೧೨) ನಾವೇಕೆ ಉಪವಾಸವಿರುತ್ತೇವೆ?
ಉಪವಾಸದ ಹಿಂದಿನ ತತ್ವವು ಆಯುರ್ವೇದದಲ್ಲಿ ಅಡಗಿದೆ. ಈ ಪ್ರಾಚೀನ ವೈದ್ಯ ವಿಜ್ಞಾನವು ಹಲವಾರು ಕಾಯಿಲೆಗಳಿಗೆ ಮೂಲ ಕಾರಣವು ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಬಿಡುಗಡೆಯಾಗುವ ಟಾಕ್ಸಿಕ್ ಪದಾರ್ಥಗಳೇ ಆಗಿರುತ್ತದೆ ಎಂದು ಹೇಳುತ್ತದೆ. ಈ ಟಾಕ್ಸಿಕ್ ಪದಾರ್ಥಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತ ಇರುವುದರಿಂದ ನಾವು ಆರೋಗ್ಯವಾಗಿರ ಬಹುದು. ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತದೆ ಮತ್ತು ದೇಹದಲ್ಲಿರುವ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಒಂದು ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಈ ಅವಧಿಯಲ್ಲಿ ನಿಯಮಿತವಾಗಿ ನಿಂಬೆ ರಸವನ್ನು ಸೇವಿಸುವುದರಿಂದ ದೇಹದಲ್ಲಿ ವಾಯು ತುಂಬಿ ಕೊಳ್ಳುವ ಸಮಸ್ಯೆಯು ತಲೆದೋರುವುದಿಲ್ಲ. ಆಯುರ್ವೇದದಲ್ಲಿ ಹೇಳಿರುವಂತೆ ನಮ್ಮ ದೇಹದ್ಲಲಿ ಶೇ. 80%ರಷ್ಟು ನೀರು ಮತ್ತು ಶೇ. 20%ರಷ್ಟು ಘನ ಪದಾರ್ಥಗಳು ಇರುತ್ತವೆ. ಭೂಮಿಯ ಮೇಲೆ ಪರಿಣಾಮ ಬೀರಿದಂತೆ ಚಂದ್ರನು ನಮ್ಮ ದೇಹದಲ್ಲಿನ ನೀರಿನಂಶದ ಮೇಲೆ ಪ್ರಭಾವ ಬೀರುತ್ತಾನೆ. ಆಗ ಜನರು ಉದ್ವೇಗ, ಕಿರಿಕಿರಿ ಮತ್ತು ಹಿಂಸಾ ಪ್ರವೃತ್ತಿಗೆ ಇಳಿಯುತ್ತಾರೆ. ಈ ಸಮಸ್ಯೆಗೆ ಉಪವಾಸವು ಪ್ರತಿ ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿನ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ತಮ್ಮ ವಿವೇಕವನ್ನು ಉಳಿಸಿ ಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಮಧುಮೇಹ, ರೋಗ ನಿರೋಧಕ ಶಕ್ತಿಯಲ್ಲಿನ ನ್ಯೂನತೆಗಳನ್ನು ಹಾಗು ಇತ್ಯಾದಿಗಳನ್ನು ಇದು ಸರಿ ಪಡಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.