಗೊಳ್ಳುವಿಕೆಯ ಹಕ್ಕು.-ಆಡಳಿತದ ಬಗ್ಗೆ
  • ಸಕ್ರಿಯ ಉತ್ತಮ ಆಡಳಿತ ಕಡಿಮೆ ಅವಧಿಯ ಬೇಕು ಬೇಡಗಳ ಜೊತೆಗೆ ದೀರ್ಘಾವಧಿ ಬೇಡಿಕೆಗಳತ್ತ ಗಮನಹರಿಸುತ್ತದೆ. ಪಾರದರ್ಶಕ ತಂತ್ರಜ್ಞಾನ ಹಾಗೂ ಹವಾಮಾನ ಬದಲಾವಣೆಗೆ ಬೇಕಾದ ಪೂರ್ವ ಸಿದ್ಧತೆ ಅರಂಭದಿಂದಲೇ ಆಗಬೇಕಾಗುತ್ತದೆ.-ಆಡಳಿತದ ಬಗ್ಗೆ
  • ಆಡಳಿತಗಾರರು ಹಾಗೂ ಸಾರ್ವಜನಿಕರಿಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ-ಆಡಳಿತದ ಬಗ್ಗೆ
  •                                                                                                ಕೃಪೆ : ನರೇಂದ್ರಮೋದಿಯವರ ತಾಣ

                                                                                                                                                                  ಕಾಮೆಂಟ್‌ಗಳಿಲ್ಲ:

                                                                                                                                                                  ಕಾಮೆಂಟ್‌‌ ಪೋಸ್ಟ್‌ ಮಾಡಿ

                                                                                                                                                                  ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

                                                                                                                                                                  1.. ಜಾಹೀರಾತು

                                                                                                                                                                  2.ಜಾಹೀರಾತು