ಮನೆ ಮನಗಳ ಕದ ತಟ್ಟಿ ಕಿವಿ ಇಂಪಾಗಿ ತಂಪೆನಿಸುವುದೆ ಅದೊಂದು/
ತನ್ನೆಡೆಗೆ ಆಕರ್ಷಿಸಿ ಹಿಡಿದಿಡುವ ಅಪೂರ್ವ ಶಕ್ತಿ ಇದೆ ಕನ್ನಡಕ್ಕೊಂದು//
ಸಾವಿರಾರು ವರ್ಷಗಳ ಇತಿಹಾಸ ಇರುವ ಸೊಬಗಿದು ಅರಿತಿರುವೆ ಆಸ್ವಾದಿಸಿ/
ಪೋಷಿಸಿ ನೀರೆರೆವ ಹೃದಯ ಬಿತ್ತನೆ ಎದೆಯಲ್ಲಿ ಅಚ್ಚಾಗಬೇಕಿದೆ ಇದೊಂದು//
ಜಗದ ಭಾಷೆಗಳೆಲ್ಲಾ ಅಡಗಿಸಿಕೊಳ್ಳುವ ಶಕ್ತಿಯ ಭವ್ಯ ಪರಂಪರೆಯ ನುಡಿ/
ಹಳೆ ನಡು ಹೊಸಗನ್ನಡ ಅಂದಿನಿಂದ ನಿರಂತರ ಪುಟಿದೇಳುತ್ತಲಿದೆ ಎಂದೆಂದು//
ತಂದು ಹಾಕಿದರೂ ನುಸುಳಿ ಬಂದರೂ ಕೊಬ್ಬಿ ಮೆರೆದರೂ ಅಜರಾಮರ ಕನ್ನಡ/
ಮಾತಾಡುವ ಹೆಮ್ಮೆ ಮಾಡಿರುವೆ ಪುಣ್ಯ ಕೇಳಿಕೊಂಡು ಬರಬೇಕಿದೆ ಇದಕ್ಕೆಂದು//
ವಿವಿಧ ರೂಪ ವಿಶಿಷ್ಟ ಸಂಸ್ಕೃತಿ ವಿಭಿನ್ನ ಪ್ರದೇಶಗಳ ಮುಕುಟಮಣಿ ನಾಡಿದು/
ಕಲಿತು ಕಲಿಸುವ ಅಭಿಮಾನ ಪಸರಿಸಿದರೆ ಸ್ವಾಭಿಮಾನ ನಿಜವಾಗಲಿದೆ ಎಂದೆಂದೂ//
-ಬಸವರಾಜ ಕಾಸೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.