ಅಂಕಿತ ನಾಮ: ಉಳಿಯುಮೇಶ್ವರ
ಕಾಲ:
ದೊರಕಿರುವ ವಚನಗಳು: 12 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದೇವರಗುಡಿ ಗ್ರಾಮ
ಪರಿಚಯ: ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದೇವರಗುಡಿ ಗ್ರಾಮಕ್ಕೆ ಸೇರಿದವನು. ಕಲ್ಲೇದೇವರಪುರದ ಕ್ರಿಶ 1279ರ ಶಾಸನದಲ್ಲಿ ಬರುವ ಚಿಕ್ಕ ಎಂಬ ಹೆಸರು ಈತನದೇ ಇರಬಹುದು ಎಂಬ ಊಹೆ ಇದೆ. ದೇವರಗುಡಿಯ ಶಾಸನಗಳಿಂದ ಈತ ಕಾಳಾಮುಖ ಶೈವ ಆಚಾರ್ಯನೆಂದು ತಿಳಿಯುತ್ತದೆ. ಈತನ 12 ವಚನಗಳು ದೊರೆತಿವೆ.

ಅಸ್ಥಿ, ಚರ್ಮ, ಮಾಂಸ, ರಕ್ತ, ಖಂಡದ ಚೀಲ
ಬಾ[ತೆ]ಗೆಟ್ಟೊಡಲ ನಾನೆಂತು ಸಲಹುವೆನಯ್ಯಾ?
ಹುರುಳಿಲ್ಲದಿಹ ಸಂಸಾರ
ಎಂದಿಂಗೆ ನಾನಿದ ಹೊತ್ತು ತೊಳಲುವುದೆ ಬಿಡುವೆನಯ್ಯಾ?
ಎಂದಿಂಗೆ ನಾನಿದರ ಸಂಶಯವನಳಿವೆನಯ್ಯಾ?
ಎಡಹಿ ಕೊಡ ನೀರೊಳಗೆ ಒಡೆದಂತೆ
ಎನ್ನೊಡಲೊಡೆದು ನಿಮ್ಮೊಳೆಂದು ನೆರೆವೆನೊ ಉಳಿಯುಮೇಶ್ವರಾ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.